Budget 2023: ತೆರಿಗೆ ರಹಿತ ಪಿಂಚಣಿ, ಸೆಕ್ಷನ್ 80ಸಿ ಮಿತಿ ಬದಲಾವಣೆ ಸೇರಿದಂತೆ ಕೇಂದ್ರ ಬಜೆಟ್ ಮೇಲೆ ವಿವಿಧ ನಿರೀಕ್ಷೆಗಳು

ಎನ್​ಪಿಎಸ್ ರೀತಿಯಲ್ಲಿ ಜೀವ ವಿಮೆ ಪಾಲಿಸಿಗಳನ್ನು ಪರಿಗಣಿಸುವುದು, ಆರೋಗ್ಯ ವಿಮೆ ಮೇಲಿನ ಜಿಎಸ್ಟಿಯನ್ನು ಕಡಿಮೆ ಮಾಡುವುದು, ಗೃಹ ವಿಮೆಯ ಪ್ರೀಮಿಯಮ್ಗೆ ತೆರಿಗೆ ವಿನಾಯಿತಿ ನೀಡಿವುದು ಇತ್ಯಾದಿ ಕ್ರಮಗಳನ್ನು ಬಜೆಟ್​ನಲ್ಲಿ ಪ್ರಕಟಿಸಲಿ ಎಂಬುದು ಈ ವಲಯದ ಉದ್ದಿಮೆದಾರರ ನಿರೀಕ್ಷೆಗಳಾಗಿವೆ.

Budget 2023: ತೆರಿಗೆ ರಹಿತ ಪಿಂಚಣಿ, ಸೆಕ್ಷನ್ 80ಸಿ ಮಿತಿ ಬದಲಾವಣೆ ಸೇರಿದಂತೆ ಕೇಂದ್ರ ಬಜೆಟ್ ಮೇಲೆ ವಿವಿಧ ನಿರೀಕ್ಷೆಗಳು
ಬಜೆಟ್ 2023 (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Ganapathi Sharma

Updated on:Jan 04, 2023 | 4:10 PM

ಮುಂಬರುವ ಕೇಂದ್ರ ಬಜೆಟ್ (Union Budget 2023) ಬಗ್ಗೆ ದೇಶದ ವಿಮಾ ವಲಯ (Insurance Industry) ವಿವಿಧ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಇನ್ಷೂರೆನ್ಸ್ ಸೌಲಭ್ಯಗಳು ಹೆಚ್ಚೆಚ್ಚು ಜನರನ್ನು ತಲುಪಲು ಅನುವಾಗುವಂತೆ ಮತ್ತು ಪಾಲಿಸಿದಾರರಿಗೆ ಅನುಕೂಲವಾಗುವಂತೆ ಕೆಲ ಕ್ರಮಗಳನ್ನು ಬಜೆಟ್​​ನಲ್ಲಿ ಕೈಗೊಳ್ಳಬೇಕೆಂದು ಅಪೇಕ್ಷಿಸಲಾಗಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (National Pension System) ರೀತಿಯಲ್ಲಿ ಜೀವ ವಿಮೆ ಪಾಲಿಸಿಗಳನ್ನು ಪರಿಗಣಿಸುವುದು, ಆರೋಗ್ಯ ವಿಮೆ ಮೇಲಿನ ಜಿಎಸ್​​ಟಿಯನ್ನು ಕಡಿಮೆ ಮಾಡುವುದು, ದೀರ್ಘಾವಧಿ ಬಂಡವಾಳ ಲಾಭಕ್ಕೆ ಶೇಕಡಾ 10ರ ತೆರಿಗೆ ವಿನಾಯಿತಿ ಸೌಲಭ್ಯವನ್ನು ಇನ್ಷೂರೆನ್ಸ್ ವಲಯಕ್ಕೆ ವಿಸ್ತರಿಸುವುದು, ಗೃಹ ವಿಮೆಯ ಪ್ರೀಮಿಯಮ್​ಗೆ ತೆರಿಗೆ ವಿನಾಯಿತಿ ನೀಡಿವುದು ಇತ್ಯಾದಿ ಕ್ರಮಗಳನ್ನು ಬಜೆಟ್​​ನಲ್ಲಿ ಪ್ರಕಟಿಸಲಿ ಎಂಬುದು ಈ ವಲಯದ ಉದ್ದಿಮೆದಾರರ ನಿರೀಕ್ಷೆಗಳಾಗಿವೆ. ಹಾಗೆಯೇ, ಆದಾಯ ತೆರಿಗೆ ಸೆಕ್ಷನ್ 80ಸಿ ಮಿತಿಯಲ್ಲಿ ಬದಲಾವಣೆ, ಯುಲಿಪಿ (ULIP) ತೆರಿಗೆ ಹಿಂಪಡೆಯುವಿಕೆ, ಇನ್ಷೂರೆನ್ಸ್ ಪ್ರೀಮಿಯಮ್ ಮೇಲಿನ ತೆರಿಗೆ ವಿನಾಯಿತಿಯ ಮಿತಿ ಏರಿಕೆಗೂ ಸಲಹೆಗಳನ್ನು ಸರ್ಕಾರಕ್ಕೆ ಕೊಡಲಾಗಿದೆ.

