ಹಿಮದಲ್ಲಿ ನಡೆಯಿತು ಅಪಘಾತ; ಮಾರ್ವೆಲ್​ ಹೀರೋ ಸಾವು

ಮಂಗಳವಾರ ಫ್ರಾನ್ಸ್​ನ ಸವೊಯಿ ಭಾಗದಲ್ಲಿ ಗ್ಯಾಸ್ಪಾರ್ಡ್ ಹಿಮದ ಮೇಲೆ ಸ್ಕೀಯಿಂಗ್ ಮಾಡುತ್ತಿದ್ದರು. ಈ ವೇಳೆ ಅವರಿಗೆ ಅಪಘಾತ ಸಂಭವಿಸಿದೆ. ಸೋಶಿಯಲ್​ ಮೀಡಿಯಾದಲ್ಲಿ ಗ್ಯಾಸ್ಪಾರ್ಡ್ ಸಾವಿಗೆ ಸಂತಾಪ ಸೂಚಿಸಲಾಗುತ್ತಿದೆ.

ಹಿಮದಲ್ಲಿ ನಡೆಯಿತು ಅಪಘಾತ; ಮಾರ್ವೆಲ್​ ಹೀರೋ ಸಾವು
ಸಾಂದರ್ಭಿಕ ಚಿತ್ರ
TV9kannada Web Team

| Edited By: Rajesh Duggumane

Jan 20, 2022 | 6:27 PM

ಫ್ರೆಂಚ್​ ನಟ ಗ್ಯಾಸ್ಪಾರ್ಡ್ ಯುಲಿಯೋಲ್ (Gaspard Ulliel) ಅವರು ಮಂಗಳವಾರ (ಜನವರಿ 18)​ ನಡೆದ ಸ್ಕೀ ಅಪಘಾತದಲ್ಲಿ (Ski Accident) ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಾರ್ವೆಲ್​​ ಸರಣಿಯ ‘ಮೂನ್​ ನೈಟ್​’ ಸೀರಿಸ್​​ನಲ್ಲಿ (Moon Knight) ಗ್ಯಾಸ್ಪಾರ್ಡ್ ಯುಲಿಯೋಲ್ ಅಭಿನಯಿಸಿದ್ದರು. ಈ ಚಿತ್ರ ಈ ವರ್ಷ ತೆರೆಗೆ ಬರುತ್ತಿದೆ. ಅದಕ್ಕೂ ಮೊದಲೇ ಅವರು ಕೊನೆಯುಸಿರು ಎಳೆದಿರುವುದು ತೀವ್ರ ನೋವಿನ ಸಂಗತಿ. ಅವರಿಗೆ ಕೇವಲ 37 ವರ್ಷ ವಯಸ್ಸಾಗಿತ್ತು. ಗ್ಯಾಸ್ಪಾರ್ಡ್ ಯುಲಿಯೋಲ್ ನಿಧನಕ್ಕೆ ಫ್ರಾನ್ಸ್​ ದೇಶದವರು ಸಂತಾಪ ಸೂಚಿಸಿದ್ದಾರೆ.

ಮಂಗಳವಾರ ಫ್ರಾನ್ಸ್​ನ ಸವೊಯಿ ಭಾಗದಲ್ಲಿ ಗ್ಯಾಸ್ಪಾರ್ಡ್ ಹಿಮದ ಮೇಲೆ ಸ್ಕೀಯಿಂಗ್ ಮಾಡುತ್ತಿದ್ದರು. ಈ ವೇಳೆ ಅವರಿಗೆ ಅಪಘಾತ ಸಂಭವಿಸಿದೆ. ಇಳಿಜಾರು ಪ್ರದೇಶದಲ್ಲಿ ಬಿದ್ದಿದ್ದರಿಂದ ಗ್ಯಾಸ್ಪಾರ್ಡ್ ಯುಲಿಯೋಲ್ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿತ್ತು. ತಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಅವರು ಚೇತರಿಸಿಕೊಳ್ಳಲೇ ಇಲ್ಲ. ಬುಧವಾರ (ಜನವರಿ 19) ಗ್ಯಾಸ್ಪಾರ್ಡ್ ಮೃತಪಟ್ಟಿದ್ದಾರೆ. ಈ ಬಗ್ಗೆ ಅವರ ಕುಟುಂಬದವರು ಖಚಿತಪಡಿಸಿದ್ದಾರೆ.

ಫ್ರೆಂಚ್​ ಪ್ರಧಾನಿ ಜೀನ್ ಕ್ಯಾಸ್ಟೆಕ್ಸ್ ಅವರು ಗ್ಯಾಸ್ಪಾರ್ಡ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ‘ಗ್ಯಾಸ್ಪಾರ್ಡ್ ನೀವು ಸಿನಿಮಾ ಜತೆ ಬೆಳೆದಿರಿ. ಸಿನಿಮಾ ಕೂಡ ಗ್ಯಾಸ್ಪಾರ್ಡ್ ಜತೆ ಬೆಳೆಯಿತು. ಇಬ್ಬರೂ ಗಾಢವಾಗಿ ಪ್ರೀತಿಸುತ್ತಿದ್ದರು. ನಾವು ಇನ್ನುಮುಂದೆ ಅವರನ್ನು ನೋಡುವುದಿಲ್ಲ. ನಾವು ಓರ್ವ ಫ್ರೆಂಚ್​ ನಟನನ್ನು ಕಳೆದುಕೊಂಡಿದ್ದೇವೆ’ ಎಂದು ಬರೆದುಕೊಂಡಿದ್ದಾರೆ. ​

ಸೋಶಿಯಲ್​ ಮೀಡಿಯಾದಲ್ಲಿ ಗ್ಯಾಸ್ಪಾರ್ಡ್ ಸಾವಿಗೆ ಸಂತಾಪ ಸೂಚಿಸಲಾಗುತ್ತಿದೆ. ಫಿಲ್ಮ್​ ಮೇಕರ್​ ಪೀಟರ್​ ವೆಬ್ಬರ್​, ಫ್ರೆಂಚ್​ ಡೈರೆಕ್ಟರ್​ ಕ್ಸೇವಿಯರ್ ಡೋಲನ್ ಸೇರಿ ಅನೇಕರು ಗ್ಯಾಸ್ಪಾರ್ಡ್ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ.

French Actor Gaspard Ulliel

‘ಮೂನ್​ ನೈಟ್’​ನಲ್ಲಿ ಗ್ಯಾಸ್ಪಾರ್ಡ್ ಅವರು ಮಿಡ್​ನೈಟ್​ ಮ್ಯಾನ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 2016ರ ಕೆನಡಾ-ಫ್ರೆಂಚ್​ ಸಿನಿಮಾ ‘ಇಟ್​ ಈಸ್​ ಓನ್ಲಿ ದಿ ಎಂಡ್​ ಆಫ್​ ದಿ ವರ್ಲ್ಡ್​’ ಸಿನಿಮಾದಲ್ಲಿ ನಟಿಸಿದ್ದರು. ಅವರ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.

ಇದನ್ನೂ ಓದಿ: ನಾಗ ಚೈತನ್ಯ ತುಂಬಾನೇ ಮುಗ್ಧ ಎಂದು ಹೊಗಳಿದ್ದ ಸಮಂತಾ; ವೈರಲ್​ ಆಗುತ್ತಿದೆ ಹಳೆಯ ವಿಡಿಯೋ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada