ಪತ್ನಿಯ ಶೀಲ ಶಂಕಿಸಿ ಹತ್ಯೆ ಮಾಡಿದ್ದ ಪತಿರಾಯ ನೇಣಿಗೆ ಶರಣು, ಯಾವೂರಲ್ಲಿ?
ಉತ್ತರ ಕನ್ನಡ: ಅನೈತಿಕ ಸಂಬಂಧದ ಗುಮಾನಿಯಲ್ಲಿ ಪತಿಯೊಬ್ಬ ತನ್ನ ಹೆಂಡತಿಯನ್ನು ಕೊಂದು, ಬಳಿಕ ತಾನೂ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಹೊನ್ನಾವರ ತಾಲೂಕಿನ ಕೂಳಿಮನೆ ಗ್ರಾಮದಲ್ಲಿ ನಡೆದಿದೆ. ಶೈಲಾ ನಾಯಕ್(38) ಮತ್ತು ವೆಂಕಟೇಶ್ ನಾಯಕ್(45) ಮೃತ ದಂಪತಿ. ಇಡಗುಂಜಿಯ ಕೂಳಿಮನೆ ಗ್ರಾಮದ ಮನೆಯಲ್ಲಿ ವಾಸವಿದ್ದ ವೆಂಕಟೇಶ್ಗೆ ತನ್ನ ಪತ್ನಿ ಶೈಲಾ ನಾಯಕ್ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿತ್ತು. ಹೀಗಾಗಿ, ವೆಂಕಟೇಶ್ ಆಕೆಯನ್ನು ಕತ್ತಿಯಿಂದ ಕಡಿದು ಕೊಲೆಗೈದಿದ್ದಾನೆ. ನಂತರ ಮಕ್ಕಳನ್ನ ಕೋಣೆಯಲ್ಲಿ ಕೂಡಿ ಹಾಕಿ ತಾನೂ ನೇಣಿಗೆ […]

ಉತ್ತರ ಕನ್ನಡ: ಅನೈತಿಕ ಸಂಬಂಧದ ಗುಮಾನಿಯಲ್ಲಿ ಪತಿಯೊಬ್ಬ ತನ್ನ ಹೆಂಡತಿಯನ್ನು ಕೊಂದು, ಬಳಿಕ ತಾನೂ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಹೊನ್ನಾವರ ತಾಲೂಕಿನ ಕೂಳಿಮನೆ ಗ್ರಾಮದಲ್ಲಿ ನಡೆದಿದೆ. ಶೈಲಾ ನಾಯಕ್(38) ಮತ್ತು ವೆಂಕಟೇಶ್ ನಾಯಕ್(45) ಮೃತ ದಂಪತಿ.
ಇಡಗುಂಜಿಯ ಕೂಳಿಮನೆ ಗ್ರಾಮದ ಮನೆಯಲ್ಲಿ ವಾಸವಿದ್ದ ವೆಂಕಟೇಶ್ಗೆ ತನ್ನ ಪತ್ನಿ ಶೈಲಾ ನಾಯಕ್ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿತ್ತು. ಹೀಗಾಗಿ, ವೆಂಕಟೇಶ್ ಆಕೆಯನ್ನು ಕತ್ತಿಯಿಂದ ಕಡಿದು ಕೊಲೆಗೈದಿದ್ದಾನೆ.
ನಂತರ ಮಕ್ಕಳನ್ನ ಕೋಣೆಯಲ್ಲಿ ಕೂಡಿ ಹಾಕಿ ತಾನೂ ನೇಣಿಗೆ ಶರಣಾಗಿದ್ದಾನೆ. ಮಂಕಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡಿದಿದ್ದು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
Published On - 1:20 pm, Sat, 29 August 20



