AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವೇಗೌಡ್ರು ಬೇಕಿದ್ರೆ ಕೋರ್ಟ್‌ಗೆ ಹೋಗಲಿ, ಉಪವಾಸ ಮಾಡ್ಲಿ: ನೈಸ್‌ʼ ಪತ್ರಕ್ಕೆ ಡಿಕೆಶಿ ತಿರುಗೇಟು

ಬೆಂಗಳೂರಿನ ನೈಸ್ ರಸ್ತೆ ಟೋಲ್ ವಿಚಾರವಾಗಿ ರಾಜಕೀಯ ನಾಯಕರ ನಡುವೆ ಆರೋಪ ಪ್ರತ್ಯಾರೋಪಗಳು ನಡೆದಿವೆ. ಯಾರು ನೈಸ್ ರಸ್ತೆಯಲ್ಲಿ ಟೋಲ್ ಕಟ್ಟಬೇಡಿ ಎಂದು ಕೇಂದ್ರ ಸಚಿವ ಹೆಚ್​​ಡಿ ಕುಮಾರಸ್ವಾಮಿ ಕರೆ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಸಾರ್ವಜನಿಕರು ಟೋಲ್ ಕಟ್ಟಲು ಹಿಂದೇಟು ಹಾಕುತ್ತಿದ್ದು, ಇದರಿಂದ ಟೋಲ್ ಸಿಬ್ಬಂದಿ ಜನರ ನಡುವೆ ಗಲಾಟೆಗಳು ನಡೆಯುತ್ತಿವೆ. ಇದರ ಮಧ್ಯೆ ಇದೀಗ ಎಂಟ್ರಿ ಕೊಟ್ಟಿರುವ ದೇವೇಗೌಡ್ರಿಗೆ ಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ದೇವೇಗೌಡ್ರು ಬೇಕಿದ್ರೆ ಕೋರ್ಟ್‌ಗೆ ಹೋಗಲಿ, ಉಪವಾಸ ಮಾಡ್ಲಿ: ನೈಸ್‌ʼ ಪತ್ರಕ್ಕೆ ಡಿಕೆಶಿ ತಿರುಗೇಟು
HD Devegowda And Dk Shivakumar
ನವೀನ್ ಕುಮಾರ್ ಟಿ.
| Edited By: |

Updated on: Sep 07, 2026 | 7:24 PM

Share

ಬೆಂಗಳೂರು, (ಸೆಪ್ಟೆಂಬರ್ 07): ನೈಸ್ ರಸ್ತೆಯಲ್ಲಿ ಟೋಲ್ ಸಂಗ್ರಹದ ವಿಚಾರಕ್ಕೆ ಸಂಬಂಧಿಸಿದಂತೆ, ದಳಪತಿಗಳು ಮತ್ತು ಸರ್ಕಾರದ ನಡುವೆ ವಾಕ್ಸಮರ ನಡೆಯುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ್ರು, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರವನ್ನು ಬರೆದಿದ್ದಾರೆ. ಇನ್ನು ಇದೀಗ ದೇವೇಗೌಡರ ಪತ್ರಕ್ಕೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ನೈಸ್‌ ಯೋಜನೆ ವಿಚಾರದಲ್ಲಿ ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ಕಾನೂನು ಅಭಿಪ್ರಾಯವನ್ನೂ ಪಡೆದುಕೊಂಡಿದ್ದೇವೆ. ಬೇಕಾದ್ರೆ ದೇವೇಗೌಡರು ಕೊರ್ಟ್‌ಗೆ ಹೋಲಿ, ಉಪವಾಸ ಆದ್ರೂ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.

ʻನೈಸ್‌ʼ ಪ್ರಾಜೆಕ್ಟ್‌ ವಿಚಾರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಬರೆದಿರುವ ಪತ್ರ ಸಂಬಂಧ ದೇವನಹಳ್ಳಿ ಮಾತನಾಡಿದ ಡಿಕೆ ಶಿವಕುಮಾರ್, ನಾವು ಏನೆ ಮಾಡಿದರು ಕಾನೂನು ಚೌಕಟ್ಟಿನಲ್ಲಿ ಕಾನೂನು ಅಭಿಪ್ರಾಯ ತೆಗೆದುಕೊಂಡಿದ್ದೇವೆ. ಕಾನೂನು ಬಿಟ್ಟು ಏನು ಮಾಡಲ್ಲ ಯಾರು ತಲೆಕೆಡಸಿಕೊಳ್ಳುವ ಅವಶ್ಯಕತೆಯಿಲ್ಲ. ಬೇಕಾದ್ರೆ ಕೋರ್ಟ್ ಇದೆ ಕಾನೂನು ಇದೆ ಉಪವಾಸ ಬೇಕಾದರೆ ಮಾಡಲಿ. ನನಗೂ ಪ್ರಜ್ನೆ ಇದೆ ಬೇಸಿಕ್ ಕಾಮನಸೆನ್ಸ್ ಇದೆ ಎಂದಿದ್ದಾರೆ.

ಇದನ್ನೂ ಓದಿ: ನೈಸ್ ಅಕ್ರಮ ನಿವೇಷನ ಹಂಚಿಕೆ: ಸಿಎಂ ಡಿ.ಕೆ. ಶಿವಕುಮಾರ್‌ಗೆ ದೇವೇಗೌಡರ ಸುದೀರ್ಘ ಪತ್ರ

ಕಾನೂನು ಬಿಟ್ಟು ಯಾವುದೇ ಕೆಲಸ ಮಾಡುವುದಿಲ್ಲ. ಹೀಗಾಗಿ ಯಾರೂ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಬೇಕಾದ್ರೆ ಕಾನೂನು ಇದೆ, ಕೋರ್ಟ್ ಇದೆ. ಉಪವಾಸ ಮಾಡಬೇಕಾದ್ರೆ ಮಾಡಲಿ. ನನಗೂ ಪ್ರಜ್ಞೆ ಇದೆ, ಬೇಸಿಕ್ ಕಾಮನ್ ಸೆನ್ಸ್ ಇದೆ. ನಿಮ್ಮ ವೈಯಕ್ತಿಕ ಅಭಿಪ್ರಾಯಗಳು ಹಾಗೂ ಚರ್ಚೆಗಳನ್ನ ನಾನು ಮೊದಲಿನಿಂದಲೂ ನೋಡಿದ್ದೇನೆ. ಯಾವ ಅಗ್ರಿಮೆಂಟ್‌ಗೆ ಸಹಿ ಹಾಕಲಾಗಿದೆಯೋ, ಅದೇ ಹಾದಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಯಾರು ಆಸ್ತಿ ಕಳೆದುಕೊಂಡಿದ್ದಾರೋ ಅವರನ್ನು ರಕ್ಷಣೆ ಮಾಡಬೇಕು ಅಲ್ಲವೇ? ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸರ್ಕಾರಗಳು ಮಾಡಿಕೊಂಡಿರುವ ಅಗ್ರಿಮೆಂಟ್‌ಗಳನ್ನೆಲ್ಲ ತಾನು ಪರಿಶೀಲಿಸಿದ್ದೇನೆ. ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲೇ ಮುಂದುವರಿಸಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು. ಈ ಮೂಲಕ ದೇವೇಗೌಡರ ಪತ್ರಕ್ಕೆ ತಿರುಗೇಟು ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ನವೀನ್ ಕುಮಾರ್ ಟಿ.
ನವೀನ್ ಕುಮಾರ್ ಟಿ.

ನವೀನ್ ಕುಮಾರ್ ಟಿ ರವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡದ ದೇವನಹಳ್ಳಿ, ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂಎಸ್​ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ಇವರು ಪದವಿ ಶಿಕ್ಷಣ ಮುಗಿದ ನಂತರ ಟಿವಿ9 ಕನ್ನಡದಲ್ಲಿ ವರದಿಗಾರರಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಹುದ್ದೆಯನ್ನು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಿದ್ದಾರೆ.

Read More
ಓಂಪ್ರಕಾಶ್ ರಾವ್ ನನ್ನ ಗುರುಗಳು: ‘ಪ್ರೇಮದ ಊರಲಿ’ ಡೈರೆಕ್ಟರ್ ಹೆಮ್ಮೆಯ ಮಾತು
ಓಂಪ್ರಕಾಶ್ ರಾವ್ ನನ್ನ ಗುರುಗಳು: ‘ಪ್ರೇಮದ ಊರಲಿ’ ಡೈರೆಕ್ಟರ್ ಹೆಮ್ಮೆಯ ಮಾತು
‘ಪ್ರೇಮದ ಊರಲಿ’ ನಟಿಯರಿಗೆ ಕನ್ನಡದ ಬಗ್ಗೆ ಸಂಕಲ್ಪ ಮಾಡಿಸಿದ ರಂಗಾಯಣ ರಘು
‘ಪ್ರೇಮದ ಊರಲಿ’ ನಟಿಯರಿಗೆ ಕನ್ನಡದ ಬಗ್ಗೆ ಸಂಕಲ್ಪ ಮಾಡಿಸಿದ ರಂಗಾಯಣ ರಘು
ಕೊನೆಗೂ ತಾಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಮುಹೂರ್ತ ಫಿಕ್ಸ್
ಕೊನೆಗೂ ತಾಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಮುಹೂರ್ತ ಫಿಕ್ಸ್
ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪೊಲೀಸ್ ಕಮಿಷನರೇಟ್‌ಗಳಿಗೆ ಸಂಪುಟ ಅನುಮೋದನೆ
ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪೊಲೀಸ್ ಕಮಿಷನರೇಟ್‌ಗಳಿಗೆ ಸಂಪುಟ ಅನುಮೋದನೆ
ದಸರಾ, ದೀಪಾವಳಿ ಹೊತ್ತಲ್ಲೇ ಬೆಲೆ ಏರಿಕೆ ಶಾಕ್: ಹಾಲಿನ ದರ 8 ರೂ. ಹೆಚ್ಚಳ
ದಸರಾ, ದೀಪಾವಳಿ ಹೊತ್ತಲ್ಲೇ ಬೆಲೆ ಏರಿಕೆ ಶಾಕ್: ಹಾಲಿನ ದರ 8 ರೂ. ಹೆಚ್ಚಳ
ಕೆಪಿಎಸ್​ಸಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ,ಸದಸ್ಯೆ ಗೀತಾ ಇಡಿ ವಶಕ್ಕೆ
ಕೆಪಿಎಸ್​ಸಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ,ಸದಸ್ಯೆ ಗೀತಾ ಇಡಿ ವಶಕ್ಕೆ
ಬಿಗ್​​ಬಾಸ್ ಕನ್ನಡ: ‘ಅಯ್ಯೋ ಉರಿ’ ಕಣ್ಣೀರು ಹಾಕಿದ ಕಿರಣ್ ಶಾಸ್ತ್ರಿ
ಬಿಗ್​​ಬಾಸ್ ಕನ್ನಡ: ‘ಅಯ್ಯೋ ಉರಿ’ ಕಣ್ಣೀರು ಹಾಕಿದ ಕಿರಣ್ ಶಾಸ್ತ್ರಿ
ನಮ್ಮ್ ಸಿಎಂ ಫೋನ್‌ಗೆ ಸಿಗಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್
ನಮ್ಮ್ ಸಿಎಂ ಫೋನ್‌ಗೆ ಸಿಗಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್
ದಾವಣಗೆರೆ: ಭತ್ತದ ವ್ಯಾಪಾರಿಯಿಂದ 4 ಕೋಟಿ ವಂಚನೆ ಆರೋಪ
ದಾವಣಗೆರೆ: ಭತ್ತದ ವ್ಯಾಪಾರಿಯಿಂದ 4 ಕೋಟಿ ವಂಚನೆ ಆರೋಪ
ಪ್ರತಿಭಟನೆ ವೇಳೆ ಬ್ಯಾರಿಕೇಡ್ ಹತ್ತಿ ಧ್ವಜ ಬೀಸಿದ ರಾಹುಲ್ ಗಾಂಧಿ!
ಪ್ರತಿಭಟನೆ ವೇಳೆ ಬ್ಯಾರಿಕೇಡ್ ಹತ್ತಿ ಧ್ವಜ ಬೀಸಿದ ರಾಹುಲ್ ಗಾಂಧಿ!