ಜಮೀನು ಮಾರಲು ಒಪ್ಪಿಗೆ ನೀಡದ ಪತ್ನಿ, ಮಕ್ಕಳಿಗೆ ಎಗ್ ರೈಸ್ನಲ್ಲಿ ವಿಷ ಬೆರೆಸಿ ತಿನ್ನಿಸಿದ ವ್ಯಕ್ತಿ! ಮಗು ಸಾವು
ವಿಪರೀತ ಸಾಲ ಮಾಡಿಕೊಂಡಿದ್ದ ಚಂದ್ರಶೇಖರ್ ಎಂಬಾತ ಜಮೀನು ಮಾರಲು ಮುಂದಾಗಿದ್ದ. ಇದಕ್ಕೆ ಪತ್ನಿ ಸಾವಿತ್ರಿ ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ಸಾವಿತ್ರಿ ತವರು ಮನೆಗೆ ತೆರಳಿದ್ದಳು.
ವಿಜಯಪುರ: ಜಮೀನು (Land) ಮಾರಲು ಒಪ್ಪಿಗೆ ನೀಡದ ಪತ್ನಿ ಹಾಗೂ ಮಕ್ಕಳ ಕೊಲೆಗೆ (Murder) ಯತ್ನಿಸಿರುವ ಘಟನೆ ತಾಳಿಕೋಟೆ ತಾಲೂಕಿನ ಗೋನಾಳ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಪರೀತ ಸಾಲ ಮಾಡಿಕೊಂಡಿದ್ದ ಚಂದ್ರಶೇಖರ್ ಎಂಬಾತ ಜಮೀನು ಮಾರಲು ಮುಂದಾಗಿದ್ದ. ಇದಕ್ಕೆ ಪತ್ನಿ ಸಾವಿತ್ರಿ ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ಸಾವಿತ್ರಿ ತವರು ಮನೆಗೆ ತೆರಳಿದ್ದಳು. ಈ ವೇಳೆ ಪತಿ ಹೆಂಡತಿ ತವರು ಮನೆಗೆ ಬಂದು ಜಮೀನು ಮಾರಲು ಒಪ್ಪಿಸಲು ಪ್ರಯತ್ನಿಸಿದ್ದ. ಆದರೆ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡಿದ್ದ ಪತಿ ಚಂದ್ರಶೇಖರ್, ಎಗ್ ರೈಸ್ ನಲ್ಲಿ ವಿಷ ಬೆರೆಸಿ ಪತ್ನಿ ಹಾಗೂ ಮಕ್ಕಳಿಗೆ ನೀಡಿದ್ದಾನೆ. ವಿಷ ಪೂರಿತ ಎಗ್ ರೈಸ್ ತಿಂದು ಎರಡೂವರೆ ವರ್ಷದ ಶಿವರಾಜ ಎಂಬ ಮಗು ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ. ಇನ್ನು ಐದು ವರ್ಷದ ರೇಣುಕಾ ಗುಣಮುಖಳಾಗಿದ್ದಾಳೆ.
ಚಂದ್ರಶೇಖರ್ ಮೂಲತಃ ನಿಡಗುಂದಿ ತಾಲೂಕಿನ ಇಟಗಿ ಗ್ರಾಮದವನು. ವಿಷ ಭರಿತ ಎಗ್ ರೈಸ್ ತಿಂದು ಎರಡು ಮಕ್ಕಳು ಅಸ್ವಸ್ಥರಾಗಿದ್ದರು. ಅಸ್ವಸ್ಥಗೊಂಡ ಮಕ್ಕಳನ್ನು ಸಾವಿತ್ರಿ ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಗೆ ದಾಖಲು ಮಾಡಿದ್ದಳು. ಚಿಕಿತ್ಸೆ ಫಲಿಸದೆ ಎರಡೂವರೆ ವರ್ಷದ ಮಗು ಮೃತಪಟ್ಟಿದೆ. ಇನ್ನು ಘಟನೆ ಕುರಿತು ಪತ್ನಿ ಸಾವಿತ್ರಿ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಇದನ್ನೂ ಓದಿ:Mango Leaves: ಮಾವಿನ ಎಲೆಯಲ್ಲಿದೆ ಮಧುಮೇಹ ಗುಣಪಡಿಸುವ ಶಕ್ತಿ, ಬಳಕೆ ಹೇಗೆ?
ತಾಳಿಕೋಟೆ ಪೊಲೀಸರು ಸದ್ಯ ಚಂದ್ರಶೇಖರ್ನ ಬಂಧಿಸಿದ್ದಾರೆ. ಸಾಲಬಾಧೆಯಿಂದ ಪತ್ನಿ ಹಾಗೂ ಮಕ್ಕಳಿಗೆ ವಿಷ ಹಾಕಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾಗಿ ಚಂದ್ರಶೇಖರ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
ಡಬಲ್ ಮರ್ಡರ್ ಆರೋಪಿಗಳು ಬಂಧನ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ರಾಜಶ್ರೀ ಬಿರಾದಾರ್ ಹಾಗೂ ನಾನಾಗೌಡ ಯರಗಲ್ ಕೊಲೆ ನಡೆದಿತ್ತು. ರಾಜಶ್ರೀ ಪತಿ ಶಂಕರಗೌಡ ಹಾಗೂ ಮನೆಯವರು ಕೊಲೆ ಮಾಡಿದ್ದಾರೆಂದು ಆರೋಪಿಸಿದ್ದರು. ತನಿಖೆ ನಡೆಸಿದ ಪೊಲೀಸರು ನಾಲ್ಕು ಜನ ಆರೋಪಿಗಳನ್ನ ಬಂಧಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:40 am, Fri, 10 June 22