AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನಗೆ ಡೆಲಿವರಿ ಮಾಡಿದ ಬಿರಿಯಾನಿಯಲ್ಲಿ ಹೆಚ್ಚುವರಿ ಲೆಗ್​ ಪೀಸ್ ಇರಲಿಲ್ಲವೆಂದು ತೆಲಂಗಾಣ ಸಚಿವ ಕೆಟಿಆರ್​ಗೆ ದೂರಿದ ಭೂಪ!

ಹೈದರಾಬಾದ್: ಹೈದರಾಬಾದಿನ ವಿಶ್ವವಿಖ್ಯಾತ ಬಿರಿಯಾನಿ ಬಗ್ಗೆ ಕೇಳದವರು ಯಾರಾದರೂ ಇದ್ದಾರೆಯೇ? ಮಾಂಸಾಹಾರಿಗಳಿಗೆಲ್ಲ ಅದರ ಬಗ್ಗೆ ಗೊತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ, ಆದರೆ ಪಕ್ಕಾ ಸಸ್ಯಾಹಾರಿಗಳೂ ಹೈದರಾಬಾದಿ ಬಿರಿಯಾನಿ ಕುರಿತು ಕೇಳಿ ತಿಳಿದುಕೊಂಡಿದ್ದಾರೆ; ಸಾಮಾಜಿಕ ಜಾಲತಾಣಗಳಲ್ಲಿ, ಯೂಟ್ಯೂಬ್​ನಲ್ಲಿ ಅದನ್ನು ನೋಡಿದ್ದಾರೆ ಮತ್ತು ಟವಿಗಳಲ್ಲಿ ಬರುವ ಅಡುಗೆ, ರೆಸಿಪಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ನೋಡಿದ್ದಾರೆ. ಜನರಿಗೆ ಹೈದರಾಬಾದ್ ಎಂದಾಕ್ಷಣ ತಲೆಗೆ ಏಕ್​ದಂ ಹೊಳೆಯೋದು ಅಲ್ಲಿನ ದಮ್ ಬಿರಿಯಾನಿ, ಚಾರ್​ಮಿನಾರ್ ಮತ್ತು ಮುತ್ತುಗಳು. ನಿಮಗೆ ಆಶ್ಚರ್ಯವಾಗಬಹುದು, ಹೈದರಾಬಾದಿನ ಸಾಂಪ್ರದಾಯಿಕ ಮತ್ತು ಒರಿಜಿನಲ್ ಬಿರಿಯಾನಿಯಲ್ಲಿ 82 […]

ತನಗೆ ಡೆಲಿವರಿ ಮಾಡಿದ ಬಿರಿಯಾನಿಯಲ್ಲಿ ಹೆಚ್ಚುವರಿ ಲೆಗ್​ ಪೀಸ್ ಇರಲಿಲ್ಲವೆಂದು ತೆಲಂಗಾಣ ಸಚಿವ ಕೆಟಿಆರ್​ಗೆ ದೂರಿದ ಭೂಪ!
ರಘುಪತಿಯ ಟ್ವೀಟ್​​ ಮತ್ತು ಸಚಿವ ಕೆಟಿ ರಾಮರಾವ್
ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on: May 29, 2021 | 5:50 PM

