ಹ್ಯಾಪಿ ಕಟುಂಬದ ಫೋಟೋ ಹಂಚಿಕೊಂಡ ಸೋನು ಗೌಡ
ಇಪಿಎಫ್ ಎಂಬುದು ಪ್ರತಿಯೊಬ್ಬ ಉದ್ಯೋಗಿಗೂ ಲಭ್ಯ ಇರುವ ನಿವೃತ್ತಿ ಯೋಜನೆ. ಖಾಸಗಿ ವಲಯದ ಉದ್ಯೋಗಿಗಳಿಗೆ ಬಹಳ ಉಪಯುಕ್ತವಾಗಿರುವ ಈ ಸ್ಕೀಮ್ನಲ್ಲಿ (EPF Scheme) ಪ್ರತಿ ಉದ್ಯೋಗಿಗೂ ಪ್ರತ್ಯೇಕವಾಗಿ ಇಪಿಎಫ್ ಖಾತೆ ತೆರೆಯಲಾಗುತ್ತದೆ. ಉದ್ಯೋಗಿಯ ಮೂಲವೇತನದ (Basic Salary) ಶೇ. 12ರಷ್ಟು ಭಾಗವನ್ನು ಪಿಎಫ್ ಖಾತೆಗೆ ಹಾಕಲಾಗುತ್ತದೆ. ಕಂಪನಿಯೂ ಕೂಡ ಅಷ್ಟೇ ಪ್ರಮಾಣದ ಹಣವನ್ನು ಖಾತೆಗೆ ತುಂಬುತ್ತದೆ. ಇಪಿಎಫ್ಒ ಸಂಸ್ಥೆ ವರ್ಷಕ್ಕೊಮ್ಮೆ ಸರ್ಕಾರ ನಿಗದಿ ಮಾಡಿದಷ್ಟು ಬಡ್ಡಿಹಣವನ್ನು ಪಿಎಫ್ ಖಾತೆಯ ಹಣಕ್ಕೆ ಸೇರಿಸಿಕೊಡುತ್ತದೆ. ಹೀಗೆ ಉದ್ಯೋಗಿ ನಿವೃತ್ತಿ ಆಗುವವರೆಗೂ ಇಪಿಎಫ್ ಹಣ ಬೆಳೆಯುತ್ತಾ ಹೋಗುತ್ತದೆ.
ನಿಮ್ಮ ಇಪಿಎಫ್ ಖಾತೆಗೆ ಪ್ರತೀ ತಿಂಗಳು ಹಣ ಭರ್ತಿಯಾಗುತ್ತಾ ಇರುತ್ತದೆ. ಕೆಲವೊಮ್ಮೆ ಹಣ ಜಮೆ ಆಗದೇ ಇರಬಹುದು. ನಿಮ್ಮ ಸ್ಯಾಲರಿ ಸ್ಲಿಪ್ನಲ್ಲಿ ಅಥವಾ ಸಂಬಳ ಚೀಟಿಯಲ್ಲಿ ಇಪಿಎಫ್ ಹಣ ಮುರಿದುಕೊಳ್ಳಲಾಗಿದ್ದರೂ ಖಾತೆಗೆ ಹಣ ಹೋಗಿರುವುದಿಲ್ಲ. ಇಂಥ ಘಟನೆಗಳು ಒಮ್ಮೊಮ್ಮೆ ಆಗಬಹುದು. ನಿಮ್ಮ ಸಂಬಳದಿಂದ ಕಡಿತಗೊಂಡಾಗ್ಯೂ ಪಿಎಫ್ ಖಾತೆಗೆ ಹಣ ಜಮೆ ಆಗದೇ ಇದ್ದಲ್ಲಿ ಏನು ಮಾಡಬೇಕು? ಇದರ ಮೇಲೆ ಕ್ರಮ ಕೈಗೊಳ್ಳಲು ನಿಮ್ಮ ಮುಂದೆ ಕೆಲವಾರು ಆಯ್ಕೆಗಳಿವೆ.
ಇದನ್ನೂ ಓದಿ: 20 ವರ್ಷದಲ್ಲಿ 10 ಕೋಟಿ ರೂ ಸಂಗ್ರಹಿಸಲು ಎಷ್ಟು ಹಣ ಉಳಿಸಿ, ಹೂಡಿಕೆ ಮಾಡಬೇಕು? ಇಲ್ಲಿದೆ ವಿವರ
ಇದನ್ನೂ ಓದಿ: PM Narendra Modi: ಸ್ವಂತ ಸೂರು ಬೇಕೆನ್ನುವವರಿಗೆ ಸರ್ಕಾರದಿಂದ ಹೊಸ ಸ್ಕೀಮ್; ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ
ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಬಳಿ ನೀವು ದೂರು ನೀಡುವುದಿದ್ದರೆ ಅದಕ್ಕೆಂದು ಇಪಿಎಫ್ ಗ್ರೀವೆನ್ಸ್ ಪೋರ್ಟಲ್ (epfigms.gov.in/) ಇದೆ. ಇಲ್ಲಿ ನಿಮ್ಮ ಸಮಸ್ಯೆಯನ್ನು ದಾಖಲಿಸಿದರೆ ಇಪಿಎಫ್ಒ ಸಂಸ್ಥೆ ಮುಂದಿನ ಕ್ರಮ ತೆಗೆದುಕೊಳ್ಳುತ್ತದೆ.
ಕಂಪನಿ ಕಡೆಯಿಂದ ಹಣ ವರ್ಗಾವಣೆ ಆಗದೇ ಇದ್ದು, ಅಥವಾ ಸಾಫ್ಟ್ವೇರ್ ಪರಿಷ್ಕರಣೆ ಕಾರಣ ಹಣ ಕ್ರೆಡಿಟ್ ಆಗದೇ ಇದ್ದು ಇಪಿಎಫ್ ಖಾತೆಗೆ ಹಣ ಜಮೆ ಆಗುವುದು ವಿಳಂಬವಾದರೆ ಚಿಂಪ ಪಡಬೇಕಿಲ್ಲ. ಸರ್ಕಾರ ಅಥವಾ ಇಪಿಎಫ್ಒ ಸಂಸ್ಥೆಯಿಂದ ಬಡ್ಡಿ ಹಣ ವರ್ಷಕ್ಕೊಮ್ಮೆ ಎಲ್ಲಾ ಹಣಕ್ಕೂ ಸೇರಿಸಿ ತುಂಬಿಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