ಫಿಕ್ಸೆಡ್ ಇಂಟರೆಸ್ಟ್ ಬೇಕಾ, ಫ್ಲೋಟಿಂಗ್ ಇಂಟರೆಸ್ಟ್ ಬೇಕಾ? ಬ್ಯಾಂಕುಗಳು ಬಡ್ಡಿ ಪರಿಷ್ಕರಿಸುವ ಮುನ್ನ ಗ್ರಾಹಕರಿಗೆ ಆಯ್ಕೆ ಕೊಡಬೇಕು: ಆರ್​ಬಿಐ ನಿಯಮ

|

Updated on: Aug 18, 2023 | 6:09 PM

RBI on Bank Interest Rates: ಬ್ಯಾಂಕುಗಳು ಸಾಲ ಕೊಡುವ ಮುನ್ನ ಗ್ರಾಹಕರಿಗೆ ಫ್ಲೋಟಿಂಗ್ ಇಂಟರೆಸ್ಟ್ ಪರಿಣಾಮಗಳ ಬಗ್ಗೆ ಮಾಹಿತಿ ಒದಗಿಸಬೇಕು. ಬಡ್ಡಿದರ ಬದಲಾಯಿಸುವ ಸಂದರ್ಭದಲ್ಲಿ ಗ್ರಾಹಕರ ಗಮನಕ್ಕೆ ತರಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಪ್ಪಣೆ ಮಾಡಿದೆ.

ಫಿಕ್ಸೆಡ್ ಇಂಟರೆಸ್ಟ್ ಬೇಕಾ, ಫ್ಲೋಟಿಂಗ್ ಇಂಟರೆಸ್ಟ್ ಬೇಕಾ? ಬ್ಯಾಂಕುಗಳು ಬಡ್ಡಿ ಪರಿಷ್ಕರಿಸುವ ಮುನ್ನ ಗ್ರಾಹಕರಿಗೆ ಆಯ್ಕೆ ಕೊಡಬೇಕು: ಆರ್​ಬಿಐ ನಿಯಮ
ಬ್ಯಾಂಕು
Follow us on

ನವದೆಹಲಿ, ಆಗಸ್ಟ್ 18: ಸಾಲದ ಮೇಲಿನ ಬಡ್ಡಿದರಗಳನ್ನು ಬ್ಯಾಂಕುಗಳು ಏಕಾಏಕಿ ಹೆಚ್ಚಿಸುವಂತಿಲ್ಲ. ಗ್ರಾಹಕರಿಗೆ ಮಾಹಿತಿ ಕೊಡಬೇಕು ಎಂದು ಆರ್​ಬಿಐ ಇತ್ತೀಚೆಗೆ ತಿಳಿಸಿತ್ತು. ಇದೀಗ ಬಡ್ಡಿದರ ಪರಿಷ್ಕರಣೆ ಮುನ್ನ ಬ್ಯಾಂಕುಗಳು ಗ್ರಾಹಕರಿಗೆ ಅದರ ಬಗ್ಗೆ ಮಾಹಿತಿ ಒದಗಿಸಬೇಕು. ಫ್ಲೋಟಿಂಗ್ ಇಂಟರೆಸ್ಟ್ ರೇಟ್ (Floating Rate Interest) ಬದಲು ಫಿಕ್ಸೆಡ್ ಇಂಟರೆಸ್ಟ್ ರೇಟ್ (Fixed Rate Interest) ಅನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಗ್ರಾಹಕರಿಗೆ ಒದಗಿಸಬೇಕು ಎಂದು ಆರ್​ಬಿಐ ತಿಳಿಸಿದೆ.

ಸಾಲಕ್ಕೆ ಬಡ್ಡಿದರ ನಿಗದಿ ಮಾಡುವಾಗ ಬ್ಯಾಂಕುಗಳು ಫ್ಲೋಟಿಂಗ್ ರೇಟ್ ಇಂಟರೆಸ್ಟ್ ಸಿಸ್ಟಂ ಮತ್ತು ಫಿಕ್ಸೆಡ್ ರೇಟ್ ಇಂಟರೆಸ್ಟ್ ಎಂಬ ಎರಡು ಮಾದರಿ ಅನುಸರಿಸುತ್ತವೆ. ಫಿಕ್ಸೆಡ್ ರೇಟ್ ಅಡಿ ತೆಗೆದುಕೊಂಡ ಸಾಲಕ್ಕೆ ಕೊನೆಯವರೆಗೂ ಒಂದೇ ರೀತಿಯ ಬಡ್ಡಿ ಅನ್ವಯ ಆಗುತ್ತದೆ.

