ಹ್ಯಾಪಿ ಕಟುಂಬದ ಫೋಟೋ ಹಂಚಿಕೊಂಡ ಸೋನು ಗೌಡ
ನವದೆಹಲಿ, ಆಗಸ್ಟ್ 20: ದೇಶದ ಅತ್ಯಂತ ಹಳೆಯ ಬೀಗದ ಕಂಪನಿ ಎನಿಸಿರುವ ಮತ್ತು ಅತ್ಯಾಧುನಿಕ ಕಟ್ಟಡ ಭದ್ರತಾ ವ್ಯವಸ್ಥೆ ಹೊಂದಿರುವ ಗೋದ್ರೇಜ್ ಸೆಕ್ಯೂರಿಟಿ ಸಿಸ್ಟಮ್ಸ್ ಸಂಸ್ಥೆಗೆ (Godrej Security Solutions) ಬಹಳ ಮಹತ್ವವಾದ ಸೆಂಟ್ರಲ್ ವಿಸ್ಟಾ ಯೋಜನೆ ಸಿಕ್ಕಿದೆ. ಹೊಸ ಸಂಸತ್ ಸೇರಿದಂತೆ ಕೇಂದ್ರ ಸರ್ಕಾರಿ ಯಂತ್ರಗಳ ಕಚೇರಿ ಸಮೂಹ ಇರುವ ಸೆಂಟ್ರಲ್ ವಿಸ್ಟಾಗೆ ಭದ್ರತಾ ವ್ಯವಸ್ಥೆ ಒದಗಿಸುವ ಯೋಜನೆ ಇದಾಗಿದೆ. 100 ಕೋಟಿ ರೂನ ಪ್ರಾಜೆಕ್ಟ್ ಇದಾದರೂ ಗೋದ್ರೇಜ್ ಸೆಕ್ಯೂರಿಟಿ ಸಲ್ಯೂಷನ್ಸ್ ಸಂಸ್ಥೆಗೆ ಈ ಡೀಲ್ ಬಹಳ ಮಹತ್ವದ್ದು. ಅದರ ಆದಾಯ ಗಣನೀಯವಾಗಿ ಹೆಚ್ಚಲು ಸೆಂಟ್ರಲ್ ವಿಸ್ತಾ ಪುಷ್ಟಿ ಕೊಡುವ ನಿರೀಕ್ಷೆಯಲ್ಲಿ ಗೋದ್ರೇಜ್ ಇದೆ. ಹಿಂದಿನ ಹಣಕಾಸು ವರ್ಷದಲ್ಲಿ 850 ಕೋಟಿ ರೂ ಆದಾಯ ಹೊಂದಿದ್ದ ಗೋದ್ರೇಜ್ ಸೆಕ್ಯೂರಿಟಿ ಸಲ್ಯೂಷನ್ಸ್ಗೆ ಈ ವರ್ಷದಲ್ಲಿ ಆದಾಯ 1,000 ಕೋಟಿ ರೂ ಮುಟ್ಟಬಹುದು ಎಂದು ಎಣಿಸಿದೆ.
ನೂರಕ್ಕೂ ಹೆಚ್ಚು ವರ್ಷಗಳಿಂದ ಲಾಕರ್ಸ್, ಡೋರ್ ಲಾಕ್ ಇತ್ಯಾದಿ ಸಾಂಪ್ರದಾಯಿಕ ಬೀಗ ಮತ್ತು ಕೀಲಿಗಳನ್ನು ತಯಾರಿಸುತ್ತಿದ್ದ ಗೋದ್ರೇಜ್ ಸೆಕ್ಯೂರಿಟಿ ಸಂಸ್ಥೆ ಇದೀಗ ಅತ್ಯಾಧುನಿಕ ತಂತ್ರಜ್ಞಾನದ ಸಮಗ್ರ ಡಿಜಿಟಲ್ ಸೆಕ್ಯೂರಿಟಿ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದ್ದು 12,000 ಕೋಟಿ ರೂ ದೈತ್ಯ ಸಂಸ್ಥೆಯಾಗಿ ಬೆಳೆದಿದೆ.
ತಾಜ್ ಮಹಲ್, ಕುತುಬ್ ಮಿನಾರ್, ಅಜಂತಾ ಎಲ್ಲೋರಾ ಗುಹೆ ಇತ್ಯಾದಿ ಐತಿಹಾಸಿಕ ಸ್ಥಳಗಳ ಭದ್ರತಾ ವ್ಯವಸ್ಥೆಯ ಪ್ರಾಜೆಕ್ಟ್ ಸಿಕ್ಕಿದೆ. ಸ್ಟೇಟ್ ಬ್ಯಾಂಕ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಮುತ್ತೂಟ್ ಫೈನಾನ್ಸ್ ಇತ್ಯಾದಿ ಹಣಕಾಸು ಸಂಸ್ಥೆಗಳೂ ಕೂಡ ಗೋದ್ರೇಜ್ ಸಿಸ್ಟಮ್ಸ್ ಅನ್ನು ಅಳವಡಿಸಿಕೊಂಡಿವೆ. ಇಸ್ರೋದ ಪ್ರಯೋಗ ಅಂಗಳವಾದ ಸತೀಶ್ ಧವನ್ ಸ್ಪೇಸ್ ಸೆಂಟರ್ನಲ್ಲಿ ಸುಧಾರಿತ ಕೀ ಮ್ಯಾನೇಜ್ಮೆಂಟ್ ಸಿಸ್ಟಂ ಅನ್ನು ಒದಗಿಸುವ ಒಪ್ಪಂದ ಗೋದ್ರೇಜ್ಗೆ ಸಿಕ್ಕಿದೆ.
