Music: ನಾಕುತಂತಿಯ ಮಿಡಿತ; ಗುರುಪೂರ್ಣಿಮೆಯ ದಿನ ಸಿಕ್ಕ ಗುರು ನಾರಾಯಣ ಪಂಡಿತರು

Violin : ವಯೋಲಿನ್ ವಾದ್ಯವು ಇನ್ನೂ ಹಿಂದೂಸ್ತಾನಿ ಪದ್ಧತಿಗೆ ಹೊಂದಿಕೊಳ್ಳುವ ಸಮಯದಲ್ಲಿ ವಯೋಲಿನ್ ಹಿಡಿದ ನಾರಾಯಣ ಪಂಡಿತರು, ಅನೇಕ ತಂತ್ರಕಾರಿ ಮತ್ತು ಗಾಯಕಿ ಅಂಶಗಳನ್ನು ತಮ್ಮ ವಾದ್ಯದಲ್ಲಿ ಅಳವಡಿಸಿಕೊಂಡವರು.

Music: ನಾಕುತಂತಿಯ ಮಿಡಿತ; ಗುರುಪೂರ್ಣಿಮೆಯ ದಿನ ಸಿಕ್ಕ ಗುರು ನಾರಾಯಣ ಪಂಡಿತರು
ಕಲಾವಿದ ನಾರಾಯಣ ಪಂಡಿತ
Follow us
ಶ್ರೀದೇವಿ ಕಳಸದ
|

Updated on:Mar 17, 2022 | 2:08 PM

ನಾಕುತಂತಿಯ ಮಿಡಿತ | Naakutantiya Midita : ಧಾರವಾಡದ ಸಾಧನಕೇರಿಯಲ್ಲಿದ್ದ ಗುರು ಚಂದ್ರಶೇಖರ ಪುರಾಣಿಕಮಠರ ಬಳಿ ಕಲಿಯುತ್ತಿದ್ದಾಗ ಗುರುಪೂರ್ಣಿಮೆಯ ಸಂಗೀತ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದವರು ನಾರಾಯಣ ಪಂಡಿತರು. ಅಲ್ಲಿಯವರೆಗೆ ಹೊಸ ರಾಗ-ಹೊಸ ಬಂದಿಶ್‌ಗಳನ್ನು ಕಲಿಯುವುದು, ಸಂಗೀತ ಪರೀಕ್ಷೆ-ಸ್ಪರ್ಧೆಗಳಲ್ಲಿ ಭಾಗವಹಿಸುವುದು, ಸಂಗೀತ ಕಛೇರಿಗಳನ್ನು ಕೇಳಿ ನೊಟೇಷನ್ ಬರೆದುಕೊಳ್ಳುವುದು, ಇವುಗಳಲ್ಲಿ ತೊಡಗಿದ್ದ ನಾನು, ಸಂಗೀತವನ್ನು ನೋಡಲು ಹೊಸ ದೃಷ್ಟಿಯೊಂದನ್ನು ಕೊಡಬಲ್ಲ ನಾರಾಯಣ ಪಂಡಿತರನ್ನು ಆ ದಿನ ನೋಡಿದೆ. ಮುಂದೆ ಅವರು ಗುರುವಾಗಿ ಒದಗಿ ಇದೇ ಜಾಡನ್ನು ಹಿಡಿದು ಸಾಗಲು ಮಾರ್ಗದರ್ಶಿಯಾದರು, ಪ್ರೀತಿಯ ‘ಅಜ್ಜ’ನಾದರು. ಗುರುಪೂರ್ಣಿಮೆಯ ದಿನ ಅವರು ಮಾತನಾಡಿದ್ದು, ಸಂಗೀತವು ಸಾಗಿ ಬಂದ ದಾರಿಯ ಕುರಿತು. ಸಂಗೀತದ ಈ ಯಾತ್ರೆಯನ್ನು ಅವರು ‘ಸ್ಥೂಲತೆಯಿಂದ ಸೂಕ್ಷ್ಮತೆಯೆಡೆಗಿನ ಸಂಗೀತದ ಪ್ರವಾಸ’ ಎಂದು ಕರೆದು ಅದನ್ನು ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸಲು ಅನೇಕ ಧ್ರುಪದ್ ಬಂದಿಶ್‌ಗಳನ್ನು, ಒಂದು ರಾಗದ ವಿವಿಧ ರೂಪಗಳನ್ನು ತೋರಿಸುವ ಆ ರಾಗದಲ್ಲಿನ ಹಲವು ಬಂದಿಶ್‌ಗಳನ್ನು ಹಾಡಿ ತೋರಿಸಿದರು. ಶ್ರೀಮತಿ ದೇವಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದೆ (Shrimathi Devi)

