ಟಾರ್ ಡ್ರಮ್ ಸಿಡಿದು ಐವರಿಗೆ ಅಂಟಿಕೊಂಡ ಟಾರ್; ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಟ್ರ್ಯಾಕ್ಟರ್ನಲ್ಲಿದ್ದ ಡ್ರಮ್ನಿಂದ ವಾಹನಕ್ಕೆ ಡಂಪ್ ಮಾಡಿಕೊಳ್ತಿದ್ದಾಗ ಆಟೋದಲ್ಲಿ ಬರುತ್ತಿದ್ದ ಐವರ ಮೇಲೆ ಟಾರ್ ಸಿಡಿದಿದೆ. ಗಾಯಾಳುಗಳನ್ನ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ತುಮಕೂರು: ಕೊರಟಗೆರೆಯ ಕರ್ನಾಟಕ ಬ್ಯಾಂಕ್ ಮುಂದೆ ಟಾರ್ ಡ್ರಮ್ ಸಿಡಿದು ಐವರಿಗೆ ಟಾರ್ ಅಂಟಿಕೊಂಡ ಘಟನೆ ನಡೆದಿದೆ. ಟ್ರ್ಯಾಕ್ಟರ್ನಲ್ಲಿದ್ದ ಡ್ರಮ್ನಿಂದ ವಾಹನಕ್ಕೆ ಡಂಪ್ ಮಾಡಿಕೊಳ್ತಿದ್ದಾಗ ಆಟೋದಲ್ಲಿ ಬರುತ್ತಿದ್ದ ಐವರ ಮೇಲೆ ಟಾರ್ ಸಿಡಿದಿದೆ. ಗಾಯಾಳುಗಳನ್ನ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಎಂಬಸಿ ಗ್ರೂಪ್ ಮೇಲೆ ಮುಂದುವರಿದ ಐಟಿ ದಾಳಿ ಐಟಿ ಅಧಿಕಾರಿಗಳು ಜೂ. 1ರಂದು ಬೆಳಗ್ಗೆ ಎಂಬಸಿ ಗ್ರೂಪ್ ಮೇಲೆ ದಾಳಿ ಮಾಡಿದ್ದರು. ಎಂಡಿ ಜಿತು ವಿರ್ವಾನಿ ನಿವಾಸ ಹಾಗೂ ನಿರ್ದೇಶಕ ನರ್ಪತ್ ಸಿಂಗ್ ನಿವಾಸದ ಮೇಲೂ ದಾಳಿ ನಡೆದಿದ್ದು ಇನ್ನೂ ದೇಶದ ಹಲವು ಭಾಗದಲ್ಲಿ ದಾಳಿ ಮುಂದುವರಿದಿದೆ. ಎಂಡಿ ಜಿತು ವಿರ್ವಾನಿ ನಾಪತ್ತೆ ಆಗಿದ್ದಾರೆ ಎನ್ನಲಾಗಿತ್ತು. ಕಂಪನಿಯ ಮೂಲಗಳಿಂದ ದುಬೈನಲ್ಲಿರುವುದಾಗಿ ಮಾಹಿತಿ ಸಿಕ್ಕಿದೆ. ನಾಳೆ ಬೆಳಗ್ಗೆ ಬೆಂಗಳೂರಿಗೆ ಅಗಮಿಸಿ IT ಮುಂದೆ ಹಾಜರಾಗಲಿದ್ದಾರೆ. ಇದನ್ನೂ ಓದಿ: ವಿಶ್ವ ಪರಿಸರ ದಿನವೇ ಅರ್ಧದಶಕದ ಮರವನ್ನು ಕಡಿದು ಧರೆಗುರುಳಿಸಿದರು!
ನಿಂತಿದ್ದ ಲಾರಿಗೆ ಚಲಿಸುತ್ತಿದ್ದ ಕಾರು ಡಿಕ್ಕಿ ಹಲವರಿಗೆ ಗಾಯ ಬೆಂಗಳೂರು ಗ್ರಾಮಾಂತರ: ಕಂಟನಕುಂಟೆ ಬಳಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ನಾಲ್ವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಹಿಂದೂ ಕಾರ್ಯಕರ್ತನನ್ನ ಹತ್ಯೆಗೈದಿದ್ದ ಮೂವರು ವಶಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಪೆರ್ಲಂಪಾಡಿ ಪೆರ್ಲಂಪಾಡಿ ಬಳಿ ನಿನ್ನೆ ಚರಣ್ ರಾಜ್(28) ಬರ್ಬರ ಹತ್ಯೆ ಮಾಡಲಾಗಿತ್ತು. ಹಳೇ ದ್ವೇಷ ಹಿನ್ನೆಲೆ ಚರಣ್ ರಾಜ್ನನ್ನ ಕೊಲೆ ಮಾಡಿದ್ದರು. ಸದ್ಯ ಪ್ರಕರಣ ಸಂಬಂಧ ಪೊಲೀಸರು ಮೂವರನ್ನ ವಶಕ್ಕೆ ಪಡೆದಿದ್ದಾರೆ. ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ಚರಣ್ ರಾಜ್ ಪ್ರಮುಖ ಆರೋಪಿಯಾಗಿದ್ದ. ಹೀಗಾಗಿ ಕಾರ್ತಿಕ್ ಹತ್ಯೆಗೆ ಪ್ರತೀಕಾರವಾಗಿ ಚರಣ್ ರಾಜ್ ಕೊಲೆ? ಮಾಡಲಾಗಿದೆ ಎನ್ನಲಾಗುತ್ತಿದೆ. ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ. ಇದನ್ನೂ ಓದಿ: Hyderabad gangrape case ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಾಸಕನ ಮಗ ಭಾಗಿ, ವಿಡಿಯೊ ಶೇರ್ ಮಾಡಿದ ಬಿಜೆಪಿ ನಾಯಕ
ಕಂದಕಕ್ಕೆ ಉರುಳಿ ಬಿದ್ದ ಸಿಮೆಂಟ್ ತುಂಬಿದ ಲಾರಿ ಉತ್ತರ ಕನ್ನಡ: ಸಿದ್ದಾಪುರ ತಾಲೂಕಿನ ವಾಜುಗದ್ದೆ ಬಳಿ ಸಿಮೆಂಟ್ ತುಂಬಿದ್ದ ಲಾರಿ ಕಂದಕಕ್ಕೆ ಉರುಳಿ ಬಿದ್ದ ಘಟನೆ ನಡೆದಿದೆ. ವಾಜುಗದ್ದೆ ತಿರುವಿನಲ್ಲಿ ಲಾರಿ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಲಾರಿಯಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On - 3:47 pm, Sun, 5 June 22