“ಈ ದೇಶ ಮತ್ತು ಜನರ ಒಳಿತಿಗಾಗಿ ಹೊಸ ಸುಧಾರಣೆಗಳನ್ನು ತರಲು ಕೇಂದ್ರ ಬಜೆಟ್ ಒಂದು ಅವಕಾಶವಾಗಿದೆ. ಲೈಫ್ ಇನ್ಷೂರೆನ್ಸ್ ಕ್ಷೇತ್ರದ ದೃಷ್ಟಿಯಿಂದ ನೋಡುವುದಾದರೆ ಹೆಚ್ಚೆಚ್ಚು ಜನರನ್ನು ವಿಮೆಯ ವ್ಯಾಪ್ತಿಗೆ ತರುವುದು ಬಹಳ ಮುಖ್ಯ ಎನಿಸುತ್ತದೆ. ಈ ನಿಟ್ಟಿನಲ್ಲಿ ಲೈಫ್ ಇನ್ಷೂರೆನ್ಸ್ ಪ್ರೀಮಿಯಮ್ ಪಾವತಿಗಳಿಗೆ ಪ್ರತ್ಯೇಕವಾಗಿ ತೆರಿಗೆ ವಿನಾಯಿತಿ ಮಿತಿ ಹಾಕುವುದು ಸೂಕ್ತ” ಎಂದು ಬಜಾಜ್ ಅಲಿಯಂಜ್ ಲೈಫ್ ಸಂಸ್ಥೆಯ ಎಂಡಿ ಮತ್ತು ಸಿಇಒ ತರುಣ್ ಚುಗ್ ಹೇಳಿದ್ದಾರೆ.

‘ನ್ಯಾಷನಲ್ ಪೆನ್ಷನ್ ಸಿಸ್ಟಂ ಮಾದರಿಯಂತೆ ಲೈಫ್ ಇನ್ಷೂರೆನ್ಸ್ ಅಥವಾ ಪಿಂಚಣಿ ಉತ್ಪನ್ನಗಳನ್ನು ಸರ್ಕಾರ ಪರಿಗಣಿಸಬೇಕು. ಇದರಿಂದ ಜನರು ತಮ್ಮ ನಿವೃತ್ತಿ ಜೀವನಕ್ಕೆ ನಿಯಮಿತ ಆದಾಯದ ವ್ಯವಸ್ಥೆ ಮಾಡಲು ಅನುಕೂಲವಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿರುವುದಾಗಿ ‘ಫೈನಾನ್ಷಿಯಲ್ ಎಕ್ಸ್​​ಪ್ರೆಸ್’ ವರದಿ ಉಲ್ಲೇಖಿಸಿದೆ.

