ಮಾಸಿಕ ಮೊತ್ತ… ವಿನೋದ್ ಕಾಂಬ್ಳಿ ನೆರವಿಗೆ ನಿಂತ ಸುನಿಲ್ ಗವಾಸ್ಕರ್
Vinod Kambli: ಟೀಮ್ ಇಂಡಿಯಾ ಪರ 17 ಟೆಸ್ಟ್ ಪಂದ್ಯಗಳನ್ನಾಡಿರುವ ವಿನೋದ್ ಕಾಂಬ್ಳಿ 2 ದ್ವಿಶತಕ, 4 ಶತಕ ಹಾಗೂ 3 ಅರ್ಧಶತಕಗಳೊಂದಿಗೆ ಒಟ್ಟು 1084 ರನ್ ಕಲೆಹಾಕಿದ್ದಾರೆ. ಹಾಗೆಯೇ 104 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅವರು 2 ಭರ್ಜರಿ ಶತಕ ಹಾಗೂ 14 ಅರ್ಧಶತಕಗಳೊಂದಿಗೆ ಒಟ್ಟು 2477 ರನ್ಗಳಿಸಿ ಮಿಂಚಿದ್ದರು.

ಟೀಮ್ ಇಂಡಿಯಾದ ಮಾಜಿ ಆಟಗಾರ ವಿನೋದ್ ಕಾಂಬ್ಳಿಗೆ (Vinod Kambli) ಭಾರತದ ತಂಡ ಲೆಜೆಂಡ್ ಸುನಿಲ್ ಗವಾಸ್ಕರ್ ನೆರವಿನ ಹಸ್ತ ಚಾಚಿದ್ದಾರೆ. ಅದು ಸಹ ತಿಂಗಳಿಗೆ ಪಿಂಚಣಿ ಪಾವತಿಸುವ ಮೂಲಕ ಎಂಬುದು ವಿಶೇಷ. ಸುನಿಲ್ ಗವಾಸ್ಕರ್ ತಮ್ಮ CHAMPS ಫೌಂಡೇಶನ್ ಮೂಲಕ ಕಾಂಬ್ಳಿ ಅವರಿಗೆ ಇಡೀ ಜೀವನಪರ್ಯಂತ ಪ್ರತಿ ತಿಂಗಳು 30,000 ರೂ.ಗಳನ್ನು ಪಾವತಿಸಲಿದ್ದಾರೆ. ಇದಲ್ಲದೆ, ವೈದ್ಯಕೀಯ ವೆಚ್ಚವಾಗಿ ಪ್ರತ್ಯೇಕವಾಗಿ ವಾರ್ಷಿಕ 30,000 ರೂ.ಗಳನ್ನು ಸಹ ಪಡೆಯಲಿದ್ದಾರೆ.
TOI ವರದಿಯ ಪ್ರಕಾರ, 1999 ರಲ್ಲಿ ಶುರುವಾದ ಚಾಂಪ್ಸ್ (CHAMPS) ಫೌಂಡೇಶನ್ ಆರ್ಥಿಕ ಸಂಕಷ್ಟದಲ್ಲಿರುವ ಅಂತರರಾಷ್ಟ್ರೀಯ ಕ್ರಿಕೆಟಿಗರಿಗೆ ಸಹಾಯ ಮಾಡುತ್ತಾ ಬರುತ್ತಿದೆ. ಇದೀಗ ಇದೇ ಫೌಂಡೇಷನ್ ಮೂಲಕ ವಿನೋದ್ ಕಾಂಬ್ಳಿಗೆ ತಿಂಗಳಿಗೆ 30000 ರೂಪಾಯಿಗಳನ್ನು ನೀಡುವ ಪ್ರಕ್ರಿಯೆಯನ್ನು ಏಪ್ರಿಲ್ 1 ರಿಂದ ಜಾರಿಗೆ ತರಲಾಗಿದೆ. 53 ವರ್ಷದ ಕಾಂಬ್ಳಿ ಅವರಿಗೆ ಜೀವನಪರ್ಯಂತ ಈ ಮೊತ್ತವನ್ನು ಪಾವತಿಸುವುದಾಗಿ ಚಾಂಪ್ಸ್ ಫೌಂಡೇಶನ್ ತಿಳಿಸಿದೆ.