ಇದನ್ನೂ ಓದಿ: ಜಿ20 ಡಿಜಿಟಲ್ ಎಕಾನಮಿ ಸಚಿವರ ಸಭೆ; ಭಾರತದ ಪ್ರಮುಖ ಆದ್ಯತೆಗಳ ಬಗ್ಗೆ ಬೆಳಕುಚೆಲ್ಲಿದ ಅಶ್ವಿನಿ ವೈಷ್ಣವ್
ಗೋದ್ರೇಜ್ ಸೆಕ್ಯೂರಿಟಿ ಸಲ್ಯೂಷನ್ಸ್ ಸಂಶೋಧನೆಗೆ ಸಾಕಷ್ಟು ಒತ್ತುಕೊಟ್ಟ ಪರಿಣಾಮ ಅತ್ಯಾಧುನಿಕ ಸೆಕ್ಯೂರಿಟಿ ಸಿಸ್ಟಮ್ಸ್ ರೂಪಿಸಲು ಸಾಧ್ಯವಾಗಿದೆ. ಫೇಸ್ ರೆಕಗ್ನಿಶನ್ ಡಿವೈಸ್, ಸ್ಮಾರ್ಟ್ಫಾಗ್, ಐ ವಾರ್ನ್ ಸೆನ್ಸರ್ ಇರುವ ಮ್ಯಾಟ್ರಿಕ್ಸ್ ಲಾಕರ್, ಆ್ಯಕುಗೋಲ್ಡ್ ಇತ್ಯಾದಿ ಬಹಳಷ್ಟು ಸೆಕ್ಯೂರಿಟಿ ಉತ್ಪನ್ನಗಳನ್ನು ಗೋದ್ರೇಜ್ ಹೊಂದಿದೆ. ಸೆಂಟ್ರಲ್ ವಿಸ್ಟಾದಲ್ಲಿ ಅತ್ಯುಚ್ಚ ಭದ್ರತಾ ವ್ಯವಸ್ಥೆ ರೂಪಿಸಲು ಗೋದ್ರೇಜ್ ಕಟಿಬದ್ಧವಾಗಿದೆ. ಈ ಯೋಜನೆಯ ಬಳಿಕ ಕಂಪನಿಯ ವ್ಯವಹಾರ ಇನ್ನಷ್ಟು ಏರುವ ನಿರೀಕ್ಷೆಯಲ್ಲಿ ಅದು ಇದೆ.
ಗೋದ್ರೇಜ್ ಸೆಕ್ಯೂರಿಟಿ ಸಲ್ಯೂಷನ್ಸ್ ಸಂಸ್ಥೆಯ ಪ್ರಮುಖ ಉತ್ಪನ್ನಗಳಲ್ಲಿ ಸ್ಮಾರ್ಟ್ಫಾಗ್ ಒಂದು. ಇದು ಯಾರಾದರೂ ಕಳ್ಳತನ ಮಾಡಲು ಬಂದಾಗ ನಿಖರವಾಗಿ ಗುರುತಿಸುತ್ತದೆ. ಕೇವಲ ಅಲಾರ್ಮ್ ಕೊಡುವುದಕ್ಕೆ ಮಾತ್ರ ಇದು ಸೀಮಿತವಾಗುವುದಿಲ್ಲ. ಕಳ್ಳತನ ಮಾಡಲು ಯಾರಾದರೂ ಯತ್ನಿಸುತ್ತಿರುವುದು ಗೊತ್ತಾಗುತ್ತಲೇ ಸ್ಮಾರ್ಟ್ಫಾಗ್ ವ್ಯವಸ್ಥೆ ಸಕ್ರಿಯಗೊಂಡು, ಆ ಸ್ಥಳದಲ್ಲಿ ದಟ್ಟಹೊಗೆ ಕಾರುತ್ತದೆ. ಇದರಿಂದ ಕಳ್ಳ ಅಥವಾ ಕಳ್ಳರಿಗೆ ಯಾವುದೂ ಗೋಚರಿಸುವುದಿಲ್ಲ. ಅಲ್ಲಿಂದ ಮುಂದೆ ಅವರು ಕಳ್ಳತನ ಮಾಡುವುದು ಇರಲಿ, ಪಲಾಯನ ಮಾಡಲೂ ಕಷ್ಟವಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:08 am, Sun, 20 August 23