Daily Horoscope: ಈ ರಾಶಿಯವರು ಇಂದು ವಾಹನ ಚಲಾಯಿಸುವ ಎಚ್ಚರವಾಗಿರಿ
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಆಗಸ್ಟ್. 23: ನಿಮ್ಮ ಬಳಿ ಬಂದು ಕ್ಷಮಾಪಣೆ ಕೇಳಿದಲ್ಲಿ ಕ್ಷಮಿಸುವ ದೊಡ್ಡತನವನ್ನು ತೋರಿಸಿ. ಮಕ್ಕಳಿಂದ ನಿಮಗೆ ಕಿರಿಕಿರಿಯಾಗಲಿದೆ. ಸಂತೋಷದಿಂದ ನೀವು ಇರುವಿರಿ. ಪ್ರೇಮಪ್ರಕರಣವು ಹೊಸ ರೂಪವನ್ನು ಪಡೆದುಕೊಳ್ಳಬಹುದು. ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ ಹೆಚ್ಚಾಗುವುದು. ಹಾಗಾದರೆ ಆಗಸ್ಟ್ 23ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದೊಂದಿಗೆ ಸಂಬಂಧಿಸಿದೆ. ಜ್ಯೋತಿಷ್ಯವು ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ಚಿಹ್ನೆಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತವೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ರೇವತೀ, ಯೋಗ: ಧೃತಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:49 ಗಂಟೆ, ರಾಹು ಕಾಲ ಬೆಳಿಗ್ಗೆ 11:02 ರಿಂದ ಮಧ್ಯಾಹ್ನ 12:35, ಯಮಘಂಡ ಕಾಲ ಮಧ್ಯಾಹ್ನ 03:42 ರಿಂದ ಸಂಜೆ 05:16ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:55 ರಿಂದ 09:28ರ ವರೆಗೆ.
ಸಿಂಹ ರಾಶಿ: ನೀವು ಅಪವಾದಗಳನ್ನು ಕೇಳುವ ಸ್ಥಿತಿ ಬರಬಹುದು. ಜಾಗರೂಕರಾಗಿ ಇರಿ. ಅಮೂಲ್ಯ ವಸ್ತುಗಳನ್ನು ಸಂಗ್ರಹಿಸುವಿರಿ. ಮನೆಯ ಕೆಲಸ ಹಾಗೂ ಕಛೇರಿಯ ಕೆಲಸಗಳನ್ನು ಸರಿದೂಗಿಸಿಕೊಂಡು ಹೋಗುವುದು ಕಷ್ಟವಾದೀತು. ಅನಾಯಾಸವಾಗಿ ಲಾಭವನ್ನು ಪಡೆಯುವ ಜಾಡ್ಯವು ಬರಬಹುದು. ಕೆಲವರ ಒಡನಾಟದಿಂದ ನಕಾರಾತ್ಮಕತೆ ಉಂಟಾಗುವುದು. ಹೊಸ ಯೋಜನೆಯೊಂದು ನಿಮಗೆ ಸಿಗಲಿದ್ದು ಬಹಳ ಉತ್ಸಾಹವಿರಲಿದೆ. ಬೇರೆಯವರ ನೇರವಾದ ನುಡಿಗಳು ನಿಮಗೆ ನಾಟಬಹುದು. ಮನಸ್ಸು ಬಹಳ ತಳಮಳಗೊಳ್ಳಬಹುದು. ಮನೆಯವರಿಗೆ ನಿಮ್ಮ ಬದಲಾವಣೆ ಅನಿರೀಕ್ಷಿತ ಎನಿಸಬಹುದು. ಇತರ ಕೆಲಸದಲ್ಲಿ ಮಗ್ನವಾಗಿ ಮಾಡಬೇಕಾದ ಮುಖ್ಯ ಕೆಲಸವು ನಿಂತುಹೋಗಬಹುದು. ಸ್ವಚ್ಛಂದವಾಗಿ ವಿಹರಿಸುವ ಮನಸ್ಸು ಇರಲಿದೆ. ಶಿಕ್ಷಣಕ್ಷೇತ್ರದಲ್ಲಿ ಯಶಸ್ಸು ಸಿಗುವುದು. ಸಕಾಲಕ್ಕೆ ಆರ್ಥಿಕ ನೆರವು ಸಿಗಲಿದ್ದು ಸ್ವಲ್ಪ ನೆಮ್ಮದಿ ಸಿಗುವುದು. ಮುಖಂಡರು ಬಹಳ ಜಾಣ್ಮೆಯಿಂದ ಮುಂದುವರಿಯಬೇಕಾಗುವುದು.
