Tapas uav: ಸ್ವದೇಶಿ ನಿರ್ಮಿತ ತಪಸ್ ಯುಎವಿ ಪ್ರಯೋಗಾರ್ಥ ಹಾರಾಟ ಯಶಸ್ವಿ
ಭಾರತೀಯ ನೌಕಾಪಡೆ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಥಿ ಸಂಸ್ಥೆ ಸಹಭಾಗಿತ್ವದಲ್ಲಿ ನಡೆದ ಮಾನವ ರಹಿತ ತಪಸ್ ಯುಎವಿ ಪ್ರಯೋಗಾರ್ಥ ಹಾರಾಟ ಯಶಸ್ವಿಯಾಗಿದೆ.
ಚಿತ್ರದುರ್ಗ: ಭಾರತೀಯ ನೌಕಾಪಡೆ (Indian Navy) ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಥಿ ಸಂಸ್ಥೆ (DRDO) ಸಹಭಾಗಿತ್ವದಲ್ಲಿ ನಡೆದ ಮಾನವ ರಹಿತ ತಪಸ್ ಯುಎವಿ (Tapas UAV) ಪ್ರಯೋಗಾರ್ಥ ಹಾರಾಟ ಯಶಸ್ವಿಯಾಗಿದೆ. ಚಿತ್ರದುರ್ಗ (Chritradurga) ಜಿಲ್ಲೆ ಚಳ್ಳಕೆರೆ ತಾಲೂಕಿನ ಕುದಾಪುರ ಗ್ರಾಮದ ಬಳಿಯ ಡಿಆರ್ಡಿಓದ ಎಟಿಆರ್ನಿಂದ ಕಾರವಾರದ ನೌಕಾನೆಲೆ 285 ಕಿ.ಮೀ ದೂರದವರೆಗೆ ಸುಮಾರು 3 ಗಂಟೆ 30ನಿಮಿಷ ಕಾಲ ತಡೆ ರಹಿತ ಹಾರಾಟ ನಡೆಸಿದೆ.
ಸ್ವದೇಶಿ ನಿರ್ಮಿತ ತಪಸ್ ಯುಎವಿ ಸಮುದ್ರ ಮಟ್ಟದಿಂದ ಸುಮಾರ 20 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸಿದೆ. ಇದು ಸತತ 24 ಗಂಟೆ, 30 ಸಾವಿರ ಅಡಿ ಎತ್ತರದಲ್ಲಿ ಸಾಗುವ ಸಾಮರ್ಥ್ಯ ಹೊಂದಿದೆ. ತಪಸ್ ಯುಎವಿ ಗರಿಷ್ಠ 350 ಕೆಜಿ ತೂಕದ ವಸ್ತುಗಳನ್ನು ಹೊತ್ತು 250 ಕಿ.ಮೀ ದೂರದವರೆಗೆ ಸಾಗುತ್ತದೆ. ಇದನ್ನು ಭಾರತೀಯ ಸಶಸ್ತ್ರ ಪಡೆಗಳಿಗಾಗಿ ಬೇಹುಗಾರಿಕೆ, ಕಣ್ಗಾವಲು ಮತ್ತು ವಿಚಕ್ಷಣಾ ಕಾರ್ಯಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಡಿಆರ್ಡಿಓ ಟ್ವೀಟ್ ಮಾಡಿದೆ.
TAPAS took off at 07.35hrs from Aeronautical Test Range (ATR), Chitradurga which is 285 km from karwar naval base. One Ground Control station (GCS) and two Ship Data Terminal (SDT) were installed in INS Subhadra for controlling the UAV. After trial TAPAS landed back at ATR. pic.twitter.com/MfGRDUjI5U
— DRDO (@DRDO_India) June 18, 2023
ನೆಲದಲ್ಲಿ ಒಂದು ನಿಯಂತ್ರಣ ಕೇಂದ್ರ ಮತ್ತು ಐಎನ್ಎಸ್ ಸುಭದ್ರಾದಲ್ಲಿ ಎರಡು ಶಿಪ್ ಡೇಟಾ ಟರ್ಮಿನಲ್ಗಳನ್ನು ಸ್ಥಾಪಿಸಲಾಗಿತ್ತು. ಯಶಸ್ವಿ ಪ್ರಯೋಗದ ಬಳಿಕ ತಪಸ್ ಎಟಿಆರ್ಗೆ ವಾಪಸಾಗಿ ಸುರಕ್ಷಿತವಾಗಿ ಇಳಿದಿದೆ ಎಂದು ತಿಳಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:25 am, Mon, 19 June 23