AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಚಿತ ವಿದ್ಯುತ್ ಪೂರೈಕೆ ನಡುವೆಯೂ 7 ವರ್ಷಗಳ ಬಳಿಕ ಲಾಭದ ಹಾದಿಗೆ ಬೆಸ್ಕಾಂ! ₹293.62 ಕೋಟಿ ವಾರ್ಷಿಕ ಲಾಭ

ಏಳು ವರ್ಷಗಳ ಬಳಿಕ ಬೆಸ್ಕಾಂ 2025-26ನೇ ಸಾಲಿನಲ್ಲಿ 293.62 ಕೋಟಿ ರೂ. ವಾರ್ಷಿಕ ಲಾಭ ದಾಖಲಿಸಿದೆ. ವಿದ್ಯುತ್ ಖರೀದಿ ವೆಚ್ಚ ಇಳಿಕೆ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಸುಂಕ ಆದೇಶಗಳು ಹಾಗೂ ವೆಚ್ಚ ನಿಯಂತ್ರಣ ಕ್ರಮಗಳು ಲಾಭಕ್ಕೆ ಪ್ರಮುಖ ಕಾರಣವಾಗಿವೆ. ಉಚಿತ ವಿದ್ಯುತ್ ಯೋಜನೆ ನಡುವೆಯೂ ಬೆಸ್ಕಾಂನ ಈ ಸಾಧನೆ ಗಮನ ಸೆಳೆದಿದೆ.

ಉಚಿತ ವಿದ್ಯುತ್ ಪೂರೈಕೆ ನಡುವೆಯೂ 7 ವರ್ಷಗಳ ಬಳಿಕ ಲಾಭದ ಹಾದಿಗೆ ಬೆಸ್ಕಾಂ! ₹293.62 ಕೋಟಿ ವಾರ್ಷಿಕ ಲಾಭ
ಸಾಂದರ್ಭಿಕ ಚಿತ್ರImage Credit source: tv9
ಗಣಪತಿ ಶರ್ಮಾ
|

Updated on:Sep 11, 2026 | 9:33 AM

Share

ಮುಖ್ಯಾಂಶಗಳು

  • ಏಳು ವರ್ಷಗಳ ಬಳಿಕ ಬೆಸ್ಕಾಂಗೆ ಲಾಭ
  • ₹293.62 ಕೋಟಿ ವಾರ್ಷಿಕ ಲಾಭ ದಾಖಲು
  • ಉಚಿತ ವಿದ್ಯುತ್ ನಡುವೆಯೂ ಲಾಭ!

ಬೆಂಗಳೂರು, ಸೆಪ್ಟೆಂಬರ್ 11: ಗೃಹ ಜ್ಯೋತಿ ಯೋಜನೆ ಅಡಿ ಗೃಹ ಬಳಕೆಯ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡುತ್ತಿದ್ದರೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಕೊನೆಗೂ ಲಾಭದ ಹಾದಿಗೆ ಮರಳಿದೆ! ಸತತ ಏಳು ವರ್ಷಗಳ ನಷ್ಟದ ಬಳಿಕ ಬೆಸ್ಕಾಂ 2025-26ನೇ ಸಾಲಿನಲ್ಲಿ 293.62 ಕೋಟಿ ರೂ. ವಾರ್ಷಿಕ ಲಾಭ ದಾಖಲಿಸಿರುವುದಾಗಿ ವರದಿಯಾಗಿದೆ. 2017-18ರಲ್ಲಿ 568.29 ಕೋಟಿ ರೂ. ಲಾಭ ಗಳಿಸಿದ್ದ ಬೆಸ್ಕಾಂ, ಆ ಬಳಿಕ ಸಾವಿರಾರು ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು.

ಬೆಸ್ಕಾಂ ಲಾಭದ ಹಾದಿಗೆ ಮರಳಲು ಕಾರಣವೇನು?

2025-26ನೇ ಸಾಲಿನಲ್ಲಿ ಬೆಸ್ಕಾಂ ಲಾಭದ ಹಾದಿಗೆ ಮರಳಲು ವಿದ್ಯುತ್ ಖರೀದಿ ವೆಚ್ಚದಲ್ಲಿನ ಇಳಿಕೆ ಹಾಗೂ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC)ದ ಸುಂಕ ಪರಿಷ್ಕರಣೆ ಆದೇಶಗಳು ಪ್ರಮುಖ ಕಾರಣವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಇಆರ್​ಸಿಯ ಸುಂಕ ಆದೇಶಗಳು ವಿದ್ಯುತ್ ದರವನ್ನು ಸಮಂಜಸವಾಗಿ ಹೆಚ್ಚಿಸುವುದರ ಜೊತೆಗೆ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ (FPPCA) ಶುಲ್ಕವನ್ನು ನಿಯಮಿತವಾಗಿ ಸಂಗ್ರಹಿಸಲು ಅವಕಾಶ ಮಾಡಿಕೊಟ್ಟಿವೆ.

