AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಟೆಲ್ ಬಳಿ ಡ್ರಗ್ಸ್ ಸೇವನೆ: ಪ್ರಶ್ನಿಸಿದ್ದಕ್ಕೆ ಗಲಾಟೆ; ಸಿಕ್ಕಸಿಕ್ಕ ವಸ್ತುಗಳಿಂದ ಹೊಡೆದಾಟ

ಕೊತ್ತನೂರಿನ ಕಾಫಿ ಶಾಪ್‌ನಲ್ಲಿ ಡ್ರಗ್ಸ್ ಸೇವನೆ ಆರೋಪದ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಯುವಕರ ಗುಂಪಿನ ನಡುವೆ ಭಾರಿ ಗಲಾಟೆ ನಡೆದಿರುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಿಬ್ಬಂದಿ ಪ್ರಶ್ನಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಪರಸ್ಪರ ಹಲ್ಲೆ ಮಾಡಲಾಗಿದೆ. ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದೆ.

ಹೋಟೆಲ್ ಬಳಿ ಡ್ರಗ್ಸ್ ಸೇವನೆ: ಪ್ರಶ್ನಿಸಿದ್ದಕ್ಕೆ ಗಲಾಟೆ; ಸಿಕ್ಕಸಿಕ್ಕ ವಸ್ತುಗಳಿಂದ ಹೊಡೆದಾಟ
ಹೋಟೆಲ್ ಸಿಬ್ಬಂದಿ, ಯುವಕರ ಮಧ್ಯೆ ಗಲಾಟೆImage Credit source: tv9 kannada
ಪ್ರದೀಪ್​ ಚಿಕ್ಕಾಟಿ
| Edited By: |

Updated on: Apr 01, 2026 | 8:47 PM

Share

ಬೆಂಗಳೂರು, ಏಪ್ರಿಲ್​ 01: ಕಾಫಿ ಶಾಪ್‌ ಬಳಿ ಡ್ರಗ್ಸ್ ಸೇವನೆ ಆರೋಪ ಹಿನ್ನೆಲೆ ಹೋಟೆಲ್ ಸಿಬ್ಬಂದಿ ಮತ್ತು ಯುವಕರ ಗುಂಪ್ಪಿನ ನಡುವೆ ಭಾರಿ ಗಲಾಟೆ (fight) ನಡೆದಿರುವಂತಹ ಘಟನೆ ಕೊತ್ತನೂರಿನ ಭಾರತಿ ಸಿಟಿಯ ಕಾಫಿ ಶಾಪ್​​ ಬಳಿ ನಿನ್ನೆ ರಾತ್ರಿ ನಡೆದಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ.

ನಡೆದಿದ್ದೇನು?

ಹೋಟೆಲ್ ಸಿಬ್ಬಂದಿ ಮತ್ತು ಸ್ಥಳೀಯ ಯುವಕರ ಗುಂಪಿನ ನಡುವೆ ನಡೆದ ಈ ಗಲಾಟೆಗೆ ಡ್ರಗ್ಸ್ ಸೇವನೆ ಆರೋಪವೇ ಕಾರಣ ಎನ್ನಲಾಗಿದೆ. ಹೆಣ್ಣೂರು ಭಾಗದಿಂದ ಬಂದಿದ್ದ ಕೆಲ ಯುವಕರು ಹೋಟೆಲ್ ಬಳಿ ಸಿರಿಂಜ್ ಮೂಲಕ ಡ್ರಗ್ಸ್ ಇಂಜೆಕ್ಟ್ ಮಾಡಿಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ.

ಇದನ್ನು ಸಿಸಿ ಕ್ಯಾಮೆರಾಗಳ ಮೂಲಕ ಗಮನಿಸಿದ ಹೋಟೆಲ್ ಸಿಬ್ಬಂದಿ, ತಕ್ಷಣವೇ ಯುವಕರನ್ನು ಪ್ರಶ್ನಿಸಿದ್ದಾರೆ. ಅಲ್ಲದೆ, ಇನ್ನು ಮುಂದೆ ತಮ್ಮ ಹೋಟೆಲ್‌ಗೆ ಬರದಂತೆ ಯುವಕರ ಸಂಬಂಧಿಕರಿಗೂ ಮಾಹಿತಿ ನೀಡಿದ್ದಾರೆ. ಇದರಿಂದ ಕೆರಳಿದ ಯುವಕರ ಗುಂಪು, ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿಗಳ 119ನೇ ಜನ್ಮದಿನೋತ್ಸಕ್ಕೆಂದು ಸಿದ್ಧಗಂಗಾ ಮಠಕ್ಕೆ ಬಂದಿದ್ದ ಭಕ್ತ ಸಾವು

ಹಲ್ಲೆಗೆ ಪ್ರತಿಯಾಗಿ ಹೋಟೆಲ್ ಸಿಬ್ಬಂದಿಯೂ ಯುವಕರ ಗ್ಯಾಂಗ್ ಮೇಲೆ ಹಲ್ಲೆ ನಡೆಸಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಗಲಾಟೆಯಲ್ಲಿ ಚೇರ್​ ಸೇರಿದಂತೆ ಕೈಗೆ ಸಿಕ್ಕಸಿಕ್ಕ ವಸ್ತುಗಳನ್ನು ಬಳಸಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಒಂದೇ ಬಿಲ್ಡಿಂನ್​ನಲ್ಲಿದ್ದ ಇಬ್ಬರು ಬಾಡಿಗೆದಾರರ ಮಧ್ಯೆ ಗಲಾಟೆ: ಹಲ್ಲೆ

ಒಂದೇ ಬಿಲ್ಡಿಂಗ್​ನಲ್ಲಿದ್ದ ಇಬ್ಬರು ಬಾಡಿಗೆದಾರರ ಮಧ್ಯೆ ಗಲಾಟೆ ಮತ್ತು ಹಲ್ಲೆ ನಡೆದಿರುವಂತಹ ಘಟನೆ ಬೆಂಗಳೂರು ಬ್ಯಾಡರಹಳ್ಳಿಯ ಸಿಂಡಿಕೇಟ್ ಬ್ಯಾಂಕ್ ಲೇಔಟ್​ನಲ್ಲಿ ನಡೆದಿದೆ. ಸಂತೋಷ್​ ಮತ್ತು ಶುಭ ದಂಪತಿ ಮೇಲೆ ಮತ್ತೊಂದು ಮನೆಯವರಿಂದ ಹಲ್ಲೆ ಮಾಡಲಾಗಿದೆ.

ಮನೆಯ ಕೆಳಗಡೆ ಕಾರು ಪಾರ್ಕ್ ಮಾಡುವ ವಿಚಾರಕ್ಕೆ ಪ್ರತಿನಿತ್ಯ ಕ್ಯಾತೆ ತೆಗೆಯುತ್ತಿದ್ದರು. ಒಬ್ಬರು ಬೈಕ್ ನಿಲ್ಲಿಸಬೇಕು, ಇನ್ನೊಬ್ಬರು ಕಾರು ನಿಲ್ಲಿಸಬೇಕೆಂದು ಗಲಾಟೆ ಮಾಡುತ್ತಿದ್ದರು. ನಿನ್ನೆ ಸಂಜೆ ಮನೆಯ ಕೆಳಗಡೆ ಸಂತೋಷ್ ಕಾರು ನಿಲ್ಲಿಸಲು ಬಂದಿದ್ದರು. ಅದೇ ಸ್ಥಳದಲ್ಲಿ ಮತ್ತೊಂದು ಮನೆಯ ರತ್ನಮ್ಮ ಎಂಬುವರು ಬೈಕ್ ನಿಲ್ಲಿಸಿದ್ದರು. ಅಲ್ಲಿದ್ದ ಬೈಕ್ ತೆಗೆಯಿರಿ ನಾನು ಕಾರು ನಿಲ್ಲಿಸಬೇಕು ಎಂದು ಸಂತೋಷ್ ಹೇಳಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ.

ಇದನ್ನೂ ಓದಿ: ಪೊಲೀಸ್​ ಪಬ್ಲಿಕ್ ಪ್ರೆಸ್ ಆರ್ಮಿ ಹೆಸರಿಡಲು ಅಧಿಕಾರ ಕೊಟ್ಟವರ್ಯಾರು? ರೌಡಿಶೀಟರ್​​ ಅರ್ಜಿ ವಜಾ

ಕಾಂಕ್ರೀಟ್​ ಕ್ರಿಕೆಟ್​ ಸ್ಟಂಪ್​ ಮತ್ತು ದೊಣ್ಣೆಯಿಂದ ಸಂತೋಷ್​ ಮೇಲೆ ಹಲ್ಲೆ ಮಾಡಲಾಗಿದೆ. ಬಳಿಕ ಸಂತೋಷ್​ ಕಾರು ಡಿಕ್ಕಿ ಹೊಡೆಸಿ ​ಡ್ಯಾಮೇಜ್​ ಮಾಡಿದ್ದಾರೆ. ಗಲಾಟೆ ಮಾಡಿ ಮನಸೋ ಇಚ್ಚೆ ಹಲ್ಲೆ ನಡೆಸಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಸದ್ಯ ಸಂತೋಷ್​ ಕುಟುಂಬ ಬ್ಯಾಡರಹಳ್ಳಿ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಗಲಾಟೆ, ಹಲ್ಲೆ ನಡೆಸಿದ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಗಾಯಾಳು ಸಂತೋಷ್​ ತಲೆಗೆ 10 ಸ್ಟಿಚ್​ ಹಾಕಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಪ್ರದೀಪ್​ ಚಿಕ್ಕಾಟಿ
ಪ್ರದೀಪ್​ ಚಿಕ್ಕಾಟಿ

ಮೂಲತಃ ಚಾಮರಾಜನಗರ ಜಿಲ್ಲೆಯವನಾಗಿದ್ದು, ಶಾಲಾ ದಿನಗಳಿಂದಲೂ ಮಾಧ್ಯಮಕ್ಕೆ ಸೇರುವ ಹಂಬಲ ಇತ್ತು. ಹೀಗಾಗಿ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಕೆಲಸಕ್ಕೆ ಸೇರಿದ್ದರು ಅ ಕೆಲಸ ಬಿಟ್ಟು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡಿದೆ. ಬಳಿಕ ಸುಮಾರು 7 ವರ್ಷ‌ದಿಂದ ಮೈಸೂರು, ಹೈದರಾಬಾದ್ ನ ಕೆಲ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಪ್ರಸ್ತುತ Tv9 ಕನ್ನಡದ ಕ್ರೈಂ ವರದಿಗಾರನಾಗಿದ್ದೇನೆ. ಓದು, ಬರಹ, ಪ್ರವಾಸ ನನ್ನಿಷ್ಟದ ಹವ್ಯಾಸಗಳು.

