AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ಪಂದ್ಯಗಳಲ್ಲಿ 99 ರನ್ ಕೊಟ್ಟ ಭುವನೇಶ್ವರ್; ಕಾರಣ ಬಿಚ್ಚಿಟ್ಟ ಮೋರ್ನೆ ಮಾರ್ಕೆಲ್

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭುವನೇಶ್ವರ್ ಕುಮಾರ್ ಕಳಪೆ ಪ್ರದರ್ಶನದಿಂದ ನಿರಾಸೆ ಮೂಡಿಸಿದ್ದಾರೆ. 4 ವರ್ಷಗಳ ಬಳಿಕ ಕಂಬ್ಯಾಕ್ ಮಾಡಿದ್ದರೂ ವಿಕೆಟ್ ಪಡೆಯಲು ಹೆಣಗಾಡುತ್ತಿದ್ದಾರೆ. ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್, ಸಿದ್ಧತೆಗೆ ಸಮಯ ಸಿಗದ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದು, ತಂಡ ಭುವಿಗೆ ಬೆಂಬಲ ನೀಡಿದೆ. ಮುಂಬರುವ 3ನೇ ಟಿ20 ಪಂದ್ಯ ಅವರ ಪಾಲಿಗೆ ಮಹತ್ವದ್ದಾಗಿದೆ.

ಎರಡು ಪಂದ್ಯಗಳಲ್ಲಿ 99 ರನ್ ಕೊಟ್ಟ ಭುವನೇಶ್ವರ್; ಕಾರಣ ಬಿಚ್ಚಿಟ್ಟ ಮೋರ್ನೆ ಮಾರ್ಕೆಲ್
ಭುವನೇಶ್ವರ್ ಕುಮಾರ್Image Credit source: BCCI X
ಪೃಥ್ವಿಶಂಕರ
|

Updated on: Oct 26, 2026 | 6:13 PM

Share

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯೊಂದಿಗೆ ಬರೋಬ್ಬರಿ 4 ವರ್ಷಗಳ ಬಳಿಕ ಟೀಂ ಇಂಡಿಯಾಕ್ಕೆ ಕಂಬ್ಯಾಕ್ ಮಾಡಿದ್ದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಆಡಿರುವ ಎರಡು ಪಂದ್ಯಗಳಲ್ಲಿ ಅವರು ಒಟ್ಟು 99 ರನ್‌ಗಳನ್ನು ಬಿಟ್ಟುಕೊಟ್ಟು ಕೇವಲ ಒಂದೇ ಒಂದು ವಿಕೆಟ್ ಮಾತ್ರ ಪಡೆದಿದ್ದಾರೆ. ಭುವನೇಶ್ವರ್ ಅವರ ಈ ಪ್ರದರ್ಶನದ ಬಗ್ಗೆ ಟೀಂ ಇಂಡಿಯಾದ ಬೌಲಿಂಗ್ ಕೋಚ್ ಮೋರ್ನೆ ಮಾರ್ಕೆಲ್ ಮಹತ್ವದ ಹೇಳಿಕೆ ನೀಡಿದ್ದಾರೆ. ನಾಲ್ಕು ವರ್ಷಗಳ ಬಳಿಕ ಭಾರತ ತಂಡಕ್ಕೆ ಮರಳಿರುವ ಭುವನೇಶ್ವರ್ ಬಗ್ಗೆ ತಮಗೆ ಸಹಾನುಭೂತಿ ಇದೆ. ಐಪಿಎಲ್‌ನಲ್ಲಿ ಭುವನೇಶ್ವರ್ ಉತ್ತಮ ಪ್ರದರ್ಶನ ನೀಡಿದ್ದರೂ, ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ಮೊದಲು ಸಿದ್ಧತೆ ಮಾಡಿಕೊಳ್ಳಲು ಅವರಿಗೆ ಸಾಕಷ್ಟು ಸಮಯ ಸಿಕ್ಕಿರಲಿಲ್ಲ ಎಂದು ಮಾರ್ಕೆಲ್ ಅಭಿಪ್ರಾಯಪಟ್ಟಿದ್ದಾರೆ.

ಮೋರ್ನೆ ಮಾರ್ಕೆಲ್ ಹೇಳಿದ್ದೇನು?

