AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರಿಗೂ ತಂದೆಯಿಂದ ಈ ರೀತಿ ಆಗಬಾರದು; ಖುಷ್ಬೂಗೆ ಆಗಿತ್ತು ಲೈಂಗಿಕ ದೌರ್ಜನ್ಯ

ಯಾವುದೇ ಹುಡುಗಿಗಾದರೂ ತಂದೆ ಹೀರೋ ಆಗಬೇಕು. ತಂದೆ ತೋರುವ ಆದರ್ಶಗಳಿಂದ ಅವಳು ಬೆಳೆಯ ಬೇಕು. ಪ್ರತಿ ಹೆಜ್ಜೆಯಲ್ಲೂ ತಂದೆಯ ಮಾರ್ಗದರ್ಶನ ಬೇಕು. ಎಲ್ಲೇ ಹೋದರೂ ತಂದೆ ಇದ್ದಾರೆ ಎನ್ನುವ ಧೈರ್ಯ ಬೇಕು. ಆದರೆ, ಖುಷ್ಬೂ ಸುಂದರ್​ಗೆ ಆ ರೀತಿ ಆಗಲೇ ಇಲ್ಲ ಅನ್ನೋದು ಬೇಸರದ ವಿಚಾರವೇ ಸರಿ.

ಯಾರಿಗೂ ತಂದೆಯಿಂದ ಈ ರೀತಿ ಆಗಬಾರದು; ಖುಷ್ಬೂಗೆ ಆಗಿತ್ತು ಲೈಂಗಿಕ ದೌರ್ಜನ್ಯ
ಖುಷ್ಬೂ
 ಶ್ರೀಲಕ್ಷ್ಮೀ ಎಚ್
| Edited By: |

Updated on:Sep 29, 2024 | 8:19 AM

Share

ನಟಿ ಖಷ್ಬೂ ಸುಂದರ್ ಅವರಿಗೆ ಇಂದು (ಸೆಪ್ಟೆಂಬರ್ 29) ಜನ್ಮದಿನ. ಅವರು ನಟನೆ ಹಾಗೂ ರಾಜಕೀಯ ಎರಡರಲ್ಲೂ ತೊಡಗಿಕೊಂಡಿರುವುದು ಗೊತ್ತೇ ಇದೆ. ಅವರಿಗೆ ಈ ಮೊದಲು ಆದ ಒಂದು ಕಹಿ ಘಟನೆಯನ್ನು ಅವರು ಮರೆಯುತ್ತಿಲ್ಲ. ಅವರ ತಂದೆಯಿಂದಲೇ ಲೈಂಗಿಕ ದೌರ್ಜನ್ಯ ಆಗಿತ್ತು. ತಂದೆಯ ಕಾಮಕ್ಕೆ ಇವರು ಕಷ್ಟಪಡಬೇಕಾಯಿತು. ಈ ಘಟನೆಯನ್ನು ಅವರು ಅನೇಕ ಬಾರಿ ನೆನಪಿಸಿಕೊಂಡು ಕಣ್ಣೀರು ಹಾಕಿದ್ದರು. ಅವರ ಜನ್ಮದಿನದ ಪ್ರಯುಕ್ತ ಆ ಘಟನೆಯ ಬಗ್ಗೆ ನಿಮಗೆ ನಾವು ಹೇಳುತ್ತಿದ್ದೇವೆ.

ಯಾವುದೇ ಹುಡುಗಿಗಾದರೂ ತಂದೆ ಹೀರೋ ಆಗಬೇಕು. ತಂದೆ ತೋರುವ ಆದರ್ಶಗಳಿಂದ ಅವಳು ಬೆಳೆಯ ಬೇಕು. ಪ್ರತಿ ಹೆಜ್ಜೆಯಲ್ಲೂ ತಂದೆಯ ಮಾರ್ಗದರ್ಶನ ಬೇಕು. ಎಲ್ಲೇ ಹೋದರೂ ತಂದೆ ಇದ್ದಾರೆ ಎನ್ನುವ ಧೈರ್ಯ ಬೇಕು. ಆದರೆ, ಖುಷ್ಬೂ ಸುಂದರ್​ಗೆ ಆ ರೀತಿ ಆಗಲೇ ಇಲ್ಲ ಅನ್ನೋದು ಬೇಸರದ ವಿಚಾರವೇ ಸರಿ. ಅವರು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ‘ಒಂದು ವಿಚಾರವನ್ನು ಮರೆಯಲು ಸಾಕಷ್ಟು ಸಮಯ ಬೇಕು. ನಾನು ಸಣ್ಣವನಿದ್ದಾಗ ತಂದೆಯಿಂದಲೇ ದೌರ್ಜನ್ಯಕ್ಕೆ ಒಳಗಾದೆ’ ಎಂದಿದ್ದಾರೆ ಅವರು.

