AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪಾಕಿಸ್ತಾನದಿಂದ ಮತ್ತೆ ಭಯೋತ್ಪಾದಕ ಕೃತ್ಯ ನಡೆದರೆ ಭಾರತ ಸುಮ್ಮನಿರುವುದಿಲ್ಲ’; ಸಚಿವ ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ

ಪಾಕಿಸ್ತಾನದಿಂದ ಮತ್ತೆ ಯಾವುದೇ ಭಯೋತ್ಪಾದನಾ ಕೃತ್ಯ ನಡೆದರೂ ಭಾರತೀಯ ಸೇನೆಯು ಈ ಹಿಂದೆಂದಿಗಿಂತಲೂ ಬಲವಾದ ತಿರುಗೇಟು ನೀಡಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಸಿದ್ದಾರೆ. ಗಡಿಪಾರು ಭಯೋತ್ಪಾದನೆಯ ವಿರುದ್ಧ ಭಾರತದ ಶೂನ್ಯ ಸಹಿಷ್ಣುತಾ ನಿಲುವನ್ನು ಸ್ಪಷ್ಟಪಡಿಸಿದ ಅವರು, ಭಾರತ ಶಾಂತಿ ಮತ್ತು ಮಾತುಕತೆಗೆ ನೀಡುವ ಆದ್ಯತೆಯನ್ನು ಎಂದಿಗೂ ನಮ್ಮ ದೌರ್ಬಲ್ಯವೆಂದು ಭಾವಿಸಬಾರದು ಎಂದಿದ್ದಾರೆ. ಭಾರತವು 100ಕ್ಕೂ ಹೆಚ್ಚು ದೇಶಗಳಿಗೆ ಬುಲೆಟ್‌ಪ್ರೂಫ್ ಜಾಕೆಟ್‌ಗಳನ್ನು ರಫ್ತು ಮಾಡುತ್ತಿದೆ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ರಾಷ್ಟ್ರೀಯ ಗುಣಮಟ್ಟವನ್ನು ಸ್ಥಾಪಿಸಿದ ವಿಶ್ವದ 4ನೇ ದೇಶವಾಗಿದೆ ಎಂದು ಹೇಳಿದೆ.

'ಪಾಕಿಸ್ತಾನದಿಂದ ಮತ್ತೆ ಭಯೋತ್ಪಾದಕ ಕೃತ್ಯ ನಡೆದರೆ ಭಾರತ ಸುಮ್ಮನಿರುವುದಿಲ್ಲ'; ಸಚಿವ ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ
ರಾಜನಾಥ್ ಸಿಂಗ್Image Credit source: PTI
ಸುಷ್ಮಾ ಚಕ್ರೆ
|

Updated on: Oct 15, 2026 | 8:07 PM

Share

ನವದೆಹಲಿ, ಅಕ್ಟೋಬರ್ 15: ಪಾಕಿಸ್ತಾನದಿಂದ ಪ್ರಾಯೋಜಿತವಾಗುವ ಯಾವುದೇ ಹೊಸ ಭಯೋತ್ಪಾದನಾ ಕೃತ್ಯ ನಡೆದರೂ ಭಾರತೀಯ ಸೇನೆಯು ಈ ಹಿಂದೆಂದಿಗಿಂತಲೂ ಅತ್ಯಂತ ಕಠಿಣ ಹಾಗೂ ಬಲವಾದ ತಿರುಗೇಟು ನೀಡಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಸಿದ್ದಾರೆ. ಭಯೋತ್ಪಾದನೆಯ ವಿರುದ್ಧ ಭಾರತದ ಶೂನ್ಯ ಸಹಿಷ್ಣುತಾ ನಿಲುವನ್ನು ಪುನರುಚ್ಚರಿಸಿದ ಅವರು, ಭಾರತ ಶಾಂತಿ ಮತ್ತು ಮಾತುಕತೆಗೆ ನೀಡುವ ಆದ್ಯತೆಯನ್ನು ಎಂದಿಗೂ ನಮ್ಮ ದೌರ್ಬಲ್ಯವೆಂದು ಭಾವಿಸಬಾರದು ಎಂದಿದ್ದಾರೆ.

ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟದ ವಿಧಾನವು ಸಂಪೂರ್ಣವಾಗಿ ಬದಲಾಗಿದ್ದು, ಬೆದರಿಕೆಗಳನ್ನು ಅವುಗಳ ಮೂಲದಲ್ಲೇ ನಿರ್ಮೂಲನೆ ಮಾಡುವ ಗುರಿಯನ್ನು ಭಾರತೀಯ ಸೇನೆ ಹೊಂದಿದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ನೀರಿಗಾಗಿ ಹಾಹಾಕಾರ; ಭಾರತ ಸಿಂಧೂ ಜಲ ಒಪ್ಪಂದ ರದ್ದುಗೊಳಿಸಿದ ಬೆನ್ನಲ್ಲೇ ಪಾಕ್​ನಲ್ಲಿ ಶೇ. 22ರಷ್ಟು ನೀರಿನ ಕೊರತೆ

ಭಯೋತ್ಪಾದನೆಗೆ ಮೂಲದಲ್ಲೇ ತಿರುಗೇಟು ನೀಡುವ ಭಾರತದ ನೂತನ ಕಾರ್ಯತಂತ್ರಕ್ಕೆ ಆಪರೇಷನ್ ಸಿಂಧೂರ್, ಬಾಲಾಕೋಟ್ ಏರ್‌ಸ್ಟ್ರೈಕ್ ಮತ್ತು ಸರ್ಜಿಕಲ್ ಸ್ಟ್ರೈಕ್‌ಗಳು ಪ್ರತ್ಯಕ್ಷ ನಿದರ್ಶನಗಳಾಗಿವೆ. 2014ರಿಂದೀಚೆಗೆ ಉಗ್ರರನ್ನು ಸದೆಬಡಿಯುವ ಪ್ರಮಾಣ ಹೆಚ್ಚಾಗಿದ್ದು, ಶಸ್ತ್ರಾಸ್ತ್ರ ಹಿಡಿದು ಭಾರತದ ವಿರುದ್ಧ ನಿಲ್ಲುವ ಉಗ್ರರನ್ನು ಭದ್ರತಾ ಪಡೆಗಳು ಒಂದು ವರ್ಷದೊಳಗೇ ಎನ್‌ಕೌಂಟರ್ ಮಾಡುತ್ತಿವೆ ಎಂದು ಅವರು ವಿವರಿಸಿದರು.

ದಾಖಲೆಯ ರಕ್ಷಣಾ ಉತ್ಪಾದನೆ:

ಭಾರತದ ರಕ್ಷಣಾ ಉತ್ಪಾದನೆಯು 2014ರಲ್ಲಿ 40,000 ಕೋಟಿ ರೂ. ಇದ್ದದ್ದು ಈಗ 1.78 ಲಕ್ಷ ಕೋಟಿ ರೂ. ದಾಟಿದ್ದು, ಸಾರ್ವಕಾಲಿಕ ದಾಖಲೆ ಬರೆದಿದೆ. ರಕ್ಷಣಾ ರಫ್ತು 39,000 ಕೋಟಿ ರೂ.ಗೆ ತಲುಪಿದ್ದು, ಭಾರತೀಯ ರಕ್ಷಣಾ ಉತ್ಪನ್ನಗಳು ಪ್ರಪಂಚದ ಸುಮಾರು 100 ದೇಶಗಳನ್ನು ತಲುಪುತ್ತಿವೆ. 2029ರ ವೇಳೆಗೆ 50,000 ಕೋಟಿ ರೂ. ರಫ್ತು ಸಾಧಿಸುವ ಗುರಿಯಿದೆ. ಸಶಸ್ತ್ರ ಪಡೆಗಳು ಬಳಸುವ 175 ಯುದ್ಧಸಾಮಗ್ರಿ ವಿಧಗಳಲ್ಲಿ 159 ವಿಧಗಳನ್ನು (ಶೇ. 90ಕ್ಕಿಂತ ಹೆಚ್ಚು) ಈಗ ಭಾರತದಲ್ಲೇ ತಯಾರಿಸಲಾಗುತ್ತಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು; ಸಮುದ್ರದಲ್ಲಿ ತೇಲಾಡಿದ ಐಫೋನ್‌ಗಳು
ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು; ಸಮುದ್ರದಲ್ಲಿ ತೇಲಾಡಿದ ಐಫೋನ್‌ಗಳು
ಸ್ಟಿಂಗ್ ಆಪರೇಷನ್: ಉನ್ನತ ಮಟ್ಟದ ತನಿಖೆಗೆ ನೀಡಲು ಸರ್ಕಾರ ಹಿಂದೇಟು!
ಸ್ಟಿಂಗ್ ಆಪರೇಷನ್: ಉನ್ನತ ಮಟ್ಟದ ತನಿಖೆಗೆ ನೀಡಲು ಸರ್ಕಾರ ಹಿಂದೇಟು!
ಸೂಳೆಕೆರೆಯ ಋಣ ತೀರಿಸಲು ಮುಂದಾದ ರೈತರು
ಸೂಳೆಕೆರೆಯ ಋಣ ತೀರಿಸಲು ಮುಂದಾದ ರೈತರು
ಬರಪೀಡಿತ ಪಟ್ಟಿಗೆ 9 ತಾಲೂಕುಗಳ ಸೇರ್ಪಡೆ: ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ
ಬರಪೀಡಿತ ಪಟ್ಟಿಗೆ 9 ತಾಲೂಕುಗಳ ಸೇರ್ಪಡೆ: ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ
ಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಹಿರಿಯ ನಟ ದೇವರಾಜ್ ಕುಟುಂಬ
ಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಹಿರಿಯ ನಟ ದೇವರಾಜ್ ಕುಟುಂಬ
ಶ್ರೀರಂಗಪಟ್ಟಣ ದಸರಾ ವೈಭವಕ್ಕೆ ಚಾಲನೆ: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ
ಶ್ರೀರಂಗಪಟ್ಟಣ ದಸರಾ ವೈಭವಕ್ಕೆ ಚಾಲನೆ: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ
‘ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’: ಗಾನವಿ ಬಗ್ಗೆ ಗಗನ್ ಚಿನ್ನಪ್ಪ ಟೀಕೆ
‘ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’: ಗಾನವಿ ಬಗ್ಗೆ ಗಗನ್ ಚಿನ್ನಪ್ಪ ಟೀಕೆ
ರಾಹುಲ್ ಗಾಂಧಿ, ಪ್ರಿಯಾಂಕಾದೂ ಸ್ಟಿಂಗ್ ವಿಡಿಯೋ ಬರಬಹುದು: ಎಚ್​​ಡಿಕೆ
ರಾಹುಲ್ ಗಾಂಧಿ, ಪ್ರಿಯಾಂಕಾದೂ ಸ್ಟಿಂಗ್ ವಿಡಿಯೋ ಬರಬಹುದು: ಎಚ್​​ಡಿಕೆ
ಲಡಾಖ್‌ಗೆ 3,350 ಕೋಟಿ ರೂ. ಯೋಜನೆಗಳ ಕೊಡುಗೆ
ಲಡಾಖ್‌ಗೆ 3,350 ಕೋಟಿ ರೂ. ಯೋಜನೆಗಳ ಕೊಡುಗೆ
ದಸರಾ, ದೀಪಾವಳಿ: ರಾಜ್ಯಾದ್ಯಂತ ಸಿಹಿ ತಿಂಡಿ ಅಂಗಡಿಗಳ ಮೇಲೆ FSSAI ದಾಳಿ
ದಸರಾ, ದೀಪಾವಳಿ: ರಾಜ್ಯಾದ್ಯಂತ ಸಿಹಿ ತಿಂಡಿ ಅಂಗಡಿಗಳ ಮೇಲೆ FSSAI ದಾಳಿ