ಭುವನೇಶ್ವರ್ ಕುಮಾರ್ ಅವರ ಪುನರಾಗಮನದ ಬಗ್ಗೆ ಮಾತನಾಡಿದ ಮೋರ್ನೆ ಮಾರ್ಕೆಲ್, ನಾಲ್ಕು ವರ್ಷಗಳ ಬಳಿಕ ತಂಡಕ್ಕೆ ಮರಳುವಾಗ ಸಹಜವಾಗಿಯೇ ಸಾಕಷ್ಟು ನಿರೀಕ್ಷೆಗಳಿರುತ್ತವೆ. ಐಪಿಎಲ್‌ನಲ್ಲಿ ಭುವನೇಶ್ವರ್ ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಆದರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಣ್ಣ ತಪ್ಪುಗಳಿಗೂ ಎದುರಾಳಿ ತಂಡಗಳು ಬೆಲೆ ತೆರುವಂತೆ ಮಾಡುತ್ತವೆ. ಬಿಡುವಿಲ್ಲದ ವೇಳಾಪಟ್ಟಿಯ ಕಾರಣದಿಂದಾಗಿ ಅಂತರರಾಷ್ಟ್ರೀಯ ಪಂದ್ಯಗಳಿಗೆ ಸಿದ್ಧತೆ ಮಾಡಿಕೊಳ್ಳಲು ಅವರಿಗೆ ಸೀಮಿತ ಸಮಯ ಮಾತ್ರ ಸಿಕ್ಕಿತ್ತು ಎಂದು ಮಾರ್ಕೆಲ್ ವಿವರಿಸಿದ್ದಾರೆ.

ಭುವಿಗೆ ಮ್ಯಾನೇಜ್​ಮೆಂಟ್ ನೀಡಿದ ಸಂದೇಶವೇನು?

ತಂಡಕ್ಕೆ ಮರಳಿದಾಗ ಭುವನೇಶ್ವರ್‌ಗೆ ಯಾವುದೇ ಒತ್ತಡಕ್ಕೆ ಒಳಗಾಗದೆ, ತಮ್ಮ ಸಹಜ ಆಟವನ್ನು ಮುಂದುವರಿಸುವಂತೆ ಸೂಚಿಸಲಾಗಿತ್ತು. ನಿರೀಕ್ಷೆಗಳು ಇದ್ದೇ ಇರುತ್ತವೆ. ಆದರೆ ಪ್ರತಿ ಪಂದ್ಯದಲ್ಲೂ ಆಟಗಾರರು ತಮ್ಮ ಪ್ರದರ್ಶನವನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸಬೇಕು ಎಂಬುದು ತಂಡದ ನಿಲುವಾಗಿದೆ. ಸದ್ಯದ ಕಳಪೆ ಪ್ರದರ್ಶನದ ಹೊರತಾಗಿಯೂ ಟೀಂ ಇಂಡಿಯಾ ಭುವನೇಶ್ವರ್‌ಗೆ ಬೆಂಬಲ ನೀಡುತ್ತಿದೆ. ಮುಂಬರುವ ಪಂದ್ಯದಲ್ಲಿ ಭುವನೇಶ್ವರ್ ಉತ್ತಮ ಪ್ರದರ್ಶನದ ಮೂಲಕ ಮತ್ತೆ ಲಯ ಕಂಡುಕೊಳ್ಳಲಿದ್ದಾರೆ ಎಂಬ ವಿಶ್ವಾಸವನ್ನು ಕೋಚ್ ವ್ಯಕ್ತಪಡಿಸಿದ್ದಾರೆ.

ಟಿ20 ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಗೆರೆ ದಾಟಿದ ಭುವನೇಶ್ವರ್ ಕುಮಾರ್..!

3ನೇ ಟಿ20 ಭುವನೇಶ್ವರ್‌ಗೆ ಅಗ್ನಿಪರೀಕ್ಷೆ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯ ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭುವನೇಶ್ವರ್ ತಮ್ಮ ಬೌಲಿಂಗ್‌ನಲ್ಲಿ ಸುಧಾರಣೆ ತಂದುಕೊಳ್ಳುತ್ತಾರೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ವೆಲ್ಲಿಂಗ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟಿ20 ಪಂದ್ಯ ಗೆಲ್ಲಲು ಭಾರತ ಈ ಹಿಂದೆ ಯಶಸ್ವಿಯಾಗಿಲ್ಲ ಎಂಬ ಅಂಶವೂ ಗಮನ ಸೆಳೆಯುತ್ತಿದೆ. ಹೀಗಾಗಿ ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಆ ದಾಖಲೆಯನ್ನು ಬದಲಿಸುವ ಗುರಿಯನ್ನು ಭಾರತ ಹೊಂದಿದೆ.

ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಈಗಾಗಲೇ 2-0 ಮುನ್ನಡೆ ಸಾಧಿಸಿದೆ. ಮೊದಲ ಎರಡು ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ, ಮೂರನೇ ಪಂದ್ಯವನ್ನೂ ಗೆದ್ದು ಸರಣಿಯಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಹಾಸನಾಂಬೆ ಸನ್ನಿಧಿಯಲ್ಲಿ ಧರ್ಮದರ್ಶನ ಸಾಲು ಖಾಲಿ ಖಾಲಿ! ಯಾಕೆ ಗೊತ್ತಾ?
ಹಾಸನಾಂಬೆ ಸನ್ನಿಧಿಯಲ್ಲಿ ಧರ್ಮದರ್ಶನ ಸಾಲು ಖಾಲಿ ಖಾಲಿ! ಯಾಕೆ ಗೊತ್ತಾ?
ಅಕ್ಕಿ ಬೆಲೆ ಮತ್ತೆ ದಿಢೀರ್ ಏರಿಕೆ: 2-3 ತಿಂಗಳಲ್ಲಿ ಶೇ 25-30ರಷ್ಟು ಹೆಚ್ಚಳ
ಅಕ್ಕಿ ಬೆಲೆ ಮತ್ತೆ ದಿಢೀರ್ ಏರಿಕೆ: 2-3 ತಿಂಗಳಲ್ಲಿ ಶೇ 25-30ರಷ್ಟು ಹೆಚ್ಚಳ
ಸೌಜನ್ಯ ಪ್ರಕರಣ: ಅದೊಂದು ರಿಪೋರ್ಟ್ ನಲ್ಲಿದೆ ಸೌಜನ್ಯ ಸಾವಿನ ರಹಸ್ಯ!
ಸೌಜನ್ಯ ಪ್ರಕರಣ: ಅದೊಂದು ರಿಪೋರ್ಟ್ ನಲ್ಲಿದೆ ಸೌಜನ್ಯ ಸಾವಿನ ರಹಸ್ಯ!
ರಾಮನಗರ ವಿವಿಧೆಡೆ ಸುರಿದ ಧಾರಾಕಾರ ಮಳೆ; ರಾಗಿ ಬೆಳೆಗಾರರ ಮುಖದಲ್ಲಿ ಮಂದಹಾಸ!
ರಾಮನಗರ ವಿವಿಧೆಡೆ ಸುರಿದ ಧಾರಾಕಾರ ಮಳೆ; ರಾಗಿ ಬೆಳೆಗಾರರ ಮುಖದಲ್ಲಿ ಮಂದಹಾಸ!
ಗಗನ್ vs ಯಶಸ್: ಪತ್ರ ಪಡೆಯಲು ಟಫ್ ಟಾಸ್ಕ್ ಕೊಟ್ಟ ಬಿಗ್ ಬಾಸ್
ಗಗನ್ vs ಯಶಸ್: ಪತ್ರ ಪಡೆಯಲು ಟಫ್ ಟಾಸ್ಕ್ ಕೊಟ್ಟ ಬಿಗ್ ಬಾಸ್
ಇಂದು ಈ ರಾಶಿಯವರು ನಿರ್ಲಕ್ಷ್ಯತನವನ್ನು ತ್ಯಜಿಸಿದರೆ ಉತ್ತಮ
ಇಂದು ಈ ರಾಶಿಯವರು ನಿರ್ಲಕ್ಷ್ಯತನವನ್ನು ತ್ಯಜಿಸಿದರೆ ಉತ್ತಮ
ಬೆಂಗಳೂರು: ಹೊಯ್ಸಳ ನಗರ ಪಬ್​ನಲ್ಲಿ ಅಗ್ನಿ ಅವಘಡ, ತಪ್ಪಿದ ಭಾರಿ ದುರಂತ
ಬೆಂಗಳೂರು: ಹೊಯ್ಸಳ ನಗರ ಪಬ್​ನಲ್ಲಿ ಅಗ್ನಿ ಅವಘಡ, ತಪ್ಪಿದ ಭಾರಿ ದುರಂತ
ನನ್ನ ಹೇಳಿಕೆ ತಿರುಚಲಾಗಿದೆ: ವಿವಾದಾತ್ಮಕ ಹೇಳಿಕೆ ಬಗ್ಗೆ ಛಲವಾದಿ ಸ್ಪಷ್ಟನೆ
ನನ್ನ ಹೇಳಿಕೆ ತಿರುಚಲಾಗಿದೆ: ವಿವಾದಾತ್ಮಕ ಹೇಳಿಕೆ ಬಗ್ಗೆ ಛಲವಾದಿ ಸ್ಪಷ್ಟನೆ
ಹಿರಿಯೂರು ಉಪಚುನಾವಣೆ: ಕಾಂಗ್ರೆಸ್​​ ಅಭ್ಯರ್ಥಿಯ ಸುಳಿವು ನೀಡಿದ ಡಿಕೆಶಿ
ಹಿರಿಯೂರು ಉಪಚುನಾವಣೆ: ಕಾಂಗ್ರೆಸ್​​ ಅಭ್ಯರ್ಥಿಯ ಸುಳಿವು ನೀಡಿದ ಡಿಕೆಶಿ
ಉಕ್ರೇನ್ ಮೇಲೆ ರಷ್ಯಾದಿಂದ ಭೀಕರ ದಾಳಿ; ಶಾಲಾ ಕಟ್ಟಡ ಧ್ವಂಸವಾಗಿ 29 ಜನ ಸಾವು
ಉಕ್ರೇನ್ ಮೇಲೆ ರಷ್ಯಾದಿಂದ ಭೀಕರ ದಾಳಿ; ಶಾಲಾ ಕಟ್ಟಡ ಧ್ವಂಸವಾಗಿ 29 ಜನ ಸಾವು