Budget 2021 | ಕೃಷಿಯೊಂದೇ ಭರವಸೆ ಎನ್ನುತ್ತೆ Economic Survey
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021ನೇ ಸಾಲಿನ ಆರ್ಥಿಕ ಸಮೀಕ್ಷೆಯ ವರದಿಯನ್ನು ಸಂಸತ್ನ ಜಂಟಿ ಅಧಿವೇಶನದಲ್ಲಿ ಮಂಡಿಸಿದರು. ತ್ವರಿತ ಚೇತರಿಕೆ (V SHAPE) ಎಂಬ ಆರ್ಥಿಕ ಪರಿಭಾಷೆಯಲ್ಲಿ ಸಮೀಕ್ಷೆ ಉಲ್ಲೇಖಿಸಿದೆ. ಕೊರೊನಾ ಕಾರಣದಿಂದ ತೀವ್ರಗತಿಯಲ್ಲಿ ಕುಸಿದಿದ್ದ ದೇಶದ ಆರ್ಥಿಕ ಪರಿಸ್ಥಿತಿಯು, ಅತಿಶೀಘ್ರ ಚೇತರಿಸಿಕೊಳ್ಳಲಿದೆ ಎಂದು ಸಮೀಕ್ಷೆ ಆಶಾಭಾವನೆ ಬಿತ್ತಿದೆ. (ಚಿತ್ರ ಸೌಜನ್ಯ: ಪಿಟಿಐ)