ಫ್ಲೋಟಿಂಗ್ ರೇಟ್ ವ್ಯವಸ್ಥೆಯಲ್ಲಿ ಸಾಲದ ಮೇಲಿನ ಬಡ್ಡಿದರ ಕಾಲಕಾಲಕ್ಕೆ ಬದಲಾಗಬಹುದು. ಆರ್​ಬಿಐ ಪರಿಷ್ಕರಿಸುವ ರೆಪೋ ದರಕ್ಕೆ ಅನುಗುಣವಾಗಿ ಬ್ಯಾಂಕುಗಳೂ ಬಡ್ಡಿದರ ಬದಲಾಯಿಸಬಹುದು. ಹಾಗೇನಾದರೂ ಆದರೆ ಫ್ಲೋಟಿಂಗ್ ರೇಟ್ ವ್ಯವಸ್ಥೆಯಡಿ ಪಡೆದ ಸಾಲಕ್ಕೆ ಬಡ್ಡಿ ಹೆಚ್ಚಾಗುತ್ತದೆ. ಪರಿಣಾಮವಾಗಿ ಇಎಂಐ ಪ್ರಮಾಣ ಹೆಚ್ಚಾಗುತ್ತದೆ.

ಇದನ್ನೂ ಓದಿ: RBI: ಸಾಲ ಕಟ್ಟಲು ವಿಳಂಬಿಸುವ ಗ್ರಾಹಕರಿಗೆ ದುಬಾರಿ ದಂಡ ವಿಧಿಸುವಂತಿಲ್ಲ: ಬ್ಯಾಂಕುಗಳಿಗೆ ಆರ್​ಬಿಐ ಅಪ್ಪಣೆ

ಬಹಳಷ್ಟು ಬ್ಯಾಂಕುಗಳು ಗ್ರಾಹಕರಿಗೆ ತಿಳಿಸಿದೆಯೆ ಬಡ್ಡಿದರ ಪರಿಷ್ಕರಿಸುತ್ತವೆ. ಹೆಚ್ಚಾದ ಇಎಂಐ ಕಂಡು ಗಾಬರಿಯಾಗುವವರೇ ಹೆಚ್ಚು. ನಿಗದಿತ ಸಾಲದ ಕಂತುಗಳಿಗೆ ತಕ್ಕಂತೆ ಬಜೆಟ್ ರೂಪಿಸುವ ಗ್ರಾಹಕರಿಗೆ ಏಕಾಏಕಿ ಕಂತಿನ ಹಣ ಹೆಚ್ಚಾದಾಗ ಹೊರೆ ಎನಿಸಬಹುದು.

‘ಬಡ್ಡಿದರ ಬದಲಾವಣೆಯಿಂದ ಇಎಂಐ ಮೊತ್ತ ಮತ್ತು ಸಂಖ್ಯೆ ಎರಡೂ ಕೂಡ ಬದಲಾಗುವ ಸಾಧ್ಯತೆ ಬಗ್ಗೆ ಬ್ಯಾಂಕುಗಳು ಗ್ರಾಹಕರಿಗೆ ಸಾಲ ಕೊಡುವಾಗಲೇ ಮನವರಿಕೆ ಮಾಡಬೇಕು. ಸಾಲದ ಮಧ್ಯೆ ಇಎಂಐ ಹೆಚ್ಚಿಸುವಾಗ ಗ್ರಾಹಕರಿಗೆ ಸೂಕ್ತ ಮಾಧ್ಯಮಗಳ ಮೂಲಕ ಮಾಹಿತಿ ಕೊಡಬೇಕು’ ಎಂದು ಆರ್​ಬಿಐ ಹೇಳಿದೆ.

ಇದನ್ನೂ ಓದಿ: ಗಂಡನ ಸ್ವಂತ ಸಂಪಾದನೆಯ ಆಸ್ತಿ ಮೇಲೆ ಹೆಂಡತಿಗೆ ಎಷ್ಟು ಹಕ್ಕು? ಈ ಕಾನೂನುಗಳು ಗೊತ್ತಿರಲಿ

ಹಾಗೆಯೇ, ಬಡ್ಡಿದರ ಪರಿಷ್ಕರಣೆ ಸಮಯದಲ್ಲಿ ಗ್ರಾಹಕರು ನಿಶ್ಚಿತ ಬಡ್ಡಿದರ ವ್ಯವಸ್ಥೆಗೆ ಬದಲಾಗಲು ಬ್ಯಾಂಕುಗಳು ಅವಕಾಶ ಕೊಡಬೇಕು. ಈ ರೀತಿ ಎಷ್ಟು ಬಾರಿ ಅವಕಾಶ ಕೊಡಲಾಗುತ್ತದೆ ಎಂಬುದನ್ನೂ ಗ್ರಾಹಕರಿಗೆ ತಿಳಿಸಬೇಕು ಎಂದು ಆರ್​ಬಿಐ ನಿರ್ದೇಶನ ನೀಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:07 pm, Fri, 18 August 23