ಹ್ಯಾಪಿ ಕಟುಂಬದ ಫೋಟೋ ಹಂಚಿಕೊಂಡ ಸೋನು ಗೌಡ
ಷೇರುಮಾರುಕಟ್ಟೆಯಲ್ಲಿ ಮಿರಮಿರ ಮಿಂಚುತ್ತಿರುವ ಸ್ಟಾಕ್ಗಳಲ್ಲಿ ಬಜಾಜ್ ಫೈನಾನ್ಸ್ (Bajaj FinServ) ಒಂದು. ಸಾಕಷ್ಟು ಆರ್ಥಿಕ ಆರೋಗ್ಯದ ಜೊತೆಗೆ ಬಜಾಜ್ ಫೈನಾನ್ಸ್ನ ಷೇರೂ ಕೂಡ ಭರ್ಜರಿಯಾಗಿ ಬೆಳೆಯುತ್ತದೆ. ಕಳೆದ 3 ವರ್ಷಗಳಿಂದ ಈ ಖಾಸಗಿ ಹಣಕಾಸು ಸಂಸ್ಥೆ ಮಲ್ಟಿಬ್ಯಾಗರ್ ಸ್ಟಾಕ್ (Multibagger Stock) ಆಗಿ ಪರಿಣಮಿಸಿದೆ. 2020ರ ಮೇ 22ರಂದು 1,895 ರೂ ಬೆಲೆ ಇದ್ದ ಬಜಾಜ್ ಫೈನಾನ್ಸ್ನ ಷೇರುಬೆಲೆ ಇದೀಗ 6,850 ರೂಪಾಯಿಗೆ ಬೆಳೆದಿದೆ. 3 ವರ್ಷದಲ್ಲಿ ಶೇ. 300ಕ್ಕಿಂತಲೂ ಹೆಚ್ಚು ಬೆಳೆದಿದೆ. 21 ವರ್ಷಗಳ ಹಿಂದೆ 4.61 ರೂ ಇದ್ದ ಅದರ ಷೇರುಬೆಲೆ 1,500 ಪ್ರತಿಶತದಷ್ಟು ಬೆಳವಣಿಗೆ ಕಂಡಿದೆ.
2002ರ ಆಗಸ್ಟ್ 23ರಂದು ಯಾರಾದರೂ ಕೂಡ ಬಜಾಜ್ ಫೈನಾನ್ಸ್ ಷೇರುಗಳ ಮೇಲೆ 1 ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಅವರ ಸಂಪತ್ತು 14.85 ಲಕ್ಷ ರೂ ಆಗುತ್ತಿತ್ತು. ಅದೇ 2020ರ ಮೇ 22ರಂದು 1 ಲಕ್ಷ ರೂ ಹೂಡಿಕೆ ಮಾಡಿದ್ದರೆ, 3 ವರ್ಷದಲ್ಲಿ ಅದು 3.61 ಲಕ್ಷ ರೂ ಆಗುತ್ತಿತ್ತು. ಅಂದರೆ ಪ್ರತೀ ವರ್ಷವೂ ಹಣ ದ್ವಿಗುಣಗೊಳ್ಳುತ್ತಾ ಹೋಗಿದೆ. ಅಂತೆಯೇ ಬಜಾಜ್ ಫೈನಾನ್ಸ್ ಸಂಸ್ಥೆಯ ಷೇರು ಕಳೆದ 3 ವರ್ಷಗಳಿಂದ ಅಕ್ಷರಶಃ ಮಲ್ಟಿಬ್ಯಾಗರ್ ಆಗಿ ಪರಿಣಮಿಸಿರುವುದು ಗಮನಾರ್ಹ.