ಕನ್ಯಾ ರಾಶಿ: ಇಂದು ನಿಮ್ಮ ಸಹಾಯಕರೇ ನಿಮಗೆ ತೊಂದರೆ ಕೊಟ್ಟಾರು. ಸಜ್ಜನರ ಸೇವೆಯ ಅವಕಾಶ ನಿಮಗೆ ಸಿಗಲಿದೆ. ಕಛೇರಿಯಲ್ಲಿ ಕಲಹವನ್ನು ಮಾಡಿಕೊಳ್ಳಲಿದ್ದೀರಿ. ನಿಮಗೆ ಹೊಸ ಉದ್ಯಮವನ್ನು ಆರಂಭಿಸುವ ಆಲೋಚನೆ ಇದ್ದರೂ ಸಂಪೂರ್ಣ ಧೈರ್ಯವು ನಿಮಗೆ ಸಾಕಾಗದೇ ಹೋದೀತು. ಕೆಲವರ ಮಾತು ನಿಮ್ಮ ನೆಮ್ಮದಿಯನ್ನು ಹಾಳುಮಾಡಬಹುದು. ನಿಮ್ಮನ್ನು ನಿಯಂತ್ರಿಸಲು ಯಾರಾದರೂ ಮೇಲಧಿಕಾರಿಯ ಕಿವಿ ಚುಚ್ಚಬಹುದು. ಹಳೆಯ ವಿಚಾರವು ಪುನಃ ಮುಖ್ಯವೇದಿಕೆ ಬರುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಣ್ಣ ಕಲಹವೂ ಆಗಬಹುದು. ಸಮಾಜದಲ್ಲಿ ಉತ್ತಮ ಕಾರ್ಯವನ್ನು ಮಾಡಲು ನೀವು ಬಯಸುವಿರಿ. ಸ್ನೇಹಿತರ ಜೊತೆ ಸೇರಿಕೊಳ್ಳುವಿರಿ. ಆದಾಯವನ್ನು ಹೆಚ್ಚಿಸಲು ಬೇರೆ ಮಾರ್ಗವನ್ನು ಅನ್ವೇಷಿಸುವಿರಿ. ಹೊಸ ವ್ಯವಹಾರವನ್ನು ಪ್ರಾರಂಭಿಸಿವರು ಉತ್ಸಾಹದ ಕಾರಣ ಉತ್ತಮ ಲಾಭವನ್ನು ಪಡೆಯಬಹುದು. ವಕೀಲ ವೃತ್ತಿಯವರಿಗೆ ಹೆಚ್ಚಿನ ಕಾರ್ಯವು ಬರಲಿದ್ದು ನಿಭಾಯಿಸುವ ಕಲೆಯನ್ನು ಕಲಿಯಬೇಕಾದೀತು.
ತುಲಾ ರಾಶಿ: ಇಂದು ನಿಮಗೆ ನಿಮ್ಮವರುಲೇ ಬಯಸದೇ ಇದ್ದರೂ ಸಹಾಯ ಮಾಡುವವರಿದ್ದಾರೆ. ಬಂಧುಗಳ ಬಗ್ಗೆ ನಿಮಗೆ ಕನಿಕರ ಬರುವುದು. ಅಮೂಲ್ಯವಾದ ವಸ್ತುವನ್ನು ನೀವು ಕಳೆದಕೊಳ್ಳುವ ಸಾಧ್ಯತೆ ಇದೆ. ವಾಹನದ ವಿಚಾರಕ್ಕೆ ಸಂಗಾತಿಯ ಜೊತೆ ಕಲಹವಾಗಬಹುದು. ಉದ್ಯೋಗಕ್ಕೆ ಸಂಬಂಧಿಸಿದೆ ನಿಮ್ಮಲ್ಲಿ ಅನಿಶ್ಚಿತತೆ ಇರಲಿದೆ. ಸಂಶೋಧನೆಯಲ್ಲಿ ತೊಡಗಿದ್ದರೆ ಸ್ವಲ್ಪ ಹಿನ್ನಡೆಯೂ ಹಣದ ಕೊರತೆಯೂ ಆಗಬಹುದು. ಯಾರಿಂದಲಾದರೂ ಅಪಮಾನವೂ ಆಗುವ ಸಾಧ್ಯತೆ ಇದೆ. ಉನ್ನತ ವ್ಯಾಸಂಗದಲ್ಲಿ ನಿಮಗೆ ಅಡೆತಡೆಗಳು ಬರಲಿದ್ದು, ನಿಶ್ಚಲವಾದ ಗುರಿಯೊಂದಿಗೆ ಸಾಗಿ. ಏನಾಗುತ್ತಿದೆ ಎಂಬ ಯಾವ ಸೂಚನೆಯೂ ನಿಮಗೆ ಸಿಗದಾಗುವುದು. ವ್ಯಾಪಾರವನ್ನು ಮುಚ್ಚಬೇಕು ಎನ್ನುವ ಸ್ಥಿತಿಯವರೆಗೆ ಹೋಗಬಹುದು. ಆಪ್ತರಾದ ಮಾತ್ರಕ್ಕೆ ಎಲ್ಲವನ್ನೂ ಸರಿಯಾಗಿ ಹೇಳುತ್ತಾರೆ ಎಂದಿಲ್ಲ. ತಂದೆಯ ಆಸೆಯನ್ನು ಪೂರ್ಣ ಮಾಡಿ, ಅವರಿಗೆ ಖುಷಿಯನ್ನು ಕೊಡುವಿರಿ. ಹಿತವಚನವು ನಿಮಗೆ ಅರ್ಥಪೂರ್ಣವೆನಿಸುವುದು.
ವೃಶ್ಚಿಕ ರಾಶಿ: ಇಂದು ನಿಮ್ಮ ಜೊತೆಗಾರರ ನಿಧಾನಗತಿಯ ಕೆಲಸವು ನಿಮ್ಮ ಮನಃಸ್ಥಿತಿಗೆ ಹೊಂದದಿರಬಹುದು. ಉದ್ಯೋಗದಲ್ಲಿ ಸ್ಥಳಾಂತರವು ನಿಮಗೆ ಕಷ್ಟವಾದೀತು. ಆದರೆ ಅನಿವಾರ್ಯವೂ ಆಗಲಿದೆ. ವಿವಾಹಜೀವನಕ್ಕೆ ಕಾಲಿಟ್ಟ ನಿಮಗೆ ಕೆಲವು ಅಸ್ಪಷ್ಟವಾದ ನಡತೆಯಿಂದ ದಿಗ್ಭ್ರಾಂತರಾಗುವ ಸಾಧ್ಯತೆ ಇದೆ. ನಿಮ್ಮ ಬಳಿ ಬಂದು ಕ್ಷಮಾಪಣೆ ಕೇಳಿದಲ್ಲಿ ಕ್ಷಮಿಸುವ ದೊಡ್ಡತನವನ್ನು ತೋರಿಸಿ. ಮಕ್ಕಳಿಂದ ನಿಮಗೆ ಕಿರಿಕಿರಿಯಾಗಲಿದೆ. ಸಂತೋಷದಿಂದ ನೀವು ಇರುವಿರಿ. ಪ್ರೇಮ ಪ್ರಕರಣವು ಹೊಸ ರೂಪವನ್ನು ಪಡೆದುಕೊಳ್ಳಬಹುದು. ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ ಹೆಚ್ಚಾಗುವುದು. ಬಹಳ ದಿನಗಳ ಅನಂತರ ಉದ್ಯೋಗಕ್ಕೆ ಸೇರಿಕೊಳ್ಳುವ ಅವಕಾಶ ಸಿಗಲಿದೆ. ವಾಹನದಿಂದ ಬಿದ್ದು ಪೆಟ್ಟುಮಾಡಿಕೊಳ್ಳಬಹದು. ಜಾಗರೂಕತೆಯಿಂದ ವಾಹನವನ್ನು ಚಲಾಯಿಸಿ. ಅನಾರೋಗ್ಯದಿಂದ ನಿಮಗೆ ಉತ್ಸಾಹ ಕಡಿಮೆಯಾಗುವುದು. ಎಲ್ಲವೂ ತಾನಾಗಿಯೇ ತಿಳಿದು ಬರುತ್ತದೆ. ಪೂರ್ವಾಪರ ಯೋಚನೆ ಇಲ್ಲದೇ ಮಾತನಾಡಿ ಸಂಬಂಧವನ್ನು ಹಾಳುಮಾಡಿಕೊಳ್ಳಬೇಡಿ.