(ಮಿಡಿತ 6, ಭಾಗ 1)

ಅವರು ಹಾಡಿದ ಬಂದಿಶ್‌ಗಳಲ್ಲಿ ಕೆಲವನ್ನು ಮೊದಲು ಕೇಳಿದ್ದೆನಾದರೂ, ಪಂಡಿತರು ಅವನ್ನು ಹಾಡುವ ರೀತಿ ಬೇರೆಯದಾಗಿತ್ತು, ಮೊದಲೆಲ್ಲೂ ಕೇಳದ್ದಾಗಿತ್ತು. ಯಾವುದೇ ಒಂದು ಬಂದಿಶ್‌ನ್ನು ಹಾಡುವಾಗ ಅವರು ಆ ರಾಗದ ಸೂಕ್ಷ್ಮಾತಿಸೂಕ್ಷ್ಮ ಚಲನೆಯಿಂದ ಬಂದಿಶ್‌ನ್ನು ಶೃಂಗರಿಸುತ್ತಿದ್ದರು. ಸ್ವರ, ಲಯ, ಭಾವಗಳಲ್ಲಿ ಸಣ್ಣ-ಪುಟ್ಟ ಬದಲಾವಣೆ ಮಾಡುತ್ತಾ ಬಂದಿಶ್‌ನ ಶಬ್ದಗಳನ್ನು ಅವರು ಆಟವಾಡಿಸುವ ರೀತಿ ‘ಆಹಾ’ ಎನಿಸುವಂತಿರುತ್ತಿತ್ತು. ಬಂದಿಶ್ ನಲ್ಲಿನ ರಾಗ-ಸ್ವರ-ಲಯ-ಸಾಹಿತ್ಯಗಳ ಅತ್ಯಂತ ಸೂಕ್ಷ್ಮ ಸ್ತರದಲ್ಲಿ ವಿಹರಿಸಬಲ್ಲವರಾದ ಪಂಡಿತರ ನೋಟ ಮತ್ತು ಗಾಯನವೆರಡೂ ರಾಗದ ವ್ಯಾಕರಣವನ್ನು ಮೀರಿ, ತುಂಬಾ ಎತ್ತರದಲ್ಲಿರುತ್ತಿತ್ತು. ಅವರ ಸಂಗೀತದಲ್ಲಿನ ಎಸ್ಥೆಟಿಕ್ಸ್ ತುಂಬಾ ಉತ್ಕೃಷ್ಟವಾದದ್ದು.

