ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ ಎಂದಿದ್ದ ಬಾಲಕಿಗೆ ಸನ್ಮಾನ, ಉಡುಪಿ ಹಿಜಾಬ್ ವಿವಾದದ ಬಗ್ಗೆ ರಘುಪತಿ ಭಟ್ ಪ್ರತಿಕ್ರಿಯೆ
ಹಿಜಾಬ್ಗೆ ಒತ್ತಾಯ ಮಾಡುವವರು ಒಂದುವರೆ ವರ್ಷ ಸಮವಸ್ತ್ರದಲ್ಲಿ ಬಂದಿದ್ದಾರೆ. ಯಾರದ್ದೋ ಕುಮ್ಮಕ್ಕಿನಿಂದ ಘಟನೆಯನ್ನ ರಾಜಕೀಯಗೊಳಿಸಲಾಗುತ್ತಿದೆ. ಯೂನಿಫಾರ್ಮ್ ಬೇಕಾ ಬೇಡ್ವಾ ಎಂಬುದನ್ನು ಸರ್ಕಾರ ತೀರ್ಮಾನಿಸಲಿ ಎಂದು ಹೇಳಿದ್ದಾರೆ.
ಕೊಪ್ಪಳ: ನಿಮ್ಮ ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ ಎಂದಿದ್ದ ಶಾಲಾ ಬಾಲಕಿಯನ್ನು ಸಿಪಿಎಂ ಮುಖಂಡ ಪ್ರಕಾಶ ಕಾರಟ್ ಇಂದು ಗಂಗಾವತಿಯಲ್ಲಿ ಸನ್ಮಾನಿಸಿದ್ದಾರೆ. ಗಂಗಾವತಿಯಲ್ಲಿ ಸಿಪಿಎಂ ಪಕ್ಷದ ರಾಜ್ಯ ಸಮ್ಮೇಳನದಲ್ಲಿ ಸನ್ಮಾನ ಮಾಡಲಾಗಿದೆ. ಇತ್ತೀಚಿಗೆ ಗಂಗಾವತಿಯ ಪ್ರತಿಭಟನೆಯಲ್ಲಿ ಸ್ವಾಮೀಜಿಗಳ ವಿರುದ್ದ ಎಸ್ಎಫ್ಐ ಕಾರ್ಯಕರ್ತೆ ಅಂಜಲಿ ಎಂಬ ಬಾಲಕಿ ವಿರೋಧ ವ್ಯಕ್ತಪಡಿಸಿದ್ದಳು. ಮೊಟ್ಟೆ ನೀಡುವುದಕ್ಕೆ ವಿರೋಧಿಸಿದರೆ ನಾವು ನಿಮ್ಮ ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ ಎಂದು ವಿರೋಧ ವ್ಯಕ್ತಪಡಿಸಿದ್ದಳು. ಬಾಲಕಿ ನೀಡಿದ್ದ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಉಡುಪಿ: ಸರ್ಕಾರಿ ಪಿಯು ಕಾಲೇಜು ಹಿಜಾಬ್ ವಿವಾದ; ಶಾಸಕ ರಘುಪತಿ ಭಟ್ ಪ್ರತಿಕ್ರಿಯೆ ಉಡುಪಿ ಸರ್ಕಾರಿ ಪಿಯು ಕಾಲೇಜು ಹಿಜಾಬ್ ವಿವಾದಕ್ಕೆ ಸಂಬಂಧಪಟ್ಟಂತೆ ಉಡುಪಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯೆ ನೀಡಿದ್ದಾರೆ. ಹಿಜಾಬ್ ವಿಚಾರದಲ್ಲಿ ಉದ್ದೇಶಪೂರ್ವಕ ಗೊಂದಲ ಸೃಷ್ಟಿಯಾಗುತ್ತಿದೆ, ಸರ್ಕಾರಿ ಪಿಯು ಕಾಲೇಜಿನಲ್ಲಿ 1985 ರಿಂದಲೂ ಸಮವಸ್ತ್ರ ಕಡ್ಡಾಯ ಇದೆ. ಹಿಜಾಬ್ಗೆ ಒತ್ತಾಯ ಮಾಡುವವರು ಒಂದುವರೆ ವರ್ಷ ಸಮವಸ್ತ್ರದಲ್ಲಿ ಬಂದಿದ್ದಾರೆ. ಯಾರದ್ದೋ ಕುಮ್ಮಕ್ಕಿನಿಂದ ಘಟನೆಯನ್ನ ರಾಜಕೀಯಗೊಳಿಸಲಾಗುತ್ತಿದೆ. ಯೂನಿಫಾರ್ಮ್ ಬೇಕಾ ಬೇಡ್ವಾ ಎಂಬುದನ್ನು ಸರ್ಕಾರ ತೀರ್ಮಾನಿಸಲಿ ಎಂದು ಹೇಳಿದ್ದಾರೆ.
