ಹ್ಯಾಪಿ ಕಟುಂಬದ ಫೋಟೋ ಹಂಚಿಕೊಂಡ ಸೋನು ಗೌಡ
By TV9 Web Team
ನವದೆಹಲಿ, ಆಗಸ್ಟ್ 17: ಭಾರತೀಯ ರೈಲ್ವೆಯ ಸೌಕರ್ಯ ವ್ಯವಸ್ಥೆ (Rail Infrastructure) ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಪರಿವರ್ತನೆ ಕಾಣುತ್ತಿದೆ. ಪ್ರಯಾಣಿಕರ ಸುರಕ್ಷತೆಗೆ ಇಲಾಖೆ ಬಹಳಷ್ಟು ಕ್ರಮಗಳನ್ನು ಕೈಗೊಂಡಿದೆ. ಸಾಕಷ್ಟು ಸೌಲಭ್ಯಗಳನ್ನು ಒದಗಿಸುತ್ತಿದೆ. ಇದೀಗ ರೈಲ್ವೆ ನಿಲ್ದಾಣಗಳಲ್ಲಿ ಔಷಧ ಪೂರೈಕೆಯನ್ನೂ ಮಾಡಲು ಸರ್ಕಾರ ನಿರ್ಧರಿಸಿದೆ. ಪ್ರಾಯೋಗಿಕ ಹಂತವಾಗಿ, ಆಯ್ದ ರೈಲ್ವೆ ನಿಲ್ದಾಣಗಳಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು (Pradhan Mantri Jan Bhartiya Janaushadhi Kendra) ತೆರೆಯಲಾಗುತ್ತದೆ. ಇದರಿಂದ ರೈಲ್ವೆ ಪ್ರಯಾಣಿಕರಿಗೆ ಅಗತ್ಯ ಔಷಧಗಳು ರೈಲ್ವೆ ನಿಲ್ದಾಣದಲ್ಲೇ ದೊರೆಯುವಂತಾಗುತ್ತದೆ.
ರೈಲ್ವೆ ಇಲಾಖೆ ತನ್ನ ನಿಲ್ದಾಣಗಳಲ್ಲಿ ಜನೌಷಧಿ ಮಳಿಗೆ ತೆರೆಯಲು 50 ಸ್ಥಳಗಳನ್ನು ಗುರುತಿಸಿರುವುದು ತಿಳಿದುಬಂದಿದೆ. ವರದಿ ಪ್ರಕಾರ, ಇದರಲ್ಲಿ ಕರ್ನಾಟಕದ ನಾಲ್ಕು ನಿಲ್ದಾಣಗಳಿವೆ. ಬೆಂಗಳೂರಿನ ಬಯ್ಯಪ್ಪನಹಳ್ಳಿಯಲ್ಲಿರುವ ಎಸ್ಎಂವಿಟಿ ನಿಲ್ದಾಣ (ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್), ಬಂಗಾರಪೇಟೆ, ಹುಬ್ಬಳ್ಳಿ ಜಂಕ್ಷನ್ ಮತ್ತು ಮೈಸೂರಿನ ರೈಲ್ವೆ ನಿಲ್ದಾಣಗಳಲ್ಲಿ ಜನೌಷಧಿ ಮಳಿಗೆಗಳು ಬರಲಿವೆ.
ಇದನ್ನೂ ಓದಿ: ಮುಂದಿನ ನಾಲ್ಕೇ ವರ್ಷದಲ್ಲಿ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆಯಾ? ಆರ್ಥಿಕ ತಜ್ಞರ ಅನಿಸಿಕೆ ಇದು
ಇದನ್ನೂ ಓದಿ: New Passport Rules: ಪಾಸ್ಪೋರ್ಟ್ ವೆರಿಫಿಕೇಶನ್ಗೆ ಡಿಜಿಲಾಕರ್ ಕಡ್ಡಾಯ; ಏನಿದು ಹೊಸ ನಿಯಮ, ಇಲ್ಲಿದೆ ಡೀಟೇಲ್ಸ್
ಜನಸಾಮಾನ್ಯರಿಗೆ ಕಡಿಮೆ ಬೆಲೆಗೆಯಲ್ಲಿ ಉತ್ತಮ ಗುಣಮಟ್ಟದ ಔಷಧಗಳನ್ನು ಒದಿಗಿಸುವ ವ್ಯವಸ್ಥೆಯೇ ಭಾರತೀಯ ಜನೌಷಧಿ ಕೇಂದ್ರಗಳದ್ದು. ಇದರಲ್ಲಿ ಜೆನೆರಿಕ್ ಮೆಡಿಸಿನ್ಗಳು (Generic Medicine) ದೊರೆಯುತ್ತವೆ. ಜೆನೆರಿಕ್ ಔಷಧಿಗಳನ್ನು ತಯಾರಿಸುವ ಫಾರ್ಮಾ ಕಂಪನಿಗಳೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿರುತ್ತದೆ. ಕಡಿಮೆ ಬೆಲೆಗೆ ಔಷಧಗಳನ್ನು ಈ ಕಂಪನಿಗಳು ತಯಾರಿಸಿ ಸರಬರಾಜು ಮಾಡುತ್ತವೆ.
ಜನೌಷಧಿ ಕೇಂದ್ರಗಳನ್ನುಕ ಫಾರ್ಮಸಿ ವಿದ್ಯಾಭ್ಯಾಸ ಮಾಡಿರುವ ಯಾರು ಬೇಕಾದರೂ ತೆರೆಯಬಹುದು. ಇದು ಸ್ವಂತ ಉದ್ಯೋಗದ ಅವಕಾಶವೀಯುತ್ತದೆ.
ರೈಲ್ವೆ ನಿಲ್ದಾಣಗಳಲ್ಲಿ ಜನೌಷಧಿ ಕೇಂದ್ರಗಳನ್ನು ತೆರೆಯಲು ಆನ್ಲೈನ್ನಲ್ಲಿ ಹರಾಜು ನಡೆಸಲಾಗುತ್ತದೆ. ಪರವಾನಿಗೆ ಹೊಂದಿರುವ ವ್ಯಕ್ತಿಗಳಿಗೆ ಮಳಿಗೆ ಸ್ಥಾಪಿಸಲು ರೈಲ್ವೆ ನಿಲ್ದಾಣಗಳಲ್ಲಿ ಸ್ಥಳ ಕೊಡಲಾಗುವುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