Chanakya Niti: ಮಾನಸಿಕ ಒತ್ತಡದಿಂದ ಮುಕ್ತಿ ಪಡೆದು ನೆಮ್ಮದಿಯ ಜೀವನ ನಡೆಸಲು ಈ ಸಲಹೆಗಳನ್ನು ಪಾಲಿಸಿ
ಇಂದಿನ ವೇಗದ ಜೀವನದಲ್ಲಿ ಕೆಲಸದ ಒತ್ತಡ, ಸಂಬಂಧ ಮತ್ತು ಕುಟುಂಬದಲ್ಲಿ ಉಂಟಾಗುವ ಮನಸ್ತಾಪ, ಜಗಳ, ಇತರರರಿಂದ ಅತಿಯಾಗಿ ನಿರೀಕ್ಷಿಸುವುದು ಇವೆಲ್ಲದರ ಕಾರಣದಿಂದ ಅನೇಕರು ಮಾನಸಿಕವಾಗಿ ಕುಗ್ಗಿ ಹೋಗಿದ್ದು, ನೆಮ್ಮದಿಗಾಗಿ ಹಂಬಲಿಸುತ್ತಿದ್ದಾರೆ. ಇದೇ ರೀತಿ ನೀವು ಕೂಡ ಯಾವುದೇ ಮಾನಸಿಕ ಒತ್ತಡವಿಲ್ಲದೆ ನೆಮ್ಮದಿಯ ಜೀವನ ನಡೆಸಲು ಬಯಸುತ್ತೀರಾ? ಹಾಗಿದ್ರೆ ಆಚಾರ್ಯ ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿ.

ಇಂದಿನ ಈ ಬ್ಯುಸಿ ಜೀವನದಲ್ಲಿ ಪ್ರತಿಯೊಬ್ಬರೂ ಸಹ ಒಂದಲ್ಲಾ ಒಂದು ವಿಚಾರಕ್ಕೆ ಒತ್ತಡಕ್ಕೊಳಗಾಗುತ್ತಿದ್ದಾರೆ (stress). ಕೆಲವರಿಗೆ ಕೆಲಸದ ಟೆನ್ಷನ್ ಆದ್ರೆ, ಇನ್ನೂ ಕೆಲವರಿಗೆ ಆರ್ಥಿಕ ಪರಿಸ್ಥಿತಿಯನ್ನಯ ನಿಭಾಯಿಸುವ ಒತ್ತಡ, ಇನ್ನೂ ಕೆಲವೊಬ್ಬರಿಗೆ ಕೌಟುಂಬಿಕ ಕಲಹಗಳಿಗೆ ಹೇಗಪ್ಪಾ ಮುಕ್ತಿ ನೀಡೋದು ಅನ್ನೋ ಟೆನ್ಷನ್. ಹೀಗೆ ಪ್ರತಿಯೊಬ್ಬರೂ ಒಂದಲ್ಲಾ ಒಂದು ಕಾರಣದಿಂದ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ. ನೀವು ಕೂಡ ಇದೇ ರೀತಿ ಒತ್ತಡಕ್ಕೊಳಗಾಗಿದ್ದೀರಾ? ಹಾಗಿದ್ರೆ ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿ. ಇದು ನಿಮ್ಮನ್ನು ಭಾವನಾತ್ಮಕವಾಗಿ ಬಲಶಾಲಿಯನ್ನಾಗಿ ಮಾಡುವುದಲ್ಲದೆ, ಕೋಪ, ಒತ್ತಡ ಮತ್ತು ಭಯವನ್ನು ಹೇಗೆ ಜಯಿಸಲು ಸಹಾಯ ಮಾಡುತ್ತದೆ. ಮುಖ್ಯವಾಗಿ ನೆಮ್ಮದಿಯ ಜೀವನ ನಡೆಸಲು ತುಂಬಾನೇ ಸಹಕಾರಿಯಾಗಿದೆ.