ಬೆಸ್ಕಾಂ ಲಾಭಕ್ಕೆ ಮತ್ತೊಂದು ಪ್ರಮುಖ ಕಾರಣ

ಬೆಸ್ಕಾಂನ ಒಟ್ಟು ವೆಚ್ಚದಲ್ಲಿ ಸುಮಾರು ಶೇ 80ರಷ್ಟು ಪಾಲು ವಿದ್ಯುತ್ ಖರೀದಿಗೆ ಹೋಗುತ್ತದೆ. ಉಷ್ಣ ವಿದ್ಯುತ್‌ಗಿಂತ ಜಲವಿದ್ಯುತ್ ಕಡಿಮೆ ವೆಚ್ಚದಲ್ಲಿ ಲಭ್ಯವಾಗುವುದರಿಂದ, ಈ ಬಾರಿ ಬೆಸ್ಕಾಂಗೆ ಜಲವಿದ್ಯುತ್ ಹಂಚಿಕೆ ಹೆಚ್ಚಾಗಿದ್ದು, ಉಷ್ಣ ವಿದ್ಯುತ್ ಮೇಲಿನ ಅವಲಂಬನೆ ಕಡಿಮೆಯಾಗಿದೆ. ಇದರಿಂದ ವಿದ್ಯುತ್ ಖರೀದಿ ವೆಚ್ಚ ಗಣನೀಯವಾಗಿ ಇಳಿಕೆಯಾಗಿದೆ.

ಇದರ ಜೊತೆಗೆ ವೆಚ್ಚ ಕಡಿತ ಹಾಗೂ ಆದಾಯ ಹೆಚ್ಚಳಕ್ಕೆ ಬೆಸ್ಕಾಂ ಹಲವು ಕ್ರಮಗಳನ್ನು ಕೈಗೊಂಡಿದೆ. ಸಾಲಗಳ ಮರುಹಣಕಾಸು (ಲೋನ್ ರಿಫೈನಾನ್ಸಿಂಗ್) ಮೂಲಕ ಬಡ್ಡಿ ವೆಚ್ಚವನ್ನು ಶೇ 1.5ರಿಂದ 2ರಷ್ಟು ಕಡಿಮೆ ಮಾಡಲಾಗಿದ್ದು, ಇದರಿಂದ ನೂರಾರು ಕೋಟಿ ರೂಪಾಯಿ ಉಳಿತಾಯವಾಗಿದೆ.

ಅದೇ ರೀತಿ, ಪೂರೈಕೆದಾರರು ಬಿಲ್ ಸಲ್ಲಿಸಿದ ದಿನವೇ ಪಾವತಿ ಮಾಡಿದರೆ ಶೇ 4ರವರೆಗೆ ರಿಯಾಯಿತಿ ಪಡೆಯುವ ಅವಕಾಶವನ್ನು ಬೆಸ್ಕಾಂ ಬಳಸಿಕೊಂಡಿದೆ. ಇದರಿಂದ ಸುಮಾರು 100 ಕೋಟಿ ರೂ. ಉಳಿತಾಯವಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ವೆಚ್ಚವನ್ನು ಉದ್ದೇಶಪೂರ್ವಕವಾಗಿ ನಿಯಂತ್ರಿಸುವುದರ ಜೊತೆಗೆ ಹಲವು ಸಣ್ಣಪುಟ್ಟ ಹಣಕಾಸು ನಿರ್ವಹಣಾ ಕ್ರಮಗಳನ್ನು ಕೈಗೊಂಡಿದ್ದರಿಂದ ನಷ್ಟದಿಂದ ಲಾಭದತ್ತ ಸಾಗಲು ಸಾಧ್ಯವಾಗಿದೆ ಎಂದು ಅವರು ಹೇಳಿರುವುದನ್ನೂ ವರದಿ ಉಲ್ಲೇಖಿಸಿದೆ.

ಬೆಸ್ಕಾಂ ಲಾಭದ ಬಗ್ಗೆ ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದ್ದೇನು?

ಬೆಸ್ಕಾಂ ಲಾಭ ಗಳಿಸುವ ಹಂತಕ್ಕೆ ಬರಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ. ತಾವು ಇಂಧನ ಸಚಿವರಾಗಿ ಅಧಿಕಾರ ವಹಿಸಿಕೊಂಡಾಗ ಬೆಸ್ಕಾಂ ತೀವ್ರ ಆರ್ಥಿಕ ಒತ್ತಡದಲ್ಲಿತ್ತು. ಹಣಕಾಸು ಶಿಸ್ತು ತರಲು ಎಲ್ಲ ಹಂತಗಳಲ್ಲೂ ಕ್ರಮ ಕೈಗೊಳ್ಳಲಾಗಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿಯ ಒಗ್ಗಟ್ಟಿನ ಪ್ರಯತ್ನದಿಂದ ಈ ಬದಲಾವಣೆ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.

ಆದರೆ ಬೆಸ್ಕಾಂನ ಒಟ್ಟು ಸಂಚಿತ ನಷ್ಟ ಇನ್ನೂ ಸುಮಾರು 13,000 ಕೋಟಿ ರೂಪಾಯಿಯಷ್ಟಿದೆ. ಹೀಗಾಗಿ ಒಂದೇ ವರ್ಷದಲ್ಲಿ ಲಾಭ ದಾಖಲಿಸಿರುವುದರಿಂದ ಸಂಸ್ಥೆಯ ಆರ್ಥಿಕ ಸಂಕಷ್ಟ ಸಂಪೂರ್ಣವಾಗಿ ದೂರವಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಂಚಿತ ನಷ್ಟ ಎಂದರೇನು? ಬೆಸ್ಕಾಂಗೆ ಇದು ಹೇಗೆ ಸಮಸ್ಯೆ ತಂದೊಡ್ಡಲಿದೆ?

ಹಿಂದಿನ ಹಲವು ವರ್ಷಗಳಲ್ಲಿ ಸಂಸ್ಥೆಗೆ ಉಂಟಾದ ಒಟ್ಟು ನಷ್ಟದ ಮೊತ್ತವೇ ಸಂಚಿತ ನಷ್ಟ. ಇದು ಬೆಸ್ಕಾಂನಲ್ಲಿ 13,000 ಕೋಟಿಯಷ್ಟಿದೆ. ಇದರಿಂದ ಹೊರಬರಲು ಬೆಸ್ಕಾಂಗೆ ಹಲವು ವರ್ಷಗಳೇ ಬೇಕಾಗಬಹುದು ಎಂದು ತಜ್ಞರು ಹೇಳಿದ್ದಾರೆ.

ಇಂಧನ ತಜ್ಞ ಹಾಗೂ ಕೆಇಆರ್​ಸಿ ಮಾಜಿ ಸಲಹಾ ಮಂಡಳಿ ಸದಸ್ಯ ಎಂ.ಜಿ. ಪ್ರಭಾಕರ್ ಪ್ರಕಾರ, ಇದು ಬೆಸ್ಕಾಂನ ಆರ್ಥಿಕ ಸ್ಥಿತಿಯಲ್ಲಿ ಆರಂಭಿಕ ಸುಧಾರಣೆಯಷ್ಟೇ. ವರ್ಷಕ್ಕೆ 1,000 ಕೋಟಿ ರೂ. ಲಾಭ ಗಳಿಸಿದರೂ ಸುಮಾರು 13,000 ಕೋಟಿ ರೂ. ಸಂಚಿತ ನಷ್ಟದಿಂದ ಹೊರಬರಲು ಒಂದು ದಶಕಕ್ಕೂ ಹೆಚ್ಚು ಸಮಯ ಬೇಕಾಗಬಹುದು.

LIVE TV

ಇದರ ನಡುವೆ ಹಲವು ಕೈಗಾರಿಕೆಗಳು ಬೆಸ್ಕಾಂನಿಂದ ದೂರ ಸರಿದು ಕ್ಯಾಪ್ಟಿವ್ ಪವರ್ ಹಾಗೂ ಓಪನ್ ಆಕ್ಸೆಸ್ ಆಯ್ಕೆಗಳತ್ತ ಸಾಗುತ್ತಿವೆ. ಹೀಗಾಗಿ ಹೊಸ ಗ್ರಾಹಕರನ್ನು ಸೆಳೆಯುವುದರ ಜೊತೆಗೆ ಈಗಿರುವ ಗ್ರಾಹಕರನ್ನು ಉಳಿಸಿಕೊಳ್ಳುವುದು ಬೆಸ್ಕಾಂಗೆ ಅತ್ಯಂತ ಮುಖ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:28 am, Fri, 11 September 26

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