AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್​: ಕಲ್ಲಂಗಡಿ ಬೆಳೆದು ಸೈ ಎನಿಸಿಕೊಂಡ ರೈತರು, ಯಾವ ತಳಿ, ಹೇಗೆ ಬೆಳೆದರು ಅಂತೀರಾ? ಈ ಸ್ಟೋರಿ ನೋಡಿ

ಆ ಗ್ರಾಮಗಳ ರೈತ ಹತ್ತಾರು ವರ್ಷದಿಂದ ಸೋಯಾಬಿನ್, ತೊಗರಿ, ಉದ್ದು, ಹೀಗೆ ಒಂದೆ ಬೆಳೆ ಬೆಳೆದು ಹೈರಾಣಾಗಿದ್ದರು. ಆದರೆ ಈ ಆಧುನಿಕ ಯುಗದಲ್ಲಿ, ಕೃಷಿಯಲ್ಲಿ ಏನಾದರೂ ಹೊಸದನ್ನ ಮಾಡಬೇಕೆಂದು ಯೋಚಿಸಿದ ರೈತರು ತಮ್ಮ ಹೊಲದಲ್ಲಿ ಕಲ್ಲಂಗಡಿ ಬೆಳೆದು ಕೈತುಂಬಾ ಹಣ ಗಳಿಸುತ್ತಿದ್ದಾರೆ.

ಬೀದರ್​: ಕಲ್ಲಂಗಡಿ ಬೆಳೆದು ಸೈ ಎನಿಸಿಕೊಂಡ ರೈತರು, ಯಾವ ತಳಿ, ಹೇಗೆ ಬೆಳೆದರು ಅಂತೀರಾ? ಈ ಸ್ಟೋರಿ ನೋಡಿ
ಕಲ್ಲಂಗಡಿ ಬೆಳೆದು ಸೈ ಎನಿಸಿಕೊಂಡ ರೈತರು
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Feb 06, 2023 | 6:38 PM

Share

ಬೀದರ್​: ಜಿಲ್ಲೆಯ ಭಾಲ್ಕಿ ತಾಲೂಕಿನ ಬಾಜೋಳಗಾ, ಸುಲ್ತಾನಬಾದ್ ವಾಡಿ, ಸುಲ್ತಾನಬಾದ್ ಗ್ರಾಮದ ರೈತರು, ದಿಲ್ಕಷ್ ತಳಿಯ ಕಲ್ಲಂಗಡಿ ಬೆಳೆಸಿ ಸೈ ಎನಿಸಿಕೊಂಡಿದ್ದಾರೆ. ಕಲ್ಲಂಗಡಿ ಬೆಳೆ ಪ್ರತಿ ಕಾಯಿಯು 2 ರಿಂದ 3 ಕೆ.ಜಿ.ಮಾತ್ರ ಇಳುವರಿ ಕೊಡುತ್ತದೆ. ಆದರೆ ಇವರು ಬೆಳೆದ ಕಲ್ಲಂಗಡಿ ಹಣ್ಣು 5 ರಿಂದ ಕೆಜಿಯಷ್ಟು ತೂಕ ಬಂದಿದೆ. ಜೊತೆಗೆ ಬಣ್ಣ, ರುಚಿಗೆ ಇದು ಫೇಮಸ್​ ಆಗಿದ್ದು, ಹೋಲ್ ಸೆಲ್ ವ್ಯಾಪಾರಿಗಳು ರೈತರಿಂದ ಮುಗಿಬಿದ್ದು ಕೊಳ್ಳುತ್ತಿದ್ದಾರೆ. ಸಾವಯವ ಕೃಷಿಯಲ್ಲಿ ಶ್ರಮಪಟ್ಟು ಹೆಚ್ಚು ನಿಗಾ ವಹಿಸಿ ಕಾಲ ಕಾಲಕ್ಕೆ ಅಗತ್ಯವಾದಷ್ಟು ಮಾತ್ರ ನೀರು, ಗೊಬ್ಬರ ಒದಗಿಸಿ ಬೆಳೆ ಆರೈಕೆ ಮಾಡುವ ಮೂಲಕ ಇಂತಹ ಕಲ್ಲಂಗಡಿ ಬೆಳೆದಿದ್ದಾರೆ.