ಇಳಿಕೆಯಾಗುತ್ತಾ ಆಗೋಗ್ಯ ವಿಮೆ ಜಿಎಸ್​ಟಿ?

ಫೆಬ್ರವರಿ 1ರಂದು ಮಂಡನೆಯಾಗಲಿರವ ಬಜೆಟ್ ಬಗ್ಗೆ ಇನ್ಷೂರೆನ್ಸ್ ವಲಯದಿಂದ ಹಲವು ನಿರೀಕ್ಷೆಗಳಿವೆ. ಅದರಲ್ಲಿ ಆರೋಗ್ಯ ವಿಮೆಯಲ್ಲಿ ವಿಧಿಸಲಾಗಿರುವ ಜಿಎಸ್​ಟಿ ಇಳಿಕೆಯೂ ಒಂದು. ಉದ್ಯಮದ ಅಂದಾಜು ಪ್ರಕಾರ ಭಾರತದಲ್ಲಿ ಆರೋಗ್ಯ ವಿಮೆ ಪ್ರಮಾಣ ಬಹಳ ಕಡಿಮೆ. ಅಂದರೆ ಹೆಚ್ಚಿನ ಸಂಖ್ಯೆಯ ಜನರು ಹೆಲ್ತ್ ಇನ್ಷೂರೆನ್ಸ್ ಹೊಂದಿಲ್ಲ. ಇದರಿಂದ ವಿಮೆಯ ಬೆಲೆ ಹೆಚ್ಚಾಗಿದೆ. ಹೆಚ್ಚೆಚ್ಚು ಜನರು ವಿಮೆ ಖರೀದಿಸಿದರೆ ಬೆಲೆಯೂ ಕಡಿಮೆ ಆಗುತ್ತದೆ. ವಿಮೆಯ ವ್ಯಾಪ್ತಿ ಹೆಚ್ಚಲು ಜಿಎಸ್​ಟಿ ದರವನ್ನು ಶೇ 18ರಿಂದ ಶೇ 5ಕ್ಕೆ ಇಳಿಸುವುದು ಉಚಿತ ಎಂಬ ಅಭಿಪ್ರಾಯ ಇದೆ.

ಇದನ್ನೂ ಓದಿ: Income Tax: ಖಾಲಿ ನಿವೇಶನಕ್ಕೆ ತೆರಿಗೆ, ಬಜೆಟ್​​ನಲ್ಲಿ ಗೊಂದಲ ಬಗೆಹರಿಯುವ ನಿರೀಕ್ಷೆ

ಸದ್ಯ ಆರೋಗ್ಯ ವಿಮೆಯಲ್ಲಿ ಕ್ಲೈಮ್ ಆಗುವ ಹಣಕ್ಕೆ ಶೇ 18ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಜೊತೆಗೆ, ಆಸ್ಪತ್ರೆಯಲ್ಲಿ ಅಡ್ಮಿಟ್ ಆದಾಗ ದಿನಕ್ಕೆ 5 ಸಾವಿರ ರೂ ಗಿಂತ ಹೆಚ್ಚು ಮೊತ್ತದ ರೂಮ್ ನಲ್ಲಿ ದಾಖಲಾದರೆ ಆ ಹಣಕ್ಕೆ ಶೇ. 5ರಷ್ಟು ಹೆಚ್ಚುವರಿ ಜಿಎಸ್​​ಟಿ ಹಾಕಲಾಗುತ್ತದೆ. ಈ ವಿಚಾರದ ಬಗ್ಗೆ ಸರ್ಕಾರ ಗಮನ ಕೊಡಬೇಕು ಎಂದು ವಿಮಾ ಸಂಸ್ಥೆಗಳು ಸಲಹೆ ಕೊಟ್ಟಿವೆ.

