ಕೈ ಕೆಸರಾದರೆ ಬಾಯಿ ಮೊಸರು ಅನ್ನೋ ಮಾತನ್ನು ರೈತರೊಬ್ಬರು ಅಕ್ಷರಶಃ ಸತ್ಯ ಮಾಡಿದ್ದಾರೆ. ಉದ್ದು, ಸೋಯಾ, ಹೆಸರು, ಬೆಳೆ ಬೆಳೆಸಿ ಆ ಗ್ರಾಮದ ರೈತ ಪ್ರತಿವರ್ಷ ನಷ್ಟ ಅನುಭವಿಸಿದ್ದರು. ಆದರೆ ಈ ಆಧುನಿಕ ಯುಗದಲ್ಲಿ ಕೃಷಿಯಲ್ಲಿ ಏನಾದರೂ ಹೊಸದನ್ನ ಮಾಡಬೇಕೆಂದು ಯೋಚಿಸಿದ ರೈತ ತನ್ನ ಹೊಲದಲ್ಲಿ ನುಗ್ಗೆಕಾಯಿ ಬೆಳೆದು ಯಶಸ್ವಿಕಂಡು ಲಾಭದ ನಿರಿಕ್ಷೇಯಲ್ಲಿದ್ದಾರೆ.
ಹೌದು, ಬೀದರ್ ತಾಲೂಕಿನ ಕೋಳಾರ ಬಿ ಗ್ರಾಮದ ರೈತ ಬಾಬ್ ಶೆಟ್ಟಿ ಮಾಹಾಶೆಟ್ಟಿ ಅವರು ತಮ್ಮ ಒಂದೂವರೆ ಎಕರೆಯಷ್ಟು ಜಮೀನಿನಲ್ಲಿ ನುಗ್ಗೆಕಾಯಿ ಸಸಿ ನಾಟಿ ಮಾಡಿ ಎಂಟು ತಿಂಗಳಲ್ಲಿ ಕಾಯಿ ಬಿಡಲು ಆರಂಬಭಿಸಿದೆ. ಇನ್ನೂ ಒಂದೂವರೆ ಎಕರೆಯಲ್ಲಿ ಸುಮಾರು 6 ನೂರು ನುಗ್ಗೆ ಸಸಿಗಳು ನಾಟಿ ಮಾಡಿದ್ದು ನಾಟಿ ಮಾಡಿದ ಎಂಟು ತಿಂಗಳ ಬಳಿಕ ಈಗ ಕಾಯಿ ಬಿಡಲು ಆರಂಭಿಸಿವೆ. ಒಂದು ಗಿಡಕ್ಕೆ ಸರಾಸರಿ 20 ಕೆಜಿಯಷ್ಟು ಕಾಯಿ ಬಿಟ್ಟಿದ್ದು ಇನ್ನೇನು ಕಟಾವು ಮಾಡುವ ಹಂತಕ್ಕೆ ಬಂದಿದೆ.
ಈಗ ಮದುವೆಯ ಸಿಜೆನ್ ಆಗಿರುವುದರಿಂದ ನುಗ್ಗೆಕಾಯಿಗೆ ಮಾರುಕಟ್ಟೆಯಲ್ಲಿ ಬಾರೀ ಬೇಡಿಕೆಯಿದೆ. ಮಾರುಕಟ್ಟೆಯಲ್ಲಿ ನುಗ್ಗಿಕಾಯಿಗೆ 100 ರೂಪಾಯಿ ವರೆಗೆ ಬೆಲೆಯಿದ್ದು ರೈತರಿಂದ 50 ರೂಪಾಯಿ ಕೆಜಿಗೆ ಖರೀಧಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ ನುಗ್ಗೆ ಕಾಯಿ ಬೆಳೆಸಿದ ರೈತರಿಗೆ ಭಾರಿ ಲಾಭ ತಂದುಕೊಡುತ್ತಿದೆ. ಇನ್ನೂ ರೈತ ಬಾಬ್ ಶೆಟ್ಟಿ ಮಹಾಶೆಟ್ಟಿ ಅವರು ಬೆಳೆಸಿರುವ ನುಗ್ಗೆ ಕಾಯಿಗಳು ಇನ್ನೊಂದು ವಾರದಲ್ಲಿ ಕಟಾವಿಗೆ ಬರಲಿದ್ದು ಹೋಲ್ ಸೇಲ್ ಮಾರಾಟಗಾರರು ಇವರಿಗೆ ಕೇಜಿಗೆ 50 ರೂಪಾಯಿ ಕೊಟ್ಟು ತೆಗೆದುಕೊಂಡು ಗೊಗುತ್ತೇವೆಂದು ಮುಂಗಡಹಣವನ್ನ ಕೂಡಾ ಕೊಟ್ಟು ಹೋಗಿದ್ದಾರೆ.