ಇನ್ನು ದಿಲ್ಕಷ್ ತಳಿಯ ಕಲ್ಲಂಗಡಿ ಇದೆ ಮೊದಲ ಸಲ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಪ್ರಯೋಗಾತ್ಮಕವಾಗಿ ಜಿಲ್ಲೆಯಲ್ಲಿ ನಾಲ್ಕೈದು ಗ್ರಾಮದ ರೈತರು 20 ಎಕರೆಗೂ ಅಧಿಕ ದಿಲ್ಕಷ್ ತಳಿಯ ಕಲ್ಲಂಗಡಿ ಬೆಳೆಸಿದ್ದು ಕಲ್ಲಂಗಡಿ ಉತ್ತಮ ಇಳುವರಿ ಬಂದಿದೆ. ಗಾತ್ರದಲ್ಲಿಯೂ ಕೂಡಾ ಬೇರೆ ಕಲ್ಲಂಗಡಿಗೆ ಹೋಲಿಸಿದರೆ ಹೆಚ್ಚು ಗಾತ್ರವನ್ನ ಹೊಂದಿದೆ. ನೋಡಲು ಆಕರ್ಷಕವಾಗಿದ್ದು ರುಚಿಯಲ್ಲಿ ಬಣ್ಣದಲ್ಲಿಯೂ ಕೂಡಾ ಗ್ರಾಹಕರನ್ನ ಆಕರ್ಷಿಸುತ್ತದೆ. ಹೀಗಾಗಿಯೇ ಮಾರುಕಟ್ಟೆಯಲ್ಲಿ ಈ ದಿಲ್ಕಷ್ ತಳಿಯ ಕಲ್ಲಂಗಡಿಗೆ ಭಾರೀ ಬೇಡಿಕೆಯಿದ್ದು ಕೆಜಿಗೆ 10 ರೂಪಾಯಿವರೆಗೆ ಮಾರಾಟವಾಗುತ್ತಿದೆ/.ಈಗ ಚಳಿ ಜಾಸ್ತಿಯಿದೆ ಬಿಸಿಲು ಜಾಸ್ತಿಯಾದರೆ ದರದಲ್ಲಿ ಇನ್ನೂ ಹೆಚ್ಚಿಗೆ ಮಾರಾಟವಾಗುತ್ತದೆಂದು ಕಲ್ಲಂಗಡಿ ಬೆಳೆಸಿದ ರೈತರು ಹೇಳುತ್ತಿದ್ದಾರೆ.

ಭಾಲ್ಕಿ ತಾಲೂಕಿನ ಈ ಗ್ರಾಮದ ರೈತರು ಒಂದೇ ಬೆಳೆಗೆ ಸೀಮೀತವಾಗಿ ಒಂದೇ ಕಂಪನಿಯ ಬೀಜವನ್ನ ಹೊಲದಲ್ಲಿ ಬಿತ್ತನೆ ಮಾಡಿ ನಷ್ಟಕ್ಕೆ ಒಳಗಾಗುತ್ತಿದ್ದರು. ಜೊತೆಗ ವಿಫರಿತವಾದ ರಾಸಾಯನಿಕ ಗೊಬ್ಬರವನ್ನ ಬಳಕೆ ಮಾಡಿ ನಷ್ಟಕ್ಕೊಳಗಾಗಿದ್ದರು. ಆದರೆ ಇದೀಗ ರಾಸಾಯನಿಕ ಪದ್ದತಿಯ ಬೇಸಾಯಕ್ಕೆ ಗುಡ್ ಬೈ ಹೇಳಿ ಸಾವಯವ ಕೃಷಿಯನ್ನ ತಮ್ಮ ಹೊಲದಲ್ಲಿ ಅಳವಡಿಸಿಕೊಂಡಿದ್ದರ ಪರಿಣಾಮದಿಂದಾಗಿ ರೈತರು ಹೆಚ್ಚಿನ ಆದಾಯವನ್ನ ಗಳಿಸುತ್ತಿದ್ದಾರೆ. ಇನ್ನು ಈ ದಿಲ್ಕಷ್ ತಳಿಯ ಕಲ್ಲಂಗಡಿಯನ್ನ ಪ್ರಾಯೋಗಿಕವಾಗಿ ಬೆಳೆಸಿದ ರೈತರು ಮೊದಲ ಪ್ರಯತ್ನದಲ್ಲಿಯೇ ಸೈ ಎನಿಸಿಕೊಂಡಿದ್ದಾರೆ.