ಪುರಾಣಿಕಮಠ್ ಸರ್ ಬಳಿ ತುಂಬಾ ವರ್ಷಗಳಿಂದ ಸಂಗೀತಾಭ್ಯಾಸ ಮಾಡುತ್ತಿದ್ದ ಡಾ. ಶಾರದಾ ಭಟ್ (ಧಾರವಾಡ ವಿ.ವಿಯ ಸಂಖ್ಯಾಶಾಸ್ತ್ರ ಉಪನ್ಯಾಸಕಿ) ನಾರಾಯಣ ಪಂಡಿತರ ಬಳಿಯೂ ಸಂಗೀತ ಕಲಿಯುತ್ತಿದ್ದ ಕಾರಣ, ನನಗೆ ಅವರ ಬಳಿ ಹೋಗಲು ಉತ್ತೇಜನ ದೊರಕಿತು. ಪಂಡಿತರಿಗೆ ಫೋನ್ ಮಾಡಿ ಮಾತನಾಡಿ, ಅವರಿದ್ದ ಹೊನ್ನಾವರದ ಸ್ನೇಹಕುಂಜಕ್ಕೆ ಹೋದಾಗ, ಮಣಿಪಾಲದ ಪ್ರಸಿದ್ಧ ಗಾಯಕ, ಮುಂದೆ ನನಗೂ ಮಾರ್ಗದರ್ಶನ ಮಾಡಿದ ರವಿಕಿರಣ್ ಸರ್ ಅಲ್ಲಿದ್ದರು. ಹೀಗೆ ಒಂದೇ ದಿನ ನಾವಿಬ್ಬರೂ ಅಜ್ಜನನ್ನು ಅರಸಿ ಬಂದಿದ್ದೆವು. ಮುಂದೆ ನನಗೆ ಆದಾಗಲೆಲ್ಲಾ ಒಂದೊಂದು ವಾರ ಸ್ನೇಹಕುಂಜದಲ್ಲಿ ಉಳಿದುಕೊಂಡು ಅವರ ಬಳಿ ನನ್ನ ಸಾಮರ್ಥ್ಯಾನುಸಾರ ಏನೆಲ್ಲಾ ಕಲಿತೆನೋ, ಎಷ್ಟೆಲ್ಲಾ ವಿಚಾರಗಳನ್ನು ತಿಳಿದುಕೊಂಡೆನೋ ಅವೆಲ್ಲಾ ಬಹು ಅಮೂಲ್ಯವಾದವು ಎಂಬುದನ್ನು ಈಗ ದಿನ ದಿನವೂ ಅರಿಯುತ್ತಿದ್ದೇನೆ.

ಇದನ್ನೂ ಓದಿ : ನಾಕುತಂತಿಯ ಮಿಡಿತ: ಕ್ಯಾಸೆಟ್​ ಸುರುಳಿ ಬಿಚ್ಚಿದ ಧಾರವಾಡದ ಅಹೋರಾತ್ರಿ ಸಂಗೀತ ಸಭೆಯ ನೆನಪುಗಳ ಮೆಲುಕು

Naakutantiya Midita Column Classical Vocalist Shrimathi Devi introduced Hindustani Musician Narayan Pandith

ಪಂಡಿತ್ ಕುಮಾರ ಗಂಧರ್ವರೊಂದಿಗೆ ತಂಬೂರಿ ಸಾಥಿಯಲ್ಲಿ ನಾರಾಯಣರು

ಗೋಕರ್ಣ ಮೂಲದವರಾದ ನಾರಾಯಣ ಪಂಡಿತರ ತಂದೆ ವಿಘ್ನೇಶ್ವರ ಪಂಡಿತರು ಉತ್ತಮ ವಯೋಲಿನ್ ವಾದಕರಾಗಿದ್ದವರು. ವಯೋಲಿನ್ ವಾದ್ಯವು ಇನ್ನೂ ಹಿಂದೂಸ್ತಾನಿ ಪದ್ಧತಿಗೆ ಹೊಂದಿಕೊಳ್ಳುವ ಸಮಯದಲ್ಲಿ ವಯೋಲಿನ್ ಹಿಡಿದ ಇವರು, ಅನೇಕ ತಂತ್ರಕಾರಿ ಮತ್ತು ಗಾಯಕಿ ಅಂಶಗಳನ್ನು ತಮ್ಮ ವಾದ್ಯದಲ್ಲಿ ಅಳವಡಿಸಿಕೊಂಡವರು. ದಕ್ಷಿಣ ಕನ್ನಡದವರಾದ ಫಿಡ್ಲು ಕೃಷ್ಣರಾಯರು ಇವರ ಗುರುಗಳು. ಮುಂದೆ ವಿಘ್ನೇಶ್ವರ ಪಂಡಿತರು ಮುಂಬೈನ ದೇವಧರ್ ಸ್ಕೂಲ್ ನಲ್ಲಿ ಸಂಗೀತ ಶಿಕ್ಷಕರಾದರು. ತಮ್ಮ ತಂದೆಯ ಬಳಿ ವಯೋಲಿನ್ ವಾದನವನ್ನು ಸಮರ್ಥವಾಗಿ ಕಲಿತ ನಾರಾಯಣ ಪಂಡಿತರಿಗೆ ಗಾಯನದ ಬಗ್ಗೆಯೂ ತುಂಬಾ ಒಲವು. ಮುಂದೆ ದೇವಧರ್ ಸ್ಕೂಲ್‌ಗೆ ಭೇಟಿ ಕೊಡುತ್ತಿದ್ದ ಕುಮಾರ ಗಂಧರ್ವ, ಬಡೆ ಗುಲಾಂ ಅಲಿ ಖಾನ್ ಮೊದಲಾದವರ ಒಡನಾಟ ನಾರಾಯಣ ಪಂಡಿತರಿಗೆ ದೊರಕಿ, ಖ್ಯಾಲ್ ಗಾಯನದ ಜೊತೆಗೆ ಠುಮ್ರಿ, ಟಪ್ಪಾಗಳ ಶಿಕ್ಷಣವೂ ಚೆನ್ನಾಗಿ ಆಯಿತು.

