ಹ್ಯಾಪಿ ಕಟುಂಬದ ಫೋಟೋ ಹಂಚಿಕೊಂಡ ಸೋನು ಗೌಡ
ನವದೆಹಲಿ, ಆಗಸ್ಟ್ 22: ಭಾರತದ ಆನ್ಲೈನ್ ಆಭರಣ ವ್ಯಾಪಾರ ಸಂಸ್ಥೆ ಕ್ಯಾರಟ್ಲೇನ್ನ (CaratLane) ಉದ್ಯೋಗಿಗಳಿಗೆ ಬಂಪರ್ ಗಿಫ್ಟ್ ಸಿಕ್ಕುತ್ತಿದೆ. ಟಾಟಾ ಗ್ರೂಪ್ ಮಾಲಿಕತ್ವದ ಟೈಟಾನ್ ಕಂಪನಿ ಕ್ಯಾರಟ್ಲೇನ್ನ ಷೇರುಪಾಲು ಹೆಚ್ಚಿಸಿಕೊಳ್ಳುತ್ತಿರುವುದು ಕ್ಯಾರಟ್ಲೇನ್ನ ಕೆಲ ಉದ್ಯೋಗಿಗಳನ್ನು ಕೋಟ್ಯಾಧೀಶ್ವರರನ್ನಾಗಿಸುತ್ತಿದೆ. ಟೈಟಾನ್ನಿಂದ ಷೇರುಖರೀದಿಗೆ ಆಗಿರುವ ಒಪ್ಪಂದದ ಪ್ರಕಾರ ಕ್ಯಾರಟ್ಲೇನ್ನ ಷೇರುಗಳನ್ನು ಹೊಂದಿರುವ ಉದ್ಯೋಗಿಗಳಿಗೆ ಒಟ್ಟು 340 ಕೋಟಿ ರೂನಿಂದ 380 ಕೋಟಿ ರೂವರೆಗೆ ಹಣ ಸಿಗಲಿದೆ. ಉದ್ಯೋಗಿ ಷೇರುದಾರಿಕೆ ಯೋಜನೆ (ESOP- Empoyee Stock Ownership Programme) ಅಡಿ ಈ ಸೌಲಭ್ಯ ನೀಡಲಾಗುತ್ತಿದೆ.
ಕ್ಯಾರಟ್ಲೇನ್ ಕಂಪನಿಯ ಸಂಸ್ಥಾಪಕರಾದ ಮಿಥುನ್ ಸಂಚೇತಿ ಮತ್ತು ಶ್ರೀನಿವಾಸ ಗೋಪಾಲನ್ ಹಾಗೂ ಅವರ ಕುಟುಂಬ ಸದಸ್ಯರುಗಳು ಹೊಂದಿರುವ ಶೇ. 27.18ರಷ್ಟು ಷೇರುಗಳನ್ನು ಟೈಟಾನ್ ಕಂಪನಿ 4,621 ಕೋಟಿ ರುಪಾಯಿ ಒಪ್ಪಂದದಲ್ಲಿ ಖರೀದಿಸುತ್ತಿದೆ. ಇದರೊಂದಿಗೆ ಕ್ಯಾರಟ್ಲೇನ್ ಕಂಪನಿಯಲ್ಲಿ ಟೈಟಾನ್ ಪಾಲುದಾರಿಕೆ ಶೇ. 98.28ಕ್ಕೆ ಏರಲಿದೆ.
ಕ್ಯಾರಟ್ಲೇನ್ ಕಂಪನಿಯಲ್ಲಿ ಸರಿಸುಮಾರು 1,500 ಉದ್ಯೋಗಿಗಳು ರೀಟೇಲ್ ಮಾರಾಟ ಮತ್ತು ಮ್ಯಾನುಫ್ಯಾಕ್ಚರಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಾರೆ. ಸುಮಾರು 400 ಮಂದಿ ಉದ್ಯೋಗಿಗಳು ಕಾರ್ಪೊರೇಟ್ ಸ್ಟಾಫ್ನಲ್ಲಿ ಇದ್ದಾರೆ. ಈ ಕಾರ್ಪೊರೇಟ್ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಸಾಮಾನ್ಯವಾಗಿ ಕಂಪನಿಯ ಷೇರುಗಳನ್ನು ಹಂಚಲಾಗುತ್ತದೆ. ಈ 400 ಮಂದಿ ಕಾರ್ಪೊರೇಟ್ ಸಿಬ್ಬಂದಿ ಪೈಕಿ 75 ಮಂದಿ ಮಾತ್ರ ಕ್ಯಾರಟ್ಲೇನ್ ಷೇರು ಹೊಂದಿರುವುದು. ಒಟ್ಟಾರೆ ಉದ್ಯೋಗಿಗಳಲ್ಲಿ ಇವರ ಪ್ರಮಾಣ ಶೇ. 2ಕ್ಕಿಂತಲೂ ಕಡಿಮೆ.
ಇದನ್ನೂ ಓದಿ: Bengaluru Girl: ಬೆಂಗಳೂರಿನ 22 ವರ್ಷದ ಮಹಿಳಾ ಪೋಸ್ಟ್ ಮಾಸ್ಟರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಲ್ ಗೇಟ್ಸ್
ಈ 75 ಮಂದಿಗೆ ಎಂಪ್ಲಾಯಿ ಸ್ಟಾಕ್ ಓವರ್ಶಿಪ್ ಪ್ಲಾನ್ ಅಡಿ 340 ರಿಂದ 380 ಕೋಟಿ ರೂ ಹಂಚಿಕೆ ಆಗುತ್ತದೆ. ಉದ್ಯೋಗಿಗಳ ಷೇರುಮಾಲಕತ್ವದ ಪ್ರಮಾಣಕ್ಕೆ ಅನುಗುಣವಾಗಿ ಹಣದ ಹಂಚಿಕೆ ಆಗುತ್ತದೆ. ಹೆಚ್ಚು ಷೇರು ಹೊಂದಿದ್ದವರಿಗೆ ಹೆಚ್ಚು ಹಣ ಸಿಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:26 pm, Tue, 22 August 23