ಗೃಹ ವಿಮೆಗೆ ತೆರಿಗೆ ವಿನಾಯಿತಿ

ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಹಾನಿಗೆ ಹಣಕಾಸು ಭದ್ರತೆಯಾಗಿ ಮಾಡಿಸಲಾಗುವ ಹೋಮ್ ಇನ್ಷೂರೆನ್ಸ್ ಪಾಲಿಸಿಯನ್ನು ಟ್ಯಾಕ್ಸ್ ಇನ್ಸೆಂಟಿವ್ ಆಗಿಸಬೇಕು. ಅಂದರೆ, ಗೃಹ ವಿಮೆಯ ವೆಚ್ಚವನ್ನು ತೆರಿಗೆ ವಿನಾಯಿತಿಗೆ ಬಳಸಲು ಅವಕಾಶ ನೀಡಬೇಕು ಎಂಬುದು ರಿಲಯನ್ಸ್ ಜನರಲ್ ಇನ್ಷೂರೆನ್ಸ್ ಕಂಪನಿಯ ಸಿಇಒ ರಾಕೇಶ್ ಜೈನ್ ಅವರ ಸಲಹೆಯಾಗಿದೆ.

ಹಾಗೆಯೇ, ಆರೋಗ್ಯ ವಿಮೆ ಪಾಲಿಸಿಯ ವೆಚ್ಚದಿಂದ ಸದ್ಯ ಗರಿಷ್ಠ 50 ಸಾವಿರ ರೂ ವರೆಗೂ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಈಗಿನ ಹಣದುಬ್ಬರದ ಸ್ಥಿತಿಯನ್ನು ಪರಿಗಣಿಸಿ ಈ ವಿನಾಯಿತಿಯ ಮಿತಿಯನ್ನು ಒಂದು ಲಕ್ಷ ರೂಪಾಯಿಗೆ ಹೆಚ್ಚಿಸಬೇಕು ಎಂದೂ ಜೈನ್ ಹೇಳಿದ್ದಾರೆ.

‘ಈ ಮೇಲಿನ ಕೆಲ ಕ್ರಮಗಳಿಂದ ವಿಮಾ ಪಾಲಿಸಿದಾರರಿಗೆ ನಿರಾಳತೆ ಸಿಗುತ್ತದೆ. ಹಾಗೆಯೇ, ವಿಮೆ ಪಾಲಿಸಿ ಹೊಂದಿಲ್ಲದವರಿಗೆ ಉತ್ತೇಜನ ಸಿಗುತ್ತದೆ. ಇನ್ಷೂರೆನ್ಸ್ ಉತ್ಪನ್ನಗಳ ಬೆಲೆಯೂ ತಗ್ಗುತ್ತದೆ. ಇದರಿಂದ ಆರೋಗ್ಯ ವಿಮಾ ವಲಯದ ಆರೋಗ್ಯಕ್ಕೆ ಮತ್ತು ದೇಶದ ಜನರ ಆರೋಗ್ಯ ರಕ್ಷಣೆಗೂ ಒಳಿತಾಗುತ್ತದೆ’ ಎಂಬುದು ಅವರ ಅನಿಸಿಕೆ.

ಇದನ್ನೂ ಓದಿ: Union Budget 2023: ಮುಂದಿನ 25 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್; ನಿರ್ಮಲಾ ಸೀತಾರಾಮನ್

ಇನ್ನು, ಇನ್ಷೂರೆನ್ಸ್ ಕಮಿಷನ್ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು ಈಗಿನ 15 ಸಾವಿರ ರೂಗಿಂತ ಹೆಚ್ಚು ಮೊತ್ತಕ್ಕೆ ಏರಿಸಬೇಕೆಂಬ ಸಲಹೆಯೂ ವಿಮಾ ಕ್ಷೇತ್ರದಿಂದ ವ್ಯಕ್ತವಾಗಿದೆ. ಈ ಕ್ರಮ ಜಾರಿಯಾದರೆ ಇನ್ಷೂರೆನ್ಸ್ ಏಜೆಂಟ್ಗಳಿಗೆ ಅನುಕೂಲವಾಗುತ್ತದೆ.

