AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರ ಹೆಸರಲ್ಲಿನ ಸಾಲದ ಹಣ ಲೂಟಿ ಮಾಡಿದ ಬ್ಯಾಂಕ್ ಮ್ಯಾನೇಜರ್​; ಹೋರಾಟದ ಹಾದಿ ಹಿಡಿದ ಅನ್ನದಾತ

ಕರ್ನಾಟಕ‌ ವಿಕಾಸ ಗ್ರಾಮೀಣ ಬ್ಯಾಂಕ್, ರೈತರೇ ಹೆಚ್ಚು ಖಾತೆ ಹೊಂದಿರುವ ಬ್ಯಾಂಕ್ ಆಗಿದೆ. ಬ್ಯಾಂಕ್ ಮೂಲಕ ರೈತರು ಬೆಳೆಸಾಲ, ಅಲ್ಪಾವಧಿ, ಧೀರ್ಘಾವದಿ ಸಾಲ ಎಂದು ಪಡೆಯುತ್ತಾರೆ. ಇಂತಹ ಬ್ಯಾಂಕ್ ಮ್ಯಾನೇಜರ್ ಒಬ್ಬ ‌ಮುಗ್ದ ರೈತರಿಗೆ ಕೋಟಿ ಕೋಟಿ ವಂಚನೆ ಮಾಡಿದ್ದಾನೆ. ಈ ಪ್ರಕರಣ ಇದೀಗ ಸಿಐಡಿ ತಲುಪಿದೆ. ಆದರೆ, ರೈತರು ಹೋರಾಟದ ಹಾದಿ ಹಿಡಿದಿದ್ದಾರೆ.

ರೈತರ ಹೆಸರಲ್ಲಿನ ಸಾಲದ ಹಣ ಲೂಟಿ ಮಾಡಿದ ಬ್ಯಾಂಕ್ ಮ್ಯಾನೇಜರ್​; ಹೋರಾಟದ ಹಾದಿ ಹಿಡಿದ ಅನ್ನದಾತ
ರೈತರ ಹೆಸರಲ್ಲಿನ ಸಾಲದ ಹಣ ಲೂಟಿ ಮಾಡಿದ ಬ್ಯಾಂಕ್ ಮ್ಯಾನೇಜರ್
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Jul 21, 2024 | 7:35 PM

Share

ಬಾಗಲಕೋಟೆ, ಜು.21: ಬಾಗಲಕೋಟೆ ‌ಜಿಲ್ಲೆಯ ಬಾದಾಮಿ(Badami) ತಾಲ್ಲೂಕಿನ ಕೆರೂರು ಪಟ್ಟಣದ ಕೆವಿಜಿ ಬ್ಯಾಂಕ್ ಮ್ಯಾನೇಜರ್(KVG Bank manager), ರೈತರ ಹೆಸರಲ್ಲಿನ ಸಾಲದ ಹಣ ಲೂಟಿ ಮಾಡಿದ್ದಾನೆ. ಕೆರೂರು ಶಾಖೆಯ ಹಿಂದಿನ ‌ಮ್ಯಾನೇಜರ್ ಸುರಪೋಗು ಯಲ್ಲಪ್ಪ ಎಂಬಾತ ವಂಚನೆ ಮಾಡಿದ್ದು, ಬೇಲಿಯೆ ಎದ್ದು ಹೊಲ ಮೇಯ್ದಂತಾಗಿದೆ. ಎಪ್ರಿಲ್ 2021 ರಿಂದ ಅಕ್ಟೋಬರ್ 2023 ರವರೆಗೆ ಈ‌ ವಂಚನೆ‌ ನಡೆದಿದೆ. ಕೆರೂರು ಬ್ಯಾಂಕ್​ನಲ್ಲಿ 272 ರೈತರ ಸಾಲದ ಹಣ 3.92 ಕೋಟಿ ರೂ. ಲೂಟಿ ಮಾಡಿದ್ದು, ಪ್ರಕರಣ ಮೊದಲು ಬಾಗಲಕೋಟೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಪ್ರಕರಣ ಸಿಐಡಿಗೆ ಹಸ್ತಾಂತರವಾಗಿದೆ. ಇನ್ನು ನೀಲಗುಂದ ಕೆವಿಜಿ ಬ್ಯಾಂಕ್‌ ಅವ್ಯವಹಾರ ಬಗ್ಗೆಯೂ ಸಿಐಡಿಗೆ ವಹಿಸೋದಾಗಿ ಎಸ್​ಪಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.

