ಉಕ್ರೇನ್ನಿಂದ ಎಲ್ಲಾ ವಿದ್ಯಾರ್ಥಿಗಳನ್ನು ಉಚಿತವಾಗಿ ಕರೆದುಕೊಂಡು ಬರಲಾಗಿದೆ -ಸಾರಿಗೆ ಸಚಿವ ಬಿ.ಶ್ರೀರಾಮುಲು
ರಾಜಕಾರಣಿಗಳು ಬಾಯಿ ಚಪಲಕ್ಕೆ ಎನೇನೋ ಮಾತನಾಡುತಿದ್ದಾರೆ. ಬೇರೆ ವಿಚಾರದಲ್ಲಿ ರಾಜಕಾರಣ ಮಾಡಿ, ಈ ವಿಚಾರದಲ್ಲಿ ಬೇಡ. ಬಾಯಿ ಚಪಲಕ್ಕೆ ಮಾತನಾಡುವವರ ಬಾಯಿ ಮುಚ್ಚಿಸುವುದು ಕಷ್ಟ. ಈ ರೀತಿಯಲ್ಲಿ ಹೇಳಿಕೆ ನೀಡುವವರಿಗೆ ನಾನು ಶೇಮ್ ಶೇಮ್ ಅನ್ನುವೆ. ಮುಂದುವರೆದರೆ ಅವರ ವಿರುದ್ಧ ಅಸಹ್ಯಕರ ಶಬ್ದ ಬಳಕೆ ಮಾಡಬೇಕಾಗುತ್ತೆ ಎಂದು ಹೇಳಿದ್ರು.
ಬಳ್ಳಾರಿ: ಉಕ್ರೇನ್ನಿಂದ ಎಲ್ಲಾ ವಿದ್ಯಾರ್ಥಿಗಳನ್ನು ಕರೆತರಲಾಗಿದೆ. 1 ಲಕ್ಷ ಹಣ ಪಡೆದು ಕರೆತಂದಿದ್ದಾರೆ ಎಂಬುದು ಸುಳ್ಳು ಎಂದು ಬಳ್ಳಾರಿಯಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ. ವಿದ್ಯಾರ್ಥಿಗಳನ್ನು ಉಚಿತವಾಗಿ ಕರೆದುಕೊಂಡು ಬರಲಾಗುತ್ತಿದೆ. ವಿದ್ಯಾರ್ಥಿಗಳನ್ನ ಕರೆತರಲು 4 ಸಚಿವರನ್ನ ನಿಯೋಜಿಸಲಾಗಿದೆ. ಭಾರತ ಸರ್ಕಾರ ಹರಸಾಹಸಮಾಡಿ ಮಕ್ಕಳನ್ನು ಕರೆತಂದಿದೆ. ವಿದ್ಯಾರ್ಥಿಗಳನ್ನು ಕರೆತರಲು ನಾಲ್ವರು ಸಚಿವರ ನಿಯೋಜನೆ ಮಾಡಲಾಗಿದೆ ಎಂದು ಬಳ್ಳಾರಿಯಲ್ಲಿ ಸಾರಿಗೆ ಖಾತೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ರಾಜಕಾರಣಿಗಳು ಬಾಯಿ ಚಪಲಕ್ಕೆ ಎನೇನೋ ಮಾತನಾಡುತಿದ್ದಾರೆ. ಬೇರೆ ವಿಚಾರದಲ್ಲಿ ರಾಜಕಾರಣ ಮಾಡಿ, ಈ ವಿಚಾರದಲ್ಲಿ ಬೇಡ. ಬಾಯಿ ಚಪಲಕ್ಕೆ ಮಾತನಾಡುವವರ ಬಾಯಿ ಮುಚ್ಚಿಸುವುದು ಕಷ್ಟ. ಈ ರೀತಿಯಲ್ಲಿ ಹೇಳಿಕೆ ನೀಡುವವರಿಗೆ ನಾನು ಶೇಮ್ ಶೇಮ್ ಅನ್ನುವೆ. ಮುಂದುವರೆದರೆ ಅವರ ವಿರುದ್ಧ ಅಸಹ್ಯಕರ ಶಬ್ದ ಬಳಕೆ ಮಾಡಬೇಕಾಗುತ್ತೆ ಎಂದು ಹೇಳಿದ್ರು.
ಇನ್ನು ಬಜೆಟ್ ಬಗ್ಗೆ ವಿಪಕ್ಷಗಳ ಹೇಳಿಕೆಗೆ ಸಚಿವ ಶ್ರೀರಾಮುಲು ಆಕ್ರೋಶ ಹೊರ ಹಾಕಿದ್ದಾರೆ. ಸಿದ್ದರಾಮಯ್ಯನವರ ಭಂಡತನ, ಮೊಂಡುತನದ ಹೇಳಿಕೆಗಳಿವು. ಸಿದ್ದರಾಮಯ್ಯನವರು 13 ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಅವರು ಮಂಡಿಸಿದ್ದ ಬಜೆಟ್ ಕೂಡ ಬಡಾಯಿ ಬಜೆಟ್ ಆಗಿತ್ತಾ? ಅಧಿಕಾರಕ್ಕೆ ಬರುವ ದುರುದ್ದೇಶದಿಂದ ಇಂತಹ ಹೇಳಿಕೆ ಕೊಡ್ತಿದ್ದಾರೆ. ಇಂತಹ ಹೇಳಿಕೆಗಳು ಸಿದ್ದರಾಮಯ್ಯ, ಡಿಕೆಶಿಗೆ ಶೋಭೆ ತರಲ್ಲ ಎಂದು ಸಚಿವ ಬಿ.ಶ್ರೀರಾಮುಲು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಆ ಪುಣ್ಯಾತ್ಮ ವಸತಿ ಸಚಿವ ಒಂದು ಮನೆಯನ್ನೂ ನೀಡಿಲ್ಲ; ಸಚಿವ ವಿ.ಸೋಮಣ್ಣ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಆಲಿಯಾ ಭಟ್ ಬಾಯ್ಫ್ರೆಂಡ್ ಮೇಲೆ ಕಣ್ಣಿಟ್ಟ ಪೂಜಾ ಹೆಗ್ಡೆ; ಏನಿದು ಹೊಸ ಕಥೆ?