ಬಜಾಜ್ ಫೈನಾನ್ಸ್ ತನ್ನ ಸ್ಥಿರ ಠೇವಣಿಗಳ (Fixed Deposit) ವಿಭಾಗದಲ್ಲೂ ಬಹಳ ತ್ವರಿತ ಬೆಳವಣಿಗೆಯನ್ನು ಕಂಡಿದೆ. ಕಳೆದ 8-9 ವರ್ಷದಲ್ಲಿ ಶೇ. 60ರ ಸಿಎಜಿಆರ್ ದರದಲ್ಲಿ ಅದರ ಠೇವಣಿಗಳು ಬೆಳೆದಿವೆ. ಬಹಳ ಕಡಿಮೆ ಅವಧಿಯಲ್ಲಿ ಬಜಾಜ್ ಫೈನಾನ್ಸ್ನಲ್ಲಿ ಠೇವಣಿಗಳ ಪ್ರಮಾಣ 50,000 ಕೋಟಿ ರೂ ತಲುಪಿದೆ. ಬಜಾಜ್ ಫೈನಾನ್ಸ್ ಸಂಸ್ಥೆಯಲ್ಲಿ 5 ಲಕ್ಷ ಮಂದಿ ಠೇವಣಿದಾರರು, 14 ಲಕ್ಷ ಠೇವಣಿಗಳು ಸ್ಥಾಪನೆಯಾಗಿವೆ. ಅನ್ಕ್ಲೈಮ್ಡ್ ಡೆಪಾಸಿಟ್ಗಳೂ ಬಹಳ ಕಡಿಮೆ ಎನ್ನಲಾಗಿದೆ.
ಇದನ್ನೂ ಓದಿ: ಅತ್ಯಾಧುನಿಕ ಐವಾರ್ನ್, ಸ್ಮಾರ್ಟ್ಫಾಗ್ ಸೆಕ್ಯೂರಿಟಿ ವ್ಯವಸ್ಥೆ ರೂಪಿಸಿರುವ ಗೋದ್ರೇಜ್ಗೆ ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್
ಗ್ರಾಹಕರ ಠೇವಣಿಗಳಿಗೆ ಅತಿಹೆಚ್ಚು ಬಡ್ಡಿ ಕೊಡುವ ಹಣಕಾಸು ಸಂಸ್ಥೆಗಳ ಪೈಕಿ ಬಜಾಜ್ ಫೈನಾನ್ಸ್ ಒಂದು. ಹಿರಿಯ ನಾಗರಿಕರು 44 ತಿಂಗಳ ಅವಧಿಗೆ ಇಲ್ಲಿ ಇರಿಸುವ ಎಫ್ಡಿಗಳಿಗೆ ಶೇ. 8.60ರಷ್ಟು ವಾರ್ಷಿಕ ಬಡ್ಡಿ ಪಡೆಯುತ್ತಾರೆ. ಇನ್ನು, ಸಾಮಾನ್ಯ ಗ್ರಾಹಕರಾದರೆ 36ರಿಂದ 60 ತಿಂಗಳ ಅವಧಿ ಠೇವಣಿಗೆ ಶೇ. 8.05ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ. ಒಂದು ವರ್ಷದ ಠೇವಣಿಗೆ ಶೇ. 7.40ರಷ್ಟು ಬಡ್ಡಿ ಸಿಗುತ್ತದೆ. 2 ವರ್ಷವಾದರೆ ಶೇ. 7.55ರಷ್ಟು ಬಡ್ಡಿ ಸಿಗುತ್ತದೆ.
ಇದನ್ನೂ ಓದಿ: ಜಿ20 ಡಿಜಿಟಲ್ ಎಕಾನಮಿ ಸಚಿವರ ಸಭೆ; ಭಾರತದ ಪ್ರಮುಖ ಆದ್ಯತೆಗಳ ಬಗ್ಗೆ ಬೆಳಕುಚೆಲ್ಲಿದ ಅಶ್ವಿನಿ ವೈಷ್ಣವ್
ಆನ್ಲೈನ್ ಮೂಲಕ ಹೆಚ್ಚಿನ ಸೇವೆ ಒದಗಿಸುವ ಬಜಾಜ್ ಫೈನಾನ್ಸ್ನಲ್ಲಿ ಇರುವ ಠೇವಣಿಗಳ ಪೈಕಿ ಶೇ. 40ರಿಂದ 50ರಷ್ಟು ಠೇವಣಿಗಳು ಆನ್ಲೈನ್ ಮೂಲಕವೇ ರಚಿತವಾಗಿವೆ. ಇದರ ಆ್ಯಪ್ ಅನ್ನು 4 ಕೋಟಿಗೂ ಹೆಚ್ಚು ಮಂದಿ ಬಳಸುತ್ತಾರೆ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