Share

ಹೈದರಾಬಾದ್: ಹೈದರಾಬಾದಿನ ವಿಶ್ವವಿಖ್ಯಾತ ಬಿರಿಯಾನಿ ಬಗ್ಗೆ ಕೇಳದವರು ಯಾರಾದರೂ ಇದ್ದಾರೆಯೇ? ಮಾಂಸಾಹಾರಿಗಳಿಗೆಲ್ಲ ಅದರ ಬಗ್ಗೆ ಗೊತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ, ಆದರೆ ಪಕ್ಕಾ ಸಸ್ಯಾಹಾರಿಗಳೂ ಹೈದರಾಬಾದಿ ಬಿರಿಯಾನಿ ಕುರಿತು ಕೇಳಿ ತಿಳಿದುಕೊಂಡಿದ್ದಾರೆ; ಸಾಮಾಜಿಕ ಜಾಲತಾಣಗಳಲ್ಲಿ, ಯೂಟ್ಯೂಬ್​ನಲ್ಲಿ ಅದನ್ನು ನೋಡಿದ್ದಾರೆ ಮತ್ತು ಟವಿಗಳಲ್ಲಿ ಬರುವ ಅಡುಗೆ, ರೆಸಿಪಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ನೋಡಿದ್ದಾರೆ. ಜನರಿಗೆ ಹೈದರಾಬಾದ್ ಎಂದಾಕ್ಷಣ ತಲೆಗೆ ಏಕ್​ದಂ ಹೊಳೆಯೋದು ಅಲ್ಲಿನ ದಮ್ ಬಿರಿಯಾನಿ, ಚಾರ್​ಮಿನಾರ್ ಮತ್ತು ಮುತ್ತುಗಳು. ನಿಮಗೆ ಆಶ್ಚರ್ಯವಾಗಬಹುದು, ಹೈದರಾಬಾದಿನ ಸಾಂಪ್ರದಾಯಿಕ ಮತ್ತು ಒರಿಜಿನಲ್ ಬಿರಿಯಾನಿಯಲ್ಲಿ 82 ಮಸಾಲೆ ಪದಾರ್ಥಗಳನ್ನು ಬಳಸುತ್ತಾರಂತೆ! ಹೌದು ನೀವು ಓದಿದ್ದು ನಿಜ, 82 ಬಗೆಯ ಮಸಾಲೆಗಳು. ಅಷ್ಟೊಂದು ಬಗೆಯ ಮಸಾಲೆ ಸಾಮಾನುಗಳಿವೆಯೇ ಅಂತ ನೀವು ಕೇಳಬಹುದು. ಅದಕ್ಕಿಂತ ಜಾಸ್ತಿಯಿವೆ ಅಂತ ಆ ನಗರದ ಪ್ರಖ್ಯಾತ ಕುಕ್​ಗಳಲ್ಲಿ ಒಬ್ಬರಾಗಿರುವ ಮೊಹಮ್ಮದ್ ಸಲೀಮ್ ಹೇಳುತ್ತಾರೆ. ಹೈದರಾಬಾದಿನ ದಮ್ ಬಿರಿಯಾನಿ ವಿದೇಶಗಲ್ಲೂ ಭಾರೀ ಫೇಮಸ್. ದಕ್ಷಿಣ ಭಾರತ ಪ್ರವಾಸಕ್ಕೆ ಬರುವ ಫಾರಿನರ್ಸ್ ಹೈದರಾಬಾದ್​ಗೆ ಹೋದಾಗ ಅಲ್ಲಿನ ಖ್ಯಾತ ಹೊಟೆಲ್​ಗಳಲ್ಲಿ ಅದನ್ನು ಸವಿದೇ ವಾಪಸ್ಸು ಹೋಗುತ್ತಾರೆ.