‘ಪುರುಷನಾಗಿ ಆತ ಪತ್ನಿಗೆ ಹೊಡೆಯೋ ಜನ್ಮಸಿದ್ಧ ಹಕ್ಕು ಎಂದು ಅವನು ಭಾವಿಸಿದಂತೆ ಇತ್ತು. ಅದೇ ರೀತಿ ಮಗಳಿಗೆ ಲೈಂಗಿಕ ದೌರ್ಜನ್ಯ ನೀಡೋದು ಅವನ ಕರ್ತವ್ಯ ಎಂದು ಭಾವಿಸಿದ್ದ. ಇದನ್ನು ಪ್ರಶ್ನೆ ಮಾಡಲು ನನಗೆ ಏಳು ವರ್ಷ ಬೇಕಾಯಿತು. ನನ್ನ ಮಾತನ್ನು ನನ್ನ ತಾಯಿ ನಂಬುವುದಿಲ್ಲ ಎನ್ನುವ ಭಯ ಇತ್ತು’ ಎಂದಿದ್ದಾರೆ ಅವರು.

ಏನೇ ಆದರೂ ನನ್ನ ಪತಿ ದೇವರು ಎಂದು ಖುಷ್ಬೂ ಅವರ ತಾಯಿ ಭಾವಿಸುತ್ತಿದ್ದರು. ಆ ರೀತಿಯ ಮನಸ್ಥಿತಿ ಅವರದ್ದಾಗಿತ್ತು. ತಂದೆಯ ವಿರುದ್ಧ ತಿರುಗಿಬಿದ್ಧ ನಂತರ ಇಡೀ ಕುಟುಂಬವನ್ನು ತಂದೆ ಬಿಟ್ಟುಬಿಟ್ಟನು. ಮುಂದೇನು ಎನ್ನುವ ಪ್ರಶ್ನೆ ಅವರನ್ನು ಕಾಡಲು ಪ್ರಾರಂಭಿಸಿತು.

ಇದನ್ನೂ ಓದಿ: ‘ಲೈಂಗಿಕ ದೌರ್ಜನ್ಯದ ಬಗ್ಗೆ ತಕ್ಷಣಕ್ಕೆ ಹೇಳಿದರೆ ತನಿಖೆಗೆ ಸಹಾಯ ಆಗುತ್ತದೆ’; ಖುಷ್ಬೂ ಸುಂದರ್

ಖುಷ್ಬೂ ಅವರು ಶ್ರೇಷ್ಠ ನಟಿ ಎನಿಸಿಕೊಂಡಿದ್ದಾರೆ. ಅವರು ಕನ್ನಡದಲ್ಲಿ ಹಲವು ಸಿನಿಮಾ ಮಾಡಿದ್ದಾರೆ. ರವಿಚಂದ್ರನ್ ಜೊತೆಗಿನ ಕೆಮಿಸ್ಟ್ರಿ ಎಲ್ಲರಿಗೂ ಇಷ್ಟ ಆಗುತ್ತದೆ.  ‘ರಣಧೀರ’ ಅವರು ಕನ್ನಡದಲ್ಲಿ ನಟಿಸಿದ ಮೊದಲ ಸಿನಿಮಾ. ‘ಅಂಜದ ಗಂಡು’, ‘ಯುಗ ಪುರುಷ’, ‘ಪ್ರೇಮಾಗ್ನಿ’ ಸೇರಿ ಅನೇಕ ಕನ್ನಡ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 1996ರಲ್ಲಿ ಬಂದ ‘ಜೀವನದಿ’ ಸಿನಿಮಾ ಗಮನ ಸೆಳೆಯಿತು. 2010ರ ‘ಜನನಿ’ ಬಳಿಕ ಅವರು ಕನ್ನಡದಲ್ಲಿ ಕಾಣಿಸಿಕೊಂಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:18 am, Sun, 29 September 24