ಒತ್ತಡಮುಕ್ತ ಜೀವನ ನಡೆಸಲು ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿ:
ಭಾವನೆಗಳಿಗೆ ತಕ್ಷಣ ಪ್ರತಿಕ್ರಿಯಿಸುವುದನ್ನು ತಪ್ಪಿಸಿ:
ಆಚಾರ್ಯ ಚಾಣಕ್ಯರ ಪ್ರಕಾರ, ಕೋಪ, ಭಯ ಮತ್ತು ದುಃಖದಂತಹ ಭಾವನೆಗಳು ಇರುವುದು ಸಹಜ, ಆದರೆ ಅವುಗಳಿಗೆ ತಕ್ಷಣ ಪ್ರತಿಕ್ರಿಯಿಸುವುದು ದೌರ್ಬಲ್ಯದ ಸಂಕೇತ. ಆಫೀಸ್ ಅಥವಾ ಮನೆಯಾಗಿರಲಿ ಎಲ್ಲೇ ಆದರೂ ಮನಸ್ತಾಪ, ಸಣ್ಣಪುಟ್ಟ ಕಿರಿಕ್‌ಗಳು ನಡೆದಾಗ ತಕ್ಷಣಕ್ಕೆ ಪ್ರತಿಕ್ರಿಯಿಸಬೇಡಿ. ಏಕೆಂದರೆ ಸಣ್ಣ ವಾದವು ಸಹ ಮನಸ್ಥಿತಿಯನ್ನು ಹಾಳು ಮಾಡುತ್ತದೆ. ಹಾಗಾಗಿ ತಕ್ಷಣ ಪ್ರತಿಕ್ರಿಯಿಸುವ ಬದಲು, ಶಾಂತವಾಗಿ ಯೋಚಿಸಿ, ಮಾತನಾಡಿ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲೂ ಶಾಂತವಾಗಿರಿ. ಈ ಅಭ್ಯಾಸವು ನಿಮ್ಮ ಮಾನಸಿಕ ಶಕ್ತಿಯನ್ನು ಬಲಪಡಿಸುತ್ತದೆ.
ಇತರರನ್ನು ಮೆಚ್ಚಿಸುವ ಅಭ್ಯಾಸವನ್ನು ಬಿಟ್ಟುಬಿಡಿ:
ಹೆಚ್ಚಿನವರು ತಮ್ಮ ಸ್ವಂತ ಸಂತೋಷಕ್ಕಿಂತ ಇತರರ ಅಭಿಪ್ರಾಯಗಳಿಗೆ, ಇತತರ ಸಂತೋಷಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಮತ್ತು ಇನ್ನೂ ಕೆಲವರು ಇತರರನ್ನು ಮೆಚ್ಚಿಸುವ ಸಲುವಾಗಿಯೇ ಬದುಕುತ್ತಿದ್ದಾರೆ. ಹೀಗೆ ಇತರರನ್ನು ಮೆಚ್ಚಿಸುವುದು, ಎಲ್ಲದಕ್ಕೂ ಇತರರ ಅನುಮತಿ ಪಡೆಯಲು ಕಾಯುವುದು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಹಾಗಾಗಿ ಎಲ್ಲರ ಸಲಹೆಯನ್ನು ಕೇಳುವ ಅಗತ್ಯವಿಲ್ಲ. ನಿಮ್ಮ ಇಷ್ಟದ ಪ್ರಕಾರ ನೀವು ಜೀವನವನ್ನು ನಡೆಸಿ, ನಿಮ್ಮ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳಿ, ಇತರರ ಅಭಿಪ್ರಾಯಗಳಿಗೆ ತಲೆ ಕೆಡಿಸಿಕೊಳ್ಳಬೇಡಿ, ಹೀಗೆ ಮಾಡಿದರೆ ಯಾರ ಕಿರಿಕಿರಿಯೂ ಇಲ್ಲದೆ ನೀವು ನೆಮ್ಮದಿಯ ಜೀವನವನ್ನು ನಡೆಸಬಹುದು.
