ಹ್ಯಾಪಿ ಕಟುಂಬದ ಫೋಟೋ ಹಂಚಿಕೊಂಡ ಸೋನು ಗೌಡ
ನವದೆಹಲಿ, ಆಗಸ್ಟ್ 14: ಸಗಟು ಮಾರಾಟ ಆಧಾರಿತವಾದ ಹಣದುಬ್ಬರ (WPI Inflation) ಸತತ ನಾಲ್ಕನೇ ತಿಂಗಳೂ ಶೂನ್ಯಕ್ಕಿಂತ ಕೆಳಗೆ ಇಳಿದಿದೆ. ಜುಲೈ ತಿಂಗಳ ಡಬ್ಲ್ಯುಪಿಐ ಹಣದುಬ್ಬರ ಮೈನಸ್ ಶೇ 1.46ರಷ್ಟು ಇದೆ. ಅಂದರೆ ಹೋಲ್ಸೇಲ್ ದರಗಳು ಸತತ ಕುಸಿತ ಕಂಡಿವೆ. ಏಪ್ರಿಲ್ ತಿಂಗಳಿಂದ ಡಬ್ಲ್ಯುಪಿಐ ಹಣದುಬ್ಬರವು ನೆಗಟಿವ್ ಶ್ರೇಣಿಯಲ್ಲಿಯೇ ಇರುವುದು ಗಮನಾರ್ಹ. ಜೂನ್ ತಿಂಗಳಲ್ಲಿ ಈ ಹಣದುಬ್ಬರ ಮೈನಸ್ ಶೇ. 4.12ರಷ್ಟಿತ್ತು. ಆಹಾರವಸ್ತುಗಳು ದುಬಾರಿಯಾದರೂ ಇಂಧನದ ಬೆಲೆಗಳು ಕಡಿಮೆಗೊಂಡ ಕಾರಣ ಜುಲೈ ತಿಂಗಳಲ್ಲಿ ಸಗಟು ದರ ಸೂಚ್ಯಂಕ ಇಳಿಕೆಯಾಗಿರುವುದು ಕಂಡುಬಂದಿದೆ. ಅಲ್ಲದೇ ಖನಿಜ ತೈಲಗಳು, ಮೂಲ ಲೋಹಗಳು, ರಾಸಾಯನಿಕ ಪದಾರ್ಥಗಳು ಮತ್ತು ಜವಳಿ ವಸ್ತುಗಳ ಬೆಲೆ ಇಳಿಕೆಯಾಗಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವರು ಮಾಹಿತಿ ನೀಡಿದ್ದಾರೆ.
ಇಂಧನ ಮತ್ತು ವಿದ್ಯುತ್ ವರ್ಗದ ಹಣದುಬ್ಬರ ಮೈನಸ್ ಶೇ. 12.79ಕ್ಕೆ ಇಳಿದಿದೆ. ತಯಾರಿಕಾ ಕ್ಷೇತ್ರದಲ್ಲಿ ಹಣದುಬ್ಬರ ಮೈನಸ್ ಶೇ. 2.51ಕ್ಕೆ ಹೋಗಿದೆ.
ನಿರ್ದಿಷ್ಟ ಸರಕು ಮತ್ತು ಸೇವೆಗಳ ಹೋಲ್ಸೇಲ್ ಬೆಲೆಯಲ್ಲಿನ ವ್ಯತ್ಯಾಸವನ್ನು ಡಬ್ಲ್ಯುಪಿಐ ಹಣದುಬ್ಬರದ ಮೂಲಕ ಗುರುತಿಸಲಾಗುತ್ತದೆ. ಹೋಲ್ಸೇಲ್ ಬೆಲೆ ಎಂದರೆ ಉತ್ಪಾದಕರಿಂದ ಸಗಟು ಮಾರಾಟಗಾರರಿಗೆ ವಹಿವಾಟಾಗುವ ದರ. ರೀಟೇಲ್ ದರಗಳಲ್ಲಿನ ವ್ಯತ್ಯಾಸವು ರೀಟೇಲ್ ಇನ್ಫ್ಲೇಶನ್ ಆಗಿರುತ್ತದೆ. ಎರಡೂ ಕೂಡ ಆರ್ಥಿಕತೆಯ ಒಟ್ಟಾರೆ ಆರೋಗ್ಯವನ್ನು ಸೂಚಿಸುತ್ತದೆ.
ಸಗಟು ಮಾರಾಟ ದರದ ಹಣದುಬ್ಬರವು ಏರಿಕೆಯಾದರೆ ಆರ್ಥಿಕತೆ ಬೆಳವಣಿಗೆ ಕಾಣುವ ಹಾದಿಯಲ್ಲಿದೆ ಎಂದು ಭಾವಿಸಲಾಗುತ್ತದೆ. ಅದಕ್ಕೆ ಪೂರಕವಾದ ಆರ್ಥಿಕ ನೀತಿಯನ್ನು ಸರ್ಕಾರ ಅನುಸರಿಸಬಹುದು. ಅದೇ ಈ ಹಣದುಬ್ಬರ ಕಡಿಮೆ ಆದರೆ ಅದು ನಿಧಾನಗತಿಯ ಆರ್ಥಿಕ ಬೆಳವಣಿಗೆಗೆ ಸೂಚಕವಾಗಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