ನಮ್ಮ ದೇಹದ ಅತ್ಯಂತ ಮುಖ್ಯವಾದ ಹಾಗೂ ಸೂಕ್ಷ್ಮವಾದ ಅಂಗ ಕಣ್ಣು. ಇಡೀ ಜಗತ್ತನ್ನೇ ನೋಡುವ ಅದೃಷ್ಟ ಕಣ್ಣಿನಿಂದ ಸಿಗುತ್ತದೆ. ವ್ಯಕ್ತಿಯ ಭಾವನೆಯನ್ನು ಕಣ್ಣಿನಿಂದ ಕಂಡು ಹಿಡಿಯಬಹುದು. ನೋವಾದಾಗ, ಸಿಟ್ಟು ಬಂದಾಗ, ಬೇಸರವಾದಾಗ ಹೀಗೆ ಎಲ್ಲಾ ಭಾವನೆಗಳನ್ನು ತತ್ ಕ್ಷಣದಲ್ಲಿ ಕಂಡು ಹಿಡಿಯಬಹುದು.
ಒಬ್ಬೊಬ್ಬರ ಕಣ್ಣು ಒಂದೊಂದು ಬಣ್ಣದಲ್ಲಿರುತ್ತದೆ. ಹೆಚ್ಚು ಜನರ ಕಣ್ಣು ಕಪ್ಪಾಗಿದ್ದರೆ, ಇನ್ನು ಕೆಲವರ ಕಣ್ಣು, ನೀಲಿ, ತಿಳಿ ಹಸಿರು, ಬೂದು ಬಣ್ಣದಲ್ಲಿ ಕಂಡು ಬರುತ್ತದೆ. ಈ ಬಣ್ಣದ ಮೂಲಕ ವ್ಯಕ್ತಿಯ ವ್ಯಕ್ತಿತ್ವವನ್ನು ಕಂಡು ಹಿಡಿಯಬಹುದು. ಹಾಗಿರುವಾಗ ನಿಮ್ಮ ಕಣ್ಣು ಯಾವ ಬಣ್ಣದಲ್ಲಿದೆ? ಕಣ್ಣಿನ ಬಣ್ಣದ ಮೂಲಕ ವ್ಯಕ್ತಿಯ ಯಾವ ವ್ಯಕ್ತಿತ್ವವನ್ನು ಹೊಂದಿರುತ್ತಾನೆ ಎಂಬುದನ್ನು ತಿಳಿಯಿರಿ.
ಕಪ್ಪು ಕಣ್ಣು ಹೆಚ್ಚು ಜನರ ಕಣ್ಣು ಹೆಚ್ಚು ಕಪ್ಪಾಗಿರುತ್ತದೆ. ಅಂತವರು ಹೆಚ್ಚು ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹರು. ಜನರಿಗೆ ಮೋಸ ಮಾಡಲು ಎಂದೂ ಇಷ್ಟಪಡುವುದಿಲ್ಲ. ಕಪ್ಪು ಕಣ್ಣುಳ್ಳ ಜನರನ್ನು ಎಂದೂ ನಂಬಬಹುದು. ಕಪ್ಪು ಕಣ್ಣುಳ್ಳವರು ಶಾಂತ ಸ್ವಭಾವದವರಾಗಿರುತ್ತಾರೆ ಹಾಗೂ ರಹಶ್ಯಗಳನ್ನು ಕಾಪಾಡಿಕೊಳ್ಳುತ್ತಾರೆ. ಹಾಗಾಗಿ ಹೆಚ್ಚು ನಂಬಿಕೆ ಇಡಬಹುದು.
