ಕೊರೊನಾ ತೊಲಗಲಿ, ಒಮಿಕ್ರಾನ್ ಬಾರದಿರಲಿ ಎಂದು 5 ಕಿಲೋ ಮೀಟರ್ ಪಾದಯಾತ್ರೆ ಮಾಡಿದ ಬ್ರಾಹ್ಮಣ ಮಹಾಸಭಾ
ಕಲಬುರಗಿ ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಲೋಕ ಕಲ್ಯಾಣಕ್ಕಾಗಿ 300ಕ್ಕೂ ಹೆಚ್ಚು ಭಕ್ತರಿಂದ ರಾಸಣಗಿಗೆ ಪಾದಯಾತ್ರೆ ನಡೆಸಲಾಗಿದೆ. ರಾಸಣಗಿಯ ಬಲಭೀಮಸೇನ ಸನ್ನಿಧಿಯಲ್ಲಿ ಭಕ್ತರು ಹರಕೆ ಸಲ್ಲಿಸಿದ್ದಾರೆ.
ಕಲಬುರಗಿ: ರಾಜ್ಯದಲ್ಲಿ ನಿನ್ನೆ ಒಂದೇ ದಿನ 1033 ಜನರ ಮೇಲೆ ಕೊರೊನಾ ದಾಳಿ ಮಾಡಿದೆ. ಮಹಾಮಾರಿ ಕೊರೊನಾ ಮತ್ತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ನಡುವೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ರಾಸಣಗಿಗೆ ಕೊರೊನಾ ತೊಲಗಲಿ, ಒಮಿಕ್ರಾನ್ ಬಾರದಿರಲಿ ಎಂದು ಕಲಬುರಗಿ ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ 5 ಕಿಲೋ ಮೀಟರ್ ಪಾದಯಾತ್ರೆ ಮಾಡಿದ ಘಟನೆ ನಡೆದಿದೆ.
ಕಲಬುರಗಿ ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಲೋಕ ಕಲ್ಯಾಣಕ್ಕಾಗಿ 300ಕ್ಕೂ ಹೆಚ್ಚು ಭಕ್ತರಿಂದ ರಾಸಣಗಿಗೆ ಪಾದಯಾತ್ರೆ ನಡೆಸಲಾಗಿದೆ. ರಾಸಣಗಿಯ ಬಲಭೀಮಸೇನ ಸನ್ನಿಧಿಯಲ್ಲಿ ಭಕ್ತರು ಹರಕೆ ಸಲ್ಲಿಸಿದ್ದಾರೆ. ರಾಸಣಗಿ ಕ್ರಾಸ್ ನಿಂದ ದೇವಸ್ಥಾನದವರಗೆ ಅಂದ್ರೆ ಸುಮಾರು 5 ಕಿಲೋ ಮೀಟರ್ ಪಾದಯಾತ್ರೆ ಮಾಡಿದ್ದಾರೆ.
ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ರವಿ ಲಾಥೂರಕರ್, ಈ ಬಗ್ಗೆ ಮಾತನಾಡಿದ್ದು ಮತ್ತೆ ಕೊರೊನಾ ಮತ್ತು ಓಮಿಕ್ರಾನ್ ಹಾವಳಿ ಹೆಚ್ಚಾಗುತ್ತಿದೆ. ಹೀಗಾಗಿ ಬ್ರಾಹ್ಮಣ ಸಭಾದಿಂದ ರಾಸಣಗಿ ಬಲಬೀಮ ದೇವಸ್ಥಾನಕ್ಕೆ ಪಾದಯಾತ್ರೆ ಮಾಡಿದ್ದೇವೆ. ಲೋಕಕ್ಕೆ ಬಂದಿರೋ ಸಂಕಷ್ಟ ದೂರವಾಗಲಿ ಅಂತ ಪ್ರಾರ್ಥಿಸಿದ್ದೇವೆ. ಪಾದಯಾತ್ರೆಯಲ್ಲಿ ಜಿಲ್ಲೆಯ ಅನೇಕರು ಭಾಗಿಯಾಗಿದ್ದರು. ರಾಸಣಗಿ ಬಲಭೀಮಸೇನ ದೇವಸ್ಥಾನ ತುಂಬಾ ಪ್ರಸಿದ್ಧ ದೇವಸ್ಥಾನವಾಗಿದ್ದು, ಭಕ್ತರ ಇಚ್ಚೆಗಳು ಇಡೇರುತ್ತಾವೆ ಎಂದು ತಿಳಿಸಿದ್ದಾರೆ.
ಅಲ್ಲದೆ ಇದೇ ವೇಳೆ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಕಲ್ಯಾಣರಾವ್, ಲೋಕಕಲ್ಯಾಣಕ್ಕಾಗಿ, ಕೊರೊನಾ ತೊಲಗಲಿ ಅಂತ ಐದು ಕಿಲೋ ಮೀಟರ್ ಪಾದಯಾತ್ರೆ ಮಾಡಿ, ಬಸಬೀಮಸೇನನ ಸನ್ನಿಧಿಯಲ್ಲಿ ಪೂಜೆ ಮಾಡಿ ಪಾರ್ಥಿಸಿದ್ದೇವೆ. ಜಗತ್ತಿಗೆ ಬಂದಿರುವ ಸಂಕಷ್ಟ ದೂರವಾಗಲಿ ಅನ್ನೋ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.
ಇದನ್ನೂ ಓದಿ: ಪೊಳ್ಳು ಸಿದ್ಧಾಂತಗಳಿಂದ ನಿರಾಶರಾಗಿದ್ದೇವೆ ಎಂದು ಪೊಲೀಸರಿಗೆ ಶರಣಾದ 44 ನಕ್ಸಲರು
Published On - 9:23 am, Sun, 2 January 22