ಹಿಂದಿ ಬಾಕ್ಸ್​ ಆಫೀಸ್​ನಲ್ಲೇ 406 ಕೋಟಿ ರೂಪಾಯಿ ಬಾಚಿಕೊಂಡ ‘ಪುಷ್ಪ 2’ ಸಿನಿಮಾ

‘ಪುಷ್ಪ 2’ ಸಿನಿಮಾ ಇಂಥದ್ದೊಂದು ಸಾಧನೆ ಮಾಡುತ್ತದೆ ಎಂದು ಬಹುತೇಕರು ಊಹಿಸಿದ್ದರು. ಆ ಊಹೆ ನಿಜವಾಗಿದೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಉತ್ತರ ಭಾರತದ ಪ್ರೇಕ್ಷಕರು ಕೂಡ ಈ ಸಿನಿಮಾಗೆ ಫಿದಾ ಆಗಿದ್ದಾರೆ. ಹಿಂದಿ ವರ್ಷನ್​ ಕೂಡ ಭರ್ಜರಿ ಕಲೆಕ್ಷನ್​ ಮಾಡಿದೆ. ಅಲ್ಲು ಅರ್ಜುನ್ ಅವರಿಗೆ ಉತ್ತರ ಭಾರತದಲ್ಲಿ ಇರುವ ಫ್ಯಾನ್ ಫಾಲೋಯಿಂಗ್​ಗೆ ಇದೇ ಸಾಕ್ಷಿ.

ಹಿಂದಿ ಬಾಕ್ಸ್​ ಆಫೀಸ್​ನಲ್ಲೇ 406 ಕೋಟಿ ರೂಪಾಯಿ ಬಾಚಿಕೊಂಡ ‘ಪುಷ್ಪ 2’ ಸಿನಿಮಾ
ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್
Follow us
ಮದನ್​ ಕುಮಾರ್​
|

Updated on: Dec 12, 2024 | 7:17 PM

ನಟ ಅಲ್ಲು ಅರ್ಜುನ್ ಅವರ ವೃತ್ತಿ ಜೀವನಕ್ಕೆ ‘ಪುಷ್ಪ 2’ ಸಿನಿಮಾದಿಂದ ದೊಡ್ಡ ಮೈಲೇಜ್ ಸಿಕ್ಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರು ಅಬ್ಬರಿಸುತ್ತಿದ್ದಾರೆ. ತೆಲುಗಿನ ಈ ಸಿನಿಮಾ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ತೆರೆಕಂಡಿತು. ಹಿಂದಿ ಪ್ರೇಕ್ಷಕರು ಈ ಸಿನಿಮಾವನ್ನು ಹೆಚ್ಚು ಇಷ್ಟಪಟ್ಟಿದ್ದಾರೆ. ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ಮಾಡುತ್ತಿರುವ ಗಳಿಕೆ ಕಂಡು ಎಲ್ಲರೂ ಹುಬ್ಬೇರಿಸಿದ್ದಾರೆ. ಬಾಲಿವುಡ್​ ಸ್ಟಾರ್​ಗಳು ಕೂಡ ವಾವ್ ಎನ್ನುತ್ತಿದ್ದಾರೆ. ಹಿಂದಿ ವರ್ಷನ್​ನಿಂದ ‘ಪುಷ್ಪ 2’ ಸಿನಿಮಾಗೆ ಬರೋಬ್ಬರಿ 400 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಆಗಿದೆ. ಇನ್ನೂ ಅನೇಕ ಕಡೆಗಳಲ್ಲಿ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ.

ಡಿಸೆಂಬರ್ 5ರಂದು ‘ಪುಷ್ಪ 2’ ಸಿನಿಮಾ ಬಿಡುಗಡೆ ಆಯಿತು. ಮೊದಲ ದಿನ ಹಿಂದಿ ವರ್ಷನ್​ನಿಂದ 72 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. 2ನೇ ದಿನ 59 ಕೋಟಿ ರೂಪಾಯಿ ಸಂಗ್ರಹ ಆಯಿತು. 3ನೇ ದಿನ 74 ಕೋಟಿ ರೂಪಾಯಿ ಕಲೆಕ್ಷನ್​ ಆಯಿತು. ಅಚ್ಚರಿ ಎಂದರೆ, 4ನೇ ದಿನ ಬರೋಬ್ಬರಿ 86 ಕೋಟಿ ರೂಪಾಯಿ ಹರಿದುಬಂತು. 5ನೇ ದಿನ 48 ಕೋಟಿ ರೂಪಾಯಿ, 6ನೇ ದಿನ 36 ಕೋಟಿ ರೂಪಾಯಿ ಹಾಗೂ 7ನೇ ದಿನ 31.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

7 ದಿನಗಳಲ್ಲಿ ‘ಪುಷ್ಪ 2’ ಸಿನಿಮಾದ ಹಿಂದಿ ವರ್ಷನ್ ಕಲೆಕ್ಷನ್​ 406.50 ಕೋಟಿ ರೂಪಾಯಿ ಆಗಿದೆ. ಉತ್ತರ ಭಾರತದ ಮಂದಿ ಈ ಚಿತ್ರಕ್ಕೆ ಎಷ್ಟು ಫಿದಾ ಆಗಿದ್ದಾರೆ ಎಂಬುದನ್ನು ಈ ಅಂಕಿ-ಸಂಖ್ಯೆಗಳೇ ಹೇಳುತ್ತಿವೆ. ಇನ್ನೂ ಈ ಸಿನಿಮಾದ ಹವಾ ಕಡಿಮೆ ಆಗಿಲ್ಲ. ವೀಕೆಂಡ್​ನಲ್ಲಿ ಮತ್ತೆ ಕಲೆಕ್ಷನ್ ಹೆಚ್ಚಾಗುವ ನಿರೀಕ್ಷೆ ಇದೆ. ಹಿಂದಿ ವರ್ಷನ್​ನಿಂದ ಅನಾಯಾಸವಾಗಿ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಲಿದೆ.

ಇದನ್ನೂ ಓದಿ: ಭಾರಿ ಗೆಲುವು ಕೊಟ್ಟ ಅಭಿಮಾನಿಗಳಿಗೆ ‘ಪುಷ್ಪ’ರಾಜ್ ಧನ್ಯವಾದ

2021ರಲ್ಲಿ ಬಂದ ‘ಪುಷ್ಪ’ ಸಿನಿಮಾ ಕೂಡ ಹಿಂದಿ ಪ್ರೇಕ್ಷಕರ ಮನಸ್ಸು ಗೆದ್ದಿತ್ತು. ರಶ್ಮಿಕಾ ಮಂದಣ್ಣ ಅವರು ಈಗಾಗಲೇ ಹಿಂದಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ‘ಮಿಷನ್ ಮಜ್ನು’, ‘ಅನಿಮಲ್’ ಮುಂತಾದ ಸಿನಿಮಾಗಳಿಂದ ಅವರು ಹಿಂದಿ ಮಂದಿಯ ಮನ ಗೆದ್ದಿದ್ದಾರೆ. ಈಗ ‘ಪುಷ್ಪ 2’ ಸಿನಿಮಾದಿಂದ ಅವರ ಜನಪ್ರಿಯತೆ ಇನ್ನಷ್ಟು ಜಾಸ್ತಿ ಆಗಿದೆ. ಹೊಸ ಹೊಸ ಸಿನಿಮಾದ ಅವಕಾಶಗಳು ರಶ್ಮಿಕಾ ಮಂದಣ್ಣ ಅವರನ್ನು ಹುಡುಕಿಕೊಂಡು ಬರುತ್ತಿವೆ. ಅಲ್ಲು ಅರ್ಜುನ್ ಅವರಿಗೆ ಇನ್ನೊಮ್ಮೆ ರಾಷ್ಟ್ರ ಪ್ರಶಸ್ತಿ ಸಿಗಬೇಕು ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.