ಉದ್ದು, ಸೋಯಾ, ಹೆಸರು ಬೆಳೆಯನ್ನ ಬೆಳೇಸಿ ಕೈ ಸುಟ್ಟುಕೊಳ್ಳುತ್ತಿದ್ದ ರೈತ ಬಾಬ್ ಶೆಟ್ಟಿ ಮಹಾಶೆಟ್ಟಿ ಅವರಿಗೆ ನುಗ್ಗೆಕಾಯಿ ಲಾಭ ತಂದುಕೊಡುವ ನಿರಿಕ್ಷೇತರಿಸಿದೆ. ಇನ್ನೂ ಮಾರುಕಟ್ಟೆಕೂಡಾ ಬೀದರ್, ಗುಲ್ಬರ್ಗಾ, ಹೈದ್ರಾಬಾದ್, ಇದ್ದು ನುಗ್ಗೆಕಾಯಿಗೆ ಬಾರಿ ಬೇಡಿಕೆಯಿದೆ.
ಎಲ್ಐಸಿ ಎಂಜೆಂಟ್ ಆಗಿರುವ ಬಾಬ್ ಶೆಟ್ಟಿ ಮಾಹಾಶೆಟ್ಟಿ ಅವರಿಗೆ ಕೃಷಿಯಲ್ಲಿ ಎಲ್ಲಿಲ್ಲದ ಆಸಕ್ತಿಯಿದೆ. ಎಲ್ಐಸಿ ಎಜೆಂಟ್ ಜೊತೆಗೆ ಕೃಷಿಯಲ್ಲಿ ತೊಡಗಿಕೊಂಡು ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನ ಮಾಡುವುದರ ಮೂಲಕ ಸೈ ಎಣಿಸಿಕೊಂಡಿದ್ದಾರೆ. ಜೂನ್‌ನ ಮಧ್ಯಾವಧಿಯವರೆಗೆ ನುಗ್ಗೆಕಾಯಿಯ ಋತು ಮುಗಿಯುತ್ತದೆ. ಅಲ್ಲಿಯವರೆಗೆ ಪೇಟೆಗಳಲ್ಲಿ, ಸಂತೆಗಳಲ್ಲಿ ವ್ಯಾಪಾರ ನಿರಂತರವಾಗಿ ನಡೆಯುತ್ತದೆ. ಈ ಬಾರಿ ಬಂಪರ್ ಬೆಳೆಯಾಗಿದ್ದು ರೈತರಿಂದ 50 ರೂಪಾಯಿ ಕೆಜಿಯಂತೆ ತೆಗೆದುಕೊಳ್ಳುತ್ತಿದ್ದು ಕೆಲವೊಂದು ಸಲ ನೂರು ರೂಪಾಯಿಯಂತೆ ಮಾರಾಟವಾಗಬಹುದು.
ಕೆಲವೊಮ್ಮೆ ಇನ್ನೂರಕ್ಕೂ ಜಿಗಿಯುತ್ತದೆ. ಇದು ರೈತರಿಗೆ ಹೆಚ್ಚಿನ ಆದಾಯವನ್ನು ಕೂಡಾ ತಂದು ಕೊಡುತ್ತದೆ. ಇನ್ನೂ ನುಗ್ಗೆ ಬೆಳೆಗಾರರಿಗೆ ತೋಟಗಾರಿಕೆ ಇಲಾಖೆಯಿಂದ ಹನಿ ನೀರಾವರಿಗೆ ಶೇಕಡಾ 90 ರಷ್ಟು ರೀಯಾಯತಿಯನ್ನ ಕೂಡಾ ಕೊಡಲಾಗುತ್ತಿದೆ, ಹೀಗಾಗಿ ಬರಡು ಭೂಮಿಯಲ್ಲಿ ಈ ರೈತ ಬಂಗಾರದಂತಾ ಬೆಳೆಯನ್ನ ಬೆಳೆದಿದ್ದು ತೋಟಗಾರಿಕೆ ಇಲಾಕೆಯಿಂದ ಸಹಾಯವನ್ನ ಮಾಡುದ್ದೇವೆಂದು ತೋಟಗಾರಿಕೆ ಇಲಾಕೆಯ ಅಧಿಕಾರಿ ಚಿರಂಜೀವ ಹೇಳಿದ್ದಾರೆ.
ಒಟ್ಟಿನಲ್ಲಿ ರೈತ ಬಾಬ್ ಶೆಟ್ಟಿ ನುಗ್ಗೆ ಕಾಯಿ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಎಲ್ಲ ರೈತರು ಪ್ರಯೋಗಾತ್ಮಕ ಕೃಷಿ, ಬೆಳೆ ಬೆಳೆಯಲು ಅನುಕೂಲ ಮಾಡಿಕೊಳಬೇಕು. ತೋಟಗಾರಿಕೆ ಇಲಾಖೆಯ ಸಹಾಯ ಪಡೆದು ಉತ್ತಮ ಆದಾಯ ಗಳಿಸುವ ತೋಟಗಾರಿಕೆ ಬೆಳೆ ಬೆಳೆದು ಎಲ್ಲ ರೈತರು ಯಶಸ್ಸು ಕಾಣಲಿ ಎಂಬುದು ಆಶಯ. (ವರದಿ: ಸುರೇಶ್ ನಾಯಕ್ ಟಿವಿ9 ಬೀದರ್)
Published On - 4:29 pm, Thu, 23 March 23