ಪದವಿ ಪೂರ್ವ ಕಾಲೇಜಿನ ಬೋರ್ಡ್ಗೆ ನಾವು ಪತ್ರವನ್ನು ಬರೆದಿದ್ದೇವೆ. ಸಮವಸ್ತ್ರ ಬೇಡ ಎಂದರೆ ಯಾರಿಗೂ ಕಡ್ಡಾಯ ಮಾಡಬೇಡಿ. ಕೇಸರಿ ರುಮಾಲು, ಜೀನ್ಸ್, ಸ್ಲೀವ್ ಲೆಸ್ ಬಟ್ಟೆ ಹಾಕಿಕೊಂಡು ಬರಬಹುದೇ? ತಮಗಿಷ್ಟದ ಬಟ್ಟೆಯನ್ನು ಹಾಕಿಕೊಂಡು ಬರಲು ಅವಕಾಶ ಇದೆಯೇ? ಸರ್ಕಾರ ಉಡುಪಿಯ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯನ್ನು ಇಟ್ಟುಕೊಂಡು ಸರ್ಕಾರ ತೀರ್ಮಾನಿಸಬೇಕು. ಸಮವಸ್ತ್ರ ಎಂದರೆ ಶಿಸ್ತು ಸಮವಸ್ತ್ರ ಎಂದರೆ ಸಮಾನತೆ. ಶಿಕ್ಷಣದಲ್ಲಿ ಸಮಾನತೆ ಬೇಕು ಎಂದು ಅಂಬೇಡ್ಕರ್ ಹೇಳಿದ್ದಾರೆ. ಹಿಜಾಬ್ ಧರಿಸುವುದರಿಂದ ಧರ್ಮದ ಬೇಧ ಬರುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಯೂನಿಫಾರಂ ಬೇಕಾ ಬೇಡ್ವಾ ಎಂದು ಸರ್ಕಾರ ತೀರ್ಮಾನಿಸಲಿ. ಡೆಲ್ಲಿ ಹೈಕೋರ್ಟು ಯೂನಿಫಾರ್ಮ್ ಬಗ್ಗೆ ಈಗಾಗಲೇ ಆದೇಶ ನೀಡಿದೆ. ಸಾರ್ವಜನಿಕ ಸ್ಥಳದಲ್ಲಿ ಎಲ್ಲರಿಗೂ ನಿಯಮ ಒಂದೇ ರೀತಿಯಾಗಿರಬೇಕು. ಕಾಲೇಜಿನಲ್ಲಿ ಹಲವಾರು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿದ್ದಾರೆ. ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲವರು ವಿವಾದ ಸೃಷ್ಟಿ ಮಾಡಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಸೌಹಾರ್ದಯುತ ವಾತಾವರಣ ಇದೆ. ಜಿಲ್ಲೆಯ ಸೌಹಾರ್ದಯುತ ವಾತಾವರಣ ಮುಂದುವರೆಯಲು ಬಿಡಿ. ಈಗಾಗಲೇ ಕಾಲೇಜಿನ ಕೆಲ ಮಕ್ಕಳಿಂದ ಮನವಿ ಬಂದಿದೆ. ಕೇಸರಿ ರುಮಾಲು ಧರಿಸಲು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ. ಸರ್ಕಾರ, ಪಿಯು ಬೋರ್ಡ್ ಸಂಘರ್ಷಕ್ಕೆ ಎಡೆ ಮಾಡಿಕೊಡಬಾರದು ಎಂದು ಉಡುಪಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಇದನ್ನೂ ಓದಿ: ಶಾಲಾ ಸಮವಸ್ತ್ರದಂತೆ ಆಹಾರದಲ್ಲಿಯೂ ಏಕತೆ ಬೇಕು, ಸಸ್ಯಾಹಾರ ಇರಲಿ -ಮೊಟ್ಟೆ ಬೇಡ: ಅಖಿಲ ಭಾರತ ಸಸ್ಯಾಹಾರಿ ಒಕ್ಕೂಟ ಆಶಯ
ಇದನ್ನೂ ಓದಿ: ಹಿಜಾಬ್ ಧರಿಸುವುದಕ್ಕೆ ಅವಕಾಶ ಕೊಡಲು ವಿದ್ಯಾರ್ಥಿನಿಯರ ಮನವಿ; ಉಡುಪಿಯ ಸರ್ಕಾರಿ ಕಾಲೇಜೊಂದರಲ್ಲಿ ಘಟನೆ
Published On - 9:24 pm, Mon, 3 January 22