Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಮಳೆ ಅಬ್ಬರ: ಕೆರೆಯಂತಾದ ರಸ್ತೆಗಳು, ಹಲವೆಡೆ ಸಂಚಾರ ಅಸ್ತವ್ಯಸ್ತ

ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ರಾಮಮೂರ್ತಿನಗರ, ಕೆಆರ್ ಪುರ, ಕಸ್ತೂರಿನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಸಂಚಾರ ಪೊಲೀಸರು ನಿಧಾನಗತಿಯಲ್ಲಿ ಸಂಚರಿಸುವಂತೆ ಸಲಹೆ ನೀಡಿದ್ದಾರೆ. ಮಾರ್ಚ್ 27 ರವರೆಗೆ ಮೋಡ ಕವಿದ ವಾತಾವರಣ ಮತ್ತು ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಗಂಗಾಧರ​ ಬ. ಸಾಬೋಜಿ
|

Updated on:Mar 22, 2025 | 6:21 PM

ಕರ್ನಾಟಕದಾದ್ಯಂತ ಮಾರ್ಚ್ 27 ರವರೆಗೆ ಮೋಡ ಕವಿದ ವಾತಾವರಣವಿರಲಿದ್ದು, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ ಇದೆ. ಬಿಸಿಲ ಬೇಗೆಯಿಂದ ಬೆಂದಿದ್ದ ಬೆಂಗಳೂರಿಗೆ ಇಂದು ಮಳೆರಾಯ ತಂಪೆರೆದಿದೆ. ನಗರದ ಹಲವೆಡೆ ಧಾರಕಾರ ಮಳೆ ಆಗಿದೆ. ಕೆಲ ಸ್ಥಳಗಳಲ್ಲಿ ರಸ್ತೆ ತುಂಬಾ ಮಳೆ ನೀರು ತುಂಬಿಕೊಂಡಿದ್ದು, ಸಾವರರು ಪರದಾಡಿದರು. ಹೀಗಾಗಿ ಬೆಂಗಳೂರು ಸಂಚಾರ ಪೊಲೀಸರು ಸಂಚಾರ ಸಲಹೆ ನೀಡಿದ್ದು, ನಿಧಾನಗತಿ ಸಂಚರಿಸುವಂತೆ ತಿಳಿಸಿದ್ದಾರೆ.

1 / 7
ಹೊರಮವು, ಇಂದ ಕೆಆರ್​ ಪುರ ಕಡೆಗೆ, ರಾಮಮುರ್ತಿ ನಗರ ಇಂದ, ಬಾಣಸವಾಡಿ  ಕಡೆಗೆ, ಕೋಗಿಲು ಸಿಗ್ನಲ್, ಇಂದ ಕೋಗಿಲು ವಿಲೇಜ್​​ ಕಡೆಗೆ ಮತ್ತು ಕಲ್ಯಾಣ ನಗರ ಕೆಳಸೇತುವೆ ಇಂದ ಬಾಬುಸಾಪಾಳ್ಯ ಸ್ಥಳಗಳಲ್ಲಿ ಮಳೆ ನೀರು ನಿಂತುಕೊಂಡಿದೆ.

2 / 7
ರಾಮಮೂರ್ತಿನಗರ ಬ್ರಿಡ್ಜ್ ಮೇಲೆ ಮಳೆ ನೀರು ನಿಂತಿರುವುದರಿಂದ ರಾಮಮೂರ್ತಿನಗರ - ಬಾಣಸವಾಡಿ ಮುಖ್ಯರಸ್ತೆ ಕಡೆಗೆ ಹೋಗುವ ವಾಹನಗಳ ಸಂಚಾರ ನಿಧಾನಗತಿಯಲ್ಲಿರುತ್ತದೆ. ತೆರವುಗೊಳಿಸಲು ಸಂಚಾರಿ ಪೊಲೀಸರು ಮುಂದಾಗಿದ್ದಾರೆ.

3 / 7
ಕಸ್ತೂರಿ ನಗರ ಕಡೆಯಿಂದ ಎಂಎಂಟಿ ಜಂಕ್ಷನ್ (ಕೆಆರ್​​ ಪುರ) ಕಡೆಗೆ ಹೋಗುವ ಮಾರ್ಗದಲ್ಲಿ ಎಂಎಂಟಿ ಬಸ್ ನಿಲ್ದಾಣದ ಹತ್ತಿರ ಮಳೆ ನೀರು ನಿಂತಿರುವುದರಿಂದ ವೈಟ್‌ಫೀಲ್ಡ್‌, ಮಹದೇವಪುರ ಮತ್ತು ಕೆಆರ್​ ಪುರ ಕಡೆಗೆ ಹೋಗುವ ವಾಹನಗಳ ಸಂಚಾರ ನಿಧಾನಗತಿಯಲ್ಲಿರುತ್ತದೆ.

4 / 7
ಕೆಆರ್​ ಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದಾಗಿ ಕಸ್ತೂರಿನಗರ ರಿಂಗ್ ರಸ್ತೆ ಗ್ರಾಂಡ್ ಸೀಸನ್ ಹೋಟೆಲ್ ಹತ್ತಿರದ ರಿಂಗ್ ರಸ್ತೆಯಲ್ಲಿ ಮಳೆ ನೀರು ನಿಂತು ಸಂಚಾರ ನಿಧಾನಗತಿ ಇದ್ದು ಇದರಿಂದ ಸಂಚಾರ ದಟ್ಟಣೆ ಹೆಚ್ಚಿದ್ದು ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.

5 / 7
ಅದೇ ರೀತಿಯಾಗಿ ನಾಗವಾರ ಕಡೆಯಿಂದ ಹೆಬ್ಬಾಳ ಕಡೆಗೆ ಮಳೆ ನೀರು ನಿಂತಿರುವುದರಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ.

6 / 7
ಯಲಹಂಕ ಕಾಫಿ ಡೇ ಬಳಿ ಕೂಡ ಮಳೆ ನೀರು ನಿಂತಿರುವುದರಿಂದ ವಿಮಾನ ನಿಲ್ದಾಣ ರಸ್ತೆಯ ಕಡೆಗೆ ನಿಧಾನಗತಿಯ ಸಂಚಾರವಿದೆ.

7 / 7

Published On - 6:17 pm, Sat, 22 March 25

Follow us