ಯಾವ ನಾಯಕಿಯನ್ನು ಬಿಡುಗಡೆಗೊಳಿಸಬೇಕೆಂದು ಸುರೇಶ್ ಬಯಸುತ್ತಾರೆ? ಸುಧಾಕರ್

  • Publish Date - 7:47 pm, Wed, 9 September 20
ಯಾವ ನಾಯಕಿಯನ್ನು ಬಿಡುಗಡೆಗೊಳಿಸಬೇಕೆಂದು ಸುರೇಶ್ ಬಯಸುತ್ತಾರೆ? ಸುಧಾಕರ್

ಡ್ರಗ್ಸ್​ ಪೂರೈಸುವವರನ್ನು ಬಿಟ್ಟು ಸೇವಿಸುವವರನ್ನು ಬಂಧಿಸಿದ್ದಾರೆ, ಪೂರೈಕೆದಾರರು ಬಿಂದಾಸಾಗಿ ಹೊರಗಡೆ ತಿರುಗಾಡುತ್ತಿದ್ದಾರೆ ಎಂಬ ಸಂಸದ ಡಿ ಕೆ ಸುರೇಶ್ ಅವರ ಹೇಳಿಕೆಗೆ ಚಿಕ್ಕಬಳ್ಳಾಪುರದಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಅವರ ಹೇಳಿಕೆಯ ಹಿಂದಿರುವ ಉದ್ದೇಶವಾದರೂ ಏನು ಅಂತ ಪ್ರಶ್ನಿಸಿದ್ದಾರೆ.

‘‘ಡ್ರಗ್ಸ್​ ದಂಧೆಯಲ್ಲಿ ಸಿಲುಕಿದವರಿಗೆ ರಕ್ಷಣೆ ನೀಡಬೇಕಾ? ಬಂಧಿತರಾಗಿರುವ ಯಾವ ನಾಯಕಿಯನ್ನು ಬಿಡುಗಡೆ ಮಾಡಬೇಕೆಂದು ಬಯಸುತ್ತಾರೆ ಅಂತಾದರೂ ಅವರು ಹೇಳಲಿ,’’ ಎಂದು ಸುಧಾಕರ್ ಕೇಳಿದರು

ಡ್ರಗ್ಸ್ ಸೇವನೆ ಮಾಡುವವರು ರೋಗಿಗಳು, ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಡ್ರಗ್ಸ್​​ನಿಂದ ಯುವ ಜನಾಂಗ ಹಾಗೂ ಅವರ ಆರೋಗ್ಯ ಕಾಪಾಡಬೇಕಾಗಿದೆ, ಈ ಕೊಳಕು ದಂಧೆಯಲ್ಲಿ ತೊಡಗಿರುವವರು ಜೈಲಿಗೆ ಹೋಗ್ತಾರೆ, ಅದರಲ್ಲಿ ಸಂಶಯವೇ ಬೇಡ ಎಂದು ಸುಧಾಕರ್ ಹೇಳಿದರು. 

‘‘ಆರ್ಥಿಕ ಸಂಕಷ್ಟದಲ್ಲಿಯೂ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರದ ತಾಕತ್ತು ಪ್ರಶ್ನಿಸುವ ಯೋಗ್ಯತೆ ಕಾಂಗ್ರೆಸ್​ಗೆ ಇಲ್ಲ, ಈ ಪಕ್ಷ ಇನ್ನೂ ಬುದ್ಧಿ ಕಲಿಯದಿರುವುದು ನಿಜಕ್ಕೂ ವಿಷಾದನೀಯ ಎಂದು ಸಚಿವರು ಹೇಳಿದರು.

Click on your DTH Provider to Add TV9 Kannada