ಜನವರಿ 11 ರಂದು ವಾಂಖೆಡೆ ಕ್ರೀಡಾಂಗಣದ 50ನೇ ವಾರ್ಷಿಕೋತ್ಸವದಂದು ಸುನಿಲ್ ಗವಾಸ್ಕರ್ ವಿನೋದ್ ಕಾಂಬ್ಳಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಘೋಷಿಸಿದ್ದರು. ತನ್ನ ಮಾತಿನಂತೆ ಇದೀಗ ಸುನಿಲ್ ಗವಾಸ್ಕರ್ ತಮ್ಮ ಚಾಂಪ್ಸ್ ಫೌಂಡೇಶನ್ ಮೂಲಕ ವಾರ್ಷಿಕ ವೈದ್ಯಕೀಯ ಮೊತ್ತ ಹಾಗೂ ತಿಂಗಳ ಪಿಂಚಣಿಯಾಗಿ 30 ಸಾವಿರ ರೂ. ಪಾವತಿಸಲು ಮುಂದಾಗಿದೆ.
ಅನಾರೋಗ್ಯಕ್ಕೀಡಾಗಿದ್ದ ಬಳಲಿದ್ದ ವಿನೋದ್ ಕಾಂಬ್ಳಿ:
ಕಳೆದ ವರ್ಷ ಡಿಸೆಂಬರ್‌ನಲ್ಲಿ ವಿನೋದ್ ಕಾಂಬ್ಳಿ ಅವರ ಆರೋಗ್ಯ ಗಮನಾರ್ಹವಾಗಿ ಹದಗೆಟ್ಟಿತ್ತು. ಮೂತ್ರದ ಸೋಂಕಿಗೆ ತುತ್ತಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸುದ್ದಿ ತಿಳಿಯುತ್ತಿದಂತೆ ನೆರವಿನ ಹಸ್ತ ಚಾಚುವುದಾಗಿ ಗವಾಸ್ಕರ್ ತಿಳಿಸಿದ್ದರು.
ಅಲ್ಲದೆ ವಾಂಖೆಡೆ ಕ್ರೀಡಾಂಗಣದ ನಡೆದ 50ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿನೋದ್ ಕಾಂಬ್ಳಿಯನ್ನು ಭೇಟಿಯಾದ ಬಳಿಕ ಸುನಿಲ್ ಗವಾಸ್ಕರ್, ಕಾಂಬ್ಳಿ ಅವರ ಇಬ್ಬರು ವೈದ್ಯರೊಂದಿಗೆ ಸಹ ಚರ್ಚಿಸಿದ್ದರು. ಅಲ್ಲದೆ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಇದೀಗ ಸುನಿಲ್ ಗವಾಸ್ಕರ್ ವಿನೋದ್ ಕಾಂಬ್ಳಿಗೆ ಸಹಾಯಹಸ್ತ ಚಾಚಿದ್ದಾರೆ.
ಇದನ್ನೂ ಓದಿ: ಮೋಸದಾಟದ ಡೌಟ್… ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
ಚಾಂಪ್ಸ್ ನೆರವು ಪಡೆದ 2ನೇ ಕ್ರಿಕೆಟಿಗ:
ಭಾರತ ಪರ 17 ಟೆಸ್ಟ್ ಮತ್ತು 104 ಏಕದಿನ ಪಂದ್ಯಗಳನ್ನು ಆಡಿರುವ ವಿನೋದ್ ಕಾಂಬ್ಳಿ, ಸುನಿಲ್ ಗವಾಸ್ಕರ್ ಅವರ CHAMPS ಫೌಂಡೇಶನ್‌ನಿಂದ ಸಹಾಯ ಪಡೆದ ಎರಡನೇ ಕ್ರಿಕೆಟಿಗರಾಗಲಿದ್ದಾರೆ. ಇದಕ್ಕೂ ಮುನ್ನ ಈ ಪ್ರತಿಷ್ಠಾನವು ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಅವರಿಗೂ ಸಹಾಯ ಮಾಡಿದೆ.
Published On - 1:59 pm, Tue, 15 April 25