ಕೆಂಪಿರುವೆಯಿಂದ ವಿನ್ಯಾಸಗೊಳಿಸಿದ ಉಡುಪು ಹೇಗಿದೆ ನೋಡಿ
ನವದೆಹಲಿ, ಆಗಸ್ಟ್ 16: ನಗರಗಳಲ್ಲಿ ಸ್ವಂತ ಮನೆ (Own House) ಹೊಂದಬೇಕೆನ್ನುವ ಆಸೆ ಇರುವವರಿಗೆ ಸರ್ಕಾರದಿಂದ ನೆರವು ಸಿಗುತ್ತದೆ. 77ನೇ ಸ್ವಾತಂತ್ರ್ಯೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸ್ಕೀಮ್ ಬಗ್ಗೆ ಮಾಹಿತಿ ನೀಡಿದ್ದು, ಸ್ವಂತ ಮನೆಯ ಕನಸನ್ನು ಸಾಕಾರಗೊಳಿಸಲು ಸರ್ಕಾರದಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು ಎಂದಿದ್ದಾರೆ. ‘ನಗರಗಳಲ್ಲಿ ವಾಸಿಸುತ್ತಿರುವ ದುರ್ಬಲ ವರ್ಗಗಳಿಗೆ ಬಹಳ ಸಮಸ್ಯೆಗಳಾಗುತ್ತಿವೆ. ಮಧ್ಯಮವರ್ಗದ ಜನರು ಸ್ವಂತ ಮನೆಯ ಕನಸು ಕಾಣುತ್ತಿದ್ದಾರೆ. ನಗರಗಳಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರು, ಕೊಳಚೆಗೇರಿ (Slum), ಅನಧಿಕೃತ ಕಾಲೊನಿಗಳಲ್ಲಿ ವಾಸಿಸುತ್ತಿರುವ ಕುಟುಂಬಗಳು ಸ್ವಂತ ಮನೆ ಹೊಂದಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಮುಂಬರುವ ವರ್ಷಗಳಲ್ಲಿ ಹೊಸ ಯೋಜನೆಯನ್ನು ಹಾಕಲಿದೆ’ ಎಂದು ಆಗಸ್ಟ್ 15ರಂದು ಪ್ರಧಾನಿಯವರು ಭರವಸೆ ನೀಡಿದ್ದಾರೆ.
‘ಅವರು ಸ್ವಂತ ಮನೆ ಕಟ್ಟಬೇಕೆಂದರೆ ನಾವು ಬ್ಯಾಂಕುಗಳಿಂದ ಕಡಿಮೆ ಬಡ್ಡಿದರಕ್ಕೆ ಸಾಲ ಕೊಡಲು ನೆರವಾಗುತ್ತೆವೆ. ಇದರಿಂದ ಲಕ್ಷಾಂತರ ರೂ ಉಳಿಸಲು ಸಾಧ್ಯವಾಗುತ್ತದೆ’ ಎಂದು ಕೆಂಪುಕೋಟೆಯಲ್ಲಿನ ತಮ್ಮ ಭಾಷಣದಲ್ಲಿ ಮೋದಿ ಹೇಳಿದ್ದಾರೆ.
ಈ ಹೊಸ ಸ್ಕೀಮ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪ್ರಧಾನಿ ತಿಳಿಸಿಲ್ಲ. ಆದರೆ, ಶೀಘ್ರದಲ್ಲಿ ಈ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸುವ ಸಾಧ್ಯತೆ ಇದೆ. ರಿಯಲ್ ಎಸ್ಟೇಟ್ ಉದ್ಯಮ ವಲಯ ಈ ಬೆಳವಣಿಗೆಯನ್ನು ಸ್ವಾಗತಿಸಿದೆ.
ಇದನ್ನೂ ಓದಿ: DBT Savings: ನೇರವಾಗಿ ಅಕೌಂಟ್ಗೆ ಹಣ ವರ್ಗಾವಣೆ ಮಾಡುವುದರಿಂದ ಕೇಂದ್ರ ಸರ್ಕಾರಕ್ಕೆ ಉಳಿತಾಯವಾದ ಹಣವೆಷ್ಟು ಗೊತ್ತಾ?
‘ಗೃಹಸಾಲದ ಬಡ್ಡಿದರ ಕಡಿಮೆ ಮಾಡುವ ಬಗ್ಗೆ ಪ್ರಧಾನಿಗಳು ಮಾಡಿರುವ ಪ್ರಸ್ತಾವ ಸ್ವಾಗತಾರ್ಹ. ಇದರಿಂದ ಮಧ್ಯಮ ಮತ್ತು ಕೆಳಸ್ತರ ಆದಾಯ ಗುಂಪಿನ ಜನರು ತಮ್ಮ ಸ್ವಂತ ಸೂರಿನ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಕಡಿಮೆ ಬೆಲೆಯ ಮತ್ತು ಮಧ್ಯಮ ಶ್ರೇಣಿಯ ಹೌಸಿಂಗ್ ಉದ್ಯಮಕ್ಕೆ ಇದರಿಂದ ಪುಷ್ಟಿ ಸಿಗುತ್ತದೆ’ ಎಂದು ಸಿಗ್ನೇಚರ್ ಗ್ಲೋಬರ್ ಸಂಸ್ಥೆಯ ಸಂಸ್ಥಾಪಕ ಪ್ರದೀಪ್ ಅಗರ್ವಾಲ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನಿನ್ನೆಯ ತಮ್ಮ ಭಾಷಣದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದ್ದಾರೆ. ಮಹಿಳಾ ಸ್ವಸಹಾಯ ಸಂಘಗಳ ಜೊತೆ ಸರ್ಕಾರ ಕೆಲಸ ಮಾಡುತ್ತಿದ್ದು, ಮಹಿಳಾ ನೇತೃತ್ವದ ಅಭಿವೃದ್ಧಿಯತ್ತ ನಾವು ಗಮನ ಹರಿಸುತ್ತಿದ್ದೇವೆ. ನಾರಿ ಶಕ್ತಿಯನ್ನು ಉತ್ತೇಜಿಸುತ್ತಿದ್ದೇವೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಇದನ್ನೂ ಓದಿ: ಬ್ರಿಟಿಷರ ಬಳುವಳಿ; ಇವತ್ತಿನ ಕರ್ನಾಟಕ ಬಜೆಟ್ ಗಾತ್ರಕ್ಕಿಂತಲೂ ಕಡಿಮೆ ಇತ್ತು 1947ರಲ್ಲಿ ಭಾರತದ ಜಿಡಿಪಿ
‘ಇವತ್ತು ಮಹಿಳಾ ಸ್ವಸಹಾಯ ಸಂಘಗಳಲ್ಲಿ 10 ಕೋಟಿ ಮಂದಿ ತೊಡಗಿಸಿಕೊಂಡಿದ್ದಾರೆ. ಮಹಿಳಾ ಸ್ವಸಹಾಯ ಸಂಘಗಳು ಇರುವ ಯಾವುದೇ ಗ್ರಾಮಕ್ಕೆ ನೀವು ಹೋದರೆ ಅಲ್ಲಿ ಬ್ಯಾಂಕ್ ದೀದಿಗಳು, ಅಂಗನವಾಡಿ ದೀದಿಗಳು, ಔಷಧ ವಿತರಿಸುವ ದೀದಿಗಳಿರುತ್ತಾರೆ. ಎರಡು ಕೋಟಿಯಷ್ಟು ಲಕ್ಷಾಧಿಪತಿ ದೀದಿಯವರನ್ನು ನಿರ್ಮಿಸುವುದು ನನ್ನ ಕನಸು’ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