ಸ್ವಾವಲಂಬಿಗಳಾಗಿರಿ:
ಸ್ವಾವಲಂಬನೆಯೇ ಅತೀದೊಡ್ಡ ಶಕ್ತಿ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಮಾನಸಿಕವಾಗಿ, ಆರ್ಥಿಕವಾಗಿ ಅಥವಾ ಭಾವನಾತ್ಮಕವಾಗಿ ಇತರರನ್ನು ಅವಲಂಬಿಸಿರುವ ಯಾರಾದರೂ ಬೇಗನೆ ಎದೆಗುಂದುತ್ತಾರೆ, ಅವರು ಯಾವಾಗಲೂ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಾರೆ. ಹೀಗಿರುವಾ ನೀವೇ ನಿಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದಾಗ, ನಿಮ್ಮ ಆತ್ಮವಿಶ್ವಾಸ ಬೆಳೆಯುತ್ತದೆ.
ಇದನ್ನೂ ಓದಿ: ಒತ್ತಡ ರಹಿತ ಜೀವನ ನಿಮ್ಮದಾಗಲು ದೈನಂದಿನ ದಿನಚರಿಯಲ್ಲಿ ತಪ್ಪದೇ ಈ ಅಭ್ಯಾಸಗಳನ್ನು ಪಾಲಿಸಿ
ವೈಫಲ್ಯವನ್ನು ಒಂದು ಅನುಭವವಾಗಿ ನೋಡಿ:
ಜೀವನದಲ್ಲಿ ಸೋಲ, ಗೆಲುವು ಇದ್ದಿದ್ದೆ. ಹೀಗಿರುವಾಗ ಸೋಲುಗಳಿಗೆ ಹೆದರಿ, ಅಯ್ಯೋ ನನ್ನ ಕೈಯಿಂದ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಮಾನಸಿಕ ಒತ್ತಡಕ್ಕೆ ಒಳಗಾದರೇ ಏನನ್ನೂ ಮಾಡಲು ಸಾಧ್ಯವಿಲ್ಲ. ಹಾಗಾಗಿ ವೈಫಲ್ಯಗಳನ್ನು ಒಂದು ಅನುಭವವಾಗಿ ನೋಡಿ, ಅದರಿಂದ ಕಲಿಯಿರಿ. ಯಾವುದಕ್ಕೂ ತಲೆಕೆಡಿಸಿಕೊಳ್ಳಲು ಹೋಗಬೇಡಿ, ಹೀಗೆ ಮಾಡಿದರೆ ಮಾತ್ರ ನೆಮ್ಮದಿಯಿಂದ ಇರಲು ಸಾಧ್ಯ.
ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಿ:
ಯಶಸ್ಸು ಮತ್ತು ಮಾನಸಿಕ ಶಾಂತಿಗೆ ಶಿಸ್ತು ಮುಖ್ಯ ಎಂದು ಪರಿಗಣಿಸಲಾಗಿದೆ. ಸಮಯಕ್ಕೆ ಸರಿಯಾಗಿ ಎಚ್ಚರಗೊಳ್ಳುವುದು, ಆಲಸ್ಯದ ಅಭ್ಯಾಸವನ್ನು ತೊಡೆದುಹಅಕುವುದು ಮತ್ತು ಗುರಿಗಳನ್ನು ನಿಗದಿಪಡಿಸುವುದು ಮುಂತಾದ ಸಣ್ಣ ಅಭ್ಯಾಸಗಳು ನಿಮ್ಮ ವ್ಯಕ್ತಿತ್ವವನ್ನು ಬಲಪಡಿಸುತ್ತವೆ. ಶಿಸ್ತಿನ ವ್ಯಕ್ತಿಯು ಕಷ್ಟದ ಸಮಯದಲ್ಲೂ ತನ್ನನ್ನು ತಾನು ಉತ್ತಮವಾಗಿ ನಿಭಾಯಿಸಿಕೊಳ್ಳುತ್ತಾನೆ. ಮತ್ತು ಆತ ಮಾನಸಿಕ ಒತ್ತಡಕ್ಕೂ ಒಳಗಾಗುವುದಿಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