ಕಂದು ಕಣ್ಣು ಹೆಚ್ಚಿನ ಜನರು ಕಣ್ಣು ಕಂದು ಬಣ್ಣದ್ದಾಗಿರುತ್ತದೆ. ಕಂದು ಬಣ್ಣದ ಜನರು ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಾರೆ. ನೇರವಾದ ಮಾತಿನ ಜತೆಗೆ ಸದೃಢರಾಗಿರುತ್ತಾರೆ. ತಮ್ಮ ಗುರಿಯನ್ನು ಸಾಧಿಸಲು ಎಂದೂ ಪ್ರಯತ್ನದಲ್ಲಿರುತ್ತಾರೆ. ಹೆಚ್ಚು ಸೃಜನಶೀಲರಾಗಿರುತ್ತಾರೆ ಜತೆಗೆ ಆಕರ್ಷಕವಾಗಿರುವುದರಿಂದ ಜನರನ್ನು ಬಹುಬೇಗ ಗೆಲ್ಲುತ್ತಾರೆ.
ತಿಳಿ ಹಸಿರು ಕಣ್ಣು ತಿಳಿ ಹಸಿರು ಬಣ್ಣದ ಕಣ್ಣಿರುವವರು ಕಂಡು ಬರುವುದು ತುಂಬಾ ವಿರಳ. ಉಳಿದವರಿಗೆ ಹೋಲಿಸಿದರೆ ಹೆಚ್ಚು ಆಕರ್ಷಕವಾಗಿ ಕಾಣಿಸಿಕೊಳ್ಳುತ್ತಾರೆ. ಅದಾಗ್ಯೂ ಹೆಚ್ಚು ಸುಂದರವಾಗಿರುತ್ತಾರೆ. ಇವರು ಹೆಚ್ಚು ಬುದ್ದಿವಂತರಾಗಿರುವುದರಿಂದ ಜನರ ಎದುರು ಮೆಚ್ಚುಗೆ ಗಳಿಸಿಕೊಳ್ಳುತ್ತಾರೆ.
ನೀಲಿ ಕಣ್ಣುಗಳು ಹಸಿರು ಬಣ್ಣದ ಕಣ್ಣುಗಳಂತೆಯೇ ನೀಲಿ ಬಣ್ಣದ ಕಣ್ಣುಗಳನ್ನು ಹೊಂದಿರುವವರೂ ಸಹ ಕಾಣಸಿಗುವುದು ಅತ್ಯಂತ ವಿರಳ. ನೀಲಿ ಕಣ್ಣು ಉಳ್ಳವರು ಆಂತ ಸ್ವಭಾವದವರು ಹಾಗೂ ತೀಕ್ಷ್ಣವಾದ ಮನಸ್ಸುಳ್ಳವರಾಗಿರುತ್ತಾರೆ. ಇವರು ಯಾರಿಗೂ ನೋವುಂಟು ಮಾಡುವ ಮನಸ್ಸುಳ್ಳವರಲ್ಲ. ಇವರು ಹೆಚ್ಚು ಹೃದಯವಂತರು ಹಾಗೂ ಸತ್ಯವಂತರು.
ಬೂದು ಕಣ್ಣುಗಳು ಬೂದು ಕಣ್ಣುಗಳಿರುವವರನ್ನು ಪ್ರಣಯದ ರಾಜ ಎಂದು ಕರೆಯುತ್ತಾರೆ. ಪ್ರಣಯದ ವಿಷಯ ಬಂದರೆ ಇವರನ್ನು ಸೋಲಿಸುವವರೇ ಇಲ್ಲ. ಸಣ್ಣ ಸಣ್ಣ ವಿಷಯಕ್ಕೂ ಇವರು ಕೋಪಗೊಳ್ಳುವುದಿಲ್ಲ. ಎಲ್ಲವನ್ನೂ ಸುಲಭದಲ್ಲಿ ನಿಭಾಯಿಸುತ್ತಾರೆ. ಸ್ವಭಾವತಃ ಇವರು ಹೆಚ್ಚು ಬಲಶಾಲಿ ಮತ್ತು ವಿನಮ್ರ ಭಾವದವರಾಗಿರುತ್ತಾರೆ.
ಇದನ್ನೂ ಓದಿ:
Viral Video: ಕದ್ದು..ಕದ್ದು ಕಣ್ಣು ಹೊಡೆದು ಕ್ಯಾಮರಾಕ್ಕೆ ಪೋಸ್ ಕೊಟ್ಟ ವಧು; ವರನಿಗೇನೂ ಗೊತ್ತೇ ಆಗ್ಲಿಲ್ಲ !