Read More
ಮಾದವಾರ ಟೋಲ್‌ನಲ್ಲಿ ನೈಸ್ ಸಂತ್ರಸ್ತ ರೈತರ ಅಹವಾಲು ಸ್ವೀಕರಿಸಿದ ಹೆಚ್​ಡಿಕೆ
ಮಾದವಾರ ಟೋಲ್‌ನಲ್ಲಿ ನೈಸ್ ಸಂತ್ರಸ್ತ ರೈತರ ಅಹವಾಲು ಸ್ವೀಕರಿಸಿದ ಹೆಚ್​ಡಿಕೆ
ಜಂತರ್ ಮಂತರ್‌ನಲ್ಲಿ ಎಎಪಿ ಪ್ರತಿಭಟನೆ
ಜಂತರ್ ಮಂತರ್‌ನಲ್ಲಿ ಎಎಪಿ ಪ್ರತಿಭಟನೆ
ವಿಶ್ವವಿಖ್ಯಾತ ಮೈಸೂರು ದಸರಾ: ರಾಜವಂಶಸ್ಥರಿಗೆ ಆಹ್ವಾನ ನೀಡಿದ ಜಿಲ್ಲಾಡಳಿತ
ವಿಶ್ವವಿಖ್ಯಾತ ಮೈಸೂರು ದಸರಾ: ರಾಜವಂಶಸ್ಥರಿಗೆ ಆಹ್ವಾನ ನೀಡಿದ ಜಿಲ್ಲಾಡಳಿತ
ಸಾಲ ತೀರಿಸಲು ಕಿಡ್ನ್ಯಾಪ್​ ನಾಟಕ: ತಂದೆಗೇ ವಂಚಿಸಲು ಯತ್ನಿಸಿ ತಗ್ಲಾಕೊಂಡ ಮಗ
ಸಾಲ ತೀರಿಸಲು ಕಿಡ್ನ್ಯಾಪ್​ ನಾಟಕ: ತಂದೆಗೇ ವಂಚಿಸಲು ಯತ್ನಿಸಿ ತಗ್ಲಾಕೊಂಡ ಮಗ
ಐಫೆಲ್ ಟವರ್ BAPS ವಿವಾದ: ತನಿಖೆಯಲ್ಲಿ ಸತ್ಯ ಬಯಲು, ಸಂಸ್ಥೆಗೆ ಕ್ಲೀನ್ ಚಿಟ್
ಐಫೆಲ್ ಟವರ್ BAPS ವಿವಾದ: ತನಿಖೆಯಲ್ಲಿ ಸತ್ಯ ಬಯಲು, ಸಂಸ್ಥೆಗೆ ಕ್ಲೀನ್ ಚಿಟ್
ಬೀದರ್​ನಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!
ಬೀದರ್​ನಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!
ಮೈಸೂರು-ರಜನಿಕಾಂತ್​​ ನಡುವಿದೆ ಅವಿನಾಭಾವ ನಂಟು: ಕಾರಣ ಇಲ್ಲಿದೆ
ಮೈಸೂರು-ರಜನಿಕಾಂತ್​​ ನಡುವಿದೆ ಅವಿನಾಭಾವ ನಂಟು: ಕಾರಣ ಇಲ್ಲಿದೆ
ದಾವಣಗೆರೆ: ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಚನ್ನಗಿರಿಯಲ್ಲಿ ಪತ್ತೆ
ದಾವಣಗೆರೆ: ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಚನ್ನಗಿರಿಯಲ್ಲಿ ಪತ್ತೆ
ವಚನ ನಾದ ಲೋಕಕ್ಕೆ ಸಾಕ್ಷಿಯಾದ ದೇವನಗರಿ ದಾವಣಗೆರೆ
ವಚನ ನಾದ ಲೋಕಕ್ಕೆ ಸಾಕ್ಷಿಯಾದ ದೇವನಗರಿ ದಾವಣಗೆರೆ
ಸೌಜನ್ಯ ಕೇಸ್​​: ಸಾಕ್ಷಿ, ಪ್ರಕರಣ ಸಂಬಂಧ ಸಿಬಿಐ-ಸಿಐಡಿಗೆ SIT ಪತ್ರ
ಸೌಜನ್ಯ ಕೇಸ್​​: ಸಾಕ್ಷಿ, ಪ್ರಕರಣ ಸಂಬಂಧ ಸಿಬಿಐ-ಸಿಐಡಿಗೆ SIT ಪತ್ರ