ದಿನಕ್ಕೆ ಒಂದು ಸೇಬು ಹೀಗೆ ತಿಂದರೆ ದುಪ್ಪಟ್ಟು ಲಾಭ
ನವದೆಹಲಿ, ಆಗಸ್ಟ್ 17: ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ (Bigger Economies) ಹೊಂದಿರುವ ಭಾರತ ಇದೇ ವೇಗದಲ್ಲಿ ಬೆಳೆದಲ್ಲಿ ಮುಂದಿನ ಕೆಲ ವರ್ಷಗಳಲ್ಲಿ ನಂಬರ್ 3ನೇ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು (Economists) ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್ ಬಳಿಕ ಉದ್ಭವಿಸಿದ ಸಂಕಷ್ಟದ ಪರಿಸ್ಥಿತಿಯಿಂದ ಪುಟಿದೆದ್ದು, ಬಳಿಕ ರಷ್ಯಾ ಉಕ್ರೇನ್ ಯುದ್ಧದಿಂದ ಜಾಗತಿಕ ಆರ್ಥಿಕ ಹಿನ್ನಡೆ ನಡುವೆಯೂ ಗಮನಾರ್ಹ ಬೆಳವಣಿಗೆ ಕಾಣುತ್ತಿರುವ ಭಾರತ ಅದೇ ವೇಗ ಕಾಯ್ದುಕೊಳ್ಳುವ ಸಾಮರ್ಥ್ಯ ಇದೆ ಎಂದು ಹೇಳಲಾಗಿದೆ. ಆರ್ಥಿಕ ತಜ್ಞರ ಪ್ರಕಾರ ಭಾರತದ ಜಿಡಿಪಿ ಮುಂದಿನ ವರ್ಷಗಳಲ್ಲಿ ಶೇ. 6.5ರಿಂದ ಶೇ. 7ರಷ್ಟು ವಾರ್ಷಿಕ ದರದಲ್ಲಿ ಬೆಳೆಯಬಲ್ಲುದು. ಹೀಗಾದಲ್ಲಿ 2025ಕ್ಕೆ ಭಾರತ ಐದನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ. 2027ರಲ್ಲಿ 3ನೇ ಸ್ಥಾನಕ್ಕೇರುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಭಾರತ 2027ರಲ್ಲಿ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯ ದೇಶ ಎನಿಸಬೇಕಾದರೆ ಹಲವು ಅಂಶಗಳು ನಿರೀಕ್ಷಿತ ರೀತಿಯಲ್ಲಿ ಜರುಗಬೇಕು. ಈ ವೇಳೆ ಟಾಪ್ 10ನಲ್ಲಿರುವ ಬೇರೆ ದೇಶಗಳು ಈಗ ಇರುವ ವೇಗದಲ್ಲೇ ಮುಂದುವರಿಯಬೇಕು. ಭಾರತದ ದೇಶೀಯ ಅನುಭೋಗ ಹೆಚ್ಚಬೇಕು. ಕೌಶಲ್ಯಭರಿತ ಮಾನವಸಂಪನ್ಮೂಲ ಹೆಚ್ಚಬೇಕು. ತಂತ್ರಜ್ಞಾನದ ಅಳವಡಿಕೆ ಹೆಚ್ಚಬೇಕು. ಇವೆಲ್ಲವೂ ಅಂದುಕೊಂಡ ರೀತಿಯಲ್ಲಿ ನಡೆದಲ್ಲಿ ಭಾರತ ಇನ್ನು 4 ವರ್ಷದಲ್ಲಿ ವಿಶ್ವದ ಟಾಪ್-3 ಪಟ್ಟಿಯಲ್ಲಿರುತ್ತದೆ ಎಂಬುದು ಆರ್ಥಿಕ ತಜ್ಞರ ಅಭಿಮತ.
ಇದನ್ನೂ ಓದಿ: New Passport Rules: ಪಾಸ್ಪೋರ್ಟ್ ವೆರಿಫಿಕೇಶನ್ಗೆ ಡಿಜಿಲಾಕರ್ ಕಡ್ಡಾಯ; ಏನಿದು ಹೊಸ ನಿಯಮ, ಇಲ್ಲಿದೆ ಡೀಟೇಲ್ಸ್
ಜಿಡಿಪಿಯಲ್ಲಿ ಮೂರನೇ ಸ್ಥಾನದಲ್ಲಿರುವ ಜಪಾನ್ಗೂ ಐದನೇ ಸ್ಥಾನದಲ್ಲಿರುವ ಭಾರತಕ್ಕೂ ಅಂಥ ದೊಡ್ಡ ವ್ಯತ್ಯಾಸವಿಲ್ಲ. ಜಪಾನ್ ಮತ್ತು ಜರ್ಮನಿಯ ಆರ್ಥಿಕತೆಯ ಬೆಳವಣಿಗೆ ಶೇ. 2ಕ್ಕಿಂತಲೂ ಕಡಿಮೆಯೇ ಇದೆ. ಭಾರತ ಶೇ. 6ಕ್ಕಿಂತ ಹೆಚ್ಚು ವೇಗದಲ್ಲಿ ಬೆಳೆಯುವ ಎಲ್ಲಾ ಸಾಮರ್ಥ್ಯ ಮತ್ತು ಸಾಧ್ಯತೆ ಹೊಂದಿದೆ. ಇದೇ ರೀತಿ ಮುಂದುವರಿದಲ್ಲಿ ಜಿಡಿಪಿ ರೇಸ್ನಲ್ಲಿ ಜರ್ಮನಿ ಮತ್ತು ಜಪಾನ್ ದೇಶಗಳನ್ನು ಭಾರತ ಬಹಳ ಬೇಗ ಹಿಂದಿಕ್ಕಬಹುದು.
ಮೂರನೇ ಸ್ಥಾನಕ್ಕೆ ಏರಿದ ಬಳಿಕ ಚೀನಾ ಮತ್ತು ಅಮೆರಿಕದ ಹತ್ತಿರಕ್ಕೆ ಭಾರತ ಹೋಗಲು ಬಹಳ ವರ್ಷಗಳೇ ಬೇಕಾಗುತ್ತದೆ. 2060ರ ಬಳಿಕ ಭಾರತಕ್ಕೆ ಟಾಪ್ 2 ಮಟ್ಟಕ್ಕೆ ಹೋಗಲು ಸಾಧ್ಯವಾಗಬಹುದು ಎನ್ನಲಾಗುತ್ತಿದೆ.
ಭಾರತದ ಒಟ್ಟಾರೆ ಸಾಲ ಅಷ್ಟು ಹೆಚ್ಚಿಲ್ಲ….
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