ಸೆಕ್ಷನ್ 80ಸಿ ಮಿತಿಯಲ್ಲಿ ಬದಲಾವಣೆ

ಟ್ಯಾಕ್ಸ್ ರಿಬೇಟ್ ಪಡೆಯುವ ವಿಚಾರದಲ್ಲಿ ಜೀವ ವಿಮೆಗಳಿಗೆ ಪ್ರತ್ಯೇಕ ವಿಭಾಗ ಸ್ಥಾಪಿಸಬೇಕೆಂಬುದು ಈ ಕ್ಷೇತ್ರದವರ ಅಪೇಕ್ಷೆಯಾಗಿದೆ. ಟ್ಯಾಕ್ಸ್ ರಿಬೇಟ್ ಎಂದರೆ ನಾವು ಪಾವತಿಸುವ ತೆರಿಗೆ ಹಣವನ್ನು ಮರಳಿ ಪಡೆಯುವ ಅವಕಾಶ. ಸದ್ಯ, ಇದರ ಮಿತಿ 1.5 ಲಕ್ಷ ರೂಪಾಯಿ ಇದೆ. ಇವೆಲ್ಲವೂ ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ಬರುತ್ತದೆ. ಲೈಫ್ ಇನ್ಷೂರೆನ್ಸ್​ನ ಪ್ರೀಮಿಯಮ್, ಪಿಪಿಎಫ್, ಎನ್ ಎಸ್ ಸಿ, ಎನ್ ಪಿಎಸ್, ಗೃಹ ಸಾಲ ಇತ್ಯಾದಿ ಅನೇಕ ಹೂಡಿಕೆಗಳು ಈ ಮಿತಿಯೊಳಗೆ ಬರುತ್ತವೆ. ಆದ್ದರಿಂದ ಇನ್ಷೂರೆನ್ಸ್ ಪಾಲಿಸಿಗಳಿಗೆ ಪ್ರತ್ಯೇಕ ಟ್ಯಾಕ್ಸ್ ರಿಬೇಟ್ ಸೌಲಭ್ಯ ಕೊಡಬೇಕು ಎಂಬುದು ಬೇಡಿಕೆ.

‘ನೀವು ವೇತನದಾರರಾಗಿದ್ದರೆ ಇಪಿಎಫ್ ಮತ್ತು ಪಿಎಫ್​​​ಗೆ ಹೆಚ್ಚು ಸಂದಾಯವಾಗುತ್ತದೆ. ಆದ್ದರಿಂದ ಇನ್ಷೂರೆನ್ಸ್ ಪಾಲಿಸಿಗಳಿಗೆ ಪ್ರತ್ಯೇಕ ಸೌಲಭ್ಯ ಕೊಡಬೇಕು. ಅಥವಾ ಟ್ಯಾಕ್ಸ್ ರಿಬೇಟ್ ಮಿತಿಯನ್ನು 1.5 ಲಕ್ಷ ರೂನಿಂದ 2.25 ಲಕ್ಷ ರೂಪಾಯಿಗೆ ಏರಿಸಬೇಕು. ಟರ್ಮ್ ಪಾಲಿಸಿಗಳಿಗೆ ಪ್ರತ್ಯೇಕ ವಿಭಾಗ ಇದ್ದರೆ ಇನ್ನಷ್ಟು ಅನುಕೂಲವಾಗುತ್ತದೆ” ಎಂದು ಏಜೀಸ್ ಫೆಡರಲ್ ಲೈಫ್ ಇನ್ಷೂರೆನ್ಸ್ (Ageas Federal Life Insurance) ಸಂಸ್ಥೆಯ ಸಿಇಒ ಮತ್ತು ಎಂಡಿ ವಿಘ್ನೇಶ್ ಶಹಾನೆ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:05 pm, Wed, 4 January 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