ಹೆಚ್ಚುತ್ತಿದೆ ‘ಲೈಗರ್’ ಸಿನಿಮಾ ಕ್ರೇಜ್; ವಿಜಯ್ ದೇವರಕೊಂಡಗೋಸ್ಕರ ಹೊಸ ಸಾಂಗ್ ಮಾಡಿದ ಅಭಿಮಾನಿ
‘ಲೈಗರ್’ ಚಿತ್ರ ಆಗಸ್ಟ್ 25ರಂದು ತೆರೆಗೆ ಬರುತ್ತಿದೆ. ಹಿಂದಿ, ತೆಲುಗು ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ.

ವಿಜಯ್ ದೇವರಕೊಂಡ (Vijay Devarakonda) ನಟನೆಯ ‘ಲೈಗರ್’ ಸಿನಿಮಾದ ಕ್ರೇಜ್ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಈ ಸಿನಿಮಾ ತೆರೆಗೆ ಬರೋಕೆ ಎರಡು ವಾರ ಬಾಕಿ ಉಳಿದಿದೆ. ಆಗಲೇ ಸಿನಿಮಾ ಬಗ್ಗೆ ಹೈಪ್ ಸೃಷ್ಟಿ ಆಗಿದೆ. ಚಿತ್ರತಂಡ ಕೂಡ ದೊಟ್ಟ ಮಟ್ಟದಲ್ಲಿ ಸಿನಿಮಾಗೆ ಪ್ರಚಾರ ನೀಡುತ್ತಿದೆ. ಈ ಮಧ್ಯೆ ಫ್ಯಾನ್ಸ್ ಕೂಡ ಪ್ರಮೋಷನ್ ಕೆಲಸಕ್ಕೆ ಕೈ ಜೋಡಿಸಿದ್ದಾರೆ. ‘ಲೈಗರ್’ ಚಿತ್ರಕ್ಕೋಸ್ಕರ (Liger Movie) ಫ್ಯಾನ್ಸ್ ವಿಶೇಷ ಸಾಂಗ್ಗಳನ್ನು ರಚಿಸಿ ಹಾಡುತ್ತಿದ್ದಾರೆ. ಇದನ್ನು ಯೂಟ್ಯೂಬ್ನಲ್ಲಿ ರಿಲೀಸ್ ಮಾಡಲಾಗುತ್ತಿದ್ದು, ಲಕ್ಷ ಲಕ್ಷ ವೀಕ್ಷಣೆ ಪಡೆದುಕೊಳ್ಳುತ್ತಿದೆ.
ವಿಜಯ್ ದೇವರಕೊಂಡ ಅವರು ಇದೇ ಮೊದಲ ಬಾರಿಗೆ ‘ಲೈಗರ್’ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ಬಾಲಿವುಡ್ ಎಂಟ್ರಿಗೆ ಅವರಿಗೆ ಭವ್ಯ ಸ್ವಾಗತ ಸಿಗುತ್ತಿದೆ. ಪುರಿ ಜಗನ್ನಾಥ್ ಅವರು ಈ ಚಿತ್ರದ ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ನಿರ್ಮಾಣದಲ್ಲಿ ಪುರಿ ಜಗನ್ನಾಥ್ ಅವರಿಗೆ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಸಾಥ್ ನೀಡಿದ್ದಾರೆ. ಅನನ್ಯಾ ಪಾಂಡೆ ಈ ಚಿತ್ರಕ್ಕೆ ನಾಯಕಿ. ಈಗ ನಿಖಿಲೇಶ್ ಕುಮಾರ್ ಎಂಬ ಫ್ಯಾನ್ ಮಾಡಿದ ಸಾಂಗ್ ಸಾಕಷ್ಟು ಗಮನ ಸೆಳೆಯುತ್ತಿದೆ.
ನಿಖಿಲೇಶ್ ಕುಮಾರ್ ಅವರು ‘ಲೈಗರ್’ ಹಾಗೂ ವಿಜಯ್ ದೇವರಕೊಂಡ ಅವರ ಅಭಿಮಾನಿ. ಅವರು ‘ಲೈಗರ್ ಆ್ಯಂಥಮ್’ ಸಾಂಗ್ ಮಾಡಿದ್ದಾರೆ. ಈ ವಿಡಿಯೋಯವನ್ನು ಅವರು ಹಾಡಿದ್ದಾರೆ. ಜತೆಗೆ, ವಿಡಿಯೋ ಸಾಂಗ್ಗೆ ನಿರ್ದೇಶನ ಕೂಡ ಮಾಡಿದ್ದಾರೆ. ವಿಜಯ್ ದೇವರಕೊಂಡ ಅವರನ್ನು ಹೋಲುವ ಬಾಲಕನ್ನು ಇಟ್ಟುಕೊಂಡು ಈ ವಿಡಿಯೋ ಸಾಂಗ್ ಮಾಡಲಾಗಿದೆ.
‘ಲೈಗರ್’ ಚಿತ್ರ ಆಗಸ್ಟ್ 25ರಂದು ತೆರೆಗೆ ಬರುತ್ತಿದೆ. ಹಿಂದಿ, ತೆಲುಗು ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಈಗಾಗಲೇ ಹಾಡಿನ ಮೂಲಕ ಈ ಸಿನಿಮಾ ಸಾಕಷ್ಟು ಹೈಪ್ ಸೃಷ್ಟಿ ಮಾಡಿದೆ. (Source)
ಇದನ್ನೂ ಓದಿ: Liger: ‘ಲೈಗರ್ ಸಿನಿಮಾ ಬ್ಲಾಕ್ ಬಸ್ಟರ್’: ರಿಲೀಸ್ಗೂ ಮುನ್ನ ಘೋಷಿಸಿದ ವಿಜಯ್ ದೇವರಕೊಂಡ
‘ಅರ್ಜುನ್ ರೆಡ್ಡಿ’ ಚಿತ್ರದ ಯಶಸ್ಸಿನಿಂದ ವಿಜಯ್ ದೇವರಕೊಂಡ ಅವರಿಗೆ ದೇಶವ್ಯಾಪಿ ಜನಪ್ರಿಯತೆ ಸಿಕ್ಕಿತು. ನಂತರ ಅವರು ನಟಿಸಿದ ‘ಗೀತ ಗೋವಿಂದಂ’ ಚಿತ್ರ ಯಶಸ್ವಿ ಆಯಿತು. ಬಳಿಕ ಅವರ ‘ಡಿಯರ್ ಕಾಮ್ರೇಡ್’ ಸಿನಿಮಾ ಕೂಡ ಹಲವು ಭಾಷೆಗಳಿಗೆ ಡಬ್ ಆಗಿ ತೆರೆಕಂಡಿತಾದರೂ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿರಲಿಲ್ಲ. ಈಗ ‘ಲೈಗರ್’ ಚಿತ್ರದ ಮೂಲಕ ವಿಜಯ್ ದೇವರಕೊಂಡ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.