ಇದು ಮೋದಿ ಕಾಲ, ಎಲ್ಲವೂ ವೇಗವಾಗಿ ನಡೆಯುತ್ತೆ: ಡಿಕೆ ಶಿವಕುಮಾರ್ಗೆ ತೇಜಸ್ವಿ ಸೂರ್ಯ ಟಾಂಗ್
ದೆಹಲಿಯಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ಟಾಂಗ್ ನೀಡಿದ್ದಾರೆ. ಹಳದಿ ಲೈನ್ ಏಕೆ ಆತುರದಲ್ಲಿ ಮಾಡಿದರು ಅಂಥ ಬೈಯುತ್ತಿರುವವರು, ಇವರ ಕೊಡಗೆ ಏನು ಎಂದು ಪ್ರಶ್ನಿಸಿದ್ದಾರೆ. ನಾನು ಹೊಸ ತಲೆಮಾರಿನವ, ಹಾಗಾಗಿ ಬೇಗ ಕೆಲಸ ಆಗಬೇಕು ಎನ್ನುತ್ತೇನೆ. ಆದರೆ ವಿಳಂಬ ಮಾಡುವುದೇ ಕಾಂಗ್ರೆಸ್ ಪಕ್ಷದ ಕಥೆ ಎಂದು ಕಿಡಿಕಾರಿದ್ದಾರೆ.

ಬೆಂಗಳೂರು, ಆಗಸ್ಟ್ 06: ನಾನು ಹೊಸ ತಲೆಮಾರಿನವ, ಹಾಗಾಗಿ ಬೇಗ ಕೆಲಸ ಆಗಬೇಕು ಎನ್ನುವವನು. ಇಂದಿರಾ ಗಾಂಧಿ ಶಂಕುಸ್ಥಾಪನೆ ಮಾಡಿ, ಸೋನಿಯಾ ಗಾಂಧಿ ಉದ್ಘಾಟನೆ ಮಾಡುವ ಸಮಯ ಮುಗಿದಿದೆ. ಇದು ಮೋದಿ ಕಾಲ, ಎಲ್ಲವೂ ವೇಗವಾಗಿ ನಡೆಯುತ್ತವೆ. ಆದರೆ ವಿಳಂಬ ಮಾಡುವುದೇ ಕಾಂಗ್ರೆಸ್ ಪಕ್ಷದವರ ಕಥೆ ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಡಿಸಿಎಂ ಡಿಕೆ ಶಿವಕುಮಾರ್ಗೆ (DK Shivakumar) ಟಾಂಗ್ ನೀಡಿದ್ದಾರೆ.
ಹಳದಿ ಲೈನ್ ಮೆಟ್ರೋಗೆ ಇವರ ಕೊಡಗೆ ಏನು?
ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಹಳದಿ ಲೈನ್ ಏಕೆ ಆತುರದಲ್ಲಿ ಮಾಡಿದರು ಅಂಥ ಬೈಯುತ್ತಿರುವವರು, ಇವರ ಕೊಡಗೆ ಏನು? ಸಮಸ್ಯೆಗಳು ಇದ್ದಾಗ ಎಲ್ಲಿ ಹೋಗಿದ್ದರು ಇವರು. ಮೆಟ್ರೋಗೆ ನಾಲ್ಕು ವರ್ಷ ಎಂ.ಡಿ ಇರಲಿಲ್ಲ. ಬಿಎಂಆರ್ಸಿಎಲ್ ಎರಡು ವರ್ಷದಲ್ಲಿ ಅರ್ಧ ಡಜೆನ್ ಸಮಯ ಮುಹೂರ್ತ ಫಿಕ್ಸ್ ಮಾಡಿ, ಮುಂದೂಡಿಕೆ ಮಾಡಿದೆ ಎಂದರು.
ಇದನ್ನೂ ಓದಿ: ಮೆಟ್ರೋ ಹಳದಿ ಮಾರ್ಗ: ಚಾಲಕರಹಿತ ರೈಲಿನಲ್ಲಿ ಸಂಚರಿಸಿ ಪರಿಶೀಲಿಸಿದ ಡಿಸಿಎಂ ಡಿಕೆ ಶಿವಕುಮಾರ್
ವೇಗವಾಗಿ ಕೆಲಸ ಮಾಡುವ ಸಮಯ ಇದು. ಆಲಮಟ್ಟಿಗೆ ಶಾಸ್ತ್ರೀಯವರು ಅಡಿಗಲ್ಲು ಹಾಕಿ, ಮನಮೋಹನ್ ಸಿಂಗ್ ಉದ್ಘಾಟನೆ ಮಾಡಿದರು. ಕಾಂಗ್ರೆಸ್ನವರು ಈ ವೇಗದಲ್ಲಿ ದೇಶ ನಡೆಸಿದ್ದಾರೆ. ರಾಜ್ಯ ಸರ್ಕಾರಕ್ಕೆ ತುರ್ತು ಇಲ್ಲ. ಜಿರೋ ಟ್ರಾಫಿಕ್ನಲ್ಲಿ ಓಡಾಡುವವರಿಗೆ ಮೆಟ್ರೋ ಅವಶ್ಯಕತೆ ಬಗ್ಗೆ ಏನು ಗೊತ್ತಾಗುತ್ತೆ ಎಂದು ವಾಗ್ದಾಳಿ ಮಾಡಿದ್ದಾರೆ.
ಸಬರ್ಬನ್ ರೈಲು ಈಗಲೂ ಫುಲ್ ಟೈಮ್ ಎಂ.ಡಿ ಇಲ್ಲ. ನಾಲ್ಕು ಕಾರಿಡಾರ್ ಯೋಜನೆಗಳು ನಿಂತಿವೆ. ಟೆಂಡರ್ದಾರರು ಕೆಲಸ ನಿಲ್ಲಿಸಿದ್ದಾರೆ. ಇದು ರಾಜ್ಯ ಸರ್ಕಾರದ ಕಥೆ. ಶುಲ್ಕ ನಿಗದಿ ಸಮಿತಿಯ ವರದಿ ಈತನಕ ಹೊರ ಬಂದಿಲ್ಲ. ಈ ಕುರಿತು ನಾನು ಕೋರ್ಟಿಗೆ ಹೋಗಿದ್ದೇನೆ. ದೇಶದಲ್ಲೇ ಅತಿ ಹೆಚ್ಚು ದರವಿರುವ ಮೆಟ್ರೋ ಯಾವುದು ಅಂದರೆ ಅದು ಬೆಂಗಳೂರು ಮೆಟ್ರೋ. ಟಿಕೆಟ್ ದರ 130% ಜಾಸ್ತಿ ಮಾಡಿದರೆ ಸಾಮಾನ್ಯರ ಪಾಡೇನು? ರಾಜ್ಯ ಸರ್ಕಾರದ ಪಾಲು ಇಲ್ಲ ಅಂತಾ ನಾನು ಹೇಳುತ್ತಿಲ್ಲ, ಬದಲಿಗೆ ಮಾಡಬೇಕಾದ ಕೆಲಸ ಮಾಡುತ್ತಿಲ್ಲ ಎಂದು ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ತೇಜಸ್ವಿ ಸೂರ್ಯ ಕಿಡಿ
ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಬಿಜೆಪಿ ಮತ್ತು ನಾನು ಹೇಳುವುದು ಬಿಡಿ. ಪ್ರಕ್ರಿಯೆ ಸಮರ್ಪಕವಾಗಿ ಆಗಿದೆ ಎಂದು ಬಿಹಾರದ ಬಗ್ಗೆ ಸುಪ್ರೀಂಕೋರ್ಟ್ ಆದೇಶ ಮಾಡಿದೆ. ರಾಹುಲ್ ಗಾಂಧಿ ಕಳೆದ 10 ವರ್ಷಗಳಿಂದಲೂ ಕೂಡ ಅವರ ವಿರುದ್ಧ ಬಂದಾಗ ಹೀಗೆ ಹೇಳುವುದು. ಕೋರ್ಟ್ ಅವರ ಪರವಾಗಿ ಆದೇಶ ಬಂದಾಗ ಕೋರ್ಟ್ ಸೂಪರ್, ಮೋದಿ ವಿರುದ್ಧ ಬಂದಾಗ ಕೋರ್ಟ್ ಸೂಪರ್, ಅವರ ವಿರುದ್ಧ ಬಂದಾಗ ಸುಪ್ರೀಂಕೋರ್ಟ್ ಯಾರು ಅಂತಾರೆ ಎಂದರು.
ಇದನ್ನೂ ಓದಿ: ಮತ ಕಳ್ಳತನ ಆರೋಪ: ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ನೇತೃತ್ವದ ಪ್ರತಿಭಟನೆಗೆ ಸ್ಥಳ ನಿಗದಿಯೇ ದೊಡ್ಡ ತಲೆನೋವು
ಮಹದೇವಪುರ ಮತ್ತೊಂದು ಕಡೆ ಮತದಾರರ ಪಟ್ಟಿ ಲೋಪ ಆಗಿದೆ ಅಂತಾ ಇದೆ. ಅಂದಿನಿಂದ ಇದುವರೆಗೂ ಸಮಸ್ಯೆ ಆಗಿಲ್ಲ. ಈಗ ಯಾಕೆ ಬಂತು, ನಿಮಗೆ ಅಧಿಕಾರಬೇಕು. ಪ್ರಧಾನಿ ಮೋದಿ ಅವರು 10-11 ವರ್ಷ ಆಡಳಿತ ಮಾಡುತ್ತಿರುವುದು ಮಾನಸಿಕವಾಗಿ ರಾಹುಲ್ ಗಾಂಧಿಗೆ ಸಹಿಸಲು ಆಗುತ್ತಿಲ್ಲ. ಅಧಿಕಾರ ಅನ್ನೊದು ಅವರಿಗೆ ಇತ್ತು. ಯಾವಾಗ ಜನರು ತಿರುಗಿ ಬಿದ್ದರೂ ಅದು ಸಹಿಸಲು ಆಗುತ್ತಿಲ್ಲ. ಹೀಗಾಗಿ 10 ವರ್ಷದಿಂದ ಆರೋಪ ಮಾಡುತ್ತಾ ಬರುತ್ತಿದ್ದಾರೆ. ನ್ಯಾಯಾಲಯ, ಲೋಕಪಾಲ್, ಸಂಸ್ಥೆ, ಎಲ್ಲಾ ಕಡೆ ದಾಳಿ ಮಾಡಿದ್ದಾರೆ. ಇದು ರಾಹುಲ್ ಗಾಂಧಿ ಎಂದು ಹರಿಹಾಯ್ದಿದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:45 pm, Wed, 6 August 25



