ಹರಿಯಾಣ ಚುನಾವಣೆಯಲ್ಲಿ ಅಕ್ರಮ; ಕಾಂಗ್ರೆಸ್ ಆರೋಪ ತಳ್ಳಿಹಾಕಿದ ಚುನಾವಣಾ ಆಯೋಗ
ಹರಿಯಾಣ ಚುನಾವಣೆಯಲ್ಲಿ ಅಕ್ರಮಗಳು ನಡೆಸಿವೆ ಎಂಬ ಕಾಂಗ್ರೆಸ್ನ ಆರೋಪಗಳನ್ನು ಭಾರತದ ಚುನಾವಣಾ ಆಯೋಗವು ತಳ್ಳಿ ಹಾಕಿದೆ. ಈ ಆರೋಪ ಆಧಾರರಹಿತವಾದುದು ಎಂದು ಹೇಳಿರುವ ಚುನಾವಣಾ ಆಯೋಗ ಚುನಾವಣಾ ಪ್ರಕ್ರಿಯೆಯಲ್ಲಿ ಸಾರ್ವಜನಿಕ ವಿಶ್ವಾಸವನ್ನು ಅಡ್ಡಿಪಡಿಸುವಂತಹ ಆಧಾರರಹಿತವಾದ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದೆ.
ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮವಾಗಿದೆ ಎಂಬ ಕಾಂಗ್ರೆಸ್ನ ಆರೋಪವನ್ನು ಕೇಂದ್ರ ಚುನಾವಣಾ ಆಯೋಗ ತಿರಸ್ಕರಿಸಿದೆ. ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಕಾಂಗ್ರೆಸ್ ನಾಯಕರ ಆರೋಪಗಳನ್ನು ಚುನಾವಣಾ ಆಯೋಗ ತಳ್ಳಿ ಹಾಕಿದೆ. ಆ ಆರೋಪಗಳನ್ನು ಆಧಾರರಹಿತ ಎಂದು ಆಯೋಗ ಹೇಳಿದೆ.
ಕಾಂಗ್ರೆಸ್ ಪಕ್ಷವನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ, ಭಾರತೀಯ ಚುನಾವಣಾ ಆಯೋಗ ಆಧಾರರಹಿತ ಆರೋಪ ಮಾಡುವುದನ್ನು ತಡೆಯುವಂತೆ ಒತ್ತಾಯಿಸಿದೆ ಮತ್ತು ಚುನಾವಣಾ ಪ್ರಕ್ರಿಯೆಗಳ ಸುತ್ತ ಅಸ್ಪಷ್ಟ ಅನುಮಾನಗಳನ್ನು ಹುಟ್ಟುಹಾಕುವ ಕಾಂಗ್ರೆಸ್ನ ಪ್ರವೃತ್ತಿಯನ್ನು ಟೀಕಿಸಿದೆ.
ಇದನ್ನೂ ಓದಿ: ಕಾಂಗ್ರೆಸ್ನ ಸತೀಶ್ ಸೈಲ್ಗೆ 7 ವರ್ಷ ಜೈಲು: ಬೇಲೆಕೇರಿ ಅದಿರು ಅಕ್ರಮ ಸಾಗಾಟ ಪ್ರಕರಣದಲ್ಲಿ ಮಹತ್ವದ ತೀರ್ಪು
ಇಂತಹ ಬೇಜವಾಬ್ದಾರಿ ಆರೋಪಗಳು, ವಿಶೇಷವಾಗಿ ಮತದಾನ ಮತ್ತು ಎಣಿಕೆಯ ದಿನಗಳಂತಹ ಸೂಕ್ಷ್ಮ ಅವಧಿಗಳಲ್ಲಿ ಸಾರ್ವಜನಿಕ ಅಶಾಂತಿ ಮತ್ತು ಅವ್ಯವಸ್ಥೆಯನ್ನು ಪ್ರಚೋದಿಸಬಹುದು ಎಂದು ಆಯೋಗವು ಹೇಳಿದೆ. ಕಳೆದ ವರ್ಷದಲ್ಲಿ ಐದು ನಿರ್ದಿಷ್ಟ ನಿದರ್ಶನಗಳನ್ನು ಉಲ್ಲೇಖಿಸಿರುವ ಚುನಾವಣಾ ಆಯೋಗ ವಿಶ್ವಾಸಾರ್ಹ ಪುರಾವೆಗಳಿಲ್ಲದ ಚುನಾವಣಾ ಕಾರ್ಯಾಚರಣೆಗಳ ವಿರುದ್ಧ ಟೀಕೆಗಳನ್ನು ಮಾಡದಂತೆ ಕಾಂಗ್ರೆಸ್ಗೆ ಸೂಚನೆ ನೀಡಿದೆ.
ಇದನ್ನೂ ಓದಿ: ವಯನಾಡ್ ಉಪಚುನಾವಣೆಗೆ ಪ್ರಿಯಾಂಕಾ ಗಾಂಧಿ ಪ್ರಚಾರ; ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ
ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‌ಗಳಲ್ಲಿ (ಇವಿಎಂ) ಬ್ಯಾಟರಿ ಡಿಸ್‌ಪ್ಲೇ ಸ್ಥಿತಿಯ ಬಗ್ಗೆ ಎದ್ದಿರುವ ವದಂತಿಗಳನ್ನು ಉದ್ದೇಶಿಸಿರುವ ಚುನಾವಣಾ ಆಯೋಗ ಬ್ಯಾಟರಿ ವೋಲ್ಟೇಜ್ ಮತ್ತು ಸಾಮರ್ಥ್ಯವು ಮತ ಎಣಿಕೆ ಪ್ರಕ್ರಿಯೆ ಅಥವಾ ಯಂತ್ರಗಳ ಸಮಗ್ರತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