ಅಷ್ಟಕ್ಕೂ ಇವರು ರೈತರಿಗೆ ಮೋಸ‌ ಮಾಡಿದ್ದು ಹೇಗೆ?

‘ರೈತರು ಸಾಲ‌ ಪಡೆಯುವ ವೇಳೆ ಸಾಲದ ಖಾತೆ ಹಾಗೂ ಉಳಿತಾಯ ಖಾತೆ ಎರಡಕ್ಕೂ ಸಹಿ ಮಾಡಿಸಿಕೊಳ್ಳುತ್ತಿದ್ದರು. ಜೊತೆಗೆ ರೈತರಿಗೆ ಗೊತ್ತಾಗದಂತೆ ವಿಥ್ ಡ್ರಾ ಪಾರ್ಮ್​ಗೂ ಸಹಿ ಪಡೆದುಕೊಳ್ಳುತ್ತಿದ್ದರು. ನಂತರ ಸಾಲ ಮಂಜೂರಾದ ಮೇಲೆ ಅದನ್ನು ಎಸ್ ಬಿ ಖಾತೆಗೆ ಹಾಕಿ, ಅಲ್ಲಿಂದ ಹಣ ಡ್ರಾ ಮಾಡಿಕೊಳ್ಳುತ್ತಿದ್ದರು. ನಂತರ ತಮ್ಮ ವ್ಯಯಕ್ತಿಕ ಖಾತೆ ಹಾಗೂ ಇತರೆ ಖಾತೆಗೆ ಹಾಕುತ್ತಿದ್ದರು. ಬಾಗಲಕೋಟೆ ಸಿಇಎನ್ ಪೊಲೀಸರು ಕೆರೂರು ಶಾಖೆ‌‌ ಸಿಬ್ಬಂದಿಯಿಂದ 1.60 ಕೋಟಿ ವಸೂಲಿ‌ ಮಾಡಿ 69 ರೈತರಿಗೆ ನೀಡಿದ್ದಾರೆ.

ಇದನ್ನೂ ಓದಿ:ವಿಶ್ವ ಸಂಸ್ಥೆಯ ಕಾರ್ಮಿಕ ಕಾರ್ಡ್ ನೀಡೋದಾಗಿ ಮಹಿಳೆಯರಿಗೆ ವಂಚನೆ‌: ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು

ಮ್ಯಾನೇಜರ್ ಸೇರಿ 11 ಜನರ ವಿರುದ್ಧ ಎಫ್ ಐ ಆರ್

ಕೆರೂರು ಶಾಖೆ‌ ಮ್ಯಾನೇಜರ್ ಸೇರಿ 11 ಜನರ ವಿರುದ್ಧ ಎಫ್ ಐ ಆರ್ ಆಗಿದೆ. ಇನ್ನು ರೈತರು ಬ್ಯಾಂಕ್‌ ಮ್ಯಾನೇಜರ್ ಮೇಲೆ‌ ಯಾವುದೇ ಕಠಿಣ ಕ್ರಮ ಆಗಿಲ್ಲ. ಈ ಹಿಂದೆ ಬಾಗಲಕೋಟೆ ‌ಕೆವಿಜಿ ಬ್ಯಾಂಕ್​ಗೆ ‌ಮುತ್ತಿಗೆ ಹಾಕಿದ್ದರು. ಮೇಲಿಂದ ಮೇಲೆ ಪ್ರತಿಭಟನೆ ಮಾಡುತ್ತಲೇ ಬಂದಿದ್ದಾರೆ. ಹಂತ ಹಂತವಾಗಿ ರೈತರ ಖಾತೆಗೆ ಹಣ ಹಾಕ್ತಿವಿ ಎನ್ನುತ್ತಲೇ ಬಂದಿದ್ದಾರೆ. ಆದರೆ, ಎಲ್ಲ ರೈತರಿಗೂ ಹಣ ಹಾಕಿಲ್ಲ. ಆಕ್ರೋಶಗೊಂಡ ರೈತರು ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ‌‌ ವಿರುದ್ಧ ಶಿಸ್ತು ಕ್ರಮ ಆಗಬೇಕು ಎಂದು ಆಗ್ರಹ ‌ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಪ್ರಕರಣ ಸಿಐಡಿಗೆ ಹಸ್ತಾಂತರವಾಗಿದ್ದು, ತನಿಖೆ ಗಂಭೀರತೆ ಪಡೆದಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ‌ ನೀಡಿ ರೈತರಿಗೆ ಆಗಿರುವ ತೊಂದರೆ ಸರಿಪಡಿಸಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