ಡಿಕೆಶಿ ವಿರುದ್ಧ ಆರೋಪ ಮಾಡಿದ್ದ ದೇವರಾಜೇಗೌಡ ವಿರುದ್ಧ ರಾಜ್ಯ ವಕೀಲ ಪರಿಷತ್ತಿಗೆ ದೂರು: ಯಾಕೆ ಗೊತ್ತಾ?

ಇಂದು(ಮೇ.08) ಬೆಂಗಳೂರಿನಲ್ಲಿ ವಕೀಲ ದೇವರಾಜೇಗೌಡ(Devarajegowda) ಅವರು ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಕಕ್ಷಿದಾರ ನೀಡಿರುವ ಸಾಕ್ಷಿ ಎಂದು ಕೆಲ ಆಡಿಯೋ ಮತ್ತು ಫೋಟೋಗಳನ್ನು ಪ್ರಜ್ವಲ್ ರೇವಣ್ಣ ಮಾಜಿ ಡ್ರೈವರ್ ಕಾರ್ತಿಕ್ ರೆಡ್ಡಿ ನೀಡಿದ್ದು ಎಂದು ರಿಲೀಸ್ ಮಾಡಿದ್ದರು. ಇದು ವಕೀಲರ ವೃತ್ತಿ ನಿಯಮಾನುಸಾರ ಉಲ್ಲಂಘನೆ ಎಂದು ಆರೋಪಿಸಿ, ಸುಮೊಟೊ ದೂರು ದಾಖಲಿಸಲು ಬಾರ್ ಕೌನ್ಸಿಲ್​ಗೆ ದೂರು ನೀಡಿ ಮನವಿ ಮಾಡಿದ್ದಾರೆ.

ಡಿಕೆಶಿ ವಿರುದ್ಧ ಆರೋಪ ಮಾಡಿದ್ದ ದೇವರಾಜೇಗೌಡ ವಿರುದ್ಧ ರಾಜ್ಯ ವಕೀಲ ಪರಿಷತ್ತಿಗೆ ದೂರು: ಯಾಕೆ ಗೊತ್ತಾ?
ದೇವರಾಜೇಗೌಡ ವಿರುದ್ಧ ರಾಜ್ಯ ವಕೀಲ ಪರಿಷತ್ತಿಗೆ ದೂರು
Follow us
Shivaprasad
| Updated By: ಕಿರಣ್ ಹನುಮಂತ್​ ಮಾದಾರ್

Updated on:May 08, 2024 | 9:06 PM

ಬೆಂಗಳೂರು, ಮೇ.08: ಪ್ರಜ್ವಲ್​ ರೇವಣ್ಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು(ಮೇ.08) ಬೆಂಗಳೂರಿನಲ್ಲಿ ವಕೀಲ ದೇವರಾಜೇಗೌಡ(Devarajegowda) ಅವರು ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಸಾಕ್ಷಿ ಬಿಡುಗಡೆ ಮಾಡಿದ್ದಾರೆ ಎಂದು ರಾಜ್ಯ ವಕೀಲರ ಪರಿಷತ್ ಅಧ್ಯಕ್ಷರಿಗೆ ವಕೀಲ ಸೂರ್ಯ ಮುಖುಂದರಾಜ್ ಎಂಬುವವರು ಪತ್ರ ಬರೆದು ದೂರು ನೀಡಿದ್ದಾರೆ. ಅದರಲ್ಲಿ ವಕೀಲ ವೃತ್ತಿಯ ಕೆಲ ನಿಯಮ ಮೀರಿ ಆಡಿಯೋ ಬಿಡುಗಡೆ ಎಂದು ದೂರಿದ್ದಾರೆ.

‘ಕಕ್ಷಿದಾರ ನೀಡಿರುವ ಸಾಕ್ಷಿ ಎಂದು ಕೆಲ ಆಡಿಯೋ ಮತ್ತು ಫೋಟೋಗಳನ್ನು ಪ್ರಜ್ವಲ್ ರೇವಣ್ಣ ಮಾಜಿ ಡ್ರೈವರ್ ಕಾರ್ತಿಕ್ ರೆಡ್ಡಿ ನೀಡಿದ್ದು ಎಂದು ರಿಲೀಸ್ ಮಾಡಿದ್ದ ದೇವರಾಜೇಗೌಡ, ಬಹಿರಂಗವಾಗಿ ಸುದ್ಧಿಗೋಷ್ಠಿ ನಡೆಸಿ ಬಿಡುಗಡೆ ಮಾಡಿ ಮಾತಾಡಿದ್ದರು. ಅಲ್ಲದೇ ಒಂದೂವರೆ ವರ್ಷಗಳಿಂದ ತಮ್ಮ ಬಳಿ ಪೆಂಡ್ರೈವ್ ಹಾಗೂ ಡಿಜಿಟಲ್ ಎವಿಡೆನ್ಸ್ ಇರೋದಾಗಿ ಹೇಳಿದ್ದರು. ಇದು ವಕೀಲರ ವೃತ್ತಿ ನಿಯಮಾನುಸಾರ ಭಾರತೀಯ ಅಧಿಸಾಕ್ಷಿ ಕಲಂ 126ಅಡಿ ಉಲ್ಲಂಘನೆ‌‌ ಎಂದು ಆರೋಪಿಸಿ, ಸುಮೊಟೊ ದೂರು ದಾಖಲಿಸಲು ಬಾರ್ ಕೌನ್ಸಿಲ್​ಗೆ ದೂರು ನೀಡಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ನಮ್ಮ-ನಿಮ್ಮ ವಾಯ್ಸ್ ಪ್ಲೇಮಾಡಿ ರಾಜ್ಯದ ಜನರಿಗೆ ಕೇಳಿಸೋಣ: ಡಿಕೆಶಿಗೆ ದೇವರಾಜೇಗೌಡ ಸವಾಲ್

ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್ ಡ್ರೈವ್ ಪ್ರಕರಣದಲ್ಲಿ ಬಿಜೆಪಿ ನಾಯಕ ಹಾಗು ವಕೀಲ ದೇವರಾಜೇಗೌಡ ಅವರು ಸುದ್ದಿಗೋಷ್ಠಿ ನಡೆಸಿ ಹಲವು ಮಹತ್ವದ ವಿಚಾರಗಳನ್ನು ಹೊರಹಾಕಿದ್ದರು. ಈ ಪೆನ್​​ ಡ್ರೈವ್ ಕೇಸ್​ನ ರೂವಾರಿಯೇ ಕಾಂಗ್ರೆಸ್ ಪಕ್ಷ. ಪೆನ್ ಡ್ರೈವ್​ನಲ್ಲಿರುವ ವಿಡಿಯೋಗಳನ್ನು ಲೀಕ್ ಮಾಡಿ ಹಲವರ ಮಾನ ಹರಾಜು ಮಾಡಿದೆ ಕಾಂಗ್ರೆಸ್. ಅಲ್ಲದೇ ಈ ಕೇಸ್ ಬಳಸಿ ಯಾರಾರನ್ನು ಫಿಟ್ ಮಾಡಿ ಮಟ್ಟ ಹಾಕಬೇಕೆಂದೂ ಕಾಂಗ್ರೆಸ್ ಪ್ಲಾನ್ ಮಾಡಿದೆ ಎನ್ನುವಂತಹ ಸಂಗತಿಯನ್ನು ದೇವರಾಜೇಗೌಡರು ಸಾಕ್ಷಿ ಸಮೇತ ತಿಳಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:59 pm, Wed, 8 May 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