ವೃತ್ತಿಯಲ್ಲಿ ವಕೀಲರಾದ ನಾರಾಯಣ ಪಂಡಿತರು, ವಯೋಲಿನ್ ಬಗ್ಗೆ ಮರಾಠಿಯಲ್ಲಿ ಬರೆದ ಪುಸ್ತಕ, ಕಾಲೇಜುಗಳ ಪಠ್ಯಪುಸ್ತಕವಾಗಿತ್ತು ಮತ್ತು ಅದು ವಯೋಲಿನ್ ವಾದಕರು ಇಂದಿಗೂ ಆಧಾರಕ್ಕಾಗಿ ಬಳಸುವ ಪುಸ್ತಕವಾಗಿದೆ. ಭೀಮಸೇನ್‌ಜೀ. ಮಾಣಿಕ್ ವರ್ಮಾ, ರಾಜಗುರು ಸರಳಾ ಭಿಡೆ(ಅಶ್ವಿನಿ ಭಿಡೆ ಅವರ ಸೋದರತ್ತೆ) ಮೊದಲಾದ ಅನೇಕ ಸಂಗೀತಗಾರರ ಜೊತೆಗೆ ನಿಕಟ ಸಂಪರ್ಕದಲ್ಲಿದ್ದ ಪಂಡಿತರ ಮೇಲೆ ಆಳವಾದ ಪ್ರಭಾವ ಬೀರಿದ್ದು ಪಂ.ಕುಮಾರ ಗಂಧರ್ವರ ಗಾಯನ. ಕುಮಾರರ ಗಾಯನ ಮತ್ತು ಸಂಗೀತದ ಕುರಿತ ಅವರ ಚಿಂತನೆಗಳ ಹುಚ್ಚು ಪಂಡಿತರಿಗೆ ಎಷ್ಟು ಹಿಡಿದಿತ್ತೆಂದರೆ ತಿಂಗಳುಗಳ ಕಾಲ ಕೋರ್ಟ್ ಕೆಲಸಕ್ಕೆ ರಜೆ ಹಾಕಿ ಕುಮಾರರು ವಾಸವಿದ್ದ ದೇವಾಸಕ್ಕೆ ಹೋಗಿ ಬಿಡುತ್ತಿದ್ದರಂತೆ. ಅವರ ಕಾರ್ಯಕ್ರಮಗಳಲ್ಲಿ ತಂಬೂರಕ್ಕೆ ಕೂತ ಪಂಡಿತರ ಚಿತ್ರವನ್ನು ನೋಡಬಹುದು. ಪಾರಂಪರಿಕ ಬಂದಿಶ್‌ಗಳ ದೊಡ್ಡ ಸಂಗ್ರಹ ಪಂಡಿತರ ಬಳಿ ಇತ್ತು. ಅದರಲ್ಲಿ ಖ್ಯಾಲ್ ಮಾತ್ರವಲ್ಲದೆ ಠುಮ್ರಿ, ಟಪ್ಪಾ, ದಾದ್ರಾ ಬಂದಿಶ್‌ಗಳಿದ್ದವು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಹಿಂದಿನ ಮಿಡಿತ : Music: ನಾಕುತಂತಿಯ ಮಿಡಿತ; ಅರೆ ವ್ಹಾ ಕ್ಯಾ ಬಾತ್ ಹೈ! ಕಲಾವಿದರ ಜೀವಸೆಲೆ ಈ ಆಪ್ತಕೋಣೆ

ಎರಡೂ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/naakutantiya-midita

Published On - 1:24 pm, Thu, 17 March 22

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್