ಬಿರಿಯಾನಿ ಬಗ್ಗೆ ಇಷ್ಟೆಲ್ಲ ಪ್ರಸ್ತಾಪ ಮಾಡೋದಿಕ್ಕೆ ಕಾರಣ ಇದೆ . ಉತ್ತಮ ಕ್ವಾಲಿಟಿಯ ಅಕ್ಕಿ ಮತ್ತು ಮಾಂಸದಲ್ಲಿ ತಯಾರಾಗುವ ಹೈದರಾಬಾದ್ ಬಿರಿಯಾನಿ ಕುರಿತ ಕತೆಗಳು ಬೇಕಾದಷ್ಟಿವೆ. ಆದರೆ ನಾವಿಲ್ಲಿ ಚರ್ಚಿಸುತ್ತಿರೋದು ತೋಟಕೂರಿ ರಘುಪತಿ ಹೆಸರಿನ ಮಹಾಶಯನ ಬಗ್ಗೆ. ಈತ ಹೈದರಾಬಾದನಲ್ಲಿ ಒಂದು ಚಿಕನ್ ಬಿರಿಯಾನಿಯನ್ನು ಜೊಮ್ಯಾಟೊ ಮೂಲಕ ಆರ್ಡರ್ ಮಾಡಿದ್ದಾನೆ. ಆಹಾರ ಡೆಲಿವರಿ ಮಾಡುವ ಸಂಸ್ಥೆ ಅದನ್ನು ಸಮಯಕ್ಕೆ ಸರಿಯಾಗಿ ತಲುಪಿಸಿದೆ. ಆದರೆ ರಘುಪತಿಯ ದೂರು ಏನೆಂದರೆ ತನಗೆ ಡೆಲಿವರಿಯಾದ ಬಿರಿಯಾನಿ ತಾನು ಆರ್ಡರ್ ಮಾಡಿದ ಬಿರಿಯಾನಿಯಂತಿರಲಿಲ್ಲವಂತೆ.

‘ನಾನು ಎಕ್ಸ್​ಟ್ರಾ ಮಸಾಲೆ ಮತ್ತು ಲೆಗ್ ಪೀಸ್​ ಉಳ್ಳ ಚಿಕನ್ ಬಿರಿಯಾನಿ ಆರ್ಡರ್ ಮಾಡಿದ್ದೆ. ಆದರೆ ನನಗೆ ಡೆಲಿವರಿ ಮಾಡಿದ ಬಿರಿಯಾನಿಯಲ್ಲಿ ಅದ್ಯಾವುದೂ ಇರಲಿಲ್ಲ. ಬಿರಿಯಾನಿ ಸವಿಯಲು ಆಸೆ ಪಟ್ಟ ಒಬ್ಬ ವ್ಯಕ್ತಿಗೆ ಹೀಗೆ ಉಪಚರಿಸಲಾಗುತ್ತದೆಯೇ?‘ ಎಂದು ಅವನು ಟ್ವೀಟ್​ ಮಾಡಿದ್ದಾನೆ.

ಆದರೆ ಗಮ್ಮತ್ತಿನ ಸಂಗತಿಯೇನೆಂದರೆ, ಆತ ತನ್ನ ಟ್ವೀಟನ್ನು ಜೊಮ್ಯಾಟೊ ಜೊತೆ ತೆಲಂಗಾಣದ ಪೌರಾಡಳಿತ ಮತ್ತು ನಗರಾಭಿವೃದ್ಧಿ, ಕೈಗಾರಿಕೆ ಮತ್ತು ವಾಣಿಜ್ಯ ಮತ್ತು ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ಕೆಟಿ ರಾಮರಾವ್ ಅವರಿಗೆ ಟ್ಯಾಗ್ ಮಾಡಿದ್ದಾನೆ!

ಸ್ವಲ್ಪ ಸಮಯದ ನಂತರ ಆತ ತನ್ನ ಟ್ವೀಟನ್ನು ಡಿಲೀಟ್​ ಮಾಡಿರುವದೇನೋ ನಿಜ ಅದರೆ ಅಷ್ಟರಲ್ಲಾಗಲೇ ನೆಟ್ಟಿಗರು ಈ ಮೋಜುಭರಿತ ಟ್ವೀಟ್​ನ ಸ್ಕ್ರೀನ್ ಶಾಟ್​ ತೆಗೆದುಕೊಂಡು ತಮಗೆ ಬೇಕಾದವರಿಗೆಲ್ಲ ಫಾರ್ವರ್ಡ್​ ಮಾಡಿದ್ದರಿಂದ ಅದು ವೈರಲ್ ಆಗಿದೆ.

