ನಗರಸಭೆ ಸದಸ್ಯೆಗೆ ಆಯುಧ ಪೂಜೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಮಾರಾಮಾರಿ; ಮೂವರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು
ಆಯುಧ ಪೂಜೆ ಹಿನ್ನೆಲೆಯಲ್ಲಿ ಹಿಂದೂ ಸೇವಾ ಸಮಿತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ನಗರಸಭೆ ಸದಸ್ಯೆ ಜಯಮ್ಮಗೆ ಆಹ್ವಾನ ನೀಡದ್ದಕ್ಕೆ ಜಯಮ್ಮ ಬೆಂಬಲಿಗರು ಮತ್ತು ಕಾರ್ಯಕ್ರಮ ಆಯೋಜಕರ ಮಧ್ಯೆ ಗಲಾಟೆ ನಡೆದಿದೆ.
ಯಾದಗಿರಿ: ನಗರಸಭೆ ಸದಸ್ಯೆಗೆ ಆಯುಧ ಪೂಜೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಮಾರಾಮಾರಿ ನಡೆದಿದೆ. ನಿನ್ನೆ ರಾತ್ರಿ ಯಾದಗಿರಿ ನಗರದ ಲಾಡಿಜ್ಗಲ್ಲಿ ಬಡಾವಣೆಯ ಭವಾನಿ ಮಂದಿರ ಬಳಿ ಮಾರಾಮಾರಿ ನಡೆದಿದೆ.
ಆಯುಧ ಪೂಜೆ ಹಿನ್ನೆಲೆಯಲ್ಲಿ ಹಿಂದೂ ಸೇವಾ ಸಮಿತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ನಗರಸಭೆ ಸದಸ್ಯೆ ಜಯಮ್ಮಗೆ ಆಹ್ವಾನ ನೀಡದ್ದಕ್ಕೆ ಜಯಮ್ಮ ಬೆಂಬಲಿಗರು ಮತ್ತು ಕಾರ್ಯಕ್ರಮ ಆಯೋಜಕರ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ಕುರ್ಚಿ, ಟೇಬಲ್, ಕಲ್ಲು, ಬಡಿಗೆಗಳಿಂದ ಪರಸ್ಪರ ಹೊಡೆದಾಟ ನಡೆದಿದೆ. ಗಲಾಟೆಯಲ್ಲಿ ನಗರಸಭೆ ಸದಸ್ಯೆ ಪತಿ ಸೇರಿದಂತೆ ಒಂಬತ್ತು ಮಂದಿಗೆ ಗಾಯಗಳಾಗಿದ್ದು ಈ ಪೈಕಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಿಂದೂ ಸೇವಾ ಸಮಿತಿಯ 19 ಜನರ ವಿರುದ್ಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಮಾರಾಮಾರಿ; ಹೆಣ್ಣುಮಕ್ಕಳಿಗೂ ಬಿತ್ತು ಪೆಟ್ಟು ಬಿಗ್ ಬಾಸ್ ಎಂದಾಕ್ಷಣ ನೆನಪಿಗೆ ಬರೋದು ಕಾಂಟ್ರವರ್ಸಿ. ಮನೆ ಸೇರಿದ ನಂತರ ಎಲ್ಲರೂ ತಮ್ಮ ತನವನ್ನು ಮರೆತು, ಹೊಡೆದಾಡಿಕೊಳ್ಳಲು, ಕೈಕೈ ಮಿಲಾಯಿಸಿಕೊಳ್ಳಲು ಮುಂದಾಗುತ್ತಾರೆ. ಈ ವಿಚಾರದಲ್ಲಿ ಬಿಗ್ ಬಾಸ್ ಪ್ರತಿ ಬಾರಿಯೂ ಹೈಲೈಟ್ ಆಗುತ್ತದೆ. ಈ ಬಾರಿಯ ಬಿಗ್ ಬಾಸ್ ಸೀಸನ್ 15ರಲ್ಲಿಯೂ ಇದು ಮುಂದುವರಿದಿದೆ. ದೊಡ್ಮನೆ ಆಟ ಶುರುವಾದ ಕೆಲವೇ ದಿನಗಳಲ್ಲಿ ಹೊಡೆದಾಟ-ಬಡಿದಾಟ ಆರಂಭವಾಗಿದೆ.
ಈ ಬಾರಿಯ ‘ಬಿಗ್ ಬಾಸ್ 15’ ಕಾಡಿನ ಥೀಮ್ನೊಂದಿಗೆ ಮೂಡಿ ಬರುತ್ತಿದೆ. ಈ ಕಾರಣಕ್ಕೆ ಬಿಗ್ ಬಾಸ್ ಮನೆಯನ್ನು ಕಾಡಿನ ರೀತಿಯಲ್ಲೇ ಸಿದ್ಧಮಾಡಲಾಗಿದೆ. ಇಡೀ ಮನೆಗೆ ವಿಶೇಷ ಲುಕ್ ನೀಡಲಾಗಿದೆ. ಇದು ವೀಕ್ಷಕರಿಗೆ ಸಾಕಷ್ಟು ಖುಷಿ ನೀಡಿದೆ. ಬಿಗ್ ಬಾಸ್ ಮನೆ ಬದಲಾದರೂ ಮನೆಗೆ ತೆರಳುವವರ ಮನಸ್ಥಿತಿ ಬದಲಾಗಿಲ್ಲ. ಮನೆಗೆ ತೆರಳಿದ ನಂತರ ಅವರು ಹೊಡೆದುಕೊಂಡಿದ್ದಾರೆ.
ಇದನ್ನೂ ಓದಿ: IPL 2022: ಐಪಿಎಲ್ ಮೆಗಾ ಹರಾಜಿಗೂ ಮೊದಲು ನಿಯಮಗಳಲ್ಲಿ ಬದಲಾವಣೆ ತಂದ ಬಿಸಿಸಿಐ; ಯಾರಿಗೆ ಲಾಭ ಗೊತ್ತಾ?