ಜೊತೆಗೆ ಸಾವಯವದ ಮೂಲಕ ಬೆಳೆದ ಕಪ್ಪು ಕಲ್ಲಂಗಡಿ 62 ದಿನಕ್ಕೆ ಇಳುವರಿ ಬಂದಿದೆ. ಇದರಿಂದ ರೈತನಿಗೆ ಕಡಿಮೆ ಅವಧಿಯಲ್ಲಿ ಹೆಚ್ಚು ಫಸಲು ಬಂದಂತಾಗಿದೆ. ಮಾರುಕಟ್ಟೆಯಲ್ಲಿ ಹತ್ತಾರು ಕಂಪನಿಯ ಕಲ್ಲಂಗಡಿ ಬೀಜಗಳು ಸಿಗುತ್ತವೆ. ಕಂಪನಿಯವರು ಕೂಡಾ ಹತ್ತಾರು ಆಶ್ವಾಸನೆಗಳನ್ನ ಕೊಟ್ಟು ರೈತರಿಗೆ ಬೆಳೆಯಲು ಹೇಳುತ್ತಾರೆ. ಬೇರೆ ಕಲ್ಲಂಗಡಿಗೆ ಹೋಲಿಸಿದರೆ, ಈ ದಿಲ್ಕಷ್ ತಳಿಯ ಕಲ್ಲಂಗಡಿ ಮೇಲ್ಬಾಗ ಹೆಚ್ಚು ಕಪ್ಪಾಗಿದ್ದು, ರುಚಿ ಜಾಸ್ತಿಯಿದೆ.

ಇದನ್ನೂ ಓದಿ:Betel leaf growers: ಬೆವರು ಸುರಿಸಿ ಏಳೆಂಟು ವರ್ಷದಿಂದ ಕಾಯ್ದುಕೊಂಡಿದ್ದ ವೀಳ್ಯದೆಲೆ ಬೆಳೆ ವಿಪರೀತ ಶೀತ ವಾತಾವರಣದಿಂದ ಹಾಳು, ಸಂಕಷ್ಟದಲ್ಲಿ ರೈತರು

ಒಟ್ಟಾರೆ ಸದಾ ಕಬ್ಬು ಬೆಳೆದು ಕೈ ಸುಟ್ಟುಕೊಳ್ಳುವ ಗಡಿ ಜಿಲ್ಲೆಯ ರೈತರು ಬಂಪರ್ ಬೆಳೆಯನ್ನ ಬೆಳೆಯುವುದರ ಮೂಲಕ ಜಿಲ್ಲೆಗೆ ಮಾದರಿಯಾಗಿ ನಿಂತಿದ್ದಾರೆ. ಅಷ್ಟೆ ಅಲ್ಲದೆ ಕೇವಲ ಮೂರು ತಿಂಗಳಲ್ಲಿ 2 ಲಕ್ಷ ರೂಪಾಯಿ ಆದಾಯ ಬರುವ ನಿರಿಕ್ಷೇಯಲ್ಲಿ ಇಲ್ಲಿನ ರೈತರಿದ್ದಾರೆ.

ವರದಿ: ಸುರೇಶ್ ನಾಯಕ್ ಟಿವಿ9 ಬೀದರ್

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