ವಿಜಯಪುರದಲ್ಲಿ 4 ವರ್ಷದ ಮಗು ಕಳ್ಳತನಕ್ಕೆ ಯತ್ನ! ಕಳ್ಳನ ಬೆನ್ನಟ್ಟಿ ಮಗುವನ್ನು ರಕ್ಷಿಸಿದ ತಾಯಿ

ಮಗು ಅಳುವ ಧ್ವನಿ ಕೇಳಿ ತಾಯಿ ರೇಣುಕಾ ತಕ್ಷಣ ಓಡಿಬಂದಿದ್ದಾರೆ. ಆರೋಪಿ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದು, ಹೆಸರು ಕೇಳಿದರೆ ಹಲವು ಹೆಸರು ಹೇಳುತ್ತಿದ್ದಾನೆ.

ವಿಜಯಪುರದಲ್ಲಿ 4 ವರ್ಷದ ಮಗು ಕಳ್ಳತನಕ್ಕೆ ಯತ್ನ! ಕಳ್ಳನ ಬೆನ್ನಟ್ಟಿ ಮಗುವನ್ನು ರಕ್ಷಿಸಿದ ತಾಯಿ
ಮಗು ಕಳ್ಳತನಕ್ಕೆ ಯತ್ನಿಸಿದ ಆರೋಪಿ, ಮಗುವನ್ನು ರಕ್ಷಿಸಿದ ತಾಯಿ
TV9kannada Web Team

| Edited By: sandhya thejappa

Jul 21, 2022 | 9:49 AM

ವಿಜಯಪುರ: ಬಸವನ ನಗರದಲ್ಲಿ ವ್ಯಕ್ತಿಯೊಬ್ಬ ನಾಲ್ಕು ವರ್ಷದ ಗಂಡು ಮಗು (Baby) ಕಳ್ಳತನಕ್ಕೆ ಯತ್ನಿಸಿದ್ದು, ಕಳ್ಳನ ಬೆನ್ನಟ್ಟಿ ತಾಯಿ (Mother) ತನ್ನ ಮಗುವನ್ನು ರಕ್ಷಿಸಿದ್ದಾರೆ. ಆರೋಪಿ ಅಂಗಡಿಗೆ ಬಂದು ಮಗುವನ್ನು ಎತ್ತಿಕೊಂಡು ಪರಾರಿಯಾಗುತ್ತಿದ್ದ. ಮಗು ಅಳುವ ಧ್ವನಿ ಕೇಳಿ ತಾಯಿ ರೇಣುಕಾ ತಕ್ಷಣ ಓಡಿಬಂದಿದ್ದಾರೆ. ಆರೋಪಿ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದು, ಹೆಸರು ಕೇಳಿದರೆ ಹಲವು ಹೆಸರು ಹೇಳುತ್ತಿದ್ದಾನೆ. ದಾದಾಪೀರ, ಕಾಸೀಮ್, ಸಲೀಮ್ ಎಂದು ಬೇರೆ ಬೇರೆ ಹೆಸರುಗಳನ್ನ ಹೇಳುತ್ತಿದ್ದಾನೆ. ಸದ್ಯ ಸ್ಥಳೀಯರು ಕಳ್ಳನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ನಾನು ನನ್ನ ಮಗಳಿಗೆ ಔಷಧಿ ಕೊಡುತ್ತಿದ್ದೆ. ಮಗ ಅಂಗಡಿಗೆ ಹೋಗಿದ್ದ. ಈ ವೇಳೆ ಕಳ್ಳ ಮಗನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಮಗು ತೆಗೆದುಕೊಂಡು ಮುಂದಕ್ಕೆ ಹೋಗುತ್ತಿದ್ದ. ನನ್ನ ಮಗ ಕಿರುಚುತ್ತಿದ್ದ. ಆಗ ಅವನು ಬಾಯಿ ಒತ್ತಿ ಹಿಡಿದಿದ್ದಾನೆ. ನನಗೆ ಮಗನ ಧ್ವನಿ ಕೇಳಿತು. ಏನೋ ಆಯ್ತು ಅಂತ ಹೊರಗೆ ಓಡಿ ಬಂದೆ. ಅವಾಗ ಮಗುವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ ಎಂದು ತಾಯಿ ರೇಣುಕಾ ಘಟನೆ ಬಗ್ಗೆ ಮಾಹಿತಿ ನೀಡಿದರು.

ಇದನ್ನೂ ಓದಿ: ರಾಜ್ ಕುಟುಂಬದವರನ್ನು ಭೇಟಿ ಮಾಡಿದ ಕರ್ನಾಟಕ ತೋಟಗಾರಿಕೆ ಇಲಾಖೆ, ಮೈಸೂರು ಉದ್ಯಾನ ಕಲಾ ಸಂಘ

ಆರೋಪಿಯನ್ನು ಮೊದಲು ನಾವು ಎಲ್ಲೂ ನೋಡಿರಲಿಲ್ಲ. ಈ ರೀತಿ ಮಗುನಾ ಎತ್ತುಕೊಂಡು ಹೋದರೆ ನಾವು ಏನ್ ಮಾಡಬೇಕು. ನಾವು ಕೆಲಸಕ್ಕೆ ಅಂತ ಹೊರಗೆ ಹೋಗುತ್ತೀವಿ. ಆಗ ಈ ರೀತಿ ಘಟನೆ ನಡೆದರೆ ನಾವು ಏನ್ ಮಾಡುವುದು ಎಂದು ತಾಯಿ ರೇಣುಕಾ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ

ಇದನ್ನೂ ಓದಿ: Weather Today: ಮಳೆಯಿಂದ ರಾಜಸ್ಥಾನದಲ್ಲಿ ಹಳದಿ ಅಲರ್ಟ್​ ಘೋಷಣೆ; ಗುಜರಾತ್​, ದೆಹಲಿ, ತೆಲಂಗಾಣದಲ್ಲಿ ಭಾರೀ ಮಳೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada