‘ದೇಶದಲ್ಲಿ ಸಂಕಷ್ಟ ಎದುರಾದಾಗ ಕೆಲವರು ಸಂಭ್ರಮಿಸುತ್ತಾರೆ’; ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಪ್ರತಿಪಕ್ಷಗಳ ವಿರುದ್ಧ ತೀವ್ರ ಪ್ರಹಾರ ನಡೆಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, "ದೇಶದಲ್ಲಿ ಗೊಂದಲ ಹಾಗೂ ಅಶಾಂತಿ ಸೃಷ್ಟಿಸುವುದೇ ವಿಪಕ್ಷಗಳ ಮುಖ್ಯ ಸಂಚಾಗಿದೆ" ಎಂದು ಆರೋಪಿಸಿದ್ದಾರೆ. "ದೇಶವು ಯಾವುದಾದರೂ ಬಿಕ್ಕಟ್ಟು ಅಥವಾ ಸಂಕಷ್ಟವನ್ನು ಎದುರಿಸಿದಾಗ ವಿಪಕ್ಷಗಳು ಸಂತಸಪಡುತ್ತವೆ ಮತ್ತು ಸಂಭ್ರಮಿಸುತ್ತವೆ" ಎಂದು ಪ್ರಧಾನಿ ಮೋದಿ ಕಿಡಿಕಾರಿದ್ದಾರೆ. ಗುಜರಾತ್ ಭೇಟಿಯ ವೇಳೆ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಷ್ಟ್ರೀಯ ಭದ್ರತೆ, ದೇಶದ ಅಭಿವೃದ್ಧಿ ಹಾಗೂ ವಿಪಕ್ಷಗಳ ನೆಗೆಟಿವ್ ರಾಜಕಾರಣದ ಕುರಿತು ಗಂಭೀರ ಆರೋಪಗಳನ್ನು ಮಾಡಿದರು.

ಬನಾಸ್‌ಕಾಂತ, ಅಕ್ಟೋಬರ್ 30: ಇರಾನ್ ಮತ್ತು ಗಲ್ಫ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಯುದ್ಧದ ಉದ್ವಿಗ್ನತೆಯ ನಡುವೆ ದೇಶದಲ್ಲಿ ಭೀತಿ ಹುಟ್ಟಿಸಲು ವದಂತಿಗಳನ್ನು ಹರಡುತ್ತಿರುವ ಪ್ರತಿಪಕ್ಷಗಳ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗುಜರಾತ್‌ನ ಬನಾಸ್‌ಕಾಂತದಲ್ಲಿ ನಡೆದ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂತಹ ಸಂಕಷ್ಟದ ಸಮಯದಲ್ಲಿ ದೇಶದ ಜೊತೆ ನಿಲ್ಲುವ ಬದಲು, ವಿಪಕ್ಷ ನಾಯಕರು ಪರಿಸ್ಥಿತಿಯನ್ನು ಸರ್ಕಾರವನ್ನು ಗುರಿ ಮಾಡಲು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ದೇಶದ ಪ್ರತಿಯೊಬ್ಬ ನಾಗರಿಕ, ಯುವಕರು ಮತ್ತು ಮಹಿಳೆಯರು ಭಾರತವನ್ನು ‘ವಿಕಸಿತ ಭಾರತ’ವನ್ನಾಗಿ ಮಾಡಲು ಶ್ರಮಿಸುತ್ತಿದ್ದರೆ, ಕೆಲವು ರಾಜಕೀಯ ಗುಂಪುಗಳು ದೇಶದ ಪ್ರಗತಿಯನ್ನು ಸಹಿಸದೇ ರಾಷ್ಟ್ರ ಸಂಕಷ್ಟಕ್ಕೆ ಸಿಲುಕುವುದನ್ನೇ ಕಾಯುತ್ತಿವೆ ಎಂದು ಅವರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಮೋದಿ ಎಲ್ಲಿಗೂ ಹೋಗಲ್ಲ, ಬನಸ್ಕಾಂತದಲ್ಲಿ ಮೊಳಗಿದ ಘೋಷಣೆ:ಅಭಿವೃದ್ಧಿ ಗುರಿಗಳ ಪಟ್ಟಿ ಮಾಡಿದ ಪ್ರಧಾನಿ
“ರಾಷ್ಟ್ರದ ಅಭಿವೃದ್ಧಿಯ ಹಾದಿಗೆ ತಡೆ ಒಡ್ಡುವುದು ಮತ್ತು ಸಮಾಜದಲ್ಲಿ ಗೊಂದಲ, ಅಸ್ಥಿರತೆ ಹಾಗೂ ಅಶಾಂತಿಯನ್ನು ಸೃಷ್ಟಿಸುವುದೇ ಕೆಲವು ವಿಪಕ್ಷಗಳ ಏಕೈಕ ಅಜೆಂಡಾವಾಗಿದೆ” ಎಂದು ಪ್ರಧಾನಿ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
#WATCH | Banaskantha, Gujarat | Addressing an event, PM Modi says, “Today, every youth, sister and daughter is working towards making India a developed nation. But some people do not like this. These are the people who want to see the country in difficulty. They feel happy when they see the country in difficulty. When the nation as one is facing uncertainties emerging due to tensions in the Gulf, they spread rumours about shortages of fertilisers and gas. They wanted to do this only to defame Modi. I want to remind the farmers and all others that I had said that I would stand by you all. The tensions in the Gulf are still ongoing, but the govt did not let the burden of increased fertiliser prices across the world fall on our farmers…”
(Video source: DD)
— ANI (@ANI) October 30, 2026
‘ಮೋದಿ ಹೆಸರಿಗೆ ಮಸಿ ಬಳಿಯುವುದೇ ವಿಪಕ್ಷಗಳ ಉದ್ದೇಶ’:
ಗಲ್ಫ್ ವಲಯದ ಬಿಕ್ಕಟ್ಟಿನ ನೆಪದಲ್ಲಿ ವಿಪಕ್ಷಗಳು ಮಾಡುತ್ತಿರುವ ಅಪಪ್ರಚಾರದ ಕುರಿತು ಮಾತನಾಡಿದ ಪ್ರಧಾನಿ ಮೋದಿ, “ಗಲ್ಫ್ ಪ್ರದೇಶದ ಉದ್ವಿಗ್ನತೆಯಿಂದಾಗಿ ಜಾಗತಿಕವಾಗಿ ಅನಿಶ್ಚಿತತೆ ಎದುರಾಗಿರುವ ಈ ಸಮಯದಲ್ಲಿ, ಇಡೀ ದೇಶವು ಒಗ್ಗಟ್ಟಾಗಿ ನಿಲ್ಲಬೇಕಿದೆ. ಆದರೆ ವಿಪಕ್ಷಗಳು ರಸಗೊಬ್ಬರ ಮತ್ತು ಎಲ್‌ಪಿಜಿ ಕೊರತೆಯಿದೆ ಎಂದು ಸುಳ್ಳು ವದಂತಿಗಳನ್ನು ಹಬ್ಬಿಸಿ ಜನರಲ್ಲಿ ಭೀತಿ ಸೃಷ್ಟಿಸುತ್ತಿವೆ. ಇವರ ಏಕೈಕ ಉದ್ದೇಶ ಮೋದಿ ಹೆಸರಿಗೆ ಮಸಿ ಬಳಿಯುವುದು ಮಾತ್ರ” ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಅಗ್ರಿಕಲ್ಚರ್ ಈಸ್ ಅವರ್ ಕಲ್ಚರ್ ಎಂದ ಮೋದಿ: ಗುಜರಾತ್‌ಗೆ 14 ಸಾವಿರ ಕೋಟಿ ರೂ. ಯೋಜನೆಗಳ ಕೊಡುಗೆ
ಜಾಗತಿಕವಾಗಿ ರಸಗೊಬ್ಬರ ಬೆಲೆಗಳು ಗಗನಕ್ಕೇರುತ್ತಿದ್ದರೂ, ಭಾರತದ ರೈತರ ಮೇಲೆ ಅದರ ಹೊರೆ ಬೀಳದಂತೆ ಸರ್ಕಾರ ನೋಡಿಕೊಂಡಿದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ. “ಗಲ್ಫ್ ವಲಯದಲ್ಲಿ ಯುದ್ಧದ ಪರಿಸ್ಥಿತಿ ಮುಂದುವರಿದಿದ್ದರೂ, ಜಾಗತಿಕವಾಗಿ ಏರಿಕೆಯಾಗಿರುವ ರಸಗೊಬ್ಬರ ಬೆಲೆಯ ಹೊರೆಯನ್ನು ನಾವು ದೇಶದ ರೈತರ ಮೇಲೆ ಬೀಳಲು ಬಿಟ್ಟಿಲ್ಲ” ಎಂದು ಮೋದಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




