AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗಿನಲ್ಲಿ ಮಳೆ ಅಬ್ಬರ: ಮಡಿಕೇರಿಯಲ್ಲಿ ಗುಡ್ಡ ಕುಸಿತ, ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು

ಕೊಡಗಿನಲ್ಲಿ ಭಾರಿ ಮಳೆ ಮುಂದುವರಿದಿದ್ದು, ಮಡಿಕೇರಿ ನಗರದ ಚಾಮುಂಡೇಶ್ವರಿ ನಗರದಲ್ಲಿ ಗುಡ್ಡದ ಮಣ್ಣು ರಸ್ತೆಗೆ ಕುಸಿದು ಆತಂಕ ಸೃಷ್ಟಿಸಿದೆ. ಘಟನೆಯ ಕೆಲವೇ ಸೆಕೆಂಡ್‌ಗಳ ಮೊದಲು ಸ್ಥಳದಿಂದ ತೆರಳಿದ್ದ ಮಹಿಳೆಯೊಬ್ಬರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಮಂಗಳಾದೇವಿ ನಗರದಲ್ಲೂ ಮಳೆ ನೀರು ರಸ್ತೆಗೆ ಹರಿದಿದೆ.

ಕೊಡಗಿನಲ್ಲಿ ಮಳೆ ಅಬ್ಬರ: ಮಡಿಕೇರಿಯಲ್ಲಿ ಗುಡ್ಡ ಕುಸಿತ, ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು
ಚಾಮುಂಡೇಶ್ವರಿ ನಗರದಲ್ಲಿ ಗುಡ್ಡ ಕುಸಿತImage Credit source: tv9
ಗೋಪಾಲ್​ ಸೋಮಯ್ಯ
| Edited By: |

Updated on:Aug 26, 2026 | 1:31 PM

Share

ಮುಖ್ಯಾಂಶಗಳು

  • ಮಡಿಕೇರಿಯಲ್ಲಿ ಮಳೆಗೆ ಗುಡ್ಡ ಕುಸಿತ
  • ಕೆಲವೇ ಸೆಕೆಂಡ್‌ಗಳ ಅಂತರದಲ್ಲಿ ಮಹಿಳೆ ಅಪಾಯದಿಂದ ಪಾರು
  • ಮಂಗಳಾದೇವಿ ನಗರದಲ್ಲೂ ನೀರು ನುಗ್ಗಿ ಅವಾಂತರ

ಮಡಿಕೇರಿ, ಆಗಸ್ಟ್ 26: ಆಗಸ್ಟ್‌ ಕೊನೇ ವಾರದಲ್ಲಿ ಕೊಡಗಿನಲ್ಲಿ (Kodagu) ಮಳೆ (Monsoon Rain) ಅಬ್ಬರ ಮುಂದುವರಿದಿದ್ದು, ಹಲವು ಕಡೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಮಡಿಕೇರಿ ನಗರದ ಚಾಮುಂಡೇಶ್ವರಿ ನಗರದಲ್ಲಿ ಭಾರಿ ಮಳೆಯಿಂದ ಗುಡ್ಡದ ಮಣ್ಣು ರಸ್ತೆಗೆ ಕುಸಿದು ಬಿದ್ದಿದ್ದು, ಮಹಿಳೆಯೊಬ್ಬರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಚಾಮುಂಡೇಶ್ವರಿ ನಗರ ಗುಡ್ಡ ಪ್ರದೇಶದಲ್ಲಿರುವುದರಿಂದ ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳಿಗೆ ಭೂಕುಸಿತದ ಆತಂಕ ಎದುರಾಗುತ್ತದೆ. ಹಲವು ವರ್ಷಗಳ ಹಿಂದೆ ಗುಡ್ಡವನ್ನು ಕಡಿದು ಮನೆಗಳನ್ನು ನಿರ್ಮಿಸಿರುವ ಪ್ರದೇಶ ಇದಾಗಿದ್ದು, 2018 ಮತ್ತು 2019ರ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಇಲ್ಲಿನ ಹಲವು ಮನೆಗಳು ಕೊಚ್ಚಿಹೋಗಿದ್ದವು. ಅನೇಕ ಕುಟುಂಬಗಳು ನಿರಾಶ್ರಿತರಾಗಿ, ಸರ್ಕಾರದಿಂದ ಪುನರ್ವಸತಿ ಪಡೆದಿದ್ದರೆ, ಕೆಲವು ಕುಟುಂಬಗಳು ಇಂದಿಗೂ ಇದೇ ಪ್ರದೇಶದಲ್ಲಿ ವಾಸಿಸುತ್ತಿವೆ.

