ಸೇತುವೆಯಿಲ್ಲದೆ ಹೊಳೆಯಲ್ಲೇ ಗರ್ಭಿಣಿಯರು, ರೋಗಿಗಳನ್ನ ಹೊತ್ತು ತೆರಳಬೇಕಾದ ಪರಿಸ್ಥಿತಿ: ಹೊಸಾಕುಳಿ ಗ್ರಾಮಕ್ಕೆ ಸಚಿವ ಶಿವರಾಮ್ ಹೆಬ್ಬಾರ್ ಭೇಟಿ
ಸೇತುವೆಯಿಲ್ಲದೆ ಹೊಳೆಯಲ್ಲೇ ನಡೆದು ಹೋಗುವ ಪರಿಸ್ಥಿತಿ ಹೊಸಾಕುಳಿ ಗ್ರಾಮಸ್ಥರಿಗಿದೆ. ಹೀಗಾಗಿ ಶಾಲಾ ಬಾಲಕಿಯೊಬ್ಬಳು ಸೇತುವೆ ನಿರ್ಮಿಸಿಕೊಡುವಂತೆ ಹೆಬ್ಬಾರ್ಗೆ ಮನವಿ ಮಾಡಿದ್ದಳು.
ಉತ್ತರಕನ್ನಡ: ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದ ಜನರು ಸೇತುವೆಯಿಲ್ಲದೆ ಪರದಾಡುತ್ತಿದ್ದಾರೆ. ಪ್ರತಿನಿತ್ಯ ಹರಸಾಹಸಪಟ್ಟು ಹೊಳೆಯಲ್ಲಿ ನಡೆದು ಹೋಗುವ ಪರಿಸ್ಥಿತಿ ಇದೆ. ಗರ್ಭಿಣಿಯರು, ರೋಗಿಗಳನ್ನ ಹೊಳೆಯಲ್ಲಿ ಹೊತ್ತುಕೊಂಡು ಹೋಗಬೇಕು. ಸ್ವಲ್ಪ ಮೈ ಮರೆತರು ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಹೊಸಾಕುಳಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಶಿವರಾಮ ಹೆಬ್ಬಾರ್ಗೆ ಸೇತುವೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಸೇತುವೆಯಿಲ್ಲದೆ ಹೊಳೆಯಲ್ಲೇ ನಡೆದು ಹೋಗುವ ಪರಿಸ್ಥಿತಿ ಹೊಸಾಕುಳಿ ಗ್ರಾಮಸ್ಥರಿಗಿದೆ. ಹೀಗಾಗಿ ಶಾಲಾ ಬಾಲಕಿಯೊಬ್ಬಳು ಸೇತುವೆ ನಿರ್ಮಿಸಿಕೊಡುವಂತೆ ಹೆಬ್ಬಾರ್ಗೆ ಮನವಿ ಮಾಡಿದ್ದಳು. ಪುಟ್ಟ ಬಾಲಕಿ ಕೈಮುಗಿದು ವಿಡಿಯೋ ಮೂಲಕ ಮನವಿ ಮಾಡಿದ್ದಳು. ಖಾಸಗಿ ಕಾರ್ಯಕ್ರಮದ ನಿಮಿತ್ತ ಹೊನ್ನಾವರಕ್ಕೆ ಆಗಮಿಸಿದ್ದ ಸಚಿವ ಹೆಬ್ಬಾರ್ ಹೊಸಾಕುಳಿ ಗ್ರಾಮಕ್ಕೆ ಭೇಟಿ ನೀಡಿ ಸೇತುವೆ ನಿರ್ಮಾಣ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ.
ಶೀಘ್ರದಲ್ಲೇ ಸೇತುವೆ ನಿರ್ಮಿಸಿಕೊಡುವುದಾಗಿ ಶಿವರಾಮ ಹೆಬ್ಬಾರ್ ಭರವಸೆ ನೀಡಿದ್ದಾರೆ. ಸ್ಥಳೀಯ ಶಾಸಕ ದಿನಕರ್ ಶೆಟ್ಟಿ ಡಿಸೆಂಬರ್ 4 ರಂದು ಗ್ರಾಮಕ್ಕೆ ಭೇಟಿ ನೀಡಿದ್ದರು. ಶಾಸಕರೂ ಕೂಡಾ ತಮ್ಮ ಬಳಿಯಿರುವ ಅನುದಾನದಲ್ಲಿ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. 2 ಕೋಟಿ ವೆಚ್ಚದಲ್ಲಿ ಗ್ರಾಮಕ್ಕೆ ಸೇತುವೆ ನಿರ್ಮಿಸಿಕೊಡುತ್ತೇವೆ ಎಂದಿದ್ದರು.
ಶಾಸಕರು ಮುಂದಿನ ಮೇ ಅಂತ್ಯದೊಳಗೆ ಸೇತುವೆ ನಿರ್ಮಿಸಿಕೊಡುವುದಾಗಿ ತಿಳಿಸಿದ್ದಾರೆ. ಇದೀಗ ಜಿಲ್ಲಾ ಉಸ್ತುವಾರಿ ಸಚಿವರೂ ಗ್ರಾಮಕ್ಕೆ ಭೇಟಿ ನೀಡಿದ್ದು, ಗ್ರಾಮಸ್ಥರಲ್ಲಿ ಮಂದಹಾಸ ಮೂಡಿದೆ.
ಇದನ್ನೂ ಓದಿ
ಕೊವಿಡ್ ಸೋಂಕಿನ ಅಂತ್ಯದ ದಿನಗಳು ಆರಂಭವಾಗಿದೆ: ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿಕೆ
Published On - 10:47 am, Wed, 8 December 21