ಬಣ್ಣ ಬದಲಿಸುವ ಕಣ್ಣು, ಸೆಟ್ನಲ್ಲೇ ಕಿಡ್ನಾಪ್, ಭಾರತದಲ್ಲಿ ಪ್ರಾಧ್ಯಾಪಕ ವೃತ್ತಿ; ಬೆನೆಡಿಕ್ಟ್ ಬಗೆಗಿನ ಅಪರೂಪದ ವಿಚಾರಗಳು
ಬೆನೆಡಿಕ್ಟ್ ಅವರಿಗೆ ‘ಬ್ರಿಟಿಷ್ ಅಕಾಡೆಮಿ ಟೆಲಿವಿಷನ್’ ಅವಾರ್ಡ್ ಸೇರಿ ಸಾಕಷ್ಟು ಪ್ರಶಸ್ತಿಗಳು ಲಭ್ಯವಾಗಿದೆ. ಅವರ ಬಗ್ಗೆ ಅಚ್ಚರಿಯ ವಿಚಾರಗಳು ಇಲ್ಲಿವೆ.
ಹಾಲಿವುಡ್ (Hollywood) ನಟ ಬೆನೆಡಿಕ್ಟ್ ಕಂಬರ್ಬ್ಯಾಚ್ (Benedict Cumberbatch) ಅವರು ಇಂದು (ಜುಲೈ 19) 46ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಮೇ ತಿಂಗಳಲ್ಲಿ ರಿಲೀಸ್ ಆದ ಅವರ ನಟನೆಯ ‘ಡಾಕ್ಟರ್ ಸ್ಟ್ರೇಂಜ್ ಇನ್ ದಿ ಮಲ್ಟಿವರ್ಸ್ ಆಫ್ ಮ್ಯಾಡ್ನೆಸ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಕಾರಣಕ್ಕೆ ಅವರಿಗೆ ಈ ಬಾರಿ ಬರ್ತ್ಡೇ ಸ್ಪೆಷಲ್ ಆಗಿದೆ. ಅವರಿಗೆ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ವಿಶ್ ಮಾಡುತ್ತಿದ್ದಾರೆ.
ಬೆನೆಡಿಕ್ಟ್ ಕಂಬರ್ಬ್ಯಾಚ್ ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದ್ದು ‘ಶರ್ಲಾಕ್ ಹೋಮ್ಸ್’ ಸರಣಿ. ಈ ಚಿತ್ರದಲ್ಲಿ ಬ್ರಿಟಿಷ್ ಡಿಟೆಕ್ಟಿವ್ ಪಾತ್ರ ಮಾಡಿ ಸಾಕಷ್ಟು ಗಮನ ಸೆಳೆದರು. ನಂತರ ಮಾರ್ವೆಲ್ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದರು. ಅವರ ನಟನೆಯ ‘ಡಾಕ್ಟರ್ ಸ್ಟ್ರೇಂಜ್ ಇನ್ ದಿ ಮಲ್ಟಿವರ್ಸ್ ಆಫ್ ಮ್ಯಾಡ್ನೆಸ್’ ಸಿನಿಮಾ ಪ್ರೇಕ್ಷಕರಿಗೆ ಸಾಕಷ್ಟು ಇಷ್ಟವಾಗಿದೆ. ಬೆನೆಡಿಕ್ಟ್ ಅವರಿಗೆ ‘ಬ್ರಿಟಿಷ್ ಅಕಾಡೆಮಿ ಟೆಲಿವಿಷನ್’ ಅವಾರ್ಡ್ ಸೇರಿ ಸಾಕಷ್ಟು ಪ್ರಶಸ್ತಿಗಳು ಲಭ್ಯವಾಗಿದೆ. ಅವರ ಬಗ್ಗೆ ಅಚ್ಚರಿಯ ವಿಚಾರಗಳು ಇಲ್ಲಿವೆ.
- ಬೆನೆಡಿಕ್ಟ್ ಕಂಬರ್ಬ್ಯಾಚ್ಗೆ ಅವರದೇ ಹೆಸರಿನ ಬಗ್ಗೆ ಬೇಸರ ಇದೆ. ಈ ಹೆಸರನ್ನು ಉಚ್ಚಾರ ಮಾಡುವುದು ಬಲು ಕಷ್ಟ. ಈ ವಿಚಾರವನ್ನು ಅವರು ಸ್ವತಃ ಒಪ್ಪಿಕೊಂಡಿದ್ದರು.
- ಬೆನೆಡಿಕ್ಟ್ ಅವರ ಕಣ್ಣಿನ ಬಣ್ಣ ಬದಲಾಗುತ್ತದೆ! ಈ ವಿಚಾರ ಅನೇಕರಿಗೆ ಗೊತ್ತಿಲ್ಲ. ಅವರಿಗೆ ಹೆಟೆರೋಕ್ರೊಮಿಯಾ ಐರಿಡಿಸ್ ಎಂಬ ರೋಗ ಇದೆ. ಈ ಕಾರಣಕ್ಕೆ ಕೆಲವೊಮ್ಮೆ ಇವರ ಕಣ್ಣು ನೀಲಿ ಬಣ್ಣಕ್ಕೆ ತಿರುಗಿದರೆ ಮತ್ತೊಮ್ಮೆ ಹಸಿರು ಬಣ್ಣಕ್ಕೆ ತಿರುಗುತ್ತದೆ.
- ಬೆನೆಡಿಕ್ಟ್ ಅವರ ತಂದೆ-ತಾಯಿ ಕೂಡ ಕಲಾವಿದರು. ‘ಶರ್ಲಾಕ್’ನಲ್ಲಿ ಇವರ ತಂದೆ ತಾಯಿ ಪಾತ್ರ ಮಾಡಿದ್ದರು ಅನ್ನೋದು ವಿಶೇಷ.
- ‘ಶರ್ಲಾಕ್ ಹೋಮ್ಸ್’ನಲ್ಲಿ ಬೆನೆಡಿಕ್ಟ್ ಅವರಿಗೆ ಸಿಗುವ ಪಾತ್ರ ತಪ್ಪಿ ಹೋಗುತ್ತಿತ್ತು. ಇದಕ್ಕೆ ಕಾರಣವಾಗಿದ್ದು ಅವರ ಮೂಗು! ಬೆನೆಡಿಕ್ಟ್ ಅವರ ಮೂಗು ಸುಂದರವಾಗಿಲ್ಲ ಎಂಬ ಕಾರಣಕ್ಕೆ ಈ ಸರಣಿಯಿಂದ ಹೊರಗಿಡಲು ಚಿಂತನೆ ನಡೆದಿತ್ತು. ಆದರೆ, ಕೊನೆಗೆ ಅವರಿಗೆ ನಟಿಸಲು ಅವಕಾಶ ಸಿಕ್ಕಿತ್ತು.
- ಬೆನೆಡಿಕ್ಟ್ ಅವರು ದಕ್ಷಿಣ ಆಫ್ರಿಕಾದಲ್ಲಿ ‘ಟು ದಿ ಎಂಡ್ಸ್ ಆಫ್ ಅರ್ಥ್’ ಸಿನಿಮಾ ಶೂಟ್ ಮಾಡುತ್ತಿದ್ದರು. ಈ ವೇಳೆ ಅವರನ್ನು ಕಿಡ್ನಾಪ್ ಮಾಡಲಾಗಿತ್ತು. ನಂತರ ಅವರನ್ನು ಮರಳಿ ಕರೆತರಲಾಗಿತ್ತು.
- ಬೆನೆಡಿಕ್ಟ್ ಅವರು ಒಂದು ವರ್ಷ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ಅವರು ಪದವಿ ಪಡೆದ ನಂತರದಲ್ಲಿ ಒಂದು ವರ್ಷ ಬ್ರೇಕ್ ತೆಗೆದುಕೊಂಡಿದ್ದರು. ಭಾರತದ ಡಾರ್ಜಲಿಂಗ್ನಲ್ಲಿ ಟಿಬೇಟಿಯನ್ ಮಕ್ಕಳಿಗೆ ಇಂಗ್ಲಿಷ್ ಪಾಠ ಮಾಡಿದ್ದರು.