ಪೈಪ್ ಒಡೆದು ನೀರು ಸೋರಿಕೆ; ಬಳಿಕ ಗುಡ್ಡ ಕುಸಿತ

ಗುಡ್ಡದ ಒಳಭಾಗದಲ್ಲಿ ಅಳವಡಿಸಿದ್ದ ನೀರಿನ ಪೈಪ್‌ವೊಂದು ಕೆಲ ದಿನಗಳ ಹಿಂದೆ ಒಡೆದು ಅಪಾರ ಪ್ರಮಾಣದ ನೀರು ಸೋರಿಕೆಯಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಭಾರಿ ಮಳೆಯಾಗಿದ್ದು, ರಸ್ತೆ ಬದಿಯ ಮಣ್ಣು ಕೊಚ್ಚಿಹೋಗಿ ಗುಡ್ಡ ಕುಸಿದಿದೆ.

ಈ ವೇಳೆ ಸ್ಥಳೀಯ ನಿವಾಸಿ ಪುಂಡಲೀಕ ಅವರ ಸೌದೆ ಶೆಡ್‌ ಮಣ್ಣಿನೊಂದಿಗೆ ಕೊಚ್ಚಿಹೋಗಿದೆ. ಕಾರು ನಿಲುಗಡೆ ಪ್ರದೇಶವೂ ಮಣ್ಣಿನಿಂದ ಆವೃತವಾಗಿದೆ.

ಕೆಲವೇ ಸೆಕೆಂಡ್‌ಗಳಲ್ಲಿ ತಪ್ಪಿದ ಭಾರಿ ಅನಾಹುತ

ಗುಡ್ಡ ಕುಸಿಯುವ ಕೆಲವೇ ಸೆಕೆಂಡ್‌ಗಳ ಮೊದಲು ಸ್ಥಳೀಯ ನಿವಾಸಿ ನೂರ್ ಜಹಾನ್ ಇದೇ ಮಾರ್ಗವಾಗಿ ಸಾಗಿದ್ದರು. ಅವರು ಮೇಲಿನ ರಸ್ತೆಯನ್ನು ತಲುಪಿದ ಕೆಲವೇ ಕ್ಷಣಗಳಲ್ಲಿ ಗುಡ್ಡದ ಮಣ್ಣು ಕುಸಿದು ರಸ್ತೆಗೆ ಬಿದ್ದಿದೆ. ಕೆಲವೇ ಸೆಕೆಂಡ್‌ಗಳಷ್ಟು ತಡವಾಗಿದ್ದರೂ ಮಣ್ಣು ತಮ್ಮ ಮೇಲೆಯೇ ಕುಸಿದು ದೊಡ್ಡ ಅನಾಹುತ ಸಂಭವಿಸುತ್ತಿತ್ತು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

ಇನ್ನು ಮಡಿಕೇರಿಯ ಮಂಗಳಾದೇವಿ ನಗರದಲ್ಲೂ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದ ನೀರು ರಸ್ತೆಗೆ ಹರಿದುಬಂದಿದೆ. ರಸ್ತೆಗಳು ಮಳೆ ನೀರಿನಿಂದ ಆವೃತವಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿದೆ. ಈ ನಡುವೆ ಕೊಡಗಿನಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಭಾರಿ ಮಳೆಗೆ ಮೋಡ ಬಿತ್ತನೆ ಕಾರಣವೇ ಎಂಬ ಆರೋಪವೂ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಆದರೆ ಈ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದೃಢೀಕರಣ ಇಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:31 pm, Wed, 26 August 26

Follow Us
ಅಭಿಮನ್ಯುಗೆ ವಿಶ್ರಾಂತಿ; ಈ ಬಾರಿ ಅಂಬಾರಿ ಹೊರುವ ಆನೆ ಯಾವುದು?
ಅಭಿಮನ್ಯುಗೆ ವಿಶ್ರಾಂತಿ; ಈ ಬಾರಿ ಅಂಬಾರಿ ಹೊರುವ ಆನೆ ಯಾವುದು?
ಗದಗದಲ್ಲಿ 5 ದಿನಗಳಿಂದ ಬಂದ್ ಆಗಿದ್ದ ಸರ್ಕಾರಿ ಶಾಲೆ ಓಪನ್!
ಗದಗದಲ್ಲಿ 5 ದಿನಗಳಿಂದ ಬಂದ್ ಆಗಿದ್ದ ಸರ್ಕಾರಿ ಶಾಲೆ ಓಪನ್!
ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ? ಸಿಎಂ ಡಿಕೆಶಿ ಏನಂದ್ರು?
ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ? ಸಿಎಂ ಡಿಕೆಶಿ ಏನಂದ್ರು?
ಜನರ ನಿದ್ದೆಗೆಡಿಸಿದ್ದ ಹುಲಿ ಕೊನೆಗೂ ಬಂಡೀಪುರ ಅರಣ್ಯ ಸಿಬ್ಬಂದಿ ಬಲೆಗೆ
ಜನರ ನಿದ್ದೆಗೆಡಿಸಿದ್ದ ಹುಲಿ ಕೊನೆಗೂ ಬಂಡೀಪುರ ಅರಣ್ಯ ಸಿಬ್ಬಂದಿ ಬಲೆಗೆ
ಮೈಸೂರು ದಸರಾ 2026: ಗಜಪಡೆಗೆ ಸಚಿವ ಯತೀಂದ್ರರಿಂದ ಚಾಲನೆ
ಮೈಸೂರು ದಸರಾ 2026: ಗಜಪಡೆಗೆ ಸಚಿವ ಯತೀಂದ್ರರಿಂದ ಚಾಲನೆ
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ ಸಚಿವ ನಾಗೇಂದ್ರ
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ ಸಚಿವ ನಾಗೇಂದ್ರ
ಬಿಡದಿ ಟೌನ್​ಶಿಪ್, ಹೈಕೋರ್ಟ್​ನಿಂದ ಯಾವುದೇ ಸಾಮಾನ್ಯ ತಡೆ ಇಲ್ಲ: ಪ್ರಾಧಿಕಾರ
ಬಿಡದಿ ಟೌನ್​ಶಿಪ್, ಹೈಕೋರ್ಟ್​ನಿಂದ ಯಾವುದೇ ಸಾಮಾನ್ಯ ತಡೆ ಇಲ್ಲ: ಪ್ರಾಧಿಕಾರ
ಟಾಕ್ಸಿಕ್ ಸಿನಿಮಾ ಬಿಡುಗಡೆ; ರಾವಣ ವೇಷ ತೊಟ್ಟು ಥಿಯೇಟರ್​​ಗೆ ಬಂದ ಅಭಿಮಾನಿ
ಟಾಕ್ಸಿಕ್ ಸಿನಿಮಾ ಬಿಡುಗಡೆ; ರಾವಣ ವೇಷ ತೊಟ್ಟು ಥಿಯೇಟರ್​​ಗೆ ಬಂದ ಅಭಿಮಾನಿ
'ಟಾಕ್ಸಿಕ್' ಟ್ರೋಲ್ ಮಾಡುತ್ತಿದ್ದವರಿಗೆ ರಾಕಿ ಭಾಯ್ ಅಭಿಮಾನಿಗಳ ಟಾಂಗ್
'ಟಾಕ್ಸಿಕ್' ಟ್ರೋಲ್ ಮಾಡುತ್ತಿದ್ದವರಿಗೆ ರಾಕಿ ಭಾಯ್ ಅಭಿಮಾನಿಗಳ ಟಾಂಗ್
‘ಟಾಕ್ಸಿಕ್ 2 ಸಾವಿರ ಕೋಟಿ ಕಲೆಕ್ಷನ್ ಮಾಡದಿದ್ದರೆ ಮೀಸೆ ಬೋಳಿಸಿಕೊಳ್ಳುವೆ’
‘ಟಾಕ್ಸಿಕ್ 2 ಸಾವಿರ ಕೋಟಿ ಕಲೆಕ್ಷನ್ ಮಾಡದಿದ್ದರೆ ಮೀಸೆ ಬೋಳಿಸಿಕೊಳ್ಳುವೆ’