‘ಬಾತ್ರೂಂನಲ್ಲಿ ಸಾಂಗ್ ಹಾಡಿದ್ರೂ ಹಣ ಕೇಳಬಹುದು’; ಟ್ರೋಲ್ ಆದ ಇಳಯರಾಜ
ಹಳೆಯ ಸಾಂಗ್ಗಳನ್ನು ಬಳಕೆ ಮಾಡುವಾಗ ಆ ಸಿನಿಮಾದ ನಿರ್ಮಾಪಕರು ಅಥವಾ ಮ್ಯೂಸಿಕ್ ಕಂಪನಿಗಳ ಒಪ್ಪಿಗೆ ಪಡೆದರೆ ಸಾಕು. ಏಕೆಂದರೆ, ಅವರ ಬಳಿಯೇ ಇದರ ಹಕ್ಕು ಇರುತ್ತದೆ. ಆದರೆ, ಇಲ್ಲಿ ಇಳಯರಾಜ ಅವರು ಸಾಕಷ್ಟು ಚಿಂತೆಗೆ ಒಳಗಾಗಿದ್ದಾರೆ. ತಮಗೆ ಕ್ರೆಡಿಟ್ ಸಿಗುತ್ತಿಲ್ಲ ಅನ್ನೋದು ಅವರ ಬೇಸರ.

ಸಂಗೀತ ಸಂಯೋಜಕ ಇಳಯರಾಜ (Ilaiyaraaja) ಅವರು ಸುದ್ದಿಯಲ್ಲಿದ್ದಾರೆ. ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾದಲ್ಲಿ ಬಳಕೆ ಆದ ‘ಕಣ್ಮಣಿ ಅನ್ಬೋದು ಕಾದಲನ್..’ ಹಾಡಿನ ಹಕ್ಕು ತಮ್ಮ ಬಳಿ ಇದೆ, ಅದನ್ನು ಅಕ್ರಮವಾಗಿ ಈ ಸಿನಿಮಾದಲ್ಲಿ ಬಳಕೆ ಮಾಡಲಾಗಿದೆ ಎಂದು ಇಳಯರಾಜ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾದ ನಿರ್ಮಾಪಕ ಸೌಬಿನ್ ಶಾಹಿರ್ಗೆ ನೋಟಿಸ್ ಹೋಗಿದೆ. ಈ ಮಧ್ಯೆ ಇಳಯರಾಜ ಅವರ ನಿರ್ಧಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಹಿನ್ನೆಲೆ ಬಗ್ಗೆ ಚರ್ಚೆ
ಈ ಮೊದಲು ಎಆರ್ ರೆಹಮಾನ್ ಅವರು ಕಂಪೋಸ್ ಮಾಡಿದ ಹಾಡಿನ ಹಕ್ಕನ್ನು ತಮಗೂ ನೀಡಬೇಕು ಎನ್ನುವ ವಿಚಾರದಲ್ಲಿ ದೊಡ್ಡ ಮಟ್ಟದ ಚರ್ಚೆ ಮಾಡಿದ್ದರು. ‘ನನ್ನದೇ ಹಾಡನ್ನು ಬಳಸಲು ನಾನು ಕಾಪಿರೈಟ್ ಪಡೆದುಕೊಳ್ಳಲು ರೆಡಿ ಇಲ್ಲ. ಹೀಗಾಗಿ, ಹಾಡಿನ ಹಕ್ಕಿನಲ್ಲಿ ನನಗೂ ಪಾಲು ಬೇಕು’ ಎಂದು ಅವರು ಹೇಳಿದ್ದರು. ಈ ಕಾರಣಕ್ಕೆ ಅವರು ಸಿನಿಮಾದಿಂದಲೂ ಹೊರ ಬಂದಿದ್ದರು.
‘ತಮ್ಮ ಹಾಡುಗಳನ್ನು ಇತರರು ಮಿಕ್ಸ್ ಮಾಡಬಾರದು, ಬಳಸಬಾರದು’ ಎಂದು ರೆಹಮಾನ್ ಕೋರಿದ್ದರು. ಆದರೆ, ಈ ಬಗ್ಗೆ ಆದೇಶ ನೀಡಲು ಕೋರ್ಟ್ ನಿರಾಕರಿಸಿತ್ತು. ಹಾಡುಗಳು ನಿರ್ಮಾಪಕರು ಅಥವಾ ಮ್ಯೂಸಿಕ್ ಲೇಬಲ್ಗಳಿಗೆ ಮಾರಾಟ ಆಗಿರುತ್ತದೆ. ಹೀಗಾಗಿ, ಸಂಗೀತ ಸಂಯೋಜಕರಿಗೆ ಆ ಬಗ್ಗೆ ಹಕ್ಕು ಇರುವುದಿಲ್ಲ ಎಂದು ಕೋರ್ಟ್ ಹೇಳಿತ್ತು.
ಇಳಯರಾಜ ಪ್ರಕರಣ
‘ಮಂಜುಮ್ಮೇಲ್ ಬಾಯ್ಸ್’ ಚಿತ್ರದಲ್ಲಿ ‘ಗುಣ’ ಸಿನಿಮಾದ ‘ಕಣ್ಮಣಿ ಅನ್ಬೋದು..’ ಹಾಡನ್ನು ಬಳಕೆ ಮಾಡಲಾಗಿತ್ತು. ಈ ಹಾಡನ್ನು ಕಂಪೋಸ್ ಮಾಡಿದ್ದು ಇಳಯರಾಜ ಅವರು. ಹೀಗಾಗಿ, ಈ ಹಾಡಿನ ಮೇಲೆ ತಮಗೂ ಹಕ್ಕಿದೆ ಎಂದು ವಾದಿಸಿದ್ದಾರೆ. ‘ಮಂಜುಮ್ಮೇಲ್ ಬಾಯ್ಸ್’ ನಿರ್ಮಾಪಕರು ತಮ್ಮ ಒಪ್ಪಿಗೆ ಪಡೆಯದೆ ಹಾಡು ಬಳಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಹಳೆಯ ಸಾಂಗ್ಗಳನ್ನು ಬಳಕೆ ಮಾಡುವಾಗ ಆ ಸಿನಿಮಾದ ನಿರ್ಮಾಪಕರು ಅಥವಾ ಮ್ಯೂಸಿಕ್ ಕಂಪನಿಗಳ ಒಪ್ಪಿಗೆ ಪಡೆದರೆ ಸಾಕು. ಏಕೆಂದರೆ, ಅವರ ಬಳಿಯೇ ಇದರ ಹಕ್ಕು ಇರುತ್ತದೆ. ಆದರೆ, ಇಲ್ಲಿ ಇಳಯರಾಜ ಅವರು ಸಾಕಷ್ಟು ಚಿಂತೆಗೆ ಒಳಗಾಗಿದ್ದಾರೆ. ತಮಗೆ ಕ್ರೆಡಿಟ್ ಸಿಗುತ್ತಿಲ್ಲ ಅನ್ನೋದು ಅವರ ಬೇಸರ.
ಇದನ್ನೂ ಓದಿ: ‘ಆ ಹಾಡು ನನ್ನದು’; ‘ಮಂಜುಮೇಲ್ ಬಾಯ್ಸ್’ ವಿರುದ್ಧ ಕಾನೂನು ಸಮರ ಸಾರಿದ ಇಳಯರಾಜ
ಟೀಕೆ
ಸದ್ಯ ಇಳಯರಾಜ ಅವರ ನಿರ್ಧಾರಕ್ಕೆ ಅನೇಕರು ಟೀಕೆ ವ್ಯಕ್ತಪಡಿಸಿದ್ದಾರೆ. ‘ಸ್ನಾನ ಮಾಡುವಾಗ ಯಾರಾದರೂ ಇಳಯರಾಜ ಹಾಡನ್ನು ಹಾಡಿದರೆ ಅದಕ್ಕೂ ಇಳಯರಾಜ ಚಾರ್ಜ್ ಮಾಡಬಹುದು’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಇಳಯರಾಜ ಪರ ಬ್ಯಾಟ್ ಬೀಸಿದ್ದಾರೆ. ಈ ಪ್ರಕರಣದಲ್ಲಿ ಕೋರ್ಟ್ ಯಾವ ರೀತಿಯ ಆದೇಶ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