ಆತನ ಟ್ವೀಟ್​ ನೋಡಿರುವ ರಾಮರಾವ್, ‘ಅದ್ಸರಿ ಬ್ರದರ್, ನನ್ನನ್ಯಾಕೆ ನೀನು ಟ್ಯಾಗ್ ಮಾಡಿದ್ದೀಯಾ? ನಾನೇನು ಮಾಡಬೇಕು ಅಂತ ನೀನು ಅಂದ್ಕೊಂಡಿದ್ದೀಯಾ?’ ಎಂದು ಪ್ರತಿಕ್ರಿಯಿಸಿದ್ದಾರೆ

ಸಾಮಾನ್ಯವಾಗಿ ಬಹಳ ಗಂಬೀರ ವಿಷಯಗಳನ್ನು ಟ್ವೀಟ್​ ಮಾಡುವ ಅಭ್ಯಾಸವಿಟ್ಟುಕೊಂಡಿರುವ ಎಐಎಮ್​ಎಮ್ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಅವರಿಗೂ ಈ ಟ್ವೀಟ್​ ನೋಡಿ ಕೊಂಚ ಗೇಲಿ ಮಾಡೋಣ ಅಂತೆನಿಸಿದೆ. ಅವರು ತಮ್ಮ ಟ್ವೀಟ್​ನಲ್ಲಿ, ‘ಕೆಟಿಆರ್ ಅವರು ಕೂಡಲೇ ಇದಕ್ಕೆ ಉತ್ತರಿಸಬೇಕು. ಕೆಟಿಆರ್ ಮತ್ತು ಅವರ ತಂಡ ಕೋವಿಡ್​ ಪಿಡುಗಿನನ ಈ ಸಂದರ್ಭದಲ್ಲಿ ಜನರ ವೈದ್ಯಕೀಯ ಅಗತ್ಯಗಳಿಗೆ ಸ್ಪಂದಿಸುತ್ತಿದೆ ಅಂತ ಅವರು ಹೇಳಬೇಕು, ಮಾಶಲ್ಲಾಹ.

ಒವೈಸಿಯಂತೆ ಹಲವಾರು ಜನ ರಘುಪತಿ ಮತ್ತು ಕೆಟಿಆರ್ ಅವರ ಟ್ವೀಟ್​ಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಒಬ್ಬ ನೆಟ್ಟಿಗ, ‘ಅಗತ್ಯ ಸೇವೆಗಳ ಪಟ್ಟಿಯಲ್ಲಿ ಬಿರಿಯಾನಿಯನ್ನು ಸೇರಿಸಬೇಕು,’ ಅಂತ ಹೇಳಿದ್ದಾರೆ!

ಕೊವಿಡ್ ಎರಡನೇ ಅಲೆಯಲ್ಲಿ ಕೆಟಿಆರ್​ ಬಹಳ ಜನಕ್ಕೆ ಸಹಾಯ ಮಾಡುತ್ತಿದ್ದಾರೆ. ಜನರ ಟ್ವೀಟ್​ಗಳನ್ನು ಅವರು ಬೇರೆಯವರಿಗೂ ಗೊತ್ತಾಗುವಂತೆ ಮಾಡುತ್ತಿದ್ದಾರೆ. ಜನರಿಗೆ ಅಗತ್ಯವಿರುವ ವಸ್ತು ಸಿಗುವಂತಾಗಲಿ ಅನ್ನೋದು ಅವರ ಉದ್ದೇಶವಾಗಿದೆ.

ಇದನ್ನೂ ಓದಿ:Covid 19 loan: ಕೆನರಾ ಬ್ಯಾಂಕ್​ನಿಂದ ರೂ. 25 ಸಾವಿರದಿಂದ 2 ಕೋಟಿಯ ತನಕ 3 ಬಗೆಯ ಸಾಲ ಯೋಜನೆ ಘೋಷಣೆ