ಚಾಮರಾಜನಗರ: ವಧು-ವರರನ್ನು ವರಿಸುವ ರೊಟ್ಟಿ ಹಬ್ಬ; ವಿಶೇಷತೆ ಇಷ್ಟೇ

ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟದ ಸೊಲಿಗರ ವಿಶಿಷ್ಟ ಆಚರಣೆಯಲ್ಲಿ ರೊಟ್ಟಿ ಹಬ್ಬ ಕೂಡ ಒಂದು. ಪ್ರತಿ ವರ್ಷ ನಡೆಯುತ್ತಿದ್ದ ರೊಟ್ಟಿ ಹಬ್ಬ ಈಗ ಮೂರು ವರ್ಷಗಳಿಗೊಮ್ಮೆ ಆಚರಿಸಲಾಗುತ್ತಿದೆ. ಬಿಳಿಗಿರಿ ರಂಗನಾಥ ಬೆಟ್ಟದಲ್ಲಿರುವ ಒಂಬತ್ತು ಬುಡಕಟ್ಟು ಜನಾಂಗದವರು ವಧು-ವರರ ಅನ್ವೇಷಣೆಗೆ ರೊಟ್ಟಿ ಹಬ್ಬವೇ ವೇದಿಕೆ.

ಚಾಮರಾಜನಗರ: ವಧು-ವರರನ್ನು ವರಿಸುವ ರೊಟ್ಟಿ ಹಬ್ಬ; ವಿಶೇಷತೆ ಇಷ್ಟೇ
ಜಡೇಸ್ವಾಮಿಗೆ ಪೂಜೆ ಸಲ್ಲಿಸಿ ರೊಟ್ಟಿ ಹಬ್ಬ ಆಚರಿಸಲಾಗಿದೆ
Follow us
sandhya thejappa
|

Updated on:Mar 24, 2021 | 2:56 PM

ಚಾಮರಾಜನಗರ: ಆಧುನಿಕತೆಯ ಬಿರುಗಾಳಿ ಅದೇಷ್ಟೇ ಜೋರಾಗಿ ಬೀಸುತ್ತಿದ್ದರು ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಬೆಟ್ಟದ ಸುತ್ತಮುತ್ತವಿರುವ ಬುಡಕಟ್ಟು ಜನರು ತಮ್ಮ ಸಂಪ್ರದಾಯಗಳನ್ನು ಇಂದಿಗೂ ಮೈಗೂಡಿಸಿಕೊಂಡು ಬಂದಿದ್ದಾರೆ. ಹಿಂದಿನ ಕಾಲದ ರೀತಿಯಲ್ಲಿಯೇ ಇಂದು ಕೂಡ ರೊಟ್ಟಿ ಹಬ್ಬ ಆಚರಿಸಿ ವಧು-ವರರ ಅನ್ವೇಷಣೆ ಮಾಡುವ ಪದ್ಧತಿ ಜಾರಿಯಲ್ಲಿದೆ. ಸಾವಿರಾರು ಸಂಖ್ಯೆಯಲ್ಲಿ ಸೇರುವ ಬುಡಕಟ್ಟು ಜನರ ಮಧ್ಯೆ ವಧು-ವರರ ಆಯ್ಕೆಗೆ ಪೋಷಕರು ಮುಕ್ತವಾಗಿಯೇ ಸಹಕರಿಸುತ್ತಾರೆ. ವಧು-ವರರ ಆಯ್ಕೆಯಲ್ಲಿ ಒಂದೇ ಕುಲದವರನ್ನ ವರಿಸುವಂತಿಲ್ಲದಿರುವುದು ಇವರ ವಿಶೇಷ ಸಂಪ್ರದಾಯವಾಗಿದೆ.

ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟದ ಸೊಲಿಗರ ವಿಶಿಷ್ಟ ಆಚರಣೆಯಲ್ಲಿ ರೊಟ್ಟಿ ಹಬ್ಬ ಕೂಡ ಒಂದು. ಪ್ರತಿ ವರ್ಷ ನಡೆಯುತ್ತಿದ್ದ ರೊಟ್ಟಿ ಹಬ್ಬ ಈಗ ಮೂರು ವರ್ಷಗಳಿಗೊಮ್ಮೆ ಆಚರಿಸಲಾಗುತ್ತಿದೆ. ಬಿಳಿಗಿರಿ ರಂಗನಾಥ ಬೆಟ್ಟದಲ್ಲಿರುವ ಒಂಬತ್ತು ಬುಡಕಟ್ಟು ಜನಾಂಗದವರು ವಧು-ವರರ ಅನ್ವೇಷಣೆಗೆ ರೊಟ್ಟಿ ಹಬ್ಬವೇ ವೇದಿಕೆ. ರೊಟ್ಟಿ ಹಬ್ಬಕ್ಕೆ ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದ 48 ಹಾಡಿಗಳ ಜನರಿಗೆ ಆಹ್ವಾನ ಮಾಡಲಾಗುತ್ತದೆ. ವರ್ಷದಲ್ಲಿ ಸೊಲಿಗರು ತಾವು ಬೆಳೆದ ಬೆಳೆಗಳನ್ನು ಜಡೇಸ್ವಾಮಿ ದೇವರಿಗೆ ಎತ್ತಿಟ್ಟು ನಂತರ ಧಾನ್ಯ ಉಪಯೋಗಿಸುವುದು ಇವರ ಪದ್ಧತಿ. ಸೊಲಿಗರ ಕುಲ ದೇವತೆ ಜಡೇಸ್ವಾಮಿಗೆ ಇಷ್ಟವಾದ ರಾಗಿ ರೊಟ್ಟಿ ತಯಾರಿಸಿ ಅರ್ಪಿಸಲಾಗುತ್ತದೆ. ಹಿಂದಿನ ದಿನ ಕಾಡಿಗೆ ಹೋಗಿ ಕೂಗಿಲೀಲೆ ಎಂಬ ಎಲೆ ತಂದು ರಾಗಿ ರೊಟ್ಟಿ ತಟ್ಟಿ ಬೆಂಕಿಯಲ್ಲಿ ಬೇಯಿಸಿ ರೊಟ್ಟಿ ತಯಾರಿಸುತ್ತಾರೆ. ಮರು ದಿನ ಹಗಲು ವೇಳೆ ದೇವರ ಉತ್ಸವ ಅದ್ದೂರಿಯಾಗಿ ನಡೆಸಬೇಕಾಗುತ್ತದೆ. ಇದಾದ ಬಳಿಕ ರಾತ್ರಿ ವೇಳೆ ನಡೆಯುವ ಕೊಂಡೊತ್ಸವದಲ್ಲಿ ಜಡೇಸ್ವಾಮಿಗೆ ರೊಟ್ಟಿ ಅರ್ಪಿಸಲಾಗುತ್ತದೆ. ರೊಟ್ಟಿ ಹಬ್ಬಕ್ಕೆ ಬಿಳಿಗಿರಿರಂಗ ಬೆಟ್ಟದಲ್ಲಿರುವ ನಲವತ್ತೆಂಟು ಪೊದೆಗಳಿಂದ ಹುಡುಗ-ಹುಡುಗಿಯರ ಜೊತೆಗೆ ಪೋಷಕರು ಆಗಮಿಸಿ ಲಿಂಗ ತಾರತಮ್ಯ, ವಯಸ್ಸಿನ ಅಂತರವಿಲ್ಲದೆ ಕುಣಿದು ಕುಪ್ಪಳಿಸುತ್ತಾರೆ.

ರಾಗಿ ರೊಟ್ಟಿ

ದೇವರ ಪ್ರಸಾದವನ್ನು ಸ್ವೀಕರಿಸಿದ ಭಕ್ತರು

ಬೆಳಿಗ್ಗೆಯಿಂದ ವಿವಿಧ ಪೂಜಾ ವಿಧಾನಗಳ ಜೊತೆಗೆ ಜಡೇಸ್ವಾಮಿ ಕೊಂಡೊತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ರಾತ್ರಿ ದೇವರ ಪ್ರಸಾದ ಸ್ವೀಕರಿಸಿ ಸೊಲಿಗರು ಗೊರುಕಾನ, ಹಾಡಿಕೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಹುಡುಗ-ಹುಡುಗಿಯರ ಅಂದದ ನೃತ್ಯಕ್ಕೆ ಮನಸೋತವರು ಇಷ್ಟಪಟ್ಟು ಇಬ್ಬರು ಮಾತನಾಡಿ, ನಂತರ ಒಪ್ಪಿಗೆ ಸೂಚಿಸಿ ಮದುವೆಗೆ ನಿಶ್ಚಯಿಸುತ್ತಾರೆ. ಆಯಾಯ ಕುಲಗಳನ್ನ ಹೊರತುಪಡಿಸಿ ಬೇರೆ ಕುಲದವರನ್ನ ಆಯ್ಕೆ ಮಾಡಿಕೊಳ್ಳುವುದು ಇಲ್ಲಿನ ಸಂಪ್ರದಾಯ. ಬೇರೆ ಕುಲದವರನ್ನು ವರಿಸಿದರೆ ಹುಟ್ಟುವ ಮಕ್ಕಳು ವಿಕಲಚೇತನರಾಗಿರುವುದಿಲ್ಲ ಎಂಬುದು ಇವರ ನಂಬಿಕೆ. ಇವರಲ್ಲಿ ವಿಕಲಚೇತನರ ಸಂಖ್ಯೆ ಕೂಡ ವಿರಳ ಎಂಬುದು ಸತ್ಯ.

ವಧು-ವರರ ಅನ್ವೇಷಣೆಗೆ ರೊಟ್ಟಿ ಹಬ್ಬವೇ ವೇದಿಕೆಯಾಗಿದೆ

ಆಧುನಿಕತೆಗೆ ಎಷ್ಟೇ ಬೆಳೆದರೂ ಬುಡಕಟ್ಟು ಜನರು ಇಂದಿಗೂ ತಮ್ಮ ಸಂಪ್ರದಾಯಗಳನ್ನ ಮುಂದುವರಿಸಿಕೊಂಡು ಬಂದಿದ್ದಾರೆ. ಇವರ ಸಂಪ್ರದಾಯದ ಹಿಂದೆ ವೈಜ್ಞಾನಿಕತೆ ಅಂಶಗಳು ಅಡಕವಾಗಿವೆ. ಬಡತನದ ಬೇಗೆಯಲ್ಲಿರುವ ಸೊಲಿಗರು ಮಕ್ಕಳನ್ನ ಮದುವೆ ಮಾಡಲು ಸಾಧ್ಯವಾಗಿದೆ. ರೊಟ್ಟಿ ಹಬ್ಬದ ಮೂಲಕ ವಧು-ವರ ಅನ್ವೇಷಣೆಗೆ ವೇದಿಕೆ ಸಿದ್ಧವಾದರೆ ಬೇರೆ ಕುಲದವರನ್ನ ಮದುವೆಯಾಗಿ ವಿಕಲಚೇತನ ತಪ್ಪಿಸುತ್ತಾರೆ. ಹೀಗಾಗಿ ಬುಡಕಟ್ಟು ಜನರು ಕಾಡಿನಲ್ಲಿ ತಾನು ದುಡಿದು ಹೆಂಡತಿ ಮಕ್ಕಳ ಸಾಕುವ ಜವಾಬ್ದಾರಿ ಹೊರುತ್ತಾನೆ.

ಇದನ್ನೂ ಓದಿ

ವೈಭವದ ಸಿಡಿಬಂಡಿ ಉತ್ಸವ.. ಇಷ್ಟಾರ್ಥ ಸಿದ್ದಿಗಾಗಿ ಕೋಳಿ ಎಸೆದು ಹರಕೆ ತೀರಿಸಿದ ಬಳ್ಳಾರಿ ಭಕ್ತರು

ಇಂದು ರಾತ್ರಿ ಮೇಲುಕೋಟೆ ವೈರಮುಡಿ ಉತ್ಸವ: ವಜ್ರ ಖಚಿತ ಕಿರೀಟದ ಬಳಿ ಕೂರುವ ವಿಚಾರಕ್ಕೆ ಜಗಳ

Published On - 2:55 pm, Wed, 24 March 21

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?