Crime News: ಮದ್ಯ ಮಾರದಂತೆ ಬುದ್ದಿ ಹೇಳಿದ್ದಕ್ಕೆ ವ್ಯಕ್ತಿಯನ್ನು ಕೊಚ್ಚಿ ಕೊಂದ ಯುವಕ

Crime News: ಮದ್ಯ ಮಾರದಂತೆ ಬುದ್ದಿ ಹೇಳಿದ್ದಕ್ಕೆ ವ್ಯಕ್ತಿಯನ್ನು ಕೊಚ್ಚಿ ಕೊಂದ ಯುವಕ
ಪ್ರಾತಿನಿಧಿಕ ಚಿತ್ರ

ಸಂಕೇಶ್ವರದಲ್ಲಿ ಮಹಿಳೆ ಹತ್ಯೆಗೈದು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಸಂಕೇಶ್ವರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

TV9kannada Web Team

| Edited By: ganapathi bhat

Jan 16, 2022 | 3:16 PM

ಹಾಸನ: ಬುದ್ಧಿ ಹೇಳಿದ್ದಕ್ಕೆ ವ್ಯಕ್ತಿಯನ್ನು ಯುವಕನೊಬ್ಬ ಕೊಚ್ಚಿ ಕೊಲೆಗೈದ ದುರ್ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ವಡ್ಡರಹಳ್ಳಿಯಲ್ಲಿ ನಡೆದಿದೆ. ವಡ್ಡರಹಳ್ಳಿಯಲ್ಲಿ ಕೊಡಲಿಯಿಂದ ಕೊಚ್ಚಿ ಸೋಮಣ್ಣ (50) ಹತ್ಯೆ ಮಾಡಲಾಗಿದೆ. ಮದ್ಯ ಮಾರದಂತೆ ಬುದ್ಧಿ ಹೇಳಿದ್ದಕ್ಕೆ ಕುಡಿದು ಬಂದು ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿ ಯಶವಂತ್‌ ಎಂವಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಳೇಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬೆಳಗಾವಿ: ಗುಂಡು ಹಾರಿಸಿ ಮಹಿಳೆ ಕೊಲೆ

ಸಂಕೇಶ್ವರ ಪಟ್ಟಣದಲ್ಲಿ ಗುಂಡು ಹಾರಿಸಿ ಮಹಿಳೆ ಕೊಲೆ ಮಾಡಿರುವ ದುಷ್ಕೃತ್ಯ ನಡೆದಿದೆ. ಶೈಲಾ ನಿರಂಜನ ಸುಭೇದಾರ (56) ಎಂಬಾಕೆಯನ್ನು ಆರೋಪಿಗಳು ಹತ್ಯೆಗೈದಿದ್ದಾರೆ. ಸಂಕೇಶ್ವರದಲ್ಲಿ ಮಹಿಳೆ ಹತ್ಯೆಗೈದು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಸಂಕೇಶ್ವರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಯಾದಗಿರಿ: ಭೇಟಿಯಾಗಲು ನಿರಾಕರಿಸಿದ್ದಕ್ಕೆ ಮಹಿಳೆಯ ಮೇಲೆ ಹಲ್ಲೆ

ಭೇಟಿಯಾಗಲು ನಿರಾಕರಿಸಿದ್ದಕ್ಕೆ ಮಹಿಳೆಯ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ ಘಟನೆ ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಬಿಯರ್ ಬಾಟಲಿಯಿಂದ ಮಲ್ಲಮ್ಮ ಮೇಲೆ ಹಲ್ಲೆ ಮಾಡಲಾಗಿದೆ. ಬೊಮ್ಮನಹಳ್ಳಿಯಲ್ಲಿ ಮಹಿಳೆ ಮೇಲೆ ವೆಂಕಪ್ಪನಿಂದ ಹಲ್ಲೆ ನಡೆದಿದೆ. 3 ಮಕ್ಕಳ ತಾಯಿ ಮಲ್ಲಮ್ಮ ಹಿಂದೆ ಬಿದ್ದಿದ್ದ ವೆಂಕಪ್ಪ, ಭೇಟಿಯಾಗುವಂತೆ ಪಟ್ಟು ಹಿಡಿದಿದ್ದ ಎಂದು ತಿಳಿದುಬಂದಿದೆ. ಭೇಟಿಯಾಗಲು ನಿರಾಕರಿಸಿದ್ದಕ್ಕೆ ಹಲ್ಲೆ ಮಾಡಿ ಪರಾರಿ ಆಗಿದ್ದಾನೆ. ಗಾಯಾಳು ಮಲ್ಲಮ್ಮಗೆ ಶಹಾಪುರ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಡ್ಯ: ಪ್ರಶ್ನೆ ಮಾಡಿದ್ದಕ್ಕೆ ವ್ಯಕ್ತಿಯ ಮೇಲೆ ಪೊಲೀಸರಿಂದ ದೌರ್ಜನ್ಯ

ಪ್ರಶ್ನೆ ಮಾಡಿದ್ದಕ್ಕೆ ವ್ಯಕ್ತಿಯ ಮೇಲೆ ಪೊಲೀಸರಿಂದ ದೌರ್ಜನ್ಯ ಎಸಗಿದ ಘಟನೆ ಮಂಡ್ಯ ನಗರದ ಸಂಜಯ್ ಸರ್ಕಲ್‌ನಲ್ಲಿ ನಡೆದಿದೆ. ಕೊವಿಡ್ ಕೇರ್ ಸೆಂಟರ್‌ನಿಂದ ತಂದೆಯನ್ನ ಕರೆತರುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ತಂದೆಯನ್ನು ಕರೆತರುತ್ತಿದ್ದ ವೇಳೆ ವ್ಯಕ್ತಿಯ ದ್ವಿಚಕ್ರ ವಾಹನ ತಡೆದಿದ್ದ ಪೊಲೀಸರು ಪ್ರಶ್ನಿಸಿದ್ದಾರೆ. ಆಗ ಅವರು ಕೊವಿಡ್ ಕೇರ್ ಸೆಂಟರ್‌ನಿಂದ ಬರುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿ ಬಿಡುವಂತೆ ಕೇಳಿದ್ದಾರೆ. ಆದರೂ ಪಕ್ಕದಲ್ಲಿ ನಿಲ್ಲುವಂತೆ ಬೈಕ್ ಸವಾರನಿಗೆ ಸೂಚನೆ ಕೊಟ್ಟಿದ್ದಾರೆ. ಈ ವೇಳೆ ಪೊಲೀಸರನ್ನು ಪ್ರಶ್ನೆ ಮಾಡಿದ್ದ ಬೈಕ್ ಸವಾರ, ದೊಡ್ಡವರನ್ನು ಬಿಟ್ಟು ಕಳಿಸುತ್ತೀರಿ, ನಮ್ಮನ್ನ ಏಕೆ ಬಿಡಲ್ಲ ಎಂದು ಕೇಳಿದ್ದಾರೆ. ನಮ್ಮಂತಹವರಿಗೆ ಏಕೆ ಹೀಗೆ ಮಾಡುತ್ತೀರಿ ಎಂದು ಗರಂ ಆಗಿದ್ದಾರೆ. ಇದಕ್ಕೆ ಪ್ರತಿಯಾಗಿ ಸವಾರನನ್ನು ಠಾಣೆಗೆ ಕರೆದೊಯ್ದ ಪೊಲೀಸರು ಸವಾರನ ತಂದೆಯನ್ನು ರಸ್ತೆಯಲ್ಲೇ ಬಿಟ್ಟಿದ್ದಾರೆ. ಪೊಲೀಸರ ಕೃತ್ಯದ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

ಕೋಲಾರ: ಅಂಗಡಿ ಕಳ್ಳತನಕ್ಕೆ ವಿಫಲ ಯತ್ನ

ಆಭರಣ ಮಳಿಗೆ, ಬಟ್ಟೆ ಅಂಗಡಿಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲಿನ ಬಜಾರ್ ರಸ್ತೆಯಲ್ಲಿ ನಡೆದಿದೆ. ಗ್ಯಾಸ್ ಕಟ್ಟರ್‌ನಿಂದ ಅಂಗಡಿ ಶೆಟರ್ ಕತ್ತರಿಸಿ ಕಳವಿಗೆ ಯತ್ನಿಸಲಾಗಿದೆ. ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ಹಾವೇರಿ: ಎರಡು ಕಾರ್​ಗಳಿಗೆ ಲಾರಿ ಡಿಕ್ಕಿ; ಒಂದೇ ಕುಟುಂಬದ ನಾಲ್ವರು ಸಾವು

ಇದನ್ನೂ ಓದಿ: ಹಣ್ಣು ಸಂಗ್ರಹಿಸಿದ್ದ ಗೋದಾಮಿನಲ್ಲಿ ಅಗ್ನಿ ಅವಘಡ, 10 ಜೀವಂತ ಗುಂಡುಗಳ ಸಹಿತ ನ್ಯಾಯಾಧೀಶರ ಗನ್​ಮ್ಯಾನ್ ಪಿಸ್ತೂಲ್ ಕಳವು

Follow us on

Related Stories

Most Read Stories

Click on your DTH Provider to Add TV